ಹೆಬ್ಬಾವು, ಇಗ್ವಾನಾ ಜೊತೆ ಬಿಗ್​ಬಾಸ್​ ಸಂಗೀತಾ ಶೃಂಗೇರಿ ಸರಸ- ವಿಡಿಯೋ ವೈರಲ್​- ಬೆಚ್ಚಿ ಬಿದ್ದ ಅಭಿಮಾನಿಗಳು!

By Suchethana D  |  First Published Nov 5, 2024, 2:58 PM IST

ಹೆಬ್ಬಾವು, ಇಗ್ವಾನಾ ಜೊತೆ ಬಿಗ್​ಬಾಸ್​ ಸಂಗೀತಾ ಶೃಂಗೇರಿ ಸರಸ ಆಡ್ತಿದ್ರೆ ಅವರ ಫ್ಯಾನ್ಸ್​ ಭಯಗೊಂಡಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ. 
 


ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರಲ್ಲಿ ಬಹುತೇಕರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿದ್ದವರು ಸಂಗೀತಾ ಶೃಂಗೇರಿ.  ಬಿಗ್​​ಬಾಸ್​ನಿಂದ ಆಚೆ ಬಂದ ಬಳಿಕ ಸಂಗೀತಾ ಶೃಂಗೇರಿ ಅವರು ಯಾವುದೇ ಪ್ರಾಜೆಕ್ಟ್​ಗೆ ಕೈ ಹಾಕಿಲ್ಲ. ಆದರೆ ಸೋಷಿಯಲ್​  ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಸಂಗೀತಾ ಎಂದಾಕ್ಷಣ ಬಹುತೇಕರಿಗೆ ನೆನಪಾಗುವುದು, ಬಿಗ್​ಬಾಸ್-10ರ ಮನೆಯಲ್ಲಿ ಸದಾ ಕಿತ್ತಾಡುತ್ತಾ ಇದ್ದ  ಸಂಗೀತಾ ಶೃಂಗೇರಿ ಮತ್ತು ತುಕಾಲಿ ಸಂತೋಷ್​ ಜೋಡಿ.  ಸಂಗೀತಾ ಮಾತನಾಡುವ  ಮಾತುಗಳು  ತುಕಾಲಿ ಸಂತೋಷ್‌ ಅವರಿಗೆ ಹಿಡಿಸುತ್ತಿರಲಿಲ್ಲ. ಆದ್ದರಿಂದ ಇಬ್ಬರ ನಡುವೆ ಸಾಕಷ್ಟು ವೈಮನಸ್ಸು ಇದ್ದವು. ಸದಾ ಇಬ್ಬರೂ ಕಾದಾಡುತ್ತಲೇ ಇದ್ದರು.   ಅದೇ ಇನ್ನೊಂದೆಡೆ ಡ್ರೋನ್​ ಪ್ರತಾಪ್​ ಮತ್ತು ಸಂಗೀತಾ ಅಕ್ಕ-ತಮ್ಮನ ಬಾಂಡಿಂಗ್​ ಬಗ್ಗೆ ಸಕತ್​ ಕಮೆಂಟ್ಸ್​ ಬರುತ್ತಿದ್ದವು. ಸಂಗೀತಾ ಅವರನ್ನು ದೀದಿ ದೀದಿ ಎನ್ನುತ್ತಲೇ ಪ್ರತಾಪ್​ ಎಲ್ಲರ ಮನಸ್ಸನ್ನು ಗೆದ್ದಿದ್ದರು.

ಇದೀಗ ಇಬ್ಬರೂ ಮೈಸೂರಿಗೆ ಭೇಟಿ ಕೊಟ್ಟಿದ್ದಾರೆ.  ಮೈಸೂರಿನ ಸಮೀಪ ಇರುವ ಬಸ್ತಿಪುರದಲ್ಲಿನ ಪ್ಲಾನೆಟ್‌ ಅರ್ತ್‌ ಅಕ್ವೇರಿಯಂಗೆ ಭೇಟಿ ನೀಡಿದ್ದಾರೆ. ಈ ಮೊದಲು ಸಂಗೀತ  ಅವರು ಇಲ್ಲಿ ಭೇಟಿ ಕೊಟ್ಟಿದ್ದರು.  ಅವರು ಈಗ ಡ್ರೋನ್​ ಪ್ರತಾಪ್‌ ಅವರನ್ನು ಕರೆದುಕೊಂಡು ಬಂದಿದ್ದಾರೆ. ಸುಂದರವಾಗಿ ಇರುವ ಈ ಅಕ್ವೇರಿಯಮ್​ ಬಗ್ಗೆ ಪರಿಚಯಿಸಿದ್ದಾರೆ. ಇಲ್ಲಿರುವ ಹೆಬ್ಬಾವು, ಇಗ್ವಾನ, ಅಂಬ್ರೆಲಾ ಕೊಕಟೊ   ಸೇರಿದಂತೆ ಹಲವು ಸರಿಸೃಪ, ಪ್ರಾಣಿಗಳ ಜೊತೆ ಸರಸ ಆಡಿದ್ದಾರೆ. ಅಬ್ಬಬ್ಬಾ ಎನ್ನುವಂಥ ಹಾವುಗಳನ್ನು ಲೀಲಾಜಾಲವಾಗಿ ಹಿಡಿದುಕೊಂಡಿದ್ದಾರೆ. ಅಲ್ಲಿರುವ ಸಿಬ್ಬಂದಿ ಇದನ್ನು ಸುಲಭವಾಗಿ ಹಿಡಿದುಕೊಳ್ಳಬಲ್ಲರು. ಆದರೆ ಸಾಮಾನ್ಯವಾಗಿ ಎಲ್ಲರೂ ಇದನ್ನು ನೋಡಿ ಭಯ ಪಟ್ಟುಕೊಳ್ಳುತ್ತಾರೆ. ಆದರೆ ಸಂಗೀತಾ ಎಲ್ಲವನ್ನೂ ಸಾಕು ಪ್ರಾಣಿಯಂತೆ ಹಿಡಿದುಕೊಂಡಿದ್ದಾರೆ. 

Tap to resize

Latest Videos

undefined

ಬಿಗ್​ಬಾಸ್​ ಸಂಗೀತಾ ಶೃಂಗೇರಿ- ಡ್ರೋನ್​ ಮೂಗಿನ ಚರ್ಚೆ: ಆಂಟಿ ಮಾತಿಗೆ ಪ್ರತಾಪ್​ ಕೋಪ
 
ಈ ಸಮಯದಲ್ಲಿ  ಡ್ರೋನ್​ ಮಾತ್ರ ಯಾಕೋ ಭಯಪಟ್ಟುಕೊಂಡು   ದೂರವೇ ನಿಂತಿದ್ದರು. ಸಂಗೀತಾ ಧೈರ್ಯ ಹೇಳಿದರೂ ಪ್ರತಾಪ್​ ಹತ್ತಿರ ಹೋಗಲಿಲ್ಲ. ಬಾರೋ ಬಾರೋ ಏನೂ ಆಗಲ್ಲ ಎಂದರೂ ಡ್ರೋನ್​ ಪ್ರತಾಪ್​ ಇದರ ಸಹವಾಸವೇ ಬೇಡ ಎಂದು ದೂರವೇ ನಿಂತು ಭಯದಿಂದ ನೋಡುತ್ತಿದ್ದರು. ಬಳಿಕ ಹಕ್ಕಿ ಹಿಡಿದು ಪೋಸ್​ ಕೊಟ್ಟರು. ಇದಾದ ಬಳಿಕ ಇಬ್ಬರೂ  ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದರು. ಈ ವಿಡಿಯೋವನ್ನು ಡ್ರೋನ್​ ಪ್ರತಾಪ್‌ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.‌ ಸಂಗೀತಾ ಅವರನ್ನು ನೋಡಿ ಅವರ ಅಭಿಮಾನಿಗಳು ನಮಗೇ ಭಯ ಆಗ್ತಿದೆ ಎನ್ನುತ್ತಿದ್ದಾರೆ. ಡ್ರೋನ್​ ಅವರನ್ನು ಹಾಡಿ ಹೊಗಳುತ್ತಿದ್ದಾರೆ. 


ಇನ್ನು ಸಂಗೀತಾ ಅವರ ಕುರಿತು ಹೇಳುವುದಾದರೆ,  ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿವರಾದ ನಟಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. 2016ರಲ್ಲಿ ಸ್ಟಾರ್ ಸುವರ್ಣ ವಾಹಿನಿಯ 'ಹರ ಹರ ಮಹಾದೇವ' ಕನ್ನಡ ಧಾರವಾಹಿ ಮೂಲಕ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿಕೊಟ್ಟ ಇವರು, ಪಾವರ್ತಿ ಪಾತ್ರದ ಮೂಲಕ ಖ್ಯಾತಿ ಗಳಿಸಿದರು. ಎ+  ಸಿನಿಮಾ ಮೂಲಕ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಟ್ಟರು. ಬಳಿಕ  ಸಾಲಗಾರರ ಸಹಕಾರ ಸಂಘ, 777 ಚಾರ್ಲಿ, ಲಕ್ಕಿಮ್ಯಾನ್, ಶಿವಾಜಿ ಸುರತ್ಕಲ್ 2 ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಾರ್ಲಿ ಚಿತ್ರದಿಂದ ಇವರಿಗೆ ದೊಡ್ಡ ಬ್ರೇಕ್​ ಸಿಕ್ಕಿತು. ಎರಡು ಸಾವಿರಕ್ಕೂ ಹೆಚ್ಚು ಜನರು '777 ಚಾರ್ಲಿ' ಚಿತ್ರದ ನಾಯಕಿ ಪಾತ್ರಕ್ಕೆ ಆಡಿಷನ್ ಕೊಟ್ಟಿದ್ದರು. ಆದರೆ ಎಲ್ಲರನ್ನು ಮೀರಿ ಸಂಗೀತಾ ಗೆದ್ದಿದ್ದರು. ಒಳ್ಳೆ ಅವಕಾಶ ಪಡೆದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಆಗಿ ಸದ್ದು ಮಾಡಿದೆ ಚಿತ್ರ ಜೊತೆಗೆ ಹಲವು ಅವಾರ್ಡ್​ಗಳನ್ನು ಬಾಚಿಕೊಂಡಿದೆ. ಡ್ರೋನ್​ ಪ್ರತಾಪ್​ ಬಗ್ಗೆ ಎಲ್ಲರಿಗೂ ಗೊತ್ತಿರುವುದೇ. ಡ್ರೋನ್ ಮಾಡುವುದಾಗಿ ನಂಬಿಸಿ ವಂಚನೆ ಮಾಡಿರುವ ಆರೋಪ ಹೊತ್ತಿದ್ದ ಡ್ರೋನ್​ ಬಿಗ್​ಬಾಸ್​ಗೆ ಹೋಗಿ ಬಂದ ಮೇಲೆ ಹೀರೋ ಆಗಿದ್ದಾರೆ. 

ಸತ್ತು ಮಲಗಿದ್ರೂ ಕಣ್ಣೀರು ತಡೆಯಲಾಗಲಿಲ್ಲ: ಶೂಟಿಂಗ್​ನಲ್ಲಿ ನಡೆದ ಆ ಘಟನೆ ನೆನಪಿಸಿಕೊಂಡ ನಟಿ ಸಂಜನಾ

click me!