ಆಹಾ ! ಅದ್ಭುತವಾಗಿ ನಾಟಕವಾಡ್ತಿದ್ದಾನೆ ತಾಂಡವ್, ಮಗನ ಮಾತಿಗೆ ಕರಗಿದ ಕುಸುಮ

Published : Jan 21, 2025, 10:32 AM ISTUpdated : Jan 21, 2025, 10:38 AM IST
ಆಹಾ ! ಅದ್ಭುತವಾಗಿ ನಾಟಕವಾಡ್ತಿದ್ದಾನೆ ತಾಂಡವ್, ಮಗನ ಮಾತಿಗೆ ಕರಗಿದ ಕುಸುಮ

ಸಾರಾಂಶ

ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ತಾಂಡವ್ ಮತ್ತೆ ಮನೆಗೆ ವಾಪಸ್ಸಾಗಿದ್ದಾನೆ. ಶ್ರೇಷ್ಠಾಳ ಮನೆಯಲ್ಲಿ ಸರಿಯಾದ ಊಟೋಪಚಾರ ಸಿಗದೆ, ತಾಯಿ ಮನೆಯನ್ನೇ ಆಶ್ರಯಿಸಿದ್ದಾನೆ. ತಾಂಡವ್‌ನ ಈ ನಡೆಗೆ ವೀಕ್ಷಕರು ಕಿಡಿಕಾರಿದ್ದಾರೆ. ಊಟಕ್ಕಾಗಿ ವಾಪಸ್ ಬಂದಿದ್ದಾನೆ, ನಾಟಕ ಮಾಡುತ್ತಿದ್ದಾನೆ ಎಂದು ಟೀಕಿಸಿದ್ದಾರೆ. ಭಾಗ್ಯಾ ಮಾತ್ರ ಗಂಡನ ನಾಟಕವನ್ನು ಅರಿತಿದ್ದಾಳೆ.

ಕಲರ್ಸ್ ಕನ್ನಡ (Colors Kannada )ದಲ್ಲಿ ಪ್ರಸಾರವಾಗ್ತಿರುವ ಭಾಗ್ಯಲಕ್ಷ್ಮಿ ಸೀರಿಯಲ್ (Bhagyalakshmi Serial) ನಲ್ಲಿ ತಾಂಡವ್ ಹುಚ್ಚನಂತೆ ಆಡ್ತಿದ್ದಾನೆ. ಆಗಾಗ ಮನೆ ಬಿಟ್ಟು ಹೋಗೋದು ಅವನಿಗೆ ಅಭ್ಯಾಸವಾಗಿದೆ. ಮನೆ ಬಿಟ್ಟು ಶ್ರೇಷ್ಠಾ ಹಿಂದೆ ಹೋಗಿರುವ ತಾಂಡವ್  ಮತ್ತೆ ವಾಪಸ್ ಬಂದೇ ಬರ್ತಾನೆ ಎನ್ನುವ ನಂಬಿಕೆ ಆತನ ತಾಯಿ ಕುಸುಮಾಗಿದೆ. ಶ್ರೇಷ್ಠಾ ಮನೆಗೆ ಬಂದು ಒಂದಿಷ್ಟು ರಾದ್ಧಾಂತ ಮಾಡಿದ್ದಾಳೆ. ಶ್ರೇಷ್ಠಾಗೆ ತೊಂದ್ರೆ ಆಗುತ್ತೆ ಎನ್ನುವ ಕಾರಣಕ್ಕೆ ಅವಳ ಜೊತೆ ಅವಳ ಮನೆ ಸೇರಿದ್ದಾನೆ ತಾಂಡವ್. ಆದ್ರೀಗ ಶ್ರೇಷ್ಠಾಳ ಬಣ್ಣ ಗೊತ್ತಾಗ್ತಿದೆ. ಹೊತ್ತು ಹೊತ್ತಿಗೆ ಊಟ, ಬೇಕಾದ ವ್ಯವಸ್ಥೆ ಸಿಗ್ತಿಲ್ಲ. ಕೆಲಸ, ಮೀಟಿಂಗ್ ಅಂತ ಬ್ಯುಸಿಯಾಗಿರುವ ಶ್ರೇಷ್ಠಾಗೆ ಅಡುಗೆ ಮಾಡೋಕೆ ಬರೋದಿಲ್ಲ. ಹೊಟೇಲ್ ನಿಂದ ತರಿಸಿ, ನಾನೇ ಅಡುಗೆ ಮಾಡಿದ್ದು ಅಂತ ಬಿಲ್ಡಪ್ ಕೊಟ್ಟಿದ್ದಾಗಿದೆ. ಮೀಟಿಂಗ್ ಮುಗಿಸಿ ಮನೆಗೆ ಬಂದ್ರೆ ತಾಂಡವ್ ಗೆ ತಿನ್ನೋಕೆ ಏನೂ ಇಲ್ಲ. ಇದ್ರಿಂದ ಶ್ರೇಷ್ಠಾಗಿಂತ ಅಮ್ಮನ ಮನೆ ಎಷ್ಟೋ ವಾಸಿ ಅಂದುಕೊಂಡ ತಾಂಡವ್ ಮತ್ತೆ ಮನೆಗೆ ಬಂದಿದ್ದಾನೆ.

ಸಮಯಕ್ಕೆ ಸರಿಯಾಗಿ ಎಲ್ಲವನ್ನೂ ಭಾಗ್ಯ ಮಾಡಿ ಹಾಕ್ತಿದ್ಲು. ಅಪ್ಪ – ಅಮ್ಮ ತಾಂಡವ್ ಗೆ ಯಾವುದೇ ಕೊರತೆ ಇಲ್ಲದಂತೆ ನೋಡಿಕೊಂಡಿದ್ರು. ತಿಂದು ಕೊಬ್ಬಿದ್ದ ತಾಂಡವ್ ಗೆ ಶ್ರೇಷ್ಠಾ ಸಂಕಷ್ಟ ತಂದಿಟ್ಟಿದ್ದಾಳೆ. ಶ್ರೇಷ್ಠಾ ಭಾಗ್ಯಾಳಂತೆ ಎಲ್ಲವನ್ನೂ ಮಾಡ್ತಾಳೆ ಅಂದ್ಕೊಂಡು ಹುಮ್ಮಸ್ಸಿನಲ್ಲಿ ಮನೆ ಏನೋ ತಾಂಡವ್ ಬಿಟ್ಟ. ಆದ್ರೆ ಶ್ರೇಷ್ಠಾ, ತಾಂಡವ್ ಗಾಗಿ ತನ್ನ ಕೆಲಸವನ್ನು ಬಿಟ್ಟು ಕುಳಿತುಕೊಳ್ಳೋಳಲ್ಲ. ಇದು ತಾಂಡವ್ ಅರಿವಿಗೆ ಬಂದಿದೆ. ಭಾಗ್ಯಾ ಇರ್ಬೇಕಾ ಇಲ್ಲ ನಾನು ಇರ್ಬೇಕಾ ಅಂತ ಅಮ್ಮನ ಮುಂದೆ ಸವಾಲು ಹಾಕಿ, ಅಮ್ಮ ಸೊಸೆ ಆಯ್ಕೆ ಮಾಡ್ಕೊಂಡಾಗ ಮನೆ ಬಿಟ್ಟಿದ್ದ ತಾಂಡವ್ ಈಗ ವಾಪಸ್ ಆಗಿದ್ದಾನೆ. ಮಗ ಬಂದೇ ಬರ್ತಾನೆ, ಅವನಿಗೆ ಬುದ್ಧಿ ಬರುತ್ತೆ ಎಂದು ಕುಸುಮಾ ಹೇಳ್ತಿದ್ದಳು. ಅದ್ರಂತೆ ತಾಂಡವ್ ವಾಪಸ್ ಆಗಿದ್ದಾನೆ. ಆದ್ರೆ ತಾಂಡವ್ ಗೆ ಬುದ್ಧಿ ಬಂದಿಲ್ಲ. ಆರಾಮವಾಗಿ ಊಟ ಮಾಡ್ಕೊಂಡು ಅಮ್ಮನ ಮನೆಯಲ್ಲಿ ಹಾಯಾಗಿ ಇರಬಹುದು ಎನ್ನುವ ಕಾರಣಕ್ಕೆ ತಾಂಡವ್ ಮನೆಗೆ ಬಂದಿದ್ದಾನೆಯೇ ವಿನಃ ಶ್ರೇಷ್ಠಾ ಪ್ರೀತಿ ಬಿಟ್ಟಾಗ್ಲಿ, ಬುದ್ಧಿ ಬಂದಾಗ್ಲಿ ಬರಲಿಲ್ಲ.

BBK 11: ನನ್ನ ಪತಿ ಅಭಿಷೇಕ್‌ಗೆ ಬೇಸರ ಆಗಿದೆ; 3 ಎಕರೆ ಕೊಡ್ತೀನಿ, ಆಶ್ರಮ‌ ಕಟ್ಟು ಅಂತ ಮಂಜು ಹೇಳಿದ್ದಾರೆ: ಉಗ್ರಂ ಮಂಜು

ಆತನಿಗೆ ಭಾಗ್ಯಾ ಮೇಲೆ ಈಗ್ಲೂ ಪ್ರೀತಿ ಇಲ್ಲ. ಅಪ್ಪ – ಅಮ್ಮನ ಜೊತೆ ಹಾಯಾಗಿದ್ದೆ, ಭಾಗ್ಯಾ ಎಲ್ಲವನ್ನು ಹಾಳು ಮಾಡಿದ್ಲು ಎನ್ನುತ್ತಲೇ ಮನೆಗೆ ಬಂದು ನಾಟಕ ಶುರು ಮಾಡಿದ್ದಾನೆ. ನಿಮ್ಮಿಬ್ಬರನ್ನು ಬಿಟ್ಟು ಇರಲು ಸಾಧ್ಯ ಆಗ್ಲಿಲ್ಲ, ಅದಕ್ಕೆ ಬಂದೆ ಎಂದಿದ್ದಾನೆ. ಪ್ರೋಮೋದಲ್ಲಿ ತಾಂಡವ್ ವಾಪಸ್ ಬರೋದನ್ನು ತೋರಿಸಲಾಗಿದೆ. ಮಗನ ಮಾತು ಕೇಳಿ ಕುಸುಮಾ ಹಾಗೂ ಅಪ್ಪ ಕರಗಿದ್ದಾರೆ. ಆದ್ರೆ ಭಾಗ್ಯಾ ಸೋತಿಲ್ಲ. ಆಕೆಗೆ ತಾಂಡವ್ ನಾಟಕವಾಡ್ತಿದ್ದಾನೆ ಎಂಬುದು ಸ್ಪಷ್ಟವಾಗಿದೆ. ಮನೆ, ಮಕ್ಕಳು, ಹಿರಿಯರ ಸುಖಕ್ಕೆ ದುಡಿಯುತ್ತಿರುವ ಭಾಗ್ಯಾ, ಗಂಡನನ್ನು ದೂರ ಮಾಡಿ ಎಲ್ಲವನ್ನೂ ಎದುರಿಸುವ ಧೈರ್ಯ ಮುಂದುವರೆಸಿದ್ದಾಳೆ.

ಮದುವೆ ಆದಮೇಲೆ ಅದಾಗಲೇ ಇಲ್ಲ ಒಂದು ವರ್ಷ ಎಂದ ಲಾಯರ್ ಜಗದೀಶ್! ಮತ್ತೇನಾಯ್ತಂತೆ

ಈ ಧಾರಾವಾಹಿ ನೋಡ್ತಿರುವ ವೀಕ್ಷಕರು ಮಾತ್ರ ಕೋಪಗೊಂಡಿದ್ದಾರೆ. ಇವನು ವಾಪಸ್ ಬರೋದು ಕನಸು ಅಂತ ಒಬ್ಬರು ಹೇಳಿದ್ರೆ, ತಾಂಡವ್ ನಾಟಕ (Drama) ಮಾಡ್ತಿದ್ದಾನೆ, ಪದೇ ಪದೇ ಮನೆ ಬಿಟ್ಟು ಹೋಗೋದು ಏಕೆ, ಊಟ ತಿಂಡಿಗಾಗಿ ತಾಂಡವ್ ಇಲ್ಲಿಗೆ ಬಂದಿದ್ದಾನೆ, ಸೀರಿಯಲ್ ನೋಡಿ ಬೋರ್ ಆಗ್ತಿದೆ ಇಲ್ಲಿಗೆ ನಿಲ್ಸಿ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?