
ಸದ್ಯ ಸೀತಾರಾಮ ಟೀಮ್ ಕುಂಭಮೇಳದ ಮೂಡ್ನಲ್ಲಿದೆ. ಕಿರುತೆರೆಯಲ್ಲಿಯೇ ಮೊದಲ ಬಾರಿಗೆ ಹೊಸ ಪ್ರಯೋಗ ಮಾಡಿದ್ದು, ಸೀತಾ-ರಾಮ ಮತ್ತು ಸಿಹಿ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಅಲ್ಲಿಯೇ ಸಿಹಿಯ ಸಾಧುವಿನ ದರ್ಶನವೂ ಆಗಿದ್ದು, ಅಪ್ಪ-ಅಮ್ಮನನ್ನು ಮುಟ್ಟುವ ವರವೂ ಸಿಕ್ಕಿದೆ. ದಿನವೂ ಹನುಮಾನ ಚಾಲೀಸಾ ಹೇಳಿದರೆ ನಿನ್ನ ಇಷ್ಟ ಸಿದ್ಧಿಯಾಗುತ್ತದೆ ಎಂದು ಸಾಧು ಹೇಳಿ ಹೋಗಿದ್ದಾರೆ. ಇದರಿಂದ ಸೀರಿಯಲ್ಗೆ ಮತ್ತೊಂದಿಷ್ಟು ಟ್ವಿಸ್ಟ್ ಬರುವುದು ಖಂಡಿತ. ಇದು ಸೀರಿಯಲ್ ಕಥೆಯಾದ್ರೆ, ನಿಜ ಜೀವನದಲ್ಲಿ ಸೀತಾ ಉರ್ಫ್ ವೈಷ್ಣವಿ ಗೌಡ ಇನ್ನೂ ಸಿಂಗಲ್. ಅವರು ಮಿಂಗಲ್ ಆಗುವುದನ್ನೇ ಅಭಿಮಾನಿಗಳು ಕಾಯ್ತಿದ್ದಾರೆ. ಕುಂಭಮೇಳದಲ್ಲಿ ಕೂಡ ಈ ಜೋಡಿ ಒಟ್ಟಿಗೇ ಹೋಗಿರುವ ಕಾರಣ ಸಮ್ಥಿಂಗ್ ಇರಬಹುದೇ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಫ್ಯಾನ್ಸ್ಗೆ ಏನಂತೆ, ಏನು ಬೇಕಾದ್ರು ಕಲ್ಪಿಸಿಕೊಳ್ತಾರೆ ಬಿಡಿ.
ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್ ಆಗಿರುವ ವೈಷ್ಣವಿ ಗೌಡ ಅವರು ಇದೀಗ ಬ್ಲ್ಯಾಕ್ ಆ್ಯಂಡ್ ವೈಟ್ ಸೀರೆಯುಟ್ಟು, ಒಂದೇ ಸೀರೆಯನ್ನು ಯಾವೆಲ್ಲಾ ವಿಧದಲ್ಲಿ ತೊಡಬಹುದು ಎನ್ನುವುದನ್ನು ಹೇಳಿದ್ದಾರೆ. ಅಷ್ಟಕ್ಕೂ, ಭಾರತ ಅಂತೂ ವೈವಿಧ್ಯಗಳ ತವರು. ಒಂದೊಂದು ಪ್ರದೇಶದಲ್ಲಿ, ಒಂದೊಂದು ರಾಜ್ಯದಲ್ಲಿ, ಒಂದೊಂದು ಜನಾಂಗಗಳಲ್ಲಿ ಒಂದೊಂದು ರೀತಿಯ ಆಚರಣೆಗಳಿವೆ. ಅದೇ ರೀತಿ ಬಟ್ಟೆ ತೊಡುವ ವಿಭಿನ್ನ ರೀತಿಯೂ ಇದೆ. ಸೀರೆಯನ್ನೂ ವಿಭಿನ್ನ ರೀತಿಯಲ್ಲಿ ತೊಡಬಹುದಾಗಿದ್ದು, ಅದನ್ನೇ ನಟಿ ವೈಷ್ಣವಿ ಗೌಡ ತೋರಿಸಿದ್ದಾರೆ. ಅವರಿಗೆ ಯಾವುದು ಸೂಟ್ ಆಗುತ್ತದೆ ಎಂದು ಫ್ಯಾನ್ಸ್ ತಮ್ಮದೇ ರೀತಿಯಲ್ಲಿ ಹೇಳಿದ್ದರೆ, ತರ್ಲೆ ಕಮೆಂಟಿಗರು, ಒಂದು ಸೀರೆಯನ್ನು ಹೇಗೆಲ್ಲಾ ಹಾಳು ಮಾಡಬಹುದು ಎಂದು ತೋರಿಸುತ್ತಿದ್ದೀರಾ ಎಂದು ನಟಿಯ ಕಾಲೆಳೆದಿದ್ದಾರೆ.
ನನ್ನ ಸಕ್ಸಸ್ಗೆ ಕಾರಣ ಪಲಾವ್ ಎಲೆ: ಯಶಸ್ಸಿನ ಗುಟ್ಟು ತಿಳಿಸಿಕೊಟ್ಟ ಸೀತಾರಾಮ ನಟಿ ವೈಷ್ಣವಿ ಗೌಡ- ವಿಡಿಯೋ ವೈರಲ್
ಇನ್ನು ವೈಷ್ಣವಿ ಗೌಡ ಕುರಿತು ಹೇಳುವುದಾದರೆ, ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್‌ನ ಸನ್ನಿಧಿ ಮೂಲಕ ಸಕತ್ ಫೇಮಸ್ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ. ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ, ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಿಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ. `ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ. `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ ನಿರೂಪಣೆ ಕೂಡ ಮಾಡಿದ್ದಾರೆ. `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್ಬಾಸ್ ಸೀಸನ್ 8ನಲ್ಲಿ ಭಾಗವಹಿಸಿದ್ದಾರೆ.
ಈ ಹಿಂದೆ, ಟ್ಯಾರೋ ಕಾರ್ಡ್ ಓದುವಿಕೆ ಮೂಲಕ ರೀಡರ್ ಜಯಶ್ರೀ ಅವರಿಂದ ತನ್ನ ಮದುವೆಯ ಬಗ್ಗೆ ಕೇಳಿದ್ದರು ವೈಷ್ಣವಿ. ತಮ್ಮ ಮದುವೆ, ಹುಡುಗ ಯಾರ ರೀತಿ ಇರ್ತಾನೆ ಇತ್ಯಾದಿಗಳ ಬಗ್ಗೆ ಕೇಳಲು ಉತ್ಸುಕರಾಗಿದ್ದರು. ಆದರೆ ಈ ಬಗ್ಗೆ ಜಯಶ್ರೀ ಅವರು ಸ್ಪಷ್ಟವಾಗಿ ಯಾವುದೇ ಮಾಹಿತಿ ನೀಡರಲಿಲ್ಲ. ಭವಿಷ್ಯದಲ್ಲಿ ಯಾರಿಗಾದ್ರೂ ಏನಾದರೂ ಸಹಾಯ ಮಾಡುವುದಿದ್ದರೆ ಯೋಚನೆ ಮಾಡಿ ಮಾಡಬೇಕು. ನಿಮಗೆ ಕಾಲೆಳೆಯುವವರೇ ಜಾಸ್ತಿ. ನಿಮ್ಮ ಗುಟ್ಟನ್ನು ಯಾರ ಬಳಿಯೂ ಹೇಳಿಕೊಳ್ಳಬೇಡಿ. ಏನಾದ್ರೂ ಹೊಸತು ಮಾಡುವುದಿದ್ದರೆ, ಯಾರಿಗೂ ಹೇಳಬೇಡಿ ಎಂದಿದ್ದರು. ರಿಲೇಷನ್ಷಿಪ್ಗೆ ತುಂಬಾ ಟೈಂ ಕೊಡಿ. ಮೊದಲು ನಿಮ್ಮ ಮನಸ್ಸನ್ನು ನೀವು ಬ್ಯಾಲೆನ್ಸ್ ಮಾಡಬೇಕು. ಆಮೇಲೆ ಮುಂದುವರೆಯಬೇಕು ಎಂದು ಮದುವೆಯ ಬಗ್ಗೆ ಅವರು ಎಚ್ಚರಿಕೆ ಕೊಟ್ಟಿದ್ದರು. ಮದುವೆ, ರಿಲೇಷನ್ಷಿಪ್ಗೆ ಇಂತಿಷ್ಟೇ ಟೈಂ ಎಂದು ಇಟ್ಟುಕೊಳ್ಳಬೇಡಿ. ಯಾರ ಜೊತೆಗಾದರೂ ಒಂದೇ ಸಲಕ್ಕೆ ಡಿಸೈಡ್ ಮಾಡಬೇಡಿ. ಒಂದಷ್ಟು ದಿನ ತೆಗೆದುಕೊಂಡು, ಆ ವ್ಯಕ್ತಿ ನಿಮಗೆ ಸರಿ ಎನ್ನಿಸಿದರೆ ನೀವು ಮುಂದುವರೆಯಬೇಕು. ಆದರೆ ಅದಕ್ಕೂ ಮೊದಲು ಮನಸ್ಸಿನ ಮೇಲೆ ಸಾಕಷ್ಟು ಸಂಯಮ ಸಾಧಿಸಬೇಕು. ಎಲ್ಲರನ್ನೂ ನಮ್ಮವರು ಎಂದುಕೊಳ್ಳಬಾರದು ಎಂದಿದ್ದರು.
ಮಗುವಿಗಾಗಿ ಬಾಲ್ಕನಿಗೆ ಸೇಫ್ಟಿ ಮಾಡಿದ ವೈಷ್ಣವಿ ಗೌಡ! ಮನೆಯಲ್ಲಿ ಏನೇನಿವೆ? ಹೋಮ್ ಟೂರ್ ವಿಡಿಯೋ ವೈರಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.