ರೆಡ್‌ ಡ್ರೆಸ್‌ನಲ್ಲಿ ಶಿಲಾ ಬಾಲಿಕೆಯಾದ ನಿವೇದಿತಾ ಗೌಡ, ಕಾಮೆಂಟ್‌ ಸೆಕ್ಷನ್‌ ಮಾತ್ರ ನೋಡೋದಲ್ಲ!

By Santosh Naik  |  First Published Nov 6, 2024, 9:18 PM IST

ಸೋಶಿಯಲ್‌ ಮೀಡಿಯಾದಲ್ಲಿ ಅದೆಂಥದೆ ಕಾಮೆಂಟ್‌ಗಳು ಬಂದರೂ ಅದಕ್ಕೆ ಕ್ಯಾರೆ ಎನ್ನದೇ ಜೀವನ ಮಾಡ್ತಿರುವ ನಿವೇದಿತಾ ಗೌಡ, ರಾಪರ್‌ ಚಂದನ್‌ ಶೆಟ್ಟಿ ಜೊತೆಗಿನ ವಿಚ್ಛೇದನದ ಬಳಿಕ ಇನ್ನಷ್ಟು ಹೈಲೈಟ್‌ ಆಗಿದ್ದರು.


ನಿವೇದಿತಾ ಗೌಡ, ಸೋಶಿಯಲ್‌ ಮೀಡಿಯಾದಿಂದಲೇ ಪ್ರಸಿದ್ಧಿ ಪಡೆದಂಥ ತಾರೆ. ಬಿಗ್‌ಬಾಸ್‌ನಲ್ಲಿ ಭಾಗವಹಿಸಿ, ಬೊಂಬೆ ಅಂದ್ಕೊಂಡು ಚಂದನ್‌ ಶೆಟ್ಟಿ ಜೊತೆ ಕುಣಿದಾಡಿ, ಬಳಿಕ ಅವರನ್ನೇ ಮದುವೆಯಾಗಿ ವಿಚ್ಛೇದನವನ್ನು ಪಡೆದುಕೊಂಡಿರುವ ನಟಿ. ಚಿಕ್ಕ ವಯಸ್ಸಿನಲ್ಲೇ ಬದುಕಿನಲ್ಲಿ ಸಾಕಷ್ಟು ಏಳು ಬೀಳು ಕಂಡ ನಟಿ. ಇಷ್ಟೆಲ್ಲಾ ಆಗಿದ್ದರೂ, ಸೋಶಿಯಲ್‌ ಮೀಡಿಯಾದಲ್ಲಿ ತಮಗೆ ಇಷ್ಟಬಂದಿದ್ದನ್ನು ಪೋಸ್ಟ್‌ ಮಾಡುವ ಮೂಲಕ ಧೈರ್ಯ ತೋರುತ್ತಿದ್ದಾರೆ. ಆದರೆ, ನಿವೇದಿತಾ ಗೌಡ ಹಾಕೋ ಪ್ರತಿ ಪೋಸ್ಟ್‌ಗೂ ಚಂದನ್‌ ಶೆಟ್ಟಿ ಕುರಿತಾದ ಕಾಮೆಂಟ್‌ ಬಂದೇ ಇರುತ್ತದೆ. ನಿವೇದಿತಾ ಗೌಡ ಏನು ಬೇಕಾದರೂ ಮಾಡದೇ ಇರಬಹುದು. ಆದರೆ, ಪ್ರತಿದಿನ ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಾಕೋದನ್ನ ಮಾತ್ರ ಮರೆಯೋದಿಲ್ಲ. ಅದರಿಂದಲೇ ಆಕೆ ಸಂಪಾದನೆಯನ್ನೂ ಮಾಡಿಕೊಳ್ಳುತ್ತಿದ್ದಾರೆ.

ಬುಧವಾರ ಇನ್ಸ್‌ಟಾಗ್ರಾಮ್‌ನಲ್ಲಿ ರೀಲ್‌ ಹಂಚಿಕೊಂಡಿರುವ ನಿವೇದಿತಾ ಗೌಡ, ಇಂದು ರಾತ್ರಿ ನಾನು ರೆಡ್‌ ಡ್ರೆಸ್‌ ಪಡೆದುಕೊಂಡಿದ್ದೇನೆ ಎಂದು ಪೋಸ್ಟ್‌ ಮಾಡಿದ್ದಾರೆ. ಅದರೊಂದಿಗೆ ತಮಗೆ ಸ್ಟೈಲಿಂಗ್‌ ಮಾಡಿದವರ ಹಾಗೂ ಔಟ್‌ಫಿಟ್‌ ನೀಡಿದವರ ವಿವರಗಳನ್ನೂ ಹಂಚಿಕೊಂಡಿದ್ದಾರೆ. ಆದರೆ, ಇದಕ್ಕೆ ಎಂದಿನಂತೆ ನಿವೇದಿತಾಗೆ ಟ್ರೋಲ್‌ ಮಾಡುವ ಕಾಮೆಂಟ್‌ಗಳೇ ಹೆಚ್ಚಾಗಿ ಬಂದಿವೆ.

'ಮೂರು ಭಟ್ಟೋರು ಗಂಡನ್ ಬಿಟ್ಟೋರು ಊರಿಗೆ ದೊಡ್ಡವರು..' 'ಸೋನು ಗೌಡ ಆದ್ಮಲೇ ನೆಕ್ಸ್ಟ್‌ ನೀವೇ..' 'ನನ್ ಮಕ್ಳು ಒಂದೊಂದು ಅಲ್ಲಣ್ಣ ಒಂದೊಂದಲ್ಲಾ, ಮೂರು ಬಿಟ್ ನಿಂತ್ ಬಿಟ್ಟವ್ರೆ..'ಎನ್ನುವ ಕಾಮೆಂಟ್‌ಗಳು ಬಂದಿವೆ.

Tap to resize

Latest Videos

undefined

'ಇವಳನ್ನು ನೋಡಿದ್ರೆ ಎಲ್ಲಾ ಗಂಡಸರಿಗೆ ಒಂದು ನೀತಿ ಪಾಠಗಳು 1. ಯಾರು ಕೂಡಾ ಹೆಂಡ್ತಿಯರಿಗೆ ರೀಲ್ಸ್ ಮಾಡೋ ಪ್ರೋತ್ಸಾಹ ಮಾಡಬೇಡಿ 2. ನಿಮ್ಮ ಹೆಂಡತಿಯರನ್ನು ಹೇಳಿದ ಮಾತು ಕೇಳೋ ತರ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಿ 3. ಎಂದಿಗೂ ಹೆಂಡತಿಯರನ್ನು ತಲೆ ಮೇಲೆ ಕೂರಿಸಿಕೊಳ್ಳಬೇಡಿ 4 ಚಿಕ್ಕ ವಯಸ್ಸಿನ ಹುಡುಗಿಯರನ್ನು ಮದುವೆ ಆಗಲೇಬೇಡಿ 5. ಎಲ್ಲಾ ಗಂಡಸರು ಮನೆಯಲ್ಲಿ ತೋರಿಸೋ ಹುಡುಗಿಯರನ್ನು ಮದುವೆಯಾಗಿ..' ಎಂದು ಒಬ್ಬರು ನೀತಿ ಪಾಠ ಮಾಡಿದ್ದಾರೆ.

ಮಾಜಿ ಗಂಡನಿಗೆ ಉರಿಸೋಕಂತಲೇ 'ಹಾಟ್‌' ಪೋಸ್ಟ್‌ ಮಾಡ್ತಿದ್ದಾರಾ ನಿವೇದಿತಾ ಗೌಡ?

'ಹೇಳೋರಿಲ್ಲ ಕೇಳೋರಿಲ್ಲ.. ಇವರಿಗೆ ಇಷ್ಟಬಂದಂತೆ ಬಿಟ್ಟವರೇ.. ಗಂಡ ಒಳ್ಳೆಯವನು ಪ್ರಶ್ನೆ ಮಾಡಿ ಬುದ್ದಿ ಹೇಳಿದರೆ.. ಗಂಡನಿಗೆ ಡೈವರ್ಸ್ ಕೊಡೋದ್.. ಅಂದ ನಾಲ್ಕು ಗೋಡೆಯೊಳಗೆ ಗಂಡನಿಗೆ ಮಾತ್ರ ತೋರಿಸೋದ್ ಹೆಣ್ಣು ಮಕ್ಕಳ ಲಕ್ಷಣ ಈ ತರ ತೋರಿಸಿ ಬರಿ ಲೈಕ್ ಕಾಮೆಂಟ್ ಪಡೆಯೋದಲ್ಲ.. ಅಕ್ಕ.. ಇದೆಲ್ಲಾ ಯಾರಿಗಾಗಿ..' ಎಂದು ನಿವೇದಿತಾ ರೀಲ್ಸ್‌ಗೆ ಪ್ರಶ್ನೆ ಹಾಕಿದ್ದಾರೆ.

ಕೊಳಕು ಕಾಮೆಂಟ್ ನಿಮ್ಮ ಸಂಸ್ಕಾರ ತೋರಿಸುತ್ತೆ, ಅಂಥಾ ಅಸಹ್ಯವನ್ನ ಕಣ್ಣೆತ್ತಿಯೂ ನೋಡಲ್ಲ : ಜನ್ಮಜಾಲಾಡಿದ ನಿವೇದಿತಾ ಗೌಡ

'ಇತ್ತೀಚಿನ ದಿನಗಳಲ್ಲಿ ನೀವು ಏನು ತೋರಿಸೋಕೆ ಹೊರಟಿದ್ದೀರಿ ಅನ್ನೋದೇ ಅರ್ಥವಾಗ್ತಾ ಇಲ್ಲ.ಇದೇ ನಿಮ್ಮ ನಿಜವಾದ ಪ್ರತಿಭೆ ಆಗಿದ್ದರೆ ಕ್ಷಮಿಸಿ ಇದನ್ನು ಗಮನಿಸುವಲ್ಲಿ ನಾವು ಸೋತಿದ್ದೇವೆ..' ಅಂತಾ ಬರೆದಿದ್ದಾರೆ. ಇನ್ನೂ ಕೆಲವರು ನಿವೇದಿತಾರನ್ನು ಕರ್ನಾಟಕದ ಸನ್ನಿ ಲಿಯೋನ್‌ ಅಂತೆಲ್ಲಾ ಕರೆದಿದ್ದಾರೆ.

 

click me!