
ಹೊಸ ಕೆಲಸ ಸಿಕ್ಕ ಖುಷಿಯಲ್ಲಿ ಭಾಗ್ಯಲಕ್ಷ್ಮಿ ಮತ್ತು ಇಡೀ ಕುಟುಂಬ ತೇಲಾಡುತ್ತಿದೆ. ಸೊಸೆ ಕೆಲಸಕ್ಕೆ ಹೋಗುವುದನ್ನು ಅತ್ತೆ ಕುಸುಮಾನೂ ಒಪ್ಪಿಕೊಂಡು ಆಗಿದೆ. ಈಗ ಏನಿದ್ದರೂ, ತಾಂಡವ್ ಮತ್ತು ಭಾಗ್ಯಳ ಸಂಸಾರ ಸರಿಯಾಗಬೇಕಿದೆ. ಆದರೆ ಸದ್ಯ ಇವರ ಸಂಸಾರ ಸರಿಯಾಗುವಂತೆ ಕಾಣುತ್ತಿಲ್ಲ. ಅತ್ತ ಶ್ರೇಷ್ಠಾಳ ಜೊತೆ ಮದುವೆಗೆ ಭರ್ಜರಿ ರೆಡಿ ಮಾಡಿಕೊಂಡಿದ್ದಾನೆ ತಾಂಡವ್. ಒಂದು ವೇಳೆ ಒತ್ತಾಯದಿಂದ ಭಾಗ್ಯ ಮತ್ತು ತಾಂಡವ್‌ರನ್ನು ಒಂದು ಮಾಡಿದರೂ ಅದು ಪ್ರಯೋಜನವಿಲ್ಲ. ಸದ್ಯ ಹೀಗೆ ಪರಿಸ್ಥಿತಿ.
ಆದರೆ ಶ್ರೇಷ್ಠಾಳ ಮದುವೆ ಎಂದು ತಿಳಿದಿದ್ದರೂ, ಅದು ತಾಂಡವ್ ಜೊತೆ ಎಂದು ಭಾಗ್ಯಳಿಗಾಗಲೀ, ಅವಳ ಮನೆಯವರಿಗಾಗಲೀ ಗೊತ್ತಿಲ್ಲ. ಶ್ರೇಷ್ಠಾ ಕುತಂತ್ರಿ ಎನ್ನುವುದಷ್ಟೇ ತಿಳಿದಿದೆ. ಆದರೆ ಮದುವೆಯ ಗುಟ್ಟು ಇನ್ನೂ ರಟ್ಟಾಗಲಿಲ್ಲ. ಇದೀಗ ಸ್ಟಾರ್ ಹೋಟೆಲ್‌ನಲ್ಲಿ ಭಾಗ್ಯಳ ಜೊತೆ ಕೆಲಸ ಮಾಡುವ ಹಿತಾ ಭಾಗ್ಯಳ ಮನೆಗೆ ಬಂದಿದ್ದಾಳೆ. ನಿಮ್ಮ ವಿರುದ್ಧ ಎಲ್ಲಾ ದಾಖಲೆ ತಂದಿದ್ದೇನೆ ಎಂದಿದ್ದಾಳೆ. ಇದನ್ನು ಕೇಳಿ ತಾಂಡವ್‌ಗೆ ಶಾಕ್ ಆಗಿದೆ. ಶ್ರೇಷ್ಠಾ ಮತ್ತು ತಾಂಡವ್ ವಿಷಯ ಮನೆಯವರ ಮುಂದೆ ಬಯಲಾಗುತ್ತೋ ನೋಡಬೇಕಿದೆ. ಅದೇ ಇನ್ನೊಂದೆಡೆ, ಭಾಗ್ಯಳಿಗೆ ಹಿಂದೆ ಸಿಕ್ಕು ಅವಳ ಶಕ್ತಿಯ ಪರಿಚಯ ಮಾಡಿಸಿದ್ದ ಬಾಬಾ ಮತ್ತೊಮ್ಮೆ ಪ್ರತ್ಯಕ್ಷರಾಗಿದ್ದು, ಭಾಗ್ಯಳಿಗೆ ತಾಂಡವ್‌ನ ಹಿಂಟ್ ಕೂಡ ಕೊಟ್ಟಾಗಿದೆ.
ನಾಲ್ಕು ಗೋಡೆ ಮಧ್ಯೆ ಕಾಲು ಹಿಡ್ಕೊಳಲು ರೆಡಿ... ಕನಸಿನ ಹುಡುಗಿಯ ಕ್ವಾಲಿಟಿ ಹೇಳಿದ ನಿರ್ದೇಶಕ ತರುಣ್ ಸುಧೀರ್
ಈಗೇನಿದ್ದರೂ ತಾಂಡವ್ ಮತ್ತು ಶ್ರೇಷ್ಠಾಳ ಗುಟ್ಟು ರಟ್ಟಾಗುವ ಸಮಯ ಇದರ ಮಧ್ಯೆಯೇ ಹಿತಾ ಪಾತ್ರಧಾರಿ ಸುಷ್ಮಿತಾ ಅವರು ತಾಂಡವ್ ಪಾತ್ರಧಾರಿ ಸುದರ್ಶನ್ ಅವರು ತಮಗೆ ಮೇಕಪ್ ಮಾಡುತ್ತಿರುವ ವಿಡಿಯೋ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಮ್ಮ ತಂಡದ ವಿಶೇಷ ಮೇಕಪ್‌ಮೆನ್ ಎನ್ನುತ್ತಲೇ ಅವರು ಇದನ್ನ ಶೇರ್ ಮಾಡಿದ್ದಾರೆ. ಇದರಲ್ಲಿ ಮೇಕಪ್ ಬ್ರಷ್ ಹಿಡಿದು ಸುದರ್ಶನ್ ಅವರು ಮೇಕಪ್ ಟಚ್ ಕೊಡುವುದುನ್ನು ನೋಡಬಹುದು.
ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ತಾಂಡವ್‌ನ ಬಂಡವಾಳ ಬಯಲು ಮಾಡಲು ಬಂದವಳಿಗೆ ಮೇಕಪ್ ಮಾಡುತ್ತಿದ್ದೀಯಾ ಎಂದು ಕಾಲೆಳೆಯುತ್ತಿದ್ದಾರೆ. ಮುಂದೇನಾಗುತ್ತದೋ ಕಾದು ನೋಡಬೇಕಿದೆ. ಅಷ್ಟಕ್ಕೂ, ಈ ಸೀರಿಯಲ್ ಕುರಿತು ಹೇಳುವುದಾದರೆ, ಎಲ್ಲಾ ಅಡೆತಡೆಗಳನ್ನು ಮೀರಿ ಭಾಗ್ಯ ಸ್ಟಾರ್ ಹೋಟೆಲ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾಳೆ. ಇಂಗ್ಲಿಷ್ ಬರದಿದ್ದರೂ ಅಡುಗೆ ಮೂಲಕವೇ ಎಲ್ಲರ ಮನಸ್ಸನ್ನು ಗೆದ್ದಿದ್ದಾಳೆ. ನಿನ್ನಿಂದ ಐದು ಪೈಸೆಯೂ ದುಡಿಯಲು ಸಾಧ್ಯವಿಲ್ಲ ಎಂದು ಹಂಗಿಸುತ್ತಿದ್ದ ಗಂಡ ತಾಂಡವ್‌ಗೆ ತಿರುಗೇಟು ನೀಡುವ ರೀತಿಯಲ್ಲಿ, ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಇವಳನ್ನು ಅಭಿನಂದಿಸಲು ಶ್ರೀನಾಥ್ ಅವರ ಎಂಟ್ರಿಯಾಗಿದೆ. ಇಂದು ಸೀರಿಯಲ್ಗಳು ಕೇವಲ ಸೀರಿಯಲ್ಗಳಾಗಿ ಉಳಿದಿಲ್ಲ. ಅದು ಮನೆಮನೆಯ ಕಥೆಗಳಾಗಿವೆ. ಇದರಿಂದ ಸ್ಫೂರ್ತಿ ಪಡೆಯುವ ಅದೆಷ್ಟೋ ಜನರು ಇದ್ದಾರೆ. ಅದಕ್ಕೆ ಉದಾಹರಣೆಯಾಗಿ ಭಾಗ್ಯಳನ್ನು ನೋಡಿ ಕೆಲವು ಮಹಿಳೆಯರು ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾರೆ. ಇದೀಗ ಮಹಿಳೆ ಮನಸ್ಸು ಮಾಡಿದರೆ ಏನು ಮಾಡಲು ಸಾಧ್ಯ ಎನ್ನುವ ಭಾಗ್ಯ ಹಲವು ಮಹಿಳೆಯರಿಗೆ ಸ್ಫೂರ್ತಿ ಕೂಡ ಆಗಿದ್ದಾಳೆ.
ಈ ಜೋಡಿಯನ್ನು ಬೇರೆ ಮಾಡ್ತಿದ್ದೀರಾ? ದೇವ್ರು ಮೆಚ್ತಾನಾ ನಿಮ್ಮನ್ನು ಡೈರೆಕ್ಟರ್ ಸಾಹೇಬ್ರೆ? ಫ್ಯಾನ್ಸ್ ಅಸಮಾಧಾನ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.