ಶೆಟ್ರು ಮನೆ ಕೋಳಿ ಕೊನೆಗೆ ಮೊಟ್ಟೆ ಹಾಕದೆನೆ ಮನೆ ಬಿಟ್ಟಿತು; ನಿವೇದಿತಾ ಗೌಡಗೆ ಇದೆಂಥಾ ಕಾಮೆಂಟ್!

By Sathish Kumar KH  |  First Published Jul 8, 2024, 7:00 PM IST

ಚಂದನ್ ಶೆಟ್ಟಿಯಿಂದ ಡಿವೋರ್ಸ್ ಪಡೆದ ನಟಿ ನಿವೇದಿತಾ ಗೌಡ ಅವರ ಇನ್‌ಸ್ಟಾಗ್ರಾಮ್ ರೀಲ್ಸ್‌ಗೆ 'ಶೆಟ್ರು ಮನೆ ಕೋಳಿ ಕೊನೆಗೆ ಮೊಟ್ಟೆ ಹಾಕದೆನೆ ಮನೆ ಬಿಟ್ಟಿತು ಎಂತ ಕೋಳಿ ಲೇ ಇದು' ಎಂದು ಕಾಮೆಂಟ್ ಮಾಡಿದ್ದಾರೆ.


ಬೆಂಗಳೂರು (ಜು.08): ಬಿಗ್ ಬಾಸ್ ಮನೆಯಲ್ಲಿ ಪ್ರೀತಿಸಿ ಮದುವೆಯಾದ ಜೋಡಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಈಗಾಗಲೇ ಡಿವೋರ್ಸ್ ಪಡೆದು ದೂರಾಗಿದ್ದಾರೆ. ಆದರೆ, ಇವರಿಬ್ಬರ ಡಿವೋರ್ಸ್ ಸಹಿಸಿಕೊಳ್ಳಲಾದ ನೆಟ್ಟಿಗನೊಬ್ಬ ನಟಿ ನಿವೇದಿತಾ ಗೌಡ ಹಂಚಿಕೊಂಡ ಫೋಟೋಗೆ ಹೀಗೆ ಕಾಮೆಂಟ್ ಮಾಡಿದ್ದಾನೆ. 'ಶೆಟ್ರು ಮನೆ ಕೋಳಿ ಕೊನೆಗೆ ಮೊಟ್ಟೆ ಹಾಕದೆನೆ ಮನೆ ಬಿಟ್ಟಿತು ಎಂತ ಕೋಳಿ ಲೇ ಇದು' ಎಂದು ಬರೆದುಕೊಂಡಿದ್ದಾರೆ.

ಕನ್ನಡದ ಕಿರುತೆರೆಯಲ್ಲಿ ಬಿಗ್‌ಬಾಸ್‌ ಮನೆಗೆ ಸ್ಪರ್ಧಿಗಳಾಗಿ ಸೇರಿದ ರೀಲ್ಸ್ ರಾಣಿ ನಿವೇದಿತಾ ಗೌಡ ಹಾಗೂ ರ್ಯಾಪರ್ ಚಂದನ್ ಶೆಟ್ಟಿ ನಡುವೆ ಪ್ರೇಮಾಂಕುರವಾಗಿತ್ತು. ಆದರೆ, ಈ ಬಗ್ಗೆ ಇಬ್ಬರೂ ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ, ಮೈಸೂರಿನಲ್ಲಿ ದಸರಾ ಮಹೋತ್ಸವದ ವೇದಿಕೆ ಮೇಲೆ ನಿವೇದಿತಾ ಗೌಡಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದ ಚಂದನ್‌ ಶೆಟ್ಟಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಕೆಲವರು ಶಾಪವನ್ನೂ ಹಾಕಿದ್ದರು. ಇನ್ನು ಚಂದನ್ ಶೆಟ್ಟಿ ಪ್ರೇಮ ನಿವೇದನೆಗೆ ನಿವೇದಿತಾ ಗವಡ ಕೂಡ ಒಪ್ಪಿಗೆ ಸೂಚಿಸಿದ್ದಳು. ಇದಾದ ನಂತರ ಇಬ್ಬರೂ ಅದ್ಧೂರಿಯಾಗಿ ಮದುವೆ ಮಾಡಿಕೊಂಡು ಸಂಸಾರ ಸಾಗಿಸುತ್ತಿದ್ದರು.

Tap to resize

Latest Videos

ಬಿಂದು ಗೌಡ, ಭೂಮಿಕಾ ಬಸವರಾಜ್ ಪ್ರೀತಿಸುವ ಹುಡುಗ ಒಬ್ನೇನಾ? ಒಂದೇ ಸ್ಥಳದಲ್ಲಿ ಬಾಯ್‌ಫ್ರೆಂಡ್ ಹುಡುಕಾಟ!

ಆದರೆಮ ಇಬ್ಬರ ನಡುವಿನ ಸಂಸಾರ ಆರಂಭದಲ್ಲಿ ಸೊಗಸಾಗಿತ್ತು. ಬರ ಬರುತ್ತಾ ಇಬ್ಬರೂ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿದ ನಂತರ ಇಬ್ಬರ ನಡುವೆ ವೈಮನಸ್ಸು ಮೂಡಲು ಶುರುವಾಗಿದೆ. ಇಬ್ಬರೂ ಒಬ್ಬರಿಗೊಬ್ಬರು ಸಮಯ ಕೊಡಲು ಸಾಧ್ಯವಾಗಿಲ್ಲ. ಚಂದನ್‌ಶೆಟ್ಟಿಯನ್ನು ಮದುವೆಯಾದರೂ ಆತನಿಗಾಗಿ ಜೀವನ, ನಟನೆ ಹಾಗೂ ರೀಲ್ಸ್ ಮಾಡುವುದನ್ನು ಬಿಡಲು ನಿವೇದಿತಾ ಗೌಡ ಒಪ್ಪಿಕೊಂಡಿಲ್ಲ.

ಇನ್ನು ಮದುವೆಯಾಗಿ ಕೆಲವು ವರ್ಷಗಳು ಕಳೆದರೂ ನಿವೇದಿತಾ ಗೌಡ ಮಾತ್ರ ಸಿಹಿ ಸುದ್ದಿ ಕೊಡಲೇ ಇಲ್ಲ. ಆದರೆ, ಮಗುವಿನ ನಿರೀಕ್ಷೆಯಲ್ಲಿದ್ದ ಗಂಡ ಚಂದನ್ ಶೆಟ್ಟಿಗೆ ನಿರಾಸೆ ಮೇಲೆ ನಿರಾಸೆ ಉಂಟಾಗುತ್ತಿತ್ತು. ಜೊತೆಗೆ, ಚಂದನ್ ಶೆಟ್ಟಿ ತಮ್ಮ ಕುಟುಂಬ ಸದಸ್ಯರು ಮಗು ಯಾವಾಗ ಮಾಡಿಕೊಳ್ತೀಯಾ ಎಂದು ಕೇಳಿದ್ದಕ್ಕೆ ಉತ್ತರ ಕೊಡಲಾಗದೇ ಬೇಸತ್ತಿದ್ದಾನೆ. ಇದೇ ಕಾರಣಕ್ಕೆ ಇಬ್ಬರ ನಡುವೆ ವೈಮನಸ್ಸು ಶುರುವಾಗಿ ಡಿವೋರ್ಸ್ ಹಂತದವರೆಗೂ ತಲುಪಿದೆ ಎಂಬುದು ಇಲ್ಲಿವರೆಗಿನ ಊಹಾಪೋಹದ ಮಾಹಿತಿಯಾಗಿದೆ. ಆದರೆ, ಈ ವಿಚಾರ ಸತ್ಯಕ್ಕೆ ತೀರಾ ಹತ್ತಿರ ಎಂಬುದು ಕೂಡ ವಾಸ್ತವವಾಗಿದೆ.

ಚಂದನ್ ಶೆಟ್ಟಿಯಿಂದ ಡಿವೋರ್ಸ್ ಪಡೆದ ನಿವೇದಿತಾ ಗೌಡ ತಮ್ಮ ವೈಯಾರದ ಹಲವು ವಿಡಿಯೋಗಳನ್ನು ಪೋಸ್ಟ್ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಡಿವೋರ್ಸ್ ನಂತರ ಸ್ವತಂತ್ರವಾಗಿ ಹಾರುತ್ತಿರುವ ಹಕ್ಕಿ, ಪಂಜರದಿಂದ ಹೊರಬಂದ ಗಿಳಿ ಎಂದು ಹಲವರು ಹೊಗಳಿದ್ದಾರೆ. ಆದರೆ, ಇನ್ನು ಕೆಲವರು ನೀವಿಬ್ಬರೂ ಮತ್ತೆ ಒಂದಾಗಿ ಎಲ್ಲ ವೈಮನಸ್ಸು ಬದಿಗಿಟ್ಟು ಸಂಸಾರ ಮಾಡಿ ಎಂದು ಸಲಹೆ ಕೊಡುತ್ತಿದ್ದಾರೆ. ಇನ್ನು ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಅದರಲ್ಲೊಬ್ಬ 'ಶೆಟ್ರು ಮನೆ ಕೋಳಿ ಕೊನೆಗೆ ಮೊಟ್ಟೆ ಹಾಕದೆನೆ ಮನೆ ಬಿಟ್ಟಿತು ಎಂತ ಕೋಳಿ ಲೇ ಇದು' ಎಂದು ಕಾಮೆಂಟ್ ಮಾಡಿದ್ದಾನೆ.

ನಟ ದರ್ಶನ್ ಕೊಲೆ ಕೇಸ್; ಕೋರ್ಟ್‌ ವಿಚಾರಣೆಗೆ ಮುನ್ನವೇ ಜಾಮೀನು ಅರ್ಜಿ ವಾಪಸ್ ಪಡೆದ ವಕೀಲರು

ನಟಿ ನಿವೇದಿತಾ ಗೌಡ ಸೋಶಿಯಲ್‌ ಮೀಡಿಯಾದಲ್ಲಿ ಬೆನ್ನುಬೆನ್ನಿಗೆ  ವಿಡಿಯೋಗಳನ್ನ ಪೋಸ್ಟ್‌ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶಕ ಹಾಗೂ ರಾಪರ್‌ ಚಂದನ್‌ ಶೆಟ್ಟಿ ಜೊತೆಗೆ ವಿಚ್ಛೇದನ ಪಡೆದುಕೊಂಡ ಬಳಿಕ ಇನ್ಸ್‌ಟಾಗ್ರಾಮ್‌ನಲ್ಲಿ ನಿವೇದಿತಾ ಗೌಡ ರೀಲ್ಸ್‌ಗೆ ಕಳೆ ಬಂದಿದೆ. ಅವರ ರೀಲ್ಸ್‌ಗೆ ಹಿಂದಿನದಕ್ಕಿಂತ ಹೆಚ್ಚಿನ ವೀವ್ಸ್‌ಗಳು, ಕಾಮೆಂಟ್‌ಗಳು ಹಾಗೂ ಲೈಕ್ಸ್‌ಗಳು ಬರುತ್ತಿವೆ. ಅದರೊಂದಿಗೆ ಸಾಕಷ್ಟು ಪ್ರಮೋಷನ್‌, ಕೊಲಾಬ್ರೇಷನ್‌ಗಳನ್ನೂ ನಿವೇದಿತಾ ಭಾಗಿಯಾಗ್ತಿದ್ದಾರೆ. ಮೂರು ದಿನಗಳ ಹಿಂದೆ ನೀಲಿ ಬಣ್ಣದ ಟಾಪ್‌ ಹಾಗೂ ಅದಕ್ಕೆ ಒಪ್ಪುವಂತ ಶಾರ್ಟ್‌ನಲ್ಲಿ ಸಖತ್‌ ರೀಲ್‌ ಮಾಡಿದ್ದಾರೆ. ರೀಲ್‌ನಲ್ಲಿ ಅವರ ಅಂದ-ಚೆಂದಕ್ಕಿಂತ ಹೆಚ್ಚಾಗಿ, ಅವರು ಹಾಕಿಕೊಂಡಿರುವ ಕ್ಯಾಪ್ಶನ್‌ ಎಲ್ಲರ ಗಮನಸೆಳೆದಿದೆ. 

click me!