ಪಾರು ಸೀರಿಯಲ್ನಲ್ಲಿ ನಾಯಕಿಯಾಗಿದ್ದ ಮೋಕ್ಷಿತಾ ಪೈ ತಮ್ಮ 20 ವರ್ಷದ ತಮ್ಮನಿಗೆ ಉಪನಯನ ಮಾಡಿದ್ದಾರೆ. ಅವರ ಫುಲ್ ಸ್ಟೋರಿ ಇಲ್ಲಿದೆ...
ಸೀರಿಯಲ್ ನಟಿ ಮೋಕ್ಷಿತಾ ಪೈ ಎಂದರೆ ಬಹುಶಃ ಹೆಚ್ಚಿನವರಿಗೆ ತಿಳಿಯುವುದೇ ಇಲ್ಲ. ಆದರೆ ಪಾರು ಎಂದರೆ ಸಾಕು, ಎಲ್ಲರ ಚಿತ್ರ ಜೀ ಟಿವಿಯಲ್ಲಿ ಕೆಲ ತಿಂಗಳ ಹಿಂದೆ ಮುಗಿದಿರೋ ಪಾರು ಸೀರಿಯಲ್ನತ್ತ ಹೋಗುತ್ತದೆ. ಐದು ವರ್ಷಗಳಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ ಧಾರಾವಾಹಿ ಪಾರು (Paaru) ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು. ಅರಸನ ಕೋಟೆಯ ಮನೆ ಕೆಲಸದಾಳುವಾಗಿರುವ ಪಾರು ಅದೇ ಮನೆಗೆ ಸೊಸೆಯಾಗಿ ಬಂದ ನಂತರ ನಡೆದಿರುವ ಘಟನೆಗಳ ಸುತ್ತಲೂ ಈ ಧಾರಾವಾಹಿಯ ಕಥೆ ಹೆಣೆಯಲ್ಪಟ್ಟಿದೆ. ಈ ಧಾರಾವಾಹಿಯಲ್ಲಿ ಪಾರುವಿನದ್ದು ತ್ಯಾಗಮಯ ಪಾತ್ರ. ಅದು ಎಷ್ಟರಮಟ್ಟಿಗೆ ಎಂದರೆ ಮೈದುನನ ಪತ್ನಿಗಾಗಿ ತನ್ನ ಮಗುವನ್ನೇ ತ್ಯಾಗ ಮಾಡಿದ್ದಾಳೆ. ಮೈದುನನ ಪತ್ನಿ ಜನನಿ ತನ್ನ ಮಗುವನ್ನು ಕಳೆದುಕೊಂಡಾಗ ಅದು ಆಕೆಗೆ ಗೊತ್ತಾಗಬಾರದು ಎಂದು ಪಾರು ತನ್ನ ಮಗುವನ್ನೇ ಆಕೆಗೆ ಕೊಟ್ಟಿದ್ದಾಳೆ. ಇದು ಜನನಿಗೆ ತಿಳಿದಿರಲಿಲ್ಲ. ಕೊನೆಗೂ ಅಂತ್ಯದಲ್ಲಿ ಎಲ್ಲವೂ ತಿಳಿದು ಸೀರಿಯಲ್ ಸುಖಾಂತ್ಯವಾಗಿದೆ. ಇಂಥ ತ್ಯಾಗಮಯ ಪಾತ್ರ ಮಾಡುತ್ತಿದ್ದಾರೆ ಪಾರು ಅರ್ಥಾತ್ ಮೋಕ್ಷಿತಾ ಪೈ.
ಧಾರಾವಾಹಿಯಲ್ಲಿ ಬಿಡಿ, ಏನು ಬೇಕಾದರೂ ಆಗಬಹುದು ಎನ್ನಬಹುದು. ಆದರೆ ಅಸಲಿ ಜೀವನದಲ್ಲಿಯೂ ಮೋಕ್ಷಿತಾ ಅವರನ್ನು ನೋವಿನ ಕಥೆಯೇ. ತಮ್ಮ ಮುಗ್ಧ ನಗು ಹಾಗೂ ಅಷ್ಟೇ ಮುಗ್ಧ ಪಾತ್ರಗಳಿಂದ ಧಾರಾವಾಹಿಗೆ ಜೀವ ತುಂಬುತ್ತಿರುವ ಈ ನಟಿಯ ಬಾಳಿನಲ್ಲಿ ಮಾತ್ರ ಅತ್ಯಂತ ನೋವು ತುಂಬಿದೆ. ತೆರೆಯ ಮೇಲೆ ತಮ್ಮ ನಗುವಿನ ಮೂಲಕ ರಂಜಿಸುವ ಪಾರು ಅಲಿಯಾಸ್ ಮೋಕ್ಷಿತಾ ಪೈ ಅವರ ಜೀವನದಲ್ಲಿಯೂ ನೋವು ತುಂಬಿದೆ. ಮೋಕ್ಷಿತಾ ಪೈ ಅವರಿಗೆ ಚಿಕ್ಕ ತಮ್ಮನೊಬ್ಬನಿದ್ದಾನೆ. ಸದ್ಯ ಈ ತಮ್ಮನಿಗೆ ಮೋಕ್ಷಿತಾ ಅವರೇ ಅಮ್ಮನಂತೆ ನೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ, ಆತ ಮಾನಸಿಕ ಅಸ್ವಸ್ಥ. ಆತನ ಆರೈಕೆ ಮಾಡುವ ಜವಾಬ್ದಾರಿ ಮೋಕ್ಷಿತಾ ಅವರ ಮೇಲಿದೆ. ಒಮ್ಮೆ ರಿಯಾಲಿಟಿ ಷೋ (Reality Show) ಒಂದಕ್ಕೆ ತಮ್ಮ ತಮ್ಮನನ್ನು ಕರೆದುಕೊಂಡು ಬಂದಿದ್ದ ಪಾರು ಅವರು, ತನ್ನ ತಮ್ಮನನ್ನು ನಾನೇ ತಂದೆ ಹಾಗೂ ತಾಯಿಯ ಹಾಗೆ ನೋಡಿಕೊಳ್ಳುತ್ತಿದ್ದೇನೆ. ಅವನಿಗೂ ನಾನೆಂದರೆ ತುಂಬಾ ಇಷ್ಟ ಎಂದು ಭಾವುಕರಾಗಿದ್ದರು. ಆಗಾಗ್ಗೆ ತಮ್ಮನ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
ಆಧಾರ್ ಕಾರ್ಡ್ ಕಾಂಟ್ರವರ್ಸಿಗೆ ಸಿಲುಕಿದ ಕಂಗನಾ ರಣಾವತ್! ಸಂಸದೆಯಾದ್ರೂ ಹಿಂಬಾಲಿಸ್ತಿದೆ ವಿವಾದ
ಮೋಕ್ಷಿತಾ ತಮ್ಮನಿಗೆ ಈಗ 20 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ನಟಿ ಅವನಿಗೆ ಉಪನಯನ ಮಾಡಿದ್ದಾರೆ. ಸಾಮಾನ್ಯವಾಗಿ 8 ರಿಂದ 14 ವರ್ಷದೊಳಗಿನ ಗಂಡು ಮಕ್ಕಳಿಗೆ ಉಪನಯನ ಮಾಡಲಾಗುವುದು. ಆದರೆ ಮೋಕ್ಷಿತಾ ತಮ್ಮನ ವಯಸ್ಸು 20 ವರ್ಷ. ಆದರೂ 8 ತಿಂಗಳ ಮಗುವಿನ ಮನಸ್ಥಿತಿ ಅವನದ್ದು ಎಂದು ಈಗ ಉಪನಯನ ಮಾಡಿದ್ದಾರೆ. ಹೂವುಗಳಿಂದ ಸಿಂಗರಿಸಿ, ಕುಟುಂಬದ ಜತೆ ಸೇರಿ ನವಗ್ರಹ ಹೋಮವನ್ನು ಹಾಕಿಸಿದ್ದಾರೆ. ಸರಳವಾಗಿ ವಿಕಲಚೇತನ ಸಹೋದರನ ಉಪನಯನ ಮತ್ತು ನವಗ್ರಹ ಹೋಮ ಪೂಜೆ ನೆರವೇರಿಸಿದ್ದಾರೆ ಮೋಕ್ಷಿತಾ ಪೈ. ಇದರ ವಿಡಿಯೋ ಶೇರ್ ಮಾಡಿದ್ದಾರೆ.
ಅಂದಹಾಗೆ, ಕೆಲ ದಿನಗಳ ಹಿಂದೆ ನಟಿ, ದಿನಪೂರ್ತಿ ತಾವು ಹೇಗೆ ಕಳೆಯುವುದು ಎಂದು ಹೇಳಿದ್ದರು. ಅದರಲ್ಲಿ, ಬಹುತೇಕ ಪಾಲು ತಮ್ಮ ತಮ್ಮನಿಗೇ ಮೀಸಲು. ಆತನ ಪ್ರತಿಯೊಂದು ಆಗುಹೋಗುಗಳನ್ನು ಮೋಕ್ಷಿತಾ ಅವರೇ ನೋಡಿಕೊಳ್ಳುತ್ತಾರೆ. ಓರ್ವ ನಟಿಗೆ ಇದು ಸುಲಭದ ಮಾತಲ್ಲ. ದಿನಪೂರ್ತಿ ಶೂಟಿಂಗ್ ಇರುವ ಸಮಯದಲ್ಲಿ ಇಂಥ ಮಕ್ಕಳಿಗೆ ಗಮನ ಕೊಡುವುದು ಬಹಳ ಕಷ್ಟ ಆದರೂ ಅದನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ ಮೋಕ್ಷಿತಾ. ಇದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ಸಹೋದರನಿಗಾಗಿಯೇ ತಮ್ಮ ಕನಸನ್ನೂ ನನಸು ಮಾಡಿಕೊಳ್ಳಲು ಆಗದೇ ನೋವುಂಡವರು ಮೋಕ್ಷಿತಾ. ನಟನಾ ಕ್ಷೇತ್ರಕ್ಕೆ ತಾವು ಕಾಲಿಡುತ್ತೇವೆ ಎಂಬ ಕನಸು ಕಂಡಿರಲಿಲ್ಲ. ಆದರೆ ಅವರ ಇಂಟರೆರಸ್ಟ್ ಇದ್ದುದು ಫ್ಯಾಷನ್ ಡಿಸೈನಿಂಗ್ ಮೇಲೆ. ಆದರೆ ತಮ್ಮನಿಗಾಗಿ ಈ ಕೋರ್ಸ್ ಮಾಡಲು ಆಗಿರಲಿಲ್ಲ ಎಂದು ಹೇಳಿದ್ದರು.
ಅಂಬಾನಿ ಪುತ್ರನ ಮದ್ವೆಯಲ್ಲಿ ಬಯಲಾಗೋಯ್ತು ಅಮಿತಾಭ್ ಫ್ಯಾಮಿಲಿ ಬಿಗ್ ಸೀಕ್ರೆಟ್: ಫ್ಯಾನ್ಸ್ ಶಾಕ್!