ಲವ್​ನಲ್ಲಿ ಬಿದ್ದಿರೋ ಸೀತಾಗೆ ಹಿಂದಿನ ಕಥೆಯ ಟೆನ್ಷನ್​ ಶುರು: ಅವಳ ಜೀವನದಲ್ಲಿ ಆಗಿದ್ದೇನು- ರಾಮ್​ ಒಪ್ತಾನಾ?

By Suvarna News  |  First Published Mar 20, 2024, 12:19 PM IST

 ತನ್ನ ಹಿಂದಿನ ಕಥೆ ನೆನಪಿಸಿಕೊಂಡು ಸೀತಾ ಗಾಬರಿಯಾಗಿದ್ದಾಳೆ. ಇದನ್ನು ರಾಮ್​ಗೆ ಹೇಳಿದರೆ ಆತ ತನ್ನನ್ನು ಮದ್ವೆಯಾಗುತ್ತಾನೋ ಇಲ್ಲವೋ ಎನ್ನುವ ಸಂದೇಹವೂ ಶುರುವಾಗಿದೆ. ಅಷ್ಟಕ್ಕೂ ಸೀತಾಳ ಹಿಂದಿನ ಕಥೆಯೇನು?
 


ಸೀತಾ-ರಾಮರ ಲವ್​ ಸ್ಟೋರಿ ಏನೋ ಶುರುವಾಗಿಬಿಟ್ಟಿದೆ. ತನ್ನ ಹಿಂದಿನ ಕಥೆ ನಿಮಗೆ ಗೊತ್ತಿಲ್ಲ ಎಂದು ಅದನ್ನು ಹೇಳಲು ಹೋದಾಗ ರಾಮ್​ ತಡೆದಿದ್ದಾನೆ. ನನ್ನ ಹಿಂದಿನ ಕಥೆಯೂ ಚೆನ್ನಾಗಿಲ್ಲ, ಅದೆಲ್ಲಾ ನನಗೆ ಬೇಡ... ನೀವು ಬೇಕು, ನಿಮ್ಮ ಪ್ರೀತಿ ಬೇಕು ಎಂದು ಹೇಳುವ ಮೂಲಕ ಸೀತಾಳಿಗೆ ತನ್ನ ಹಿಂದಿನ ಕಥೆಯನ್ನು ಹೇಳಲು ರಾಮ್​ ಕೊಟ್ಟಿಲ್ಲ. ಆಗ ಸೀತಾ ಸುಮ್ಮನಾಗಿದ್ದಳು. ರಾಮ್​ನನ್ನು ಪ್ರೀತಿ ಮಾಡುವುದಾಗಿ ಒಪ್ಪಿಕೊಂಡಿದ್ದಳು. ಇದೀಗ ಇಬ್ಬರೂ ಲವ್​ನಲ್ಲಿ ಬಿದ್ದಿದ್ದಾರೆ. ರಾಮ್​ ಅಂತೂ ಸೀತಾಳ ಹೆಸರನ್ನು ತನ್ನ ಬೆಡ್​ರೂಮ್​ನಲ್ಲಿ ದೊಡ್ಡದಾಗಿ ಹಾಕಿಕೊಂಡಿದ್ದಾನೆ. ರಾತ್ರಿ ಇಬ್ಬರಿಗೂ ನಿದ್ದೆ ಬರುತ್ತಿಲ್ಲ. ಹೊಸದಾಗಿ ಲವ್​ ಸ್ಟೋರಿ ಶುರುವಾಗಿರುವ ಕಾರಣ, ಗುಸುಗುಸು ಪಿಸುಪಿಸು ಮಾತು ಶುರುವಾಗಿದೆ. ಇಬ್ಬರೂ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತಿದ್ದಾರೆ. ಆದರೆ...?

ಹೌದು. ಈ ಪ್ರೀತಿಯ ನಡುವೆಯೇ ಸೀತಾಗೆ ಹಿಂದಿನ ಕಥೆಯ ಬಗ್ಗೆ ಟೆನ್ಷನ್​ ಶುರುವಾಗಿದೆ. ನಾನು ಇದನ್ನು ಮುಚ್ಚಿಡಬಾರದು ಎಂದುಕೊಂಡಿದ್ದಾಳೆ. ಸಂಪೂರ್ಣ ಕಥೆ ಕೇಳಿದ ಮೇಲೆ ರಾಮ್​ ನನ್ನನ್ನು ಒಪ್ಪಿಕೊಳ್ತಾನಾ ಎನ್ನುವುದೂ ಆಕೆಗೆ ಸಂದೇಹ ಶುರುವಾಗಿದೆ. ಅಷ್ಟಕ್ಕೂ ಸೀತಾಳ ಹಿಂದಿನ ಕಥೆಯೇನು? ಅವಳದ್ದು ನಿಜವಾಗಿಯೂ ಮದ್ವೆಯಾಗಿದ್ಯಾ? ಗಂಡ ಬಿಟ್ಟಿದ್ದಾಳಾ ಅಥ್ವಾ ಗಂಡನೇ ಇಲ್ವಾ? ಸಿಹಿ ಸೀತಾಳ ಸ್ವಂತ ಮಗಳು ಹೌದಾ? ಎಷ್ಟೊಂದು ಪ್ರಶ್ನೆಗಳು ವೀಕ್ಷರನ್ನು ಕಾಡುತ್ತಿವೆ. ಇದರ ಮಧ್ಯೆಯೇ, ಕೆಲ ಎಪಿಸೋಡ್​ ಹಿಂದೆ ಬೈಕ್​ನಲ್ಲಿ ಬಂದಾತನೊಬ್ಬ ಸಿಹಿಯನ್ನು ಕಿಡ್ನಾಪ್​ ಮಾಡಿದ್ದ. ಸೀತಾಳ ಮೇಲೆ ದಾಳಿ ಮಾಡಲು ನೋಡಿದ್ದ. ರಾಮ್​ನನ್ನು ಇರಿದಿದ್ದ. ಹಾಗಿದ್ದರೆ ಅವನಿಗೂ ಸೀತಾಗೂ ಸಂಬಂಧ ಇದೆಯಾ ಎಂಬ ಪ್ರಶ್ನೆ ಸೀತಾರಾಮ ಸೀರಿಯಲ್​ ಫ್ಯಾನ್​ಗಳನ್ನು ಕಾಡುತ್ತಿದೆ.

Tap to resize

Latest Videos

ಡ್ರೆಸ್​ ಒಳಗೇ ಬ್ರಹ್ಮಾಂಡ ತೋರಿದ ಉರ್ಫಿ ಜಾವೇದ್! ವೈರಲ್​ ವಿಡಿಯೋಗೆ ಉಫ್​ ಎಂದ ಫ್ಯಾನ್ಸ್​...

ಅಂದಹಾಗೆ ಇಲ್ಲಿಯವರೆಗೆ ಸೀತಾ-ರಾಮ ಲವ್​ ಸ್ಟೋರಿ ಕುರಿತು ಹೇಳುವುದಾದರೆ,  ರಾಮ ಸೀತಾಳನ್ನು ಲವ್ ಮಾಡುತ್ತಿದ್ದರೂ, ಇದನ್ನು  ಮನೆಯಲ್ಲಿ ಇದನ್ನು ಹೇಳುವ ಧೈರ್ಯವಿರಲಿಲ್ಲ ರಾಮ್​ಗೆ. ಅದೇ ಇನ್ನೊಂದೆಡೆ, ಹಿಂದಿನ ಪ್ರೀತಿ ಪ್ರೇಮ ಎಲ್ಲವನ್ನೂ ಮರೆತು ನಾನು ಹೇಳುವ ಹುಡುಗಿಯ ಜೊತೆ ಮದ್ವೆಯಾಗು ಎಂದು ತಾತ ಹೇಳಿದ್ದರು. ಇದನ್ನು ಕೇಳಿ ರಾಮ್​ಗೆ ಆಕಾಶವೇ ಬಿದ್ದ ಅನುಭವವಾಗಿತ್ತು. ಹಿಂದಿನ ಪ್ರೇಯಸಿಯನ್ನು ಮರೆತು ಸೀತಾಳ ಜೊತೆ ಬದುಕು ಕಟ್ಟಿಕೊಳ್ಳಲು ಕಾಯುತ್ತಿದ್ದ ರಾಮ್​ಗೆ ತಾತನ ಮುಂದೆ ಏನು ಹೇಳಬೇಕೋ ತಿಳಿದಿರಲಿಲ್ಲ.  ಏಕೆಂದರೆ ಸೀತಾ ಇದುವರೆಗೆ ತನ್ನನ್ನು ಒಪ್ಪಿಕೊಂಡಿರುವ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಮನಸ್ಸಿನಲ್ಲಿಯೇ ರಾಮ್​ನನ್ನು ಪ್ರೀತಿಸುತ್ತಿದ್ದರೂ ಸೀತಾ, ಇದನ್ನು ರಾಮ್​ಗೆ ಹೇಳಿರಲಿಲ್ಲ. ಹೀಗಿರುವಾಗ ರಾಮ್​ ಬೆಟ್ಟದ ಮೇಲೆ ಹೋಗಿದ್ದ. ಇದು ಸೀತಾಳಿಗೆ ತಿಳಿದು ಆತ ಸಾಯಲು ಹೊರಟ ಎಂದುಕೊಂಡು ಓಡಿಹೋಗಿ ರಾಮ್​ನನ್ನು ತಬ್ಬಿಕೊಂಡಿದ್ದಳು. ರಾಮ್​ ಕೂಡ ಬಂದು ನೀವು ನನ್ನನ್ನು ಪ್ರೀತಿಸ್ತಿದ್ದೀರಾ ಎಂದು ಕೇಳಿದಾಗ ಕೊನೆಗೂ ಸೀತಾ ರಾಮ್​ನನ್ನು ತಬ್ಬಿಕೊಂಡು ಪ್ರೀತಿಯನ್ನು ಒಪ್ಪಿಕೊಂಡಿದ್ದಾಳೆ. 

ನಂತರ, ಅಶೋಕ್​ ಮತ್ತು ಪ್ರಿಯಾರಿಗಾಗಿ ರೆಡಿ ಮಾಡಿರುವ ಸ್ಥಳಕ್ಕೆ ರಾಮ್​ ಸೀತಾಳನ್ನು ಕರೆದುಕೊಂಡು ಬಂದಿದ್ದಾನೆ. ನಂತರ ಜೋರಾಗಿ ನಕ್ಕು, ನೀನ್ಯಾಕೆ ಅಷ್ಟೊಂದು ಹೆದರಿಕೊಂಡಿದ್ದಿ, ನಾನು ಸಾಯಲು ಹೊರಟೆ ಅಂದುಕೊಂಡಿದ್ಯಾ? ನಾನು ಹಾಗೆಲ್ಲಾ ಮಾಡಿಕೊಳ್ತೀನಾ ಎಂದು ಜೋರಾಗಿ ನಕ್ಕಿದ್ದಾನೆ. ಇದನ್ನು ಕೇಳಿ ಹುಸಿಮುನಿಸು ತೋರಿರುವ ಸೀತಾ ಅವನಿಗೆ ಬೈದಿದ್ದಾಳೆ. ಕೊನೆಗೆ ಇಬ್ಬರ ನಡುವೆ ಮಾತುಕತೆಯಾಗಿದೆ. ಸೀತಾ ತನ್ನ ಪ್ರೀತಿಯನ್ನು ಮತ್ತೊಮ್ಮೆ ರಾಮ್​ಗೆ ಹೇಳಿದ್ದಾಳೆ. ಆದರೆ ಒಂದು ಮಗುವಿನ ತಾಯಿಯಾಗಿರುವ ತನ್ನನ್ನು ರಾಮ್​ನ ಮನೆಯವರು ಒಪ್ಪುತ್ತಾರೋ ಇಲ್ಲವೋ ಎನ್ನುವ ಅಳುಕು ಅವಳಿಗೂ ಇದೆ. ಇದೀಗ ತನ್ನ ಹಿಂದಿನ ಕಥೆ ಕೇಳಿದರೆ ರಾಮ್​ ಒಪ್ಪುತ್ತಾನೋ ಇಲ್ಲವೋ ಎನ್ನುವ ಸಂದೇಹ ಅವಳಿಗೆ ಶುರುವಾಗಿದೆ. 

ಎಷ್ಟೇ ಬೇಡಿಕೊಂಡ್ರೂ ಹಿಂಬದಿ ಮಾತ್ರ ತೋರಿಸಿ ಪಾಪರಾಜಿಗಳನ್ನು ಸುಸ್ತು ಮಾಡಿದ ಕಾಜೋಲ್​ ಪುತ್ರಿ!

click me!