ಹೊಂಬಣ್ಣದ ಬೆಳಕಿನಲ್ಲಿ ಚಿನ್ನದ ಅಪ್ಸರೆಯಂತೆ ಕಾಣುತ್ತಿರುವ ಪ್ರಿಯಾ ಆಚಾರ್ ಅವರನ್ನು ಶಾಕುಂತಲೆಗೆ ಹೋಲಿಕೆ ಮಾಡಿದ್ದಾರೆ.
ಬೆಂಗಳೂರು: ಕಿರುತೆರೆ ನಟಿ ಪ್ರಿಯಾ ಜೆ.ಆಚಾರ್ ಫೋಟೋಶೂಟ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೂ ಕಟ್ಟುತ್ತಾ ಕುಳಿತಿರುವ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಪ್ರಿಯಾ ಹೊಸ ಫೋಟೋಗಳಿಗೆ ಮೆಚ್ಚುಗೆಯ ಸುರಿಮಳೆಯೇ ಸುರಿಯಲಾರಂಭಿಸಿದೆ. ಪ್ರಿಯಾ ಜೆ.ಆಚಾರ್ ಶನಿವಾರ ಸಂಜೆ ಈ ಮೂರು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ 11 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ. ಫೋಟೋ ನೋಡಿದ ಅಭಿಮಾನಿಗಳು, ತುಂಬಾ ಚೆನ್ನಾಗಿ ಕಾಣುತ್ತಿದ್ದೀರಿ ಎಂದು ಹಾಡಿ ಹೊಗಳಿದ್ದಾರೆ.
ಕೇಸರಿ ಬಣ್ಣದ ಸೀರೆ ಧರಿಸಿ ಕನಕಾಂಬರ ಹೂ ಕಟ್ಟುತ್ತಿದ್ದಾರೆ. ಇಳಿಸಂಜೆಯ ವಾತಾವರಣದಂತೆ ಲೈಟಿಂಗ್ ಮಾಡಿರೋದನ್ನು ಕಾಣಬಹುದು. ಹೊಂಬಣ್ಣದ ಬೆಳಕಿನಲ್ಲಿ ಚಿನ್ನದ ಅಪ್ಸರೆಯಂತೆ ಕಾಣುತ್ತಿರುವ ಪ್ರಿಯಾ ಆಚಾರ್ ಅವರನ್ನು ಶಾಕುಂತಲೆಗೆ ಹೋಲಿಕೆ ಮಾಡಿದ್ದಾರೆ. 80-90ರ ದಶಕದ ಸಿನಿಮಾಗಳ ಅರಣ್ಯದಲ್ಲಿರುವ ಆಶ್ರಮದ ಕನ್ಯೆಯಂತೆ ಕಾಷಾಯ ವಸ್ತ್ರದಲ್ಲಿ ಮಿಂಚಿರುವ ಪ್ರಿಯಾ ಮೊಗದಲ್ಲಿನ ನಗು ಸೌಂದರ್ಯದ ವ್ಯಾಖ್ಯಾನವನ್ನು ಹೇಳುತ್ತಿದೆ.
ಒಂದು ಫೋಟೋದಲ್ಲಿ ಹೂ ಕಟ್ಟುವಂತೆ ಕಂಡ್ರೆ, ಮತ್ತೊಂದರಲ್ಲಿ ಹೂವಿನ ಮಾಲೆಯನ್ನು ಧರಿಸಿದ ಸಂತೋಷ ಅದಿತಿ ಮೊಗದಲ್ಲಿ ಮಿಂಚುತ್ತಿದೆ. ಮೂರನೇ ಫೋಟೋದಲ್ಲಿ ತದೇಕಚಿತ್ತದಿಂದ ಕುಳಿತು, ಕಿರು ಮಂದಹಾಸದ ಪುಷ್ಪ ಬಾಣವನ್ನು ಅಭಿಮಾನಿಗಳತ್ತ ಬಿಟ್ಟಿದ್ದಾರೆ. ಫೋಟೋ ಅಪ್ಲೋಡ್ ಮಾಡಿಕೊಂಡಿರುವ ಪ್ರಿಯಾ ಜೆ.ಆಚಾರ್, As the flower’s bloom my heart also ಎಂಬ ಸಾಲನ್ನು ಬರೆದುಕೊಂಡಿದ್ದಾರೆ.
ಧಾರಾವಾಹಿಗಳಲ್ಲಿ ಬ್ಯುಸಿಯಾಗಿರುವ ಅದಿತಿ
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಗಟ್ಟಿಮೇಳ ಧಾರಾವಾಹಿ ಮೂಲಕ ಅದತಿಯಾಗಿ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಧಾರವಾಹಿ ಜೊತೆಯಲ್ಲಿ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಪ್ರಿಯಾ ಆಚಾರ ಭಾಗವಹಿಸಿದ್ದರು. ಸದ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಕಾವೇರಿ ಕನ್ನಡ ಮೀಡಿಯಂ ಧಾರಾವಾಹಿಯಲ್ಲಿ ಪ್ರಿಯಾ ನಟಿಸುತ್ತಿದ್ದರು. ಗಟ್ಟಿಮೇಳದ ಧಾರಾವಾಹಿಯಲ್ಲಿ ತರ್ಲೆ ಹುಡುಗಿ, ಅಪ್ಪ-ಅಮ್ಮನ ಮುದ್ದಿನ ಮಗಳಾಗಿ, ಅಕ್ಕನ ಪ್ರೀತಿಯ ತಂಗಿಯಾಗಿ, ಆದರ್ಶ ಪತ್ನಿಯ ಪಾತ್ರಗಳಲ್ಲಿ ನಟಿಸುವ ಮೂಲಕ ಕಿರುತೆರೆ ಅಂಗಳದಲ್ಲಿ ಭದ್ರ ನೆಲೆಯೂರಿದ್ದಾರೆ.
ಸೀರೆಯಲ್ಲಿ ಗರ್ಭಿಣಿ ನೇಹಾ ಫೋಟೋಶೂಟ್; ಬೇಬಿ ಬಂಪ್ ನೋಡಿ ತಾಯಿ ಕಳೆ ಕಾಣಿಸ್ತಿದೆ ಎಂದ ಫ್ಯಾನ್ಸ್
ಸಿದ್ದು ಮೂಲಿಮನಿ ಜೊತೆ ಸಪ್ತಪದಿ ತುಳಿದಿರುವ ಪ್ರಿಯಾ
ಕಿರುತೆರೆ ನಟ ಸಿದ್ದು ಮೂಲಿಮನಿ ಜೊತೆ ಪ್ರಿಯಾ ಆಚಾರ್ ಸಪ್ತಪದಿ ತುಳಿದಿದ್ದಾರೆ. 2023 ಫೆಬ್ರವರಿ 12ರಂದು ಪ್ರಿಯಾ ಮತ್ತು ಸಿದ್ದು ಮದುವೆಯಾಗಿದ್ದರು. 2022ರ ನವೆಂಬರ್‌ರಂದು ಇಬ್ಬರ ನಿಶ್ಚಿತಾರ್ಥ ನಡೆದಿತ್ತು. ಪರಸ್ಪರ ಪ್ರೀತಿಸಿದ ಸಿದ್ದು ಮತ್ತು ಪ್ರಿಯಾ ಕುಟುಂಬಸ್ಥರ ಒಪ್ಪಿಗೆ ಪಡೆದು ಅದ್ಧೂರಿಯಾಗಿ ಮದುವೆಯಾಗಿದ್ದರು. ಮದುವೆಯಲ್ಲಿ ಕಿರುತೆರೆ ತಾರೆಯರು ಭಾಗಿಯಾಗಿದ್ದರು. ಸಿದ್ದು ಮೂಲಿಮನಿ ಸಹ ಕಿರುತೆರೆ ಕಲಾವಿದರಾಗಿದ್ದು, ಪಾರು ಧಾರಾವಾಹಿ ದೊಡ್ಡ ಯಶಸ್ಸು ತಂದುಕೊಟ್ಟಿತ್ತು. ಸಿದ್ದು ಮೂಲಿಮನಿ ಮತ್ತು ಪ್ರಿಯಾ ಆಚಾರ್ ಇಬ್ಬರು ಒಳ್ಳೆಯ ಡ್ಯಾನ್ಸರ್ ಸಹ ಆಗಿದ್ದಾರೆ.
ಹಲವು ಸಿನಿಮಾಗಳಲ್ಲಿಯೂ ನಟನೆ
ಸಿದ್ದು ಮೂಲಿಮನಿ ಗಾಂಧಿನಗರದ ಭರವಸೆಯ ನಟನಾಗಿ ಕಾಣಿಸಿಕೊಂಡಿದ್ದಾರೆ. ತಮಗೆ ಸಿಗುವ ಪ್ರತಿಯೊಂದು ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಾ ಯಶಸ್ಸು ಕಾಣುತ್ತಿದ್ದಾರೆ. ಧರಣಿ ಮಂಡಲ ಮಧ್ಯದೊಳಗೆ, ವಿಕ್ರಾಂತ್ ರೋಣ,ಓ ಸಿನಿಮಾಗಳಲ್ಲಿ ನಟಿಸಿದ್ದಾರೆ. ಧರಣಿ ಮಂಡಲ ಮಧ್ಯದೊಳಗೆ ಸಿನಿಮಾದಲ್ಲಿ ಸಿದ್ದು ನಟನೆ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಸಿದ್ದು ಮತ್ತು ಪ್ರಿಯಾ ಜೊತೆಯಾಗಿ ಓಮಿನಿ ಸಿನಿಮಾದಲ್ಲಿ ನಟಿಸಿದ್ದಿ, ಈ ಚಿತ್ರದ ನಾನು ಹೋಗೋಕು ಮೊದ್ಲು ಹಾಡಿನಲ್ಲಿ ಇಬ್ಬರ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿ ಬಂದಿತ್ತು. ಪ್ರಿಯಾ ಆಚಾರ ತೆಲುಗಿನ ಆನಂದಮಯ ಧಾರಾವಾಹಿಯಲ್ಲಿಯೂ ನಟಿಸಿದ್ದಾರೆ. ಕನ್ನಡದ ಧಮಾಕಾ ಸಿನಿಮಾದಲ್ಲಿ ನಟಿಸಿದ್ದಾರೆ.
ಗರ್ಭಿಣಿ ನೇಹಾ ಮೇಲೆ ಮುತ್ತಿನ ಸುರಿಮಳೆಗೈದ ಚಂದನ್; ವಿಡಿಯೋ ಹಂಚಿಕೊಂಡು ಫ್ಯಾನ್ಸ್‌ಗೆ ಟಾಸ್ಕ್ ಕೊಟ್ಟ ಜೋಡಿ