ಗಂಡನಿಗೊಂದು ಕಾಲ, ಇಟ್ಟುಕೊಂಡವಳಿಗೊಂದು ಕಾಲ... ಈಗೇನಿದ್ರೂ ಪತ್ನಿಯದ್ದೇ ಕಾಲ..! ಭಲೇ ಭಲೇ ಭಾಗ್ಯ

Published : Jul 21, 2024, 12:26 PM IST
ಗಂಡನಿಗೊಂದು ಕಾಲ, ಇಟ್ಟುಕೊಂಡವಳಿಗೊಂದು ಕಾಲ... ಈಗೇನಿದ್ರೂ ಪತ್ನಿಯದ್ದೇ ಕಾಲ..! ಭಲೇ ಭಲೇ ಭಾಗ್ಯ

ಸಾರಾಂಶ

 ಅತ್ತ ಪತ್ನಿ- ಇತ್ತ ಲವರ್​ ಇಬ್ಬರ ನಡುವೆ ಸಿಲುಕಿ ಒದ್ದಾಡುತ್ತಿದ್ದಾನೆ ತಾಂಡವ್​. ಹೋದಲ್ಲಿ ಬಂದಲ್ಲಿ ಅವಮಾನದಿಂದ ಕುದಿಯುತ್ತಿದ್ದಾನೆ. ಈಗ ಆಗಿದ್ದೇನು?  

ಭಾಗ್ಯ ಸಂಪೂರ್ಣ ಬದಲಾಗಿದ್ದಾಳೆ. ಸೀರಿಯಲ್​ ಕೂಡ ಬದಲಾಗಿ ಹೋಗಿದೆ. ಅಳುಮುಂಜಿ ಭಾಗ್ಯಳನ್ನು ನೋಡಿ ನೋಡಿ ಸುಸ್ತಾಗಿ ಹೋಗಿ ಸೀರಿಯಲ್​  ನೋಡುವುದನ್ನೇ ನಿಲ್ಲಿಸುತ್ತೇನೆ ಎಂದು ಒಂದೇ ಸಮನೆ ಗೋಳಾಡುತ್ತಿದ್ದ ವೀಕ್ಷಕರ ಮನಸ್ಥಿತಿಯೂ ಈಗ ಬದಲಾಗಿ ಹೋಗಿದೆ. ನಮಗೆ ಭಾಗ್ಯಲಕ್ಷ್ಮಿ ಸೀರಿಯಲ್​ ಸಿಕ್ಕಾಪಟ್ಟೆ ಇಷ್ಟ ಆಗ್ತಿದೆ ಎನ್ನುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ, ಸದ್ಯ ಗಂಡ ತಾಂಡವ್​ನ ಕಾಲವೂ ಹೋಗಿದೆ, ಇಟ್ಟುಕೊಂಡಿರೋ ಶ್ರೇಷ್ಠಾಳಿಗೂ ಕುತ್ತು ಬಂದಿದೆ. ಈಗ ಏನಿದ್ರೂ ಪತ್ನಿ ಭಾಗ್ಯಳದ್ದೇ ಕಾಲವಾಗಿದೆ. 

ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡಿರೋ ಭಾಗ್ಯ ಸಂಪೂರ್ಣ ಬದಲಾಗಿದ್ದಾಳೆ. ಅವರ ವರಸೆಯೇ ಬದಲಾಗಿದೆ. ಈಗ ಏನಿದ್ರೂ ಅವಳು ಸ್ಟಾರ್​ ಹೋಟೆಲ್​ನ ಚೀಫ್​ ಶೆಫ್​. ಓಡಾಡಲು ಕಾರು ಇದೆ. ತಿಂಗಳಿಗೆ ಲಕ್ಷ ಲಕ್ಷ ದುಡಿಯುತ್ತಿದ್ದಾಳೆ. ಮನೆಯಲ್ಲಿ ಎಲ್ಲರ ಪ್ರೀತಿ ಗಳಿಸಿದ್ದಾಳೆ. ಸರಿಯಾಗಿ ಇಂಗ್ಲಿಷ್​  ಮಾತನಾಡಲೂ ಬರದಿದ್ದ ಭಾಗ್ಯ ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಲು  ಸಾಧ್ಯ ಎನ್ನುವ ಮೂಲಕ ಹಲವರಿಗೆ ಮಾದರಿಯಾಗಿದ್ದಾಳೆ. ಈಕೆ ಹತ್ತನೇ ಕ್ಲಾಸ್​ ಪರೀಕ್ಷೆ ಬರೆದದ್ದರಿಂದ ಸ್ಫೂರ್ತಿಗೊಂಡು, ನಿಜ ಜೀವನದಲ್ಲಿಯೂ ಮಹಿಳೆಯರು ಮಕ್ಕಳ ಜೊತೆ ಪರೀಕ್ಷೆ ಬರೆದಿದ್ದಾಳೆ. ಹೆಣ್ಣು ಅದರಲ್ಲಿಯೂ ಗೃಹಿಣಿ ಎಂದರೆ ತೀರಾ ಕಡೆಗಣನೆಯಿಂದ ನೋಡುತ್ತಿದ್ದವರಿಗೆಲ್ಲರಿಗೂ ಭಾಗ್ಯ ಬದುಕಿನ ಹೊಸ ದಿಸೆ ತೋರಿಸುತ್ತಿದ್ದಾಳೆ.

ಅತ್ತೆ ವಿಷ ಸೇವಿಸಿದ್ರೆ ಏನಾಗ್ತಿರಲಿಲ್ಲ... ನೀನ್ಯಾಕೆ ಭಾಷೆ ಕೊಟ್ಟೆ ಭೂಮಿಕಾ? ಫ್ಯಾನ್ಸ್​ ಕಣ್ಣೀರು!

ಅತಿ ಮುಗ್ಧೆಯಾಗಿದ್ದೇ ಭಾಗ್ಯಳ ದೌರ್ಭಾಗ್ಯವಾಗಿತ್ತು. ಇದೇ ಕಾರಣಕ್ಕೆ ಈಕೆಯ ಗಂಡ ತಾಂಡವ್​ ಸಹಜವಾಗಿ ಭಾರಿ ಪಾಷ್​, ಮಾಡರ್ನ್​ ಎನಿಸಿಕೊಂಡಿರೋ ಶ್ರೇಷ್ಠಾಳ ಬಲೆಗೆ ಬಿದ್ದಿದ್ದಾನೆ. ಇದು ಕೇವಲ ಸೀರಿಯಲ್​ ಕಥೆಯಲ್ಲ, ನಿಜ ಜೀವನದಲ್ಲಿಯೂ ಈ ರೀತಿ ಆಗುತ್ತದೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಶ್ರೇಷ್ಠಾ ತನ್ನ ಗಂಡನ ಜೊತೆಗೆ ಮದುವೆಯಾಗಲು ಸಕಲ ಸಿದ್ಧತೆ ನಡೆಸುತ್ತಿದ್ದಾಳೆ ಎನ್ನುವುದು ಇದುವರೆಗೆ ಭಾಗ್ಯಳಿಗೆ ಆಗಲೀ, ಅವಳ ಅತ್ತೆ-ಮಾವನಿಗಾಗಲೀ ತಿಳಿಯದೇ  ಇರುವುದು ಮಾತ್ರ ವಿಚಿತ್ರವಾಗಿದ್ದರೂ ಸದ್ಯ ಭಾಗ್ಯಳಿಗೆ ಶ್ರೇಷ್ಠಾಳ ದುರ್ಬುದ್ಧಿ ಗೊತ್ತಾಗಿದೆ.  ಆಕೆ ಮದುವೆಯಾಗ ಹೊರಟಿರುವುದು ತನ್ನ ಗಂಡನ ಜೊತೆಗೆ ಎಂದು ತಿಳಿಯದಿದ್ದರೂ ಶ್ರೇಷ್ಠಾಳ ಜೊತೆ ತನ್ನ ಗಂಡನ ಒಡನಾಟ ಜೋರಾಗಿಯೇ ನಡೆಯುತ್ತಿದೆ ಎಂಬಷ್ಟು ಅರಿವಾಗಿದೆ.

ಇದೇ ಕಾರಣಕ್ಕೆ ಸಿಕ್ಕ ಸಿಕ್ಕಲ್ಲೆಲ್ಲಾ ಶ್ರೇಷ್ಠಾಳಿಗೆ ಅವಮರ್ಯಾದೆ ಮಾಡುತ್ತಿದ್ದಾಳೆ. ಬಟ್ಟೆ ಅಂಗಡಿಗೆ ಭಾವಿ ಗಂಡ ತಾಂಡವ್​ ಜೊತೆ ಹೋಗಿದ್ದ ಶ್ರೇಷ್ಠಾಳಿಗೆ ಬೆಂಡೆತ್ತಿದ್ದಾಳೆ ಭಾಗ್ಯ. ಎಲ್ಲರ ಎದುರು ಅವಮಾನ ಮಾಡಿದ್ದಾಳೆ. ಅದೇ  ಇನ್ನೊಂದೆಡೆ ಯಾವುದೇ ಕಾರಣಕ್ಕೂ ನಾನು ಡಿವೋರ್ಸ್​ ಕೊಡಲ್ಲ ಎಂದು ತಾಂಡವ್​ಗೆ ಖಡಾಖಂಡಿತವಾಗಿ ಹೇಳಿದ್ದಾಳೆ. ಈಗ ತಾಂಡವ್​ ಸಂಕಷ್ಟದಲ್ಲಿ ಸಿಲುಕಿದ್ದಾನೆ. ಇತ್ತ ಭಾಗ್ಯಳನ್ನು ಬಿಡುವ ಹಾಗೂ ಇಲ್ಲ, ಅತ್ತ ಶ್ರೇಷ್ಠಾಳ ಜೊತೆ ಮದುವೆ ನಿಲ್ಲಿಸುವ ಹಾಗೂ ಇಲ್ಲ. ಇದೀಗ ತರಕಾರಿ ಖರೀದಿಗೆ ಹೋಗಿರುವ ಭಾಗ್ಯ, ಅಲ್ಲಿ ತರಕಾರಿಯನ್ನು ಖರೀದಿಸುವ ಪಾಠ ಮಾಡಿದ್ದಾಳೆ ತಾಂಡವ್​ಗೆ. ಕೊನೆಗೆ ಪೂಜಾ ಅಷ್ಟೂ ತರಕಾರಿಗಳನ್ನು ತಾಂಡವ್​ ಕೈಯಲ್ಲಿ ಟಾಂಗ್​ ಕೊಡುತ್ತಲೇ ಹೊರಿಸಿದ್ದಾಳೆ. ಸದ್ಯ ಭಾಗ್ಯಳ ಪಾಲಿಗೆ ಅದೃಷ್ಟ ಒಲಿದಿದೆ. ಮುಂದೇನು ಎನ್ನುವ ಕಾತರ ಅಭಿಮಾನಿಗಳಲ್ಲಿದೆ. 

ನಂಬರ್‌ ಎಂದ್ರೆ ನಾನು, ನಾನೆಂದ್ರೆ ನಂಬರ್‌ ಎನ್ನುತ್ತಲೇ ಆರ್ಯವರ್ಧನ್‌ ಗುರೂಜಿ ಭರ್ಜರಿ ಸ್ಟೆಪ್‌! ತೀರ್ಪುಗಾರರೇ ಶಾಕ್‌

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?