ಸತ್ತು ಮಲಗಿದ್ರೂ ಕಣ್ಣೀರು ತಡೆಯಲಾಗಲಿಲ್ಲ: ಶೂಟಿಂಗ್​ನಲ್ಲಿ ನಡೆದ ಆ ಘಟನೆ ನೆನಪಿಸಿಕೊಂಡ ನಟಿ ಸಂಜನಾ

By Suchethana D  |  First Published Nov 5, 2024, 1:10 PM IST

ಪುಟ್ಟಕ್ಕನ ಮಕ್ಕಳು ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ ಅವರು ಸಾವಿನ ದೃಶ್ಯದ ಶೂಟಿಂಗ್​ ಸಮಯದಲ್ಲಿ ನಡೆದ ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
 


ಬಹು ವರ್ಷಗಳವರೆಗೆ ಒಂದು ಸೀರಿಯಲ್​ನಲ್ಲಿ ನಟಿಸುತ್ತಿದ್ದರೆ, ಕೆಲವೊಬ್ಬ ನಟ-ನಟಿಯರು ಆ ಪಾತ್ರದ ಒಳಗೆ ಹೋಗಿಬಿಡುತ್ತಾರೆ. ಇದು ಸೀರಿಯಲ್​ ಎಂದು ಗೊತ್ತಿದ್ದರೂ, ಅವರು ನಟಿಸುವ ಪರಿಗೆ ವೀಕ್ಷಕರು ಒಂದು ಕ್ಷಣ ಇದು ನಿಜ ಜೀವನ ಅಂದುಕೊಳ್ಳುವುದು ಉಂಟು. ತಾವು ನೋಡುತ್ತಿರುವುದು ಧಾರಾವಾಹಿ ಎಂದು ಗೊತ್ತಿದ್ದರೂ ಅ ಪಾತ್ರಧಾರಿಗಳ ನಟನೆಗೆ ಅದೆಷ್ಟು ಮುಳುಗಿ ಹೋಗುತ್ತಾರೆ ಎಂದರೆ, ಅದು ತಮ್ಮ ಬದುಕಿನಲ್ಲಿಯೇ ಆಗುತ್ತಿದೆಯೇನೋ ಅನ್ನಿಸಿಬಿಡುತ್ತದೆ. ಅಂಥ ನಟನಾ ಶಕ್ತಿಯುಳ್ಳ ಕೆಲವು ನಟಿಯರ ಪೈಕಿ ಹಿರಿಯ ನಟಿ ಉಮಾಶ್ರೀಯವರೂ ಒಬ್ಬರು.  ಯಾವುದೇ  ಪಾತ್ರಕ್ಕೂ   ಜೀವ ತುಂಬುವ ಶೈಲಿ ಶ್ಲಾಘನೀಯ. ತಮ್ಮೆಲ್ಲ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿದಂತೆ ನಟಿಸುವ ಜಾಣ್ಮೆ ಇವರಲ್ಲಿ ಇದೆ.  ಪ್ರತಿಯೊಂದು ಪಾತ್ರಗಳಲ್ಲೂ ಸ್ವಂತಿಕೆ, ಜೀವಂತಿಕೆ ಇದೆ.   ರಂಗಭೂಮಿ ಮತ್ತು ಚಲನಚಿತ್ರರಂಗಗಳಲ್ಲಿ ಛಾಪು ಮೂಡಿಸಿರುವ  ಉಮಾಶ್ರೀ ಅವರು,  ಕೆಲವೊಂದು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ  ಕಣ್ಣುಗಳಲ್ಲಿಯೇ  ತುಂಬಿಕೊಡುತ್ತಾರೆ. ಹಲವು ವಿವಿಧ ಪಾತ್ರಗಳಲ್ಲಿ ಲೀಲಾಜಾಲವಾಗಿ ನಟಿಸಿರುವ ಇವರು ಹಾಸ್ಯ ಪಾತ್ರಗಳಿಗೆ ತುಂಬಾ ಪ್ರಸಿದ್ಧರಾಗಿದ್ದಾರೆ.   325 ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸತತ ಐದು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದ ಏಕೈಕ ಕನ್ನಡ ನಟಿ ಎನಿಸಿದ್ದಾರೆ. 

ಇಂಥ ನಟಿ ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿಲ ಮಗಳ ಸಾವಿನ ದೃಶ್ಯದ ವೇಳೆ ಹೇಗೆ ಆ್ಯಕ್ಟಿಂಗ್​ ಮಾಡಿರಬೇಡ? ಸ್ನೇಹಾ ಸತ್ತು ಹೋಗಿ ಅವಳ ದೇಹವನ್ನು ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ, ಉಮಾಶ್ರೀ ಅವರ ನಟನೆಗೆ ಅದೆಷ್ಟೋ ವೀಕ್ಷಕರ ಕಣ್ಣುಗಳು ತೇವಗೊಂಡದ್ದಂತೂ ಸುಳ್ಳಲ್ಲ. ಇದು ವೀಕ್ಷಕರ ಮಾತಾದರೆ, ಆ ಶೂಟಿಂಗ್ ಸಮಯವನ್ನು ಈಗ ಖುದ್ದು ಸ್ನೇಹಾ ಉರ್ಫ್​ ಸಂಜನಾ ಬುರ್ಲಿಯವರೇ ಹೇಳಿಕೊಂಡಿದ್ದಾರೆ. ಯೂಟ್ಯೂಬ್​ ಚಾನೆಲ್​ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸಂಜನಾ ಅವರು, ನಾನು ಸತ್ತು ಅಲ್ಲಿ ಮಲಗಿದ್ದೆ. ಶೂಟಿಂಗ್​ ನಡೆಯುತ್ತಿತ್ತು. ಕಣ್ಣು ಮುಚ್ಚಿದ್ದೆ. ಕಣ್ಣನ್ನು ಅಲ್ಲಾಡಿಸುವಂತೆಯೂ ಇರಲಿಲ್ಲ, ಏಕೆಂದ್ರೆ ಆಗ ನಾನು ಶವವಾಗಿದ್ದೆ. ಆದರೆ ಹೊರಗೆ ಏನು ಆಗುತ್ತಿದೆ ಎನ್ನುವುದು ನನಗೆ ತಿಳಿಯುತ್ತಿತ್ತು. ಉಮಾಶ್ರೀ ಅಮ್ಮನವರು ಸ್ನೇಹಾಳ ಹೆಣದ ಮುಂದೆ ರೋಧಿಸುತ್ತಿರುವುದನ್ನು ಕೇಳಿ ಸತ್ತಲ್ಲಿಯೇ ನಾನು ಕಣ್ಣೀರಾಗಿ ಬಿಟ್ಟಿದ್ದೆ. ಅಂಥ ಅದ್ಭುತ ನಟನೆ ಅವರದ್ದು. ಕಣ್ಣುಗುಡ್ಡೆಯೂ ಅಲ್ಲಾಡಿಸುವಂತಿರಲಿಲ್ಲವಾದರೂ ಅವರ ನಟನೆಗೆ ಕಣ್ಣೀರು ಹಾಕುವ ಸ್ಥಿತಿ ಬಂತು ಎಂದು ಸಂಜನಾ ನೆನೆಪಿಸಿಕೊಂಡಿದ್ದಾರೆ.

Tap to resize

Latest Videos

undefined

ಬಿಗ್​ಬಾಸ್​ಗೆ ಸಂಜನಾ ಬುರ್ಲಿ ವೈಲ್ಡ್​ ಕಾರ್ಡ್​ ಎಂಟ್ರಿ ಕೊಡ್ತಾರಾ? ಸೀರಿಯಲ್​ ಬಿಟ್ಟಿದ್ದೇಕೆ? ನಟಿ ಏನಂದ್ರು ಕೇಳಿ..

ಸ್ನೇಹಾ ಸರ್ಕಾರಿ ಅಧಿಕಾರಿಯಾಗಿರುವ ಕಾರಣ, ಸರ್ಕಾರಿ ಗೌರವದ ಜೊತೆ ಅಂತ್ಯಸಂಸ್ಕಾರ ನಡೆಸಿದ್ದರು. ನಾನೊಬ್ಬ ನಟಿ ಮಾತ್ರ. ಅದಕ್ಕೆಲ್ಲಾ ನಾನು ಡಿಸರ್ವ್​ ಆಲ್ಲ. ಆದರೆ ಪಾತ್ರಕ್ಕೆ ತಕ್ಕಂತೆ ಅದನ್ನು ಮಾಡಿದ್ದರು. ಬಾವುಟವನ್ನು ನನ್ನ ದೇಹದ ಮೇಲೆ ಹೊದೆಸಿದಾಗ ಮೈ ಝುಂ ಎಂದಿತು. ನನ್ನನ್ನು ಶವದ ಪೆಟ್ಟಿಗೆಯಲ್ಲಿ ಇಟ್ಟಾಗ, ನನಗೆ ಯಾವುದೇ ರೀತಿ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಎಲ್ಲರೂ ನನ್ನನ್ನು ಮಗುವಿನಂತೆ ನೋಡಿಕೊಂಡರು. ಉಮಾಶ್ರೀ ಮೇಡಂ ಕೂಡ ಚೆನ್ನಾಗಿ ನೋಡಿಕೊಂಡರು ಎಂದಿದ್ದಾರೆ ಸಂಜನಾ. ಆ ಸಮಯದಲ್ಲಿ ನನ್ನ ಅಕ್ಕ ಪಾತ್ರಧಾರಿ ಸಹನಾ ಅಂದರೆ ಶಿಲ್ಪಾ ಗ್ಲಿಸರಿನ್​ ಇಲ್ಲದೆಯೇ ಕಣ್ಣೀರಿಟ್ಟಿದ್ದಳು. ಆ  ಕ್ಷಣ ಅಷ್ಟು ಭಾವುಕವಾಗಿತ್ತು ಎಂದಿದ್ದಾರೆ. 

 ಸೀರಿಯಲ್​ ಬಿಡಲು ನನಗೂ ಮನಸ್ಸು ಇರಲಿಲ್ಲ. ತುಂಬಾ ನೋವಿನಿಂದಲೇ ಹೊರಕ್ಕೆ ಬಂದಿದ್ದೇನೆ. ಮೂರು ತಿಂಗಳ ಹಿಂದೆಯೇ ನೋಟಿಸ್​ ಪಿರಿಯಡ್​ ಕೊಟ್ಟಿದ್ದೆ. ಈ ಮೂಲಕ ಸೀರಿಯಲ್​ಗಳಿಗೆ ಬೈ ಹೇಳುತ್ತಿದ್ದೇನೆ. ಆದರೆ ನಟಿಯಾಗಿ ಮುಂದುವರೆಯುತ್ತಿದ್ದೇನೆ ಎಂದಿರುವ ಸಂಜನಾ, ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಳ್ಳುವ ತವಕದಲ್ಲಿ ಇದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಇದಾಗಲೇ ಕೆಲವು ಪ್ರಾಜೆಕ್ಟ್​ಗಳನ್ನು ಮಾಡಿದ್ದೇನೆ. ಅದಾವುದೂ ಇನ್ನೂ ಬಿಡುಗಡೆಯಾಗಿಲ್ಲ. ನಟಿಯಾಗಿ ಇರುತ್ತೇನೆ. ನನಗೆ ಇಷ್ಟದ ಪಾತ್ರಗಳು ಬಂದರೆ ಒಪ್ಪಿಕೊಳ್ಳುತ್ತೇನೆ. ನನಗೆ ಚಾಲೆಂಜಿಂಗ್​ ಪಾತ್ರಗಳು ಎಂದರೆ ಇಷ್ಟ. ಹುಚ್ಚಿಯಂಥ ಪಾತ್ರಗಳನ್ನು ಮಾಡಬೇಕು ಎಂದುಕೊಂಡಿದ್ದೇನೆ. ನಾಯಕಿಯೇ ಆಗಬೇಕೆಂದೇನೂ ಇಲ್ಲ. ನನಗೆ ಇಷ್ಟ ಆಗುವ ಪಾತ್ರಗಳು ಆಗಬೇಕಷ್ಟೇ ಎಂದಿದ್ದಾರೆ ಸಂಜನಾ. 

ಸುದೀಪ್​ ಜೊತೆ ಮೊದಲ ಭೇಟಿಯ ರಹಸ್ಯ ಬಿಗ್​ಬಾಸ್​ನಲ್ಲೇ ರಟ್ಟು ಮಾಡ್ತೇನೆ ಎಂದ ಗೌತಮಿ! ಅಷ್ಟಕ್ಕೂ ಮೀಟ್​ ಆಗಿದ್ದೆಲ್ಲಿ?
 

click me!