ಲವರ್​ ಜೊತೆ ಹನಿಮೂನ್​ಗೆ ಹೊರಟ ಪತಿಗೆ, ಪತ್ನಿಯದ್ದೇ ಅಡುಗೆ! ಹೀಗಿದೆ ನೋಡಿ ಭಾಗ್ಯಳ ಭಾಗ್ಯ....

By Suchethana D  |  First Published Nov 5, 2024, 3:23 PM IST

ಭಾಗ್ಯಳಿಗೆ ಸಿಕ್ಕಿರೋ ಲಾಟರಿ ಟಿಕೆಟ್​ನಲ್ಲಿ ಲವರ್​ ಶ್ರೇಷ್ಠಾ ಜೊತೆ ಹನಿಮೂನ್​ ಪ್ಲ್ಯಾನ್​ ಮಾಡಿದ್ದಾನೆ ತಾಂಡವ್​. ಮುಂದೇನಾಗುತ್ತೆ? 
 


ತನ್ನ ಸಂಬಳದಲ್ಲಿ ಭಾಗ್ಯ ಮನೆಗೆ ಹೊಸ ಫ್ರಿಜ್​ ತಂದಿದ್ದಾಳೆ. ಆ ಫ್ರಿಜ್​ ಖರೀದಿ ಸಂದರ್ಭದಲ್ಲಿ ಇಟ್ಟ ಲಾಟರಿ ಭಾಗ್ಯಳಿಗೇ ಹೊಡೆದಿದೆ. ದಂಪತಿ ಪ್ರವಾಸಕ್ಕೆ ಹೋಗುವ ಒಂದು ಟಿಕೆಟ್​ ಅವಳಿಗೆ ಸಿಕ್ಕಿದೆ. ಮನೆಯವರೆಲ್ಲರೂ ಸೇರಿ ಭಾಗ್ಯ ಮತ್ತು ತಾಂಡವ್​ನನ್ನು ಪ್ರಯಾಣಕ್ಕೆ ಕಳುಹಿಸುವ ಯೋಚನೆಯಲ್ಲಿ ಇದ್ದಾರೆ. ತಾಂಡವ್​ನ ಬುದ್ಧಿ ಗೊತ್ತಿದ್ದರೂ ತಾಂಡವ್​, ಭಾಗ್ಯಳನ್ನು ಒಪ್ಪಿಕೊಳ್ತಾನೆ ಎನ್ನುವ ಹುಚ್ಚು ಕಲ್ಪನೆ ಕುಸುಮಳದ್ದು. ಇದೇ ಕಾರಣಕ್ಕೆ ಇಬ್ಬರೂ ಟ್ರಿಪ್​ಗೆ ಹೋಗುವಂತೆ ಹೇಳಿದ್ದಾಳೆ. ಆ ಟಿಕೆಟ್​ ಪಡೆದುಕೊಂಡಿರೋ ತಾಂಡವ್​, ಭಾಗ್ಯಳ ಜೊತೆ ಹೋಗಲು ಸುತರಾಂ ಒಪ್ಪಲಿಲ್ಲ. ಅವಳನ್ನು ಮನಸೋ ಇಚ್ಛೆ ಮಾಮೂಲಿನಂತೆ ಬೈದು, ಈ ಟಿಕೆಟ್​ ಅನ್ನು ಬೇರೆ ಯಾರಿಗಾದ್ರೂ ಕೊಡುವಂತೆ ಹೇಳುತ್ತೇನೆ ಎಂದು ತೆಗೆದುಕೊಂಡು ಹೋಗಿದ್ದಾನೆ.

ಇತ್ತ ಹೋಟೆಲ್​ನಲ್ಲಿ, ಓನರ್​ ಬಂದು ಭಾಗ್ಯಳಿಗೆ ನಮಗೆ ಒಂದು ಒಳ್ಳೆಯ ಆಫರ್​ ಬಂದಿದೆ. ಟೂರ್​ ಪ್ಯಾಕೇಜ್​ನವರಿಗೆ ನಮ್ಮದೇ ಹೋಟೆಲ್​ ಅಡುಗೆ, ನೀವೇ ಹೋಗಬೇಕು ಎಂದಿದ್ದಾನೆ. ಆಗ ಮಾತುಮಾತಿನಲ್ಲಿ ಭಾಗ್ಯಳಿಗೆ ಇದು ತನಗೆ ಸಿಕ್ಕಿರುವ ಲಾಟರಿ ಟಿಕೆಟ್​ ಟೂರ್​ ಪ್ಯಾಕೇಜ್​ ಎನ್ನುವುದು ತಿಳಿದಿದೆ. ಆ ಅದೃಷ್ಟ ತನಗಂತೂ ಸಿಕ್ಕಿಲ್ಲ.  ಆದರೆ ತನಗೆ ಸಿಕ್ಕಿರುವ ಲಾಟರಿಯಲ್ಲಿ ಬೇರೆ ಯಾರೋ ದಂಪತಿ ಹೋಗುತ್ತಿದ್ದಾರಲ್ಲ, ಅವರನ್ನು ನೋಡುವ ಭಾಗ್ಯ ಆದರೂ ತನಗೆ ಸಿಗಲಿ ಎನ್ನುವ ಕಾರಣಕ್ಕೆ ಅಲ್ಲಿ ತಾನೇ ಹೋಗುವುದಾಗಿ ಹೇಳಿದ್ದಾಳೆ. ಆದರೆ ಇಲ್ಲಿ ಇರುವುದೇ ಟ್ವಿಸ್ಟ್​. ಅಷ್ಟಕ್ಕೂ ಭಾಗ್ಯಳಿಗೆ ಸಿಕ್ಕಿರುವ ಟಿಕೆಟ್​ ಪಡೆದು ಲವರ್​ ಜೊತೆ ಹನಿಮೂನ್​ ಪ್ಲ್ಯಾನ್​ ಮಾಡಿದ್ದಾನೆ ಭಾಗ್ಯಳಾ ಪತಿದೇವ! ಹೌದು. ಆ ಟಿಕೆಟ್​ ಅನ್ನು ಬೇರೆ ಯಾರಿಗೂ ಕೊಡದೇ ಶ್ರೇಷ್ಠಾಳ ಜೊತೆ ತಾನೇ ಗಂಡ-ಹೆಂಡತಿ ರೂಪದಲ್ಲಿ ಪ್ರವಾಸಕ್ಕೆ ಹೋಗುವ ಪ್ಲ್ಯಾನ್​ ಮಾಡಿದ್ದಾನೆ. ಮುಂದೇನಾಗುತ್ತೆ ಎನ್ನುವುದು ಈಗಿರುವ ಕುತೂಹಲ.

Tap to resize

Latest Videos

undefined

ಸತ್ತು ಮಲಗಿದ್ರೂ ಕಣ್ಣೀರು ತಡೆಯಲಾಗಲಿಲ್ಲ: ಶೂಟಿಂಗ್​ನಲ್ಲಿ ನಡೆದ ಆ ಘಟನೆ ನೆನಪಿಸಿಕೊಂಡ ನಟಿ ಸಂಜನಾ

ಈಗಲಾದರೂ ನಿರ್ದೇಶಕರು ಗಂಡನ ರಾಸಲೀಲೆಯನ್ನು ಭಾಗ್ಯಳಿಗೆ ತೋರಿಸಿ, ಇದ್ಯಾಕೋ ಅತಿಯಾಯ್ತು ಎಂದು ಕಿಡಿ ಕಾರುತ್ತಿದ್ದಾರೆ. ಇಂಥ ಗಂಡ ಇದ್ದರೆಷ್ಟು, ಬಿಟ್ಟರೆಷ್ಟು? ಈ ದೃಶ್ಯ ನೋಡಿದ ಮೇಲಾದರೂ ಭಾಗ್ಯ ಅವನನ್ನು ಬಿಟ್ಟು ಹೋಗುವ ಮನಸ್ಸು ಮಾಡಬೇಕು ಎಂದೆಲ್ಲಾ ಕಮೆಂಟ್​  ಮೂಲಕ ತಿಳಿಸುತ್ತಿದ್ದಾರೆ. ಆದರೆ ಕುಸುಮಾ ಅಷ್ಟು ಸುಲಭಕ್ಕೆ ಬಿಟ್ಟಾಳೆಯೆ? ರಾತ್ರೋರಾತ್ರಿ ಬದಲಾದ ತಾಂಡವ್​ನನ್ನು ನಂಬಿದವಳು ಆಕೆ.  ಪತ್ನಿ ಭಾಗ್ಯಳನ್ನು ಹೊಗಳುವುದೇನು, ಮಕ್ಕಳನ್ನು ಮುದ್ದಿಸೋದೇನು, ಅಪ್ಪ-ಅಮ್ಮ, ಪೂಜಾಳ ಮೇಲೆ ಪ್ರೀತಿಯ ಧಾರೆ ಹರಿಸೋದೇನು... ಅಬ್ಬಬ್ಬಾ ಒಂದಾ ಎರಡಾ? ಹೀಗೆಲ್ಲಾ ಮಾಡಿದ್ದನ್ನು ನೋಡಿ  ಕುಸುಮಾ ಇಂಥ ಮಗನನ್ನು ನಂಬಿರುವ ಬಗ್ಗೆ ಇದಾಗಲೇ ವೀಕ್ಷಕರು ಕುಸುಮಾಳನ್ನು ಬೈಯುತ್ತಿದ್ದಾರೆ.  

 ಎಸ್​ಎಸ್​ಎಲ್​ಸಿ ಬರೆದಳು, ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡಳು, ಕಾರು ಕಲಿತಳು, ಡಾನ್ಸ್​ ಮಾಡಿದಳು, ಚೆನ್ನಾಗಿ ಡ್ರೆಸ್​ ಮಾಡಿಕೊಂಡಲು... ಹೂಂ ಹೂಂ... ಯಾವುದೂ ತಾಂಡವ್​ ಮನಸ್ಸನ್ನು ಬದಲಾಯಿಸಲೇ ಇಲ್ಲ. ಕೊನೆಗೆ ಭಾಗ್ಯಳನ್ನು ಇನ್​ಸಲ್ಟ್​ ಮಾಡಲು ಶ್ರೇಷ್ಠಾ ಡಾನ್ಸ್​ ಟೀಚರ್​ ಮೊರೆ ಹೋದಳು. ಆರಂಭದಲ್ಲಿ ಭಾಗ್ಯಳನ್ನು ಸಾಕಷ್ಟು ಕೆಟ್ಟ ಪದಗಳಿಂದ ನಿಂದಿಸಿದಳು ಟೀಚರ್​. ಕೊನೆಗೆ ಅತ್ತೆ ಕುಸುಮಾ ಬಿಡಬೇಕಲ್ಲ. ಆ ಟೀಚರ್​ ಅನ್ನು ಕರೆಸಿ, ಭಾಗ್ಯಳಿಂದ ಭರತನಾಟ್ಯ ಮಾಡಿಸಿ, ಟೀಚರ್​ ಕ್ಷಮೆ ಕೇಳುವ ಹಾಗೆ ಮಾಡಿದಳು. ಇದರಿಂದ ತಾಂಡವ್​ ಮತ್ತು ಶ್ರೇಷ್ಠಾಗೆ ಶಾಕ್​ ಆಯಿತು. ಆದರೆ ಇದ್ದಕ್ಕಿಂತೆಯೇ ತಾಂಡವ್​ ಬದಲಾಗಿ ಬಿಟ್ಟರೂ ಎಲ್ಲರೂ ನಂಬಿರೋದು ಮಾತ್ರ ಹಾಸ್ಯಾಸ್ಪದ ಎನ್ನಿಸುವ ಮಧ್ಯೆಯೇ ಹೇಗಾದ್ರೂ ಮಾಡಿ ಸೊಸೆಯ ಜೀವನ ಸರಿ ಮಾಡುವ ಆಸೆ ಕುಸುಮಾಗೆ! 

ಹೆಬ್ಬಾವು, ಇಗ್ವಾನಾ ಜೊತೆ ಬಿಗ್​ಬಾಸ್​ ಸಂಗೀತಾ ಶೃಂಗೇರಿ ಸರಸ- ವಿಡಿಯೋ ವೈರಲ್​- ಬೆಚ್ಚಿ ಬಿದ್ದ ಅಭಿಮಾನಿಗಳು!

click me!