ಬಿಗ್ ಬಾಸ್ ಕನ್ನಡ ಮನೆಯಲ್ಲಿ ಈ ಇಬ್ಬರು ಯಾವ ಕಾರಣಕ್ಕೆ ಭಾರೀ ಟ್ರೋಲ್ ಆಗಿದ್ದಾರೆ?

By Shriram Bhat  |  First Published Nov 6, 2024, 3:07 PM IST

ಅವರಿಬ್ಬರ ಬಗ್ಗೆಯಂತೂ ಮಹಾನ್ ಯಡವಟ್ಟುಗಳು ಎಂದೇ ಸೋಷಿಯಲ್ ಮೀಡಿಯಾಗಳಲ್ಲಿ ಹಲವರು ಕಾಮೆಂಟ್ ಮಾಡುತ್ತಿದ್ದರು. ಮಾನಸಾ ಎಲಿಮಿನೇಶನ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಆದರೆ, ಚೈತ್ರಾ ಸದ್ಯಕ್ಕೆ ಇನ್ನೂ ಅಲ್ಲೇ ಇದ್ದಾರೆ...


ಬಿಗ್ ಬಾಸ್ ಕನ್ನಡ ಸೀಸನ್ 11ರ ಮನೆಯಲ್ಲಿ ಏನೇನೋ ನಡೆಯುತ್ತಿವೆ. ಅಂದರೆ, ಕೆಲವು ಸ್ಪರ್ಧಿಗಳು ಮಾತನಾಡಲೇಕು ಎಂಬ ಹಠಕ್ಕೆ ಬಿದ್ದವರಂತೆ ಏನೇನೋ ಮಾತನಾಡಿಕೊಂಡು ಯಡವಟ್ಟು ಮಾಡಿಕೊಂಡಿದ್ದಾರೆ. ಅದರಲ್ಲೂ ಸ್ಪರ್ಧಿಗಳಾದ ಚೈತ್ರಾ ಕುಂದಾಪುರ (Chaitra Kundapura) ಹಾಗು ಮಾನಸ ಸಂತೋಷ್ (Manasa Santhosh) ಅವರಿಬ್ಬರ ಬಗ್ಗೆಯಂತೂ ಮಹಾನ್ ಯಡವಟ್ಟುಗಳು ಎಂದೇ ಸೋಷಿಯಲ್ ಮೀಡಿಯಾಗಳಲ್ಲಿ ಹಲವರು ಕಾಮೆಂಟ್ ಮಾಡುತ್ತಿದ್ದರು. ಮಾನಸಾ ಎಲಿಮಿನೇಶನ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಆದರೆ, ಚೈತ್ರಾ ಸದ್ಯಕ್ಕೆ ಇನ್ನೂ ಅಲ್ಲೇ ಇದ್ದಾರೆ. 

ತಮ್ಮ ತಾಯಿಯ ನಿಧನದ ಕಾರಣಕ್ಕೆ ಕಿಚ್ಚ ಸುದೀಪ್ ಅವರು ಬಿಗ್‌ ಬಾಸ್‌ ಶೋನಿಂದ ಒಂದು ವಾರ ಹೊರಗಿದ್ದರು. ಅರು ಇದ್ದಾಗಲೂ ಇಲ್ಲದಿದ್ದಾಗ ಈ ಚೈತ್ರಾ ಹಾಗೂ ಮಾನಸ ಅವರಿಬ್ಬರು ತಮ್ಮಮಾತುಗಳ ಕಾರಣದಿಂದಲೇ ಔಆರೀ ಟ್ರೋಲ್ ಆಗುತ್ತಿದ್ದರು. ಸ್ವತಃ ಕಿಚ್ಚ ಸುದೀಪ್ ಅವರೇ ಹಲವಾರು ಬಾರಿ ಈ ಇಬ್ಬರಿಗೂ ಅವರ ಮಾತುಗಳ ಕಾರಣಕ್ಕೇ ತಮ್ಮ ಮಾತುಗಳಿಂದಲೇ ಛಾಟಿ ಬೀಸಿದ್ದಾರೆ. ಈ ಮಾತುಗಳೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಅದರ ಒಂದು ಝಲಕ್ ಇಲ್ಲಿದೆ ನೋಡಿ.. 

Tap to resize

Latest Videos

undefined

ಪಾರ್ವತಮ್ಮನ ಆಶ್ರಯದಲ್ಲಿ ಕನ್ನಡ ಚಿತ್ರರಂಗ ಒಂದಾಗಿದ್ದ ಕಾಲ; ಇದು ಹೀಗ್ಯಾಕೆ ವೈರಲ್ ಆಗ್ತಿದೆ?!

ಕಿಚ್ಚ ಸುದೀಪ್ ಅವರು ಮಾನಸ ಬಗ್ಗೆ ಹೇಳಿದ್ದ'ಮಾನಸಾ ಮೇಡಂ, ತಮ್ಮ ಮಾತುಗಳಿಂದಲೇ ಒಬ್ಬ ವ್ಯಕ್ತಿ ಈ ಮನೆಯಿಂದ ಹೊರಗೆ ಹೋಗಿದ್ದಾನೆ ಎಂದರೆ ನೀವು ಮಾತನಾಡಿದ ತಪ್ಪು ಮಾತುಗಳನ್ನು ಇಟ್ಕೊಂಡು ನಿಮ್ಮನ್ನು ಯಾಕೆ ಮನೆಯಲ್ಲಿ ಇಟ್ಕೊಂಡಿರ್ಬೇಕು..' ಎಂದಿದ್ದರು ಕಿಚ್ಚ ಸುದೀಪ್. ಇದು ಬಹಳಷ್ಟು ಸರಿಯಾದ ಅರ್ಥ ಕೊಡುತ್ತದೆ ಎಂದೇ ಭಾವಿಸಿರುವ ಸೋಷಿಯಲ್ ಮೀಡಿಯಾ ಮಂದಿ ಈ ಮಾತನ್ನು ಕಾಮೆಂಟ್ ಮಾಡಿ ಮಾನಸ ಅವರ ಕಾಲೆಳೆಯುತ್ತಿದ್ದಾರೆ. ಅದರಂತೆ ಚೈತ್ರಾ ಕುಂದಾಪುರ ಕೂಡ ಟ್ರೋಲ್ ಆಗುತ್ತಿದ್ದಾರೆ. 

ಬಿಗ್ ಬಾಸ್ ಹೋಸ್ಟ್ ಸುದೀಪ್ ಅವರು ಚೈತ್ರಾ ಕುಂದಾಪುರ ಬಗ್ಗೆ ' ಹೆಣ್ಮಕ್ಕಳಿಗೆ ಬೈಬೇಡ ಅಂತೀರಿ, ಆದ್ರೆ ಒಬ್ಬ ಅಪ್ಪಂಗೆ ಹುಟ್ಟಿದರೆ ಅಂತ ನೀವೇ ಅಂತೀರಿ... ಆ ಮಾತು ಹೇಳಿ ಯಾರೋ ಒಬ್ರು ಬೈತಿದ್ದರೆ ಅದು ಅಪ್ಪಂಗೆ ಅಲ್ಲ, ಬೈಯೋದು ಮೇಡಂ, ಅದು ತಾಯಿಗೆ ಬೈತಾ ಇರೋದು, ಅದು ಹಾಗೇ ಅರ್ಥ ಕೊಡೋದು...' ಅಂದಿದ್ದಾರೆ. ಈ ಮೂಲಕ ಚೈತ್ರಾ ಕುಂದಾಪುರ ಅವರು ಯೋಚನೆ ಮಾಡದೇ, ಅರ್ಥ ತಿಳಿದುಕೊಳ್ಳದೇ ಮಾತನಾಡುತ್ತಾರೆ ಎಂದು ಸುದೀಪ್ ಹೇಳಿದ್ದಾರೆ ಎನ್ನಬಹುದು. ಸುದೀಪ್ ಹೇಳಿದ ಈ ಮಾತನ್ನು ಇಟ್ಟುಕೊಂಡು, ಸೋಷಿಯಲ್ ಮಿಡಿಯಾಗಳಲ್ಲಿ ಇದೀಗ ಚೈತ್ರಾ ಅವರನ್ನು ಟ್ರೊಲ್ ಮಾಡಲಾಗುತ್ತಿದೆ. 

ಮದುವೆಗೆ ರೆಡಿಯಾಗಿರುವ ಡಾಲಿ ಧನಂಜಯ್ ಅಂತಿಂಥವರಲ್ಲ, ಹತ್ತನೇ ಕ್ಲಾಸ್‌ನಲ್ಲಿ ಮಾಡಿದ್ದೇನು?

ಒಟ್ಟಿನಲ್ಲಿ, ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳಾದ ಮಾನಸ ಹಾಗೂ ಚೈತ್ರಾ ಕುಂದಾಪುರ ಅವರಿಬ್ಬರೂ ಆಡಿರುವ ಮಾತುಗಳು ಹೊರಗೆ ಕೂಡ ಟ್ರೋಲ್ ಆಗಿವೆ. ಮಾನಸ ಅವರ ಪದೇ ಪದೇ ತಮಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ ಎಂದು ಕ್ಷಮೆ ಕೇಳುತ್ತಲೇ ಮತ್ತೆ ಮತ್ತೆ ತಪ್ಪುತಪ್ಪಾಗಿ ಮಾತನಾಡಿ ಟ್ರೋಲ್ ಆಗಿದ್ದರೆ, ಚೈತ್ರಾ ಅವರದ್ದು ಬೇರೆಯದೇ ಸಮಸ್ಯೆ. ನಾನೇನು ಮಾತನಾಡಿದರೂ ಅದು ಸರಿಯೇ ಎಂದೋ ಅಥವಾ ಅದೇನು ಮಾತನಾಡಿದರೂ ಬಿಗ್ ಬಾಸ್ ಮನೆಯ ಆಟದಲ್ಲಿ ನಡೆಯುತ್ತದೆ ಎಂದೋ ಭಾವಿಸಿದಂತಿರುವ ಅವರಾಡಿದ ಮಾತುಗಳು ಟ್ರೋಲ್ ಆಗುತ್ತಿವೆ!

click me!