ಪ್ರತೀ ಹೆಜ್ಜೆನೂ ನಿನ್ನ ನೆನಪು ಮಾಡೋ ಒಡವೆ ಅಂದರೆ ಈ ಕಾಲುಂಗುರ ಕಣೋ ಅಂತಿದ್ದಾಳೆ ಚಾರು!

By Suvarna News  |  First Published Oct 11, 2023, 6:48 PM IST

ಪ್ರತೀ ಹೆಜ್ಜೆನೂ ನಿನ್ನ ನೆನಪು ಮಾಡೋ ಒಡವೆ ಅಂದರೆ ಈ ಕಾಲುಂಗುರ ಕಣೋ ಅಂತಿದ್ದಾಳೆ ಚಾರು. ಗಂಡ ಚಾರಿ ನಾಲ್ಕು ಲಕ್ಷದ ಒಡವೆ ಖರೀದಿಗೆ ಹಣ ಕೊಟ್ಟರೆ ಚಾರು ಕಾಲುಂಗುರ ಖರೀದಿಸಿದ್ದಾಳೆ. ರಾಮಾಚಾರಿ ಸೀರಿಯಲ್ ಹೀರೋಯಿನ್ ಮಾತಿಗೆ ಸಖತ್ ಮೆಚ್ಚುಗೆ ಸಿಕ್ತಿದೆ.


ರಾಮಾಚಾರಿ ಸೀರಿಯಲ್‌ನ (Ramachari Serial) ಇತ್ತೀಚಿನ ಎಪಿಸೋಡ್‌ಗಳನ್ನು ವೀಕ್ಷಕರು ಸಖತ್ ಎನ್‌ಜಾಯ್ ಮಾಡ್ತಿದ್ದಾರೆ. ಅದರಲ್ಲೂ ಚಾರು ಪಾತ್ರವನ್ನು ತುಂಬ ಕಲರ್‌ಫುಲ್ಲಾಗಿ ತರ್ತಿದ್ದಾರೆ. ಪಾತ್ರವನ್ನು ಹೀಗೆ ರೂಪಿಸೋ ಮೊದಲೇ ವೀಕ್ಷಕರ ಮುಂದೆ ಈ ಸೀರಿಯಲ್ ಟೀಮ್ ಒಂದು ಪ್ರಶ್ನೆ ಇಟ್ಟಿತ್ತು. ನಿಮಗೆ ಅಳುಮುಂಜಿ ಚಾರು ಬೇಕಾ, ಚಟ್‌ಪಟಾಕಿ ಚಾರು ಬೇಕಾ ಅಂತ? ಆಲ್‌ಮೋಸ್ಟ್ ಎಲ್ಲರೂ ನಮ್‌ಗೆ ಅಳುಮುಂಜಿ ಚಾರು ಬೇಡ್ವೇ ಬೇಡ. ಪಟಾಕಿ ಥರ ಸಿಡಿಯೋ ಚಾರು ಬೇಕು ಅಂತ ಉತ್ತರ ಕೊಟ್ಟಿದ್ದರು. ಈ ವೀಕ್ಷಕರ ನಿರೀಕ್ಷೆಯನ್ನು ಹುಸಿ ಮಾಡದ ಸೀರಿಯಲ್‌ ಟೀಮ್‌ ಇದೀಗ ಚಾರು ಪಾತ್ರವನ್ನು ಸಖತ್ ಫನ್ನಿಯಾಗಿ, ತುಂಟಾಟಗಳೊಂದಿಗೆ ಹೊರ ತರ್ತಿದೆ. ಬರೀ ಗೋಳು ಸೀರಿಯಲ್ ನೋಡಿ ರೋಸಿ ಹೋದ ಜನ ಈ ಸೀರಿಯಲ್‌ನ ಸಖತ್ತಾಗಿ ಎನ್‌ಜಾಯ್‌ ಮಾಡ್ತಿದ್ದಾರೆ. 

ಈ ಸೀರಿಯಲ್ ನೋಡೋ ಕೆಲವರ ತಕರಾರು ಅಂದ್ರೆ ಆರಂಭದಲ್ಲಿ ರಾಮಾಚಾರಿ ಪಾತ್ರಕ್ಕೆ ಸಿಕ್ಕಾಪಟ್ಟೆ ಹೈಪ್ ಕೊಟ್ರಿ. ಈಗ ಆ ಪಾತ್ರವನ್ನು ಫುಲ್ ಡಮ್ಮಿ ಮಾಡ್ತಿದ್ದೀರ, ಚಾರುನೇ ಎಲ್ಲ ಸ್ಕ್ರೀನ್ ಸ್ಪೇಸ್ ಆವರಿಸಿದ್ದಾಳೆ ಅಂತ. ಅವರ ಮಾತೂ ನಿಜವೇ. ಈಗ ಬರೀ ಚಾರು ಕಥೆಯೇ ಇಂಟರೆಸ್ಟಿಂಗ್ ಆಗಿ ಸಾಗುತ್ತಿದೆ. ತುಂಟಿ, ಡೇರಿಂಗ್ ಆದರೆ ತುಂಬ ಒಳ್ಳೆ ಹುಡುಗಿ ಚಾರು ರಾಮಾಚಾರಿಯ ಮನೆ ಮಂದಿಯ ಮನಸ್ಸನ್ನು ಗೆಲ್ಲುತ್ತಿದ್ದಾಳೆ. ಮೊದಲು ಅವಳನ್ನು ಒಪ್ಪಿಕೊಂಡು ಸಪೋರ್ಟ್ ಮಾಡಿದ್ದು ರಾಮಾಚಾರಿ ತಾಯಿ. ಈಕೆಯನ್ನು ಕಂಡರೆ ಮಗಳಷ್ಟೇ ಪ್ರೀತಿ ಅವರಿಗೆ. ಇನ್ನೊಂದು ಕಡೆ ರಾಮಾಚಾರಿ ಅತ್ತಿಗೆಯ ಮಸಲತ್ತು ನಡೆಯುತ್ತಿದೆ. ಚಾರುವಿನ ಅಮ್ಮ ಮಾನ್ಯತಾ ಜೊತೆಗೆ ಸೇರಿ ರಾಮಾಚಾರಿಯಿಂದ ಚಾರುವನ್ನು ದೂರ ಮಾಡೋ ಪ್ಲಾನ್‌ ಅತ್ತಿಗೆಯದು. ಅದಕ್ಕಾಗಿ ಮಾನ್ಯತಾ ಹಣದ ಆಮಿಷವನ್ನೂ ಒಡ್ಡಿದ್ದಾಳೆ. ರಾಮಾಚಾರಿಯನ್ನು ಮದುವೆ ಆಗೋ ಪ್ಲಾನ್‌ನಲ್ಲಿದ್ದ ರಮಾ ಇದೀಗ ಅತ್ತಿಗೆ ಜೊತೆಗೆ ಕೈ ಜೋಡಿಸಿದ್ದಾಳೆ. 

Tap to resize

Latest Videos

ವಿಲನ್‌ಗಳನ್ನು ರೋಡ್‌ನಲ್ಲಿ ಅಟ್ಟಿಸಿಕೊಂಡು ಹೋದ ಚಾರು; ರಾಮಾಚಾರಿ ಆತಂಕ ಡಬಲ್!

ಇನ್ನೊಂದೆಡೆ ರಾಮಾಚಾರಿ ಒಡವೆ ಖರೀದಿಸಲು ಚಾರುವನ್ನು ಜ್ಯುವೆಲ್ಲರಿ ಶಾಪ್‌ಗೆ ಕರೆತಂದಿದ್ದಾನೆ. ನಾಲ್ಕೂವರೆ ಲಕ್ಷ ಹಣ ನೀಡಿ ಒಡವೆ ಖರೀದಿಸುವಂತೆ ಚಾರುವಿಗೆ ಹೇಳಿದ್ದಾನೆ. ಆದರೆ ಚಾರು ಖರೀದಿಸಿದ್ದು, ಸಾವಿರ ರುಪಾಯಿಯ ಬೆಳ್ಳಿ ಕಾಲುಂಗುರ. ಈ ಸೀನ್ ಸಖತ್ ರೊಮ್ಯಾಂಟಿಕ್‌ ಆಗಿ ಬಂದಿದೆ. ಅಷ್ಟು ದುಡ್ಡು ಕೊಟ್ಟು ಒಡವೆ ಖರೀದಿಸಲು ಹೇಳಿದರೆ ಚಾರು ಬರೀ ಕಾಲುಂಗುರ ಖರೀದಿಸಿದಳಲ್ಲಾ ಅಂತ ಅಚ್ಚರಿಯಾಗಿದೆ. ಕಾಲುಂಗುರ ಖರೀದಿಸಿದ ಚಾರು ಅಷ್ಟಕ್ಕೇ ಸುಮ್ಮನಾಗಿಲ್ಲ. ಅದನ್ನು ರಾಮಾಚಾರಿ ಕೈಯ್ಯಾರೆ ತನ್ನ ಕಾಲಿಗೆ ತೊಡಿಸುವಂತೆ ಕೇಳಿದ್ದಾಳೆ. ಇದನ್ನೆಲ್ಲ ಕಂಡು ರಾಮಾಚಾರಿ ಮನಸ್ಸು ತುಂಬಿ ಬಂದಿದೆ. ಎಲ್ಲರೂ ನೋಡುತ್ತಿರುವಂತೇ ತನ್ನ ಪತ್ನಿಯ ಕಾಲ್ಬೆರಳಿಗೆ ಕಾಲುಂಗುರ ತೊಡಿಸಿದ್ದಾನೆ. ಜ್ಯುವೆಲ್ಲರಿಯಲ್ಲಿದ್ದ ಜನರೆಲ್ಲ ಈ ಘಟನೆಗೆ ಸಾಕ್ಷಿಯಾಗಿದ್ದಾರೆ.

ಇಷ್ಟೆಲ್ಲ ಕಥೆ ನಡೆದು ಹೊರಬಂದರೆ ಪೋಲಿಗಳು ಬೈಕ್‌ ವೀಲಿಂಗ್ ಮಾಡುತ್ತ ಚಾರು ಚಾರಿ ನಿಂತಿದ್ದ ಸ್ಕೂಟರ್‌ನ ತೀರಾ ಸಮೀಪ ಬಂದಿದ್ದಾರೆ. ರಾಮಾಚಾರಿ ಬೇಡ ಬೇಡ ಅಂದರೂ ಕೇಳದೇ ನಮ್ ರ್ಯಾಂಬೊ ರಾಣಿ ಚಾರು ಬೈಕ್‌ ಏರಿ ಆ ರೌಡಿಗಳನ್ನು ಚೇಸ್ ಮಾಡಿಕೊಂಡು ಹೊರಟಿದ್ದಾಳೆ. ಮುಂದೆ ಏನಾಗುತ್ತೆ, ಚಾರು ಆ ರೌಡಿಗಳಿಗೆ ತಕ್ಕ ಪಾಠ ಕಲಿಸುತ್ತಾಳಾ ಅನ್ನೋದನ್ನು ಕಾದು ನೋಡಬೇಕು.

ಚಾರು ಪಾತ್ರದಲ್ಲಿ ಮೌನಾ ಗುಡ್ಡೆಮನೆ ಅಭಿನಯಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ರಾಮಾಚಾರಿಯಲ್ಲಿ ಋತ್ವಿಕ್ ಕೃಪಾಕರ್ ನಟಿಸಿದ್ದಾರೆ. ಅಂಜಲಿ, ಶಂಕರ್ ಅಶ್ವತ್ಥ, ಚಿ ಗುರುದತ್ತ್ ಮೊದಲಾದವರು ನಟಿಸಿದ್ದಾರೆ. ರಾಮ್‌ಜಿ ನಿರ್ದೇಶನವಿದೆ. ದಿನೇ ದಿನೇ ಈ ಸೀರಿಯಲ್‌ನಲ್ಲಿ ಚಾರು ಹವಾ ಜಾಸ್ತಿ ಆಗುತ್ತಲೇ ಇದೆ. 

ಅತ್ತಿಗೆ ಚಾರು ಕಾಲಿಗೆ ಬಿದ್ದ ಶ್ರುತಿ; ಸತ್ಯ ಗೊತ್ತಾದ ಬಳಿಕ ರಾಮಾಚಾರಿ ರಿಯಾಕ್ಷನ್ ಏನು?

click me!