
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಭಾಗ್ಯಲಕ್ಷ್ಮೀ' ಸೀರಿಯಲ್ ಇದೀಗ ಹೊಸ ತಿರುವಿನತ್ತ ಸಾಗಿದೆ. ತಾಯಿ ಕುಸುಮಾಳ ಮನಸ್ಸು ಕೆಡಿಸಿದ ತಾಂಡವ್, ಮನೆಯಲ್ಲಿ ಮಗನ ಸ್ಥಾನ ಕಳೆದುಕೊಂಡಿದ್ದಾನೆ. ಕೆಲಸ ಮುಗಿಸಿ ಮನೆಗೆ ಬಂದ ತಾಂಡವ್ ಮನೆಯೊಳಕ್ಕೆ ಬರಲು ಪ್ರಯತ್ನಿಸುತ್ತಿದ್ದಂತೆ, ತಾಯಿ ಕುಸುಮಾ ಅವನನ್ನು ತಡೆದು 'ಮನೆ ಒಳಕ್ಕೆ ಬರಬೇಡ' ಎಂದು ದೊಡ್ಡ ರಂಪಾಟವನ್ನೇ ಮಾಡುವಳು. ಅನಿರೀಕ್ಷಿತ ಆಘಾತದಿಂದ ತತ್ತರಿಸುವ ತಾಂಡವ್, ಅಮ್ಮನಲ್ಲಿ ಬಹಳಷ್ಟು ರಿಕ್ವೆಸ್ಟ್ ಮಾಡಿಕೊಳ್ಳುತ್ತಾನೆ.
ಆದರೆ, ಮಗ ಮನೆಯಲ್ಲಿ ಇಟ್ಟುಕೊಂಡಿದ್ದ ಪೂಜೆಗೆ ಬಂದಿಲ್ಲ ಎಂಬ ಕಾರಣಕ್ಕೆ ಬೇಸರಪಟ್ಟುಕೊಂಡು ಮನಸ್ಸು ಕೆಡಿಸಿಕೊಂಡಿರುವ ಅಮ್ಮ ಕುಸುಮಾ, 'ನಿನಗೆ ಕೆಲಸ ಬಿಟ್ಟರೆ ಬೇರೆ ಯಾವುದೂ ಬೇಕಾಗಿಲ್ಲ ಎಂದಾದರೆ, ನೀನು ಬೀದಿಯಲ್ಲೇ ಇರು, ಮನೆಗೆ ಬರುವುದೇ ಬೇಡ. ನಾನು ಮನೆಯಲ್ಲಿ ಪೂಜೆ ಇಟ್ಟುಕೊಂಡು ಕಾಯುತ್ತಿದ್ದರೆ, ನೀನು ಪೂಜೆ ಎಲ್ಲಾ ಮುಗಿದು ಎಷ್ಟೋ ಹೊತ್ತಾದ ಬಳಿಕ ಬರುತ್ತಿದ್ದೀಯಾ'
ಬಿಗ್ಬಾಸ್ ಮನೆಯಲ್ಲೂ ಹಾರದ ಡ್ರೋನ್: ಪ್ರತಾಪನ ಅವಸ್ಥೆ ಕಂಡು ಅಯ್ಯೋ ಅಂತಿದ್ದಾರೆ ಫ್ಯಾನ್ಸ್!
ಪೂಜೆಗೆ ಬಂದವರೆಲ್ಲಾ ಮಗ ಎಲ್ಲಿ, ಪೂಜೆ ಟೈಮ್‌ನಲ್ಲೂ ,ಮನೆನಲ್ಲಿ ಮಗ ಇಲ್ಲ, ಹಾಗೆ ಹೀಗೆ ಎಂದು ಹೇಳುತ್ತಿದ್ದರೆ ನನಗೆ ಕೋಪ, ದುಃಖ ಎಲ್ಲವೂ ಒಟ್ಟೊಟ್ಟಿಗೇ ಬರುತ್ತಿತ್ತು. ನೀನು ಮನೆಗೆ ಬರುವುದು ಬೇಡ, ಹೊರಗೆ ಹೋಗು' ಎಂದು ತಾಂಡವ್‌ನನ್ನು ಒಳಗೆ ಬಿಟ್ಟುಕೊಳ್ಳದೇ ಬಾಗಿಲು ಹಾಕಿಬಿಡುವಳು. ಸೊಸೆ ಭಾಗ್ಯ 'ಅಕ್ಕಪಕ್ಕದವರು, ಬೀದಿಯವರೆಲ್ಲಾ ನೋಡುತ್ತಿದ್ದಾರೆ, ದಯವಿಟ್ಟು ಅವರನ್ನು ಒಳಕ್ಕೆ ಕರೆದುಕೊಳ್ಳಿ' ಎಂದು ಹೇಳಿದರೂ ಕುಸುಮಾ ಮಗನನ್ನು ಬಿಟ್ಟುಕೊಳ್ಳುವುದಿಲ್ಲ. ಒಟ್ಟಿನಲ್ಲಿ, ಕುಸುಮಾ ಮನಸ್ಸು ಕೆಡಿಸಿರುವ ತಾಂಡವ್ ಮನೆಯಲ್ಲಿ ಜಾಗ ಕಳೆದುಕೊಂಡು ಒದ್ದಾಡುವಂತೆ ಆಗಿದೆ.
ವಿದೇಶದ ನೆಲದಲ್ಲಿ ಕುಣಿದು ಕುಪ್ಪಳಿಸುತ್ತಿರುವ 'ಭರ್ಜರಿ ಬ್ಯಾಚುಲರ್ಸ್'
ಅಂದಹಾಗೆ, ಸೋಮವಾರದಿಂದ ಶನಿವಾರ ಸಂಜೆ 7 ಗಂಟೆಗೆ ಕಲರ್ಸ್ ಕನ್ನಡದಲ್ಲಿ 'ಭಾಗ್ಯಲಕ್ಷ್ಮೀ' ಸೀರಿಯಲ್ ಪ್ರಸಾರವಾಗುತ್ತಿದೆ. ಈ ಸೀರಿಯಲ್ ಸದ್ಯ ಒಳ್ಳೆಯ ಟಿಆರ್‌ಪಿ ಗಳಿಸುತ್ತಿದ್ದರು, ಬಹಳಷ್ಟು ವೀಕ್ಷಕರು ಈ ಸೀರಿಯಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮನೆಯಿಂದ ಹೊರಬಿದ್ದು ಒದ್ದಾಡುತ್ತಿರುವ ತಾಂಡವ್ ಕಥೆ ಮುಂದೇನು ಎಂಬ ಕುತೂಹಲಕ್ಕೆ ಇಂದಿನ ಸಂಚಿಕೆ ನೋಡಿದರೆ ಉತ್ತರ ಸಿಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.