ಗಂಡನ ಅನೈತಿಕ ಸಂಬಂಧದ ಬಗ್ಗೆ ತಿಳಿದು ವಿಚ್ಛೇದನ ಪಡೆದ ಬಿಗ್ ಬಾಸ್ ಸ್ಪರ್ಧಿ; ಮುಂದೆ ಮಗನ ಗತಿ ಏನು?

Published : Feb 28, 2025, 10:43 AM ISTUpdated : Feb 28, 2025, 11:33 AM IST
ಗಂಡನ ಅನೈತಿಕ ಸಂಬಂಧದ ಬಗ್ಗೆ ತಿಳಿದು ವಿಚ್ಛೇದನ ಪಡೆದ ಬಿಗ್ ಬಾಸ್ ಸ್ಪರ್ಧಿ; ಮುಂದೆ ಮಗನ ಗತಿ ಏನು?

ಸಾರಾಂಶ

ನಟಿ ಸಂಯುಕ್ತಾ ಷಣ್ಮುಗನ್, 2007ರ ಮಿಸ್ ಚೆನ್ನೈ ವಿಜೇತೆ, ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ದುಬೈ ಉದ್ಯಮಿ ಕಾರ್ತಿಕ್ ಶಂಕರ್ ಜೊತೆ ವಿವಾಹವಾದರು. ಲಾಕ್‌ಡೌನ್ ಸಮಯದಲ್ಲಿ ಪತಿಯ ಅನೈತಿಕ ಸಂಬಂಧ ಬಯಲಾದ ಕಾರಣ ವಿಚ್ಛೇದನಕ್ಕೆ ಮುಂದಾದರು. ಇತ್ತೀಚೆಗೆ ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ಕಷ್ಟದ ಸಮಯದಲ್ಲಿ ಸ್ಪೋರ್ಟ್ಸ್ ಪ್ರೆಸೆಂಟರ್ ಭಾವನಾ ಬಾಲಕೃಷ್ಣ ಸಹಾಯ ಮಾಡಿದ್ದನ್ನು ಸಂಯುಕ್ತಾ ನೆನಪಿಸಿಕೊಂಡಿದ್ದಾರೆ.

2007ರ ಮಿಸ್ ಚೆನ್ನೈ ಕರೀಟ ಮುಡಿಗೇರಿಸಿಕೊಂಡ ಸಂಯುಕ್ತಾ ಷಣ್ಮುಗನ್ ತುಘ್ಲಕ್‌ ದರ್ಬಾರ್, ವಾರಿಸು ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 2020ರಲ್ಲಿ ತಮಿಳು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು. ವೃತ್ತಿ ಜೀವನ ಪೀಕ್‌ನಲ್ಲಿ ಇದ್ದಾಗ ಪೋಷಕರು ಮದುವೆ ಮಾಡಿಕೊಳ್ಳಲು ಒತ್ತಾಯಿಸುತ್ತಾರೆ. ಹೀಗಾಗಿ ಸಿನಿಮಾದಿಂದ ದೂರ ಬಂದು ದುಬೈ ಉದ್ಯಮಿ ಕಾರ್ತಿಕ್ ಶಂಕರ್ ಎಂಬುವವರ ಜೊತೆ ಅದ್ಧೂರಿಯಾಗಿ ಮದುವೆಯಾಗುತ್ತಾರೆ. ಮದುವೆ ಜೀವನ ಸಖತ್ ಎಂಜಾಯ್ ಮಾಡುತ್ತಿದ್ದ ಸಂಯುಕ್ತಾರನ್ನು ನೋಡಿ ಅದೆಷ್ಟೋ ಮಂದಿ ಖುಷಿ ಪಟ್ಟಿದ್ದರು. ಈ ಜೋಡಿಗೆ ಒಬ್ಬ ಮಗನಿದ್ದಾನೆ ಕೂಡ. ಆದರೆ ಈಗ ಡಿವೋರ್ಸ್ ಪಡೆಯಲು ಕಾರಣ ಏನು?

ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಪತಿ ನಾಲ್ಕು ವರ್ಷದಿಂದ ನಡೆಸುತ್ತಿದ್ದ ಅನೈತಿಕ ಸಂಬಂಧ ಬೆಳಕಿಗೆ ಬರುತ್ತದೆ. ಇಲ್ಲಿ ಮನೆ ಮಠ ಮಗ ಜೀವನ ಅಂತ ಬ್ಯುಸಿಯಾಗಿರುವ ನಟಿಗೆ ಮೋಸ ಮಾಡಲು ಮನಸ್ಸು ಹೇಗೆ ಬಂತು? ಹೀಗಾಗಿ ಫೋಷಕರ ಜೊತೆ ಮಾತುಕತೆ ನಡೆಸಿ ಸಂಯುಕ್ತಾ ಡಿವೋರ್ಸ್‌ಗೆ ಮುಂದಾಗುತ್ತಾರೆ. ಕೆಲವು ದಿನಗಳ ಹಿಂದೆ ಡಿವೋರ್ಸ್ ಪೇಪರ್‌ ಕೆಲಸಗಳು ಸಂಪೂರ್ಣವಾಗಿ ಮುಗಿದಿದೆ ಎಂದು ತಿಳಿಸಿದ್ದಾರೆ. 'ಡಿವೋರ್ಸ್ ಆದ್ಮೇಲೆ ಬಂದಿರುವ ಕಳೆ ಇದು. 2025ರಲ್ಲಿ ನನ್ನ ಡಿವೋರ್ಸ್ ಪೇಪರ್ ಕೆಲಸಗಳು ಸಂಪೂರ್ಣವಾಗಿ ಮುಗಿದಿದೆ. ಹಿಂದಿಗಿಂತ ತುಂಬಾ ಸ್ಟ್ರಾಂಗ್' ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಯಾಕೆ ಶುಭಾ ಪೂಂಜಾ ಇಷ್ಟೊಂದು ಸಣ್ಣ ಆಗಿದ್ಯಾ...ನೀನು ದಪ್ಪನೇ ಇರು; ಫ್ಯಾನ್‌ ಕಾಮೆಂಟ್ ವೈರಲ್

ಕಳೆದ ವರ್ಷ ಸಂದರ್ಶನವೊಂದರಲ್ಲಿ ಗಂಡನ ಅನೈತಿಕ ಸಂಬಂಧದ ಬಗ್ಗೆ ಸತ್ಯ ಬಿಚ್ಚಿಟ್ಟರು. 'ಕೊರೋನಾ ಲಾಕ್‌ಡೌಟ್‌ ಮಸಯಲ್ಲಿ ನನ್ನ ಗಂಡ ನಾಲ್ಕು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಅನೈತಿಕ ಸಂಬಂಧದ ಬಗ್ಗೆ ತಿಳಿದು ಬಂತು. ಆ ಸಮಯದಲ್ಲಿ ತುಂಬಾ ಕಷ್ಟ ಆಯ್ತು ಕಾರಣ ನಾನು ಪ್ರಯಾಣ ಮಾಡುವಂತೆ ಇರಲಿಲ್ಲ. ಸ್ಪೋರ್ಟ್ಸ್‌ ಪ್ರೆಸೆಂಟರ್ ಭಾವನಾ ಬಾಲಕೃಷ್ಣ ಮತ್ತು ನಮ್ಮ ಅತ್ತೆ ಮಾವ ಒಂದೇ ಅಪಾರ್ಟ್ಮೆಂಟ್ ಬೇರೆ ಬೇರೆ ಮನೆ. ಆಗ ನಾವಿಬ್ಬರು ಹಾಯ್ ಬೈ ಹೇಳಿಕೊಂಡು ಓಡಾಡುತ್ತಿದ್ವಿ. ಹೀಗೆ ಮಾತನಾಡುವಾಗ ನನ್ನ ಗಂಡ ಮತ್ತು ಮನೆ ಬಗ್ಗೆ ವಿಚಾರಿಸಿದ್ದರು. ಸಾಮಾನ್ಯವಾಗಿ ಎಲ್ಲವೂ ಚೆನ್ನಾಗಿದೆ ಎಂದು ಹೇಳುತ್ತೀವಿ ಆದರೆ ಭಾವನಾ ಮುಂದೆ ನಾನು ಕಣ್ಣೀರಿಟ್ಟೆ. ನಾವಿಬ್ಬರೂ ಕ್ಲೋಸ್ ಆಗದೇ ಇದ್ದರೂ ಕೂಡ ಆ ಸಮಯದಲ್ಲಿ ನನ್ನ ಪರ ನಿಂತುಕೊಂಡು ಧೈರ್ಯ ನೀಡಿದ್ದರು. ನನ್ನ 8ನೇ ವಿವಾಹ ವಾರ್ಷಿಕೋತ್ಸವದ ದಿನ ನನಗೆ ಹಾರ್ಟ್ ಬ್ರೇಕ್ ಆಯ್ತು. ಆ ಸಮಯದಲ್ಲಿ ನನಗೆ ಕೆಲಸ ಇರಲಿಲ್ಲ ಆಗ ಭಾವನಾ ಸಹಾಯ ಮಾಡಿದ್ದು. ನನ್ನ ಹೆಸರನ್ನು ಬಿಗ್ ಬಾಸ್ ತಂಡಕ್ಕೆ ನೀಡಿ ನನಗೆ ಅವಕಾಶ ಸಿಗುವಂತೆ ಮಾಡಿದ್ದರು. ಇಂದು ನಾನು ಸಂಯುಕ್ತಾ ಆಗಿ ಫೇಮಸ್ ಆಗಿದ್ದರೆ ಅದು ಭಾವನಾ ಕೊಟ್ಟ ಸಪೋರ್ಟ್‌ನಿಂತ' ಎಂದು ಸಂಯುಕ್ತಾ ಹೇಳಿದ್ದರು. 

ತಾಯಿಯನ್ನೆ ಮೀರಿಸುವ ಬುದ್ಧಿವಂತಿಕೆ; ಮೌನವಾಗಿ ಕುಳಿತುಬಿಟ್ಟ ನಟಿ ಶ್ರುತಿ ಪುತ್ರಿಯ ಕಾಲೆಳೆದ ನೆಟ್ಟಿಗರು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸೈನಿಕ ಕಲ್ಯಾಣ್ ಪಡಾಲ ಬಿಗ್ ಬಾಸ್ ತೆಲುಗು 9ರ ವಿನ್ನರ್.. ಇತಿಹಾಸದಲ್ಲಿ 2ನೇ ಬಾರಿ ಸಂಚಲನ!
Bigg Boss: ನೀನು ಸುಂದ್ರಿನಾ? ಗಿಲ್ಲಿ ಪ್ರಶ್ನೆಗೆ ಚೈತ್ರಾ ಕುಂದಾಪುರ ತತ್ತರ: ಗಂಡನ ವಿಷ್ಯ ಹೇಳಿ ತಗ್ಲಾಕ್ಕೊಂಡೇ ಬಿಟ್ರಲ್ಲಾ!