ಅತ್ತೆ ವಿಷ ಸೇವಿಸಿದ್ರೆ ಏನಾಗ್ತಿರಲಿಲ್ಲ... ನೀನ್ಯಾಕೆ ಭಾಷೆ ಕೊಟ್ಟೆ ಭೂಮಿಕಾ? ಫ್ಯಾನ್ಸ್​ ಕಣ್ಣೀರು!

By Suchethana D  |  First Published Jul 21, 2024, 11:54 AM IST

ಇಬ್ಬರ ಜೀವನದ ಜೊತೆ ಆಟ ಆಡಿಬಿಟ್ಟಳಾ ಭೂಮಿಕಾ? ಕಳ್ಳಾಟ ಆಡುತ್ತಿದ್ದ ಅತ್ತೆಗೆ ಭಾಷೆ ಕೊಟ್ಟು ತಂಗಿಯ ಬದುಕನ್ನೇ ಹಾಳು ಮಾಡಿಬಿಟ್ಟಳಾ? ಫ್ಯಾನ್ಸ್​ ಹೇಳ್ತಿರೋದೇನು?
 


ಭೂಮಿಕಾ ಅತ್ತೆಗೆ ಮಾತು ಕೊಟ್ಟುಬಿಟ್ಟಿದ್ದಾಳೆ. ಅತ್ತೆ ಮಾಡುತ್ತಿರುವುದು ನಾಟಕ ಎಂದು ತಿಳಿದಿದ್ದರೂ, ವಿಷದ ಬಾಟಲಿಯನ್ನು ಕೈಯಲ್ಲಿ ಹಿಡಿದ ಅತ್ತೆಯ ಡ್ರಾಮಾಕ್ಕೆ ಭೂಮಿಕಾ ಸೋತು ಬಿಟ್ಟಿದ್ದಾಳೆ. ತನ್ನ ವಿಷಯದಲ್ಲಿ ಎಲ್ಲವನ್ನೂ ಸರಿದೂಗಿಸಿ ನೋಡುತ್ತಿದ್ದ ಭೂಮಿಕಾ ಈಗ ಅತ್ತೆಗೆ ಭಾಷೆ ಕೊಟ್ಟು ಸೋಲನ್ನು ಅನುಭವಿಸಿದ್ದಾಳೆ. ಪಡಲಾರದ ಸಂಕಷ್ಟ ಪಡುತ್ತಿದ್ದಾಳೆ. ತನ್ನ ಮತ್ತು ಗಂಡನನ್ನು ದೂರ ಮಾಡಲು ಕೊಲೆಗೂ ಹೇಸದ ಅತ್ತೆಯ ಬಗ್ಗೆ ತಿಳಿದಿದ್ದರೂ ಭೂಮಿಕಾ ಈ ರೀತಿ ಎಡವಟ್ಟು ಮಾಡಲು ಕಾರಣ ಸರಿಯಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಿನ್ನ ಕೈಯಾರೆ ನಿನ್ನ ತಂಗಿಯ ಬಾಳನ್ನು ಹಾಡುಮಾಡುಬಿಟ್ಯಲ್ಲಾ ಭೂಮಿಕಾ, ಇದು ಸರಿನಾ? ನಿನ್ನ ವಿಷಯಕ್ಕೆ ಬಂದರೆ ಅತ್ತೆಯನ್ನೇ ಎದುರಿಸುತ್ತಿದ್ದ ನೀನು ತಂಗಿಯ ವಿಷಯದಲ್ಲಿ ಹೀಗ್ಯಾಕೆ ನಡೆದುಕೊಂಡೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ!

ಹೌದು. ತಂಗಿ ಅಪ್ಪಿಯ ವಿಷಯದಲ್ಲಿ ಭೂಮಿಕಾ ತಪ್ಪು ಮಾಡಿದ್ದಾಳೆ. ಪಾರ್ಥ ಮತ್ತು ಅಪ್ಪಿ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿ ಮಾಡುತ್ತಿದ್ದಾರೆ ಎಂದು ತಿಳಿದಿದ್ದರೂ ಅವರಿಬ್ಬರ ಮದುವೆ ಮಾಡಲು ಬಿಡುವುದಿಲ್ಲ ಎಂದು ಅತ್ತೆಗೆ ಭಾಷೆ ಕೊಟ್ಟಿದ್ದಾಳೆ. ತಂಗಿಯ ಪ್ರೀತಿ ಆಕೆಗೆ ಸಿಗುವ ಹಾಗೆ ಭೂಮಿಕಾ ಮಾಡೇ ಮಾಡುತ್ತಾಳೆ ಎಂದು ಸೀರಿಯಲ್​ ಫ್ಯಾನ್ಸ್​ ಅಂದುಕೊಂಡಿದ್ದನ್ನೆಲ್ಲಾ ಹುಸಿ ಮಾಡಿದ್ದಾಳೆ ಭೂಮಿಕಾ. 

Latest Videos

undefined

ಆಷಾಢ ನೆಪದಲ್ಲಿ ತವರು ಸೇರಿ ಇವ್ರ ಜೊತೆ ರೊಮಾನ್ಸಾ? ಅಮೃತಧಾರೆ ಭೂಮಿಕಾ ಕಾಲೆಳೆದ ನೆಟ್ಟಿಗರು!

ಅಷ್ಟಕ್ಕೂ ಅತ್ತೆ ಶಕುಂತಲಾ ದೇವಿ ವಿಷದ ಬಾಟಲಿಯನ್ನು ತಂದು ಈ ಮದುವೆಗೆ ನಾನು ಒಪ್ಪುವುದಿಲ್ಲ. ಪಾರ್ಥನ ಮದುವೆಯ ಬಗ್ಗೆ ನೂರೆಂಟು ಕನಸು ಇಟ್ಟುಕೊಂಡಿದ್ದೇನೆ. ಅವಳ ಮದುವೆ ಅಪ್ಪಿಯ ಜೊತೆ ಆಗಲು ನಾನು ಬಿಡುವುದಿಲ್ಲ ಎನ್ನುತ್ತಲೇ ವಿಷದ ಸೇವನೆ ಮಾಡುವ ನಾಟಕ ಮಾಡಿದ್ದಾಳೆ. ಇದು ನಾಟಕ ಎನ್ನುವುದನ್ನು ಅರಿತರೂ ಭೂಮಿಕಾ, ವಿಷದ ಬಾಟಲಿಯನ್ನು ಕಿತ್ತುಕೊಂಡು ಅತ್ತೆಗೆ ಈ ಮದುವೆಯಾಗುವುದಿಲ್ಲ ಎಂದು ಮಾತುಕೊಟ್ಟು ಬಿಟ್ಟಿದ್ದಾಳೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಭೂಮಿಕಾ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.

ನಿನ್ನ ವಿಷಯದಲ್ಲಿ ಅತ್ತೆ ಮಾಡಿರುವುದು ನಾಟಕ ಎಂದು ತಿಳಿದ ತಕ್ಷಣ ಅದನ್ನು ಹೇಗೆ ನಿಭಾಯಿಸಿದೆ, ಆದರೆ ತಂಗಿಗೆ ಯಾಕೆ ಮೋಸ ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ. ವಿಷವನ್ನು ಕುಡಿದು ಸತ್ತರೆಏನೂ ಆಗುತ್ತಿರಲಿಲ್ಲ, ಅಂಥ ಅತ್ತೆ ಬದುಕಿದ್ದರೂ, ಸತ್ತರೂ ಏನೂ ಪ್ರಯೋಜನ ಇಲ್ಲ. ಇಬ್ಬರ ಜೀವನದ ಜೊತೆ ನೀನು ಚೆಲ್ಲಾಟ ಆಡಿದ್ದು ಸರಿಯಲ್ಲ, ಇದನ್ನು ಹೇಗೆ ನಿಭಾಯಿಸುತ್ತಿಯಾ ಎಂದು ಪ್ರಶ್ನಿಸುತ್ತಿರುವ ಸೀರಿಯಲ್​ ಪ್ರೇಮಿಗಳು ಹೀಗೆ ಮಾಡಿದ್ದು ಸರಿಯಲ್ಲ ಎನ್ನುತ್ತಿದ್ದಾರೆ. ಈಗ ಭೂಮಿಕಾ ಎಲ್ಲವನ್ನೂ ಹೇಗೆ ನಿಭಾಯಿಸುತ್ತಾಳೆ? ತವರು ಮನೆಯಲ್ಲಿ, ತಂಗಿ ಮತ್ತು ಪಾರ್ಥನ ದೃಷ್ಟಿಯಲ್ಲಿ ಭೂಮಿಕಾ ಸ್ಥಿತಿ ಏನಾಗುತ್ತದೆ? ಪ್ಲ್ಯಾನ್​ ಮಾಡಿ ತನ್ನ ಬೇಳೆ ಬೇಯಿಸಿಕೊಂಡ ಅತ್ತೆಯ ಮುಂದಿನ ನಡೆ ಏನು ಎನ್ನುವುದು ಈಗಿರುವ ಕುತೂಹಲ. 

ನೀ ಸನಿಹಕೆ ಬಂದರೆ... ಎನ್ನುತ್ತಲೇ ವೇದಿಕೆ ಮೇಲೆ ಪ್ರೇಮದ ಕಿಚ್ಚು ಹೊತ್ತಿಸಿದ ಸೀರಿಯಲ್​ ಜೋಡಿ ಪೂರ್ಣಿ-ಜೀವಾ

click me!