ಪಕ್ಕದಲ್ಲಿ ಪತ್ನಿ, ಎದುರಿಗೆ ಪ್ರೇಯಸಿ... ಇಂಥ ಲವ್​ ಸಹವಾಸ ಯಾವ ಶತ್ರುಗೂ ಬೇಡಪ್ಪೋ ಅಂತಿದ್ದಾರೆ ನೆಟ್ಟಿಗರು!

By Suvarna News  |  First Published Mar 20, 2024, 1:50 PM IST

ತಾಂಡವ್​ ಮತ್ತು ಭಾಗ್ಯಳ ಮದುವೆ ವಾರ್ಷಿಕೋತ್ಸವ ಭರ್ಜರಿಯಾಗಿ ನಡೆಯುತ್ತಿದೆ. ಅಲ್ಲಿಯೇ ಇರುವ ಶ್ರೇಷ್ಠಾಳ ಸ್ಥಿತಿ ಮಾತ್ರ ಯಾರಿಗೂ ಬೇಡ. ನೆಟ್ಟಿಗರು ಏನೆಂದ್ರು ನೋಡಿ...
 


ಪಕ್ಕದಲ್ಲಿ ಪತ್ನಿ... ಎದುರಿಗೆ ಪ್ರೇಯಸಿ... ಲವರ್​ ಎದುರೇ, ಪತ್ನಿಗೆ ಚಿನ್ನದ ಸರ ಗಿಫ್ಟ್​ ಕೊಡಬೇಕು, ಪತ್ನಿ ಕೈಯಿಂದ ತುಪ್ಪ ಬಡಿಸಿಕೊಳ್ಳಬೇಕು... ದೊಡ್ಡವರು ಹೇಳಿದ್ದನ್ನೆಲ್ಲಾ ಮಾಡಬೇಕು... ಹೇಗಿರಬೇಡ ಆ ಪುಣ್ಯಾತ್ಮನ ಪರಿಸ್ಥಿತಿ! ಇದು ಸದ್ಯ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್​ ಕಥೆ. ಇತ್ತ ಭಾಗ್ಯಳಿಗೆ ತಾಂಡವ್​ ಉಡುಗೊರೆ ಕೊಟ್ಟು, ಆಕೆಯ ಕೈಯಿಂದ ತುಪ್ಪದ ಅಡುಗೆ ಬಡಿಸಿ ಊಟ ಮಾಡುತ್ತಿರುವುದನ್ನು ಕಣ್ಣೆದುರೇ ನೋಡುತ್ತಿರೋ ಶ್ರೇಷ್ಠಾಳಿಗೆ ನಖಶಿಖಾಂತ ಉರಿ ಹೊತ್ತಿದೆ. ಇನ್ನು ತನಗೆ ಶ್ರೇಷ್ಠಾಳಿಂದ ಏನು ಕಾದಿದೆಯೋ ಎನ್ನುವ ಆತಂಕದಲ್ಲಿ ತಾಂಡವ್​ ಇದ್ದಾನೆ. ಪಕ್ಕದಲ್ಲೇ ಇರುವ ಅಮ್ಮನ ಮಾತನ್ನು ಕೇಳದೇ ವಿಧಿಯಿಲ್ಲ. ಮಕ್ಕಳು ಮತ್ತು ಭಾಗ್ಯಳ ತಂಗಿಯೂ ತಾಂಡವ್​ನನ್ನು ಬಿಡುತ್ತಿಲ್ಲ. ವಾರ್ಷಿಕೋತ್ಸವದ ಸಂಭ್ರಮವನ್ನು ಅದ್ಧೂರಿಯಾಗಿಯೇ ಮಾಡುತ್ತಿದ್ದಾರೆ. ಇದಾಗಲೇ ಶ್ರೇಷ್ಠಾಳ ಮೇಲೆ ಎಲ್ಲರಿಗೂ ಡೌಟ್​ ಬಂದಿರೋ ಕಾರಣ, ಬೇಕು ಬೇಕಂತಲೇ ಅವಳ ಎದುರಿಗೇ ಎಲ್ಲಾ ಶಾಸ್ತ್ರಗಳನ್ನೂ ಪೂರೈಸುತ್ತಿದ್ದಾಳೆ ಕುಸುಮಾ!

ಹೌದು. ತಾಂಡವ್​-ಭಾಗ್ಯಳ ಮದ್ವೆ ವಾರ್ಷಿಕೋತ್ಸವ ಭರ್ಜರಿಯಾಗಿ ನಡೆಯುತ್ತಿದೆ. 16ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಇಬ್ಬರನ್ನೂ ಒಟ್ಟಿಗೇ ಕುಳ್ಳರಿಸಿ ಮರುಮದ್ವೆ ಮಾಡಿಸುತ್ತಿದ್ದಾಳೆ ಕುಸುಮಾ. ತಾಂಡವ್​ ಮತ್ತು ಭಾಗ್ಯ ಮದುಮಕ್ಕಳಾಗಿ ಮಿಂಚುತ್ತಿದ್ದಾರೆ. ಭಾಗ್ಯ ಅಂತೂ ಅತಿ ಸುಂದರವಾಗಿ ಕಾಣಿಸುತ್ತಿದ್ದಾಳೆ. ಪತ್ನಿಯ ಸೌಂದರ್ಯ ನೋಡಿ ತಾಂಡವ್​ ಅರೆಕ್ಷಣ ವಿಚಲಿತನಾಗಿದ್ದ. ಅದಕ್ಕೆ ಇಂಬುಕೊಡಲು ಎಂಬಂತೆ, ಮದುವೆಯ ದಿನವೂ ನೀನು ಇಷ್ಟು ಸುಂದರವಾಗಿ ಕಾಣಿಸುತ್ತಿರಲಿಲ್ಲ ಎಂದು ಅತ್ತೆ ಕುಸುಮಾನೂ ಹೊಗಳಿದ್ದಳು.  ಎಲ್ಲರೂ ಭಾಗ್ಯಳನ್ನು ಹೊಗಳುವುದನ್ನು ಕೇಳಿ ತಾಂಡವ್​ಗೆ ಇನ್ನಿಲ್ಲದ ಉರಿ. ಆದರೆ ಮನೆಯವರ ಎದುರು ನಗುಮುಖ ಮಾಡದೇ ವಿಧಿಯಿಲ್ಲ.

Tap to resize

Latest Videos

ಪ್ರೇಯಸಿಯೆಂಬ ಬಿಸಿ ತುಪ್ಪ! ಮದ್ವೆಯಾದೋನ ಇಂಥ ಪಾಡು ಯಾರಿಗೂ ಬೇಡ ಅಂತಿದ್ದಾರೆ ನೆಟ್ಟಿಗರು!
 
 ಡಿವೋರ್ಸ್​ ಕೊಟ್ಟು ನೆಮ್ಮದಿಯಾಗಿ ಬದುಕೋಣ ಎಂದುಕೊಂಡರೆ ಇವಳ ಮೂತಿನೇ ಮತ್ತೆ ಮತ್ತೆ ನೋಡಬೇಕಲ್ಲ, ಇವಳ ಜೊತೆ ಮತ್ತೆ ಮದ್ವೆ ಎಂದು ಮನಸ್ಸಿನಲ್ಲಿಯೇ ಗೊಣಗುತ್ತಿರುವ ತಾಂಡವ್​ಗೆ ಮಗನ ಮಾತಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಅದೂ ಸಾಲದು ಎಂಬುದಕ್ಕೆ ವಾರ್ಷಿಕೋತ್ಸವದ ಶಾಸ್ತ್ರವೂ ಭರ್ಜರಿಯಾಗಿ ನಡೆಯುತ್ತಿದೆ. ಮನೆಗೆ ಶ್ರೇಷ್ಠಾ ಬಂದಿದ್ದರಿಂದ ಅವಳ ಎದುರೇ ಕುಸುಮಾ ಭರ್ಜರಿ ಶಾಸ್ತ್ರ ಮಾಡುತ್ತಿದ್ದಾಳೆ. ಇದನ್ನು ನೋಡಿದ ಶ್ರೇಷ್ಠಾಳಿಗೆ ಏನು ಮಾಡಬೇಕೋ ತಿಳಿಯುತ್ತಿಲ್ಲ. ಎದುರಿಗೆ ತುಪ್ಪದ ಅಡುಗೆ ಇದ್ದರೂ ಅವಳ ಪಾಲಿಗೆ ಇದು ಬಿಸಿ ತುಪ್ಪವೇ. ತಿನ್ನುವ ಹಾಗಿಲ್ಲ, ಉಗುಳುವ ಹಾಗಿಲ್ಲ.

ಇದರ ಪ್ರೊಮೋ ಅನ್ನು ಕಲರ್ಸ್​ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಇದನ್ನು ನೋಡಿ ನೆಟ್ಟಿಗರು ಥಹರೇವಾರಿ ಕಮೆಂಟ್ಸ್​ ಹಾಕುತ್ತಿದ್ದಾರೆ. ತಾಂಡವ್​ ಸ್ಥಿತಿ ಯಾವ ಶತ್ರುಗೂ ಬೇಡಪ್ಪಾ ಅಂತಿದ್ದಾರೆ ಭಾಗ್ಯಲಕ್ಷ್ಮಿ ಅಭಿಮಾನಿಗಳು. ಇದನ್ನು ನೋಡಿದ ಮೇಲೆ ಮದ್ವೆಯಾದವರು ಖಂಡಿತಾ ಇನ್ನೊಬ್ಬಳ ಸಹವಾಸಕ್ಕೆ ಹೋಗುವುದಿಲ್ಲ. ಕಷ್ಟನೋ, ಸುಖನೋ ಪತ್ನಿಯ ಜೊತೆಯಲ್ಲಿಯೇ ಇರುತ್ತಾರೆ ಎಂದಿದ್ದರೆ, ಹೀಗೆ ಆಗಬೇಕಾದರೆ ಕುಸುಮಾ ಅಂತ ಅತ್ತೆ ಇರ್ಬೇಕು ಎಂದು ಆಕೆಯನ್ನು ಹಲವರು ಹೊಗಳುತ್ತಿದ್ದಾರೆ. ಒಟ್ಟಿನಲ್ಲಿ ಭಾಗ್ಯಲಕ್ಷ್ಮಿ ಸೀರಿಯಲ್​ ಕುತೂಹಲದ ಘಟ್ಟ ತಲುಪಿದೆ. 

ಮಾನ್ಯಳ ಉಸಿರು ಶಕುಂತಲಾ ಕೈಯಲ್ಲೋ, ಭೂಮಿಕಾ ಪೂಜೆಯಲ್ಲೊ? ಕುತೂಹಲ ಘಟ್ಟದಲ್ಲಿ ಅಮೃತಧಾರೆ
 

click me!