ಒಂದೆಡೆ ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್ ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ನಡುವಿನ ವಿಚ್ಚೇದನ ಅರ್ಜಿ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇನ್ನೊಂದೆಡೆ, ವಿನಯ್ ರಾಜ್‌ಕುಮಾರ್ ಮದುವೆಯಾಗಿದ್ದಾರಾ ಎನ್ನುವ ಪ್ರಶ್ನೆಗಳು ಹುಟ್ಟುಕೊಂಡಿವೆ.
ಕನ್ನಡ ಚಿತ್ರರಂಗದ ದೊಡ್ಮನೆಯಲ್ಲಿ ಈಗ ಕಲಹದ ಸಮಯ. ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ನಡುವಿನ ವಿಚ್ಛೇದನ ವಿಚಾರ ಕೋರ್ಟ್ ಮೆಟ್ಟಿಲವರೆಗೆ ಬಂದಿದೆ. ಒಂದೆಡೆ ಯುವ ರಾಜ್‌ಕುಮಾರ್ ಸ್ಯಾಂಡಲ್‌ವುಡ್ ನಟಿಯ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಶ್ರೀದೇವಿ ಬೈರಪ್ಪ್ ಆರೋಪದ ನಡುವೆ, ಯುವ ಪರ ವಕೀಲ ಶ್ರೀದೇವಿ ಬೈರಪ್ಪ ವಿರುದ್ಧವೂ ಸ್ಪೋಟಕ ಆರೋಪಗಳನ್ನು ಮಾಡಿದ್ದಾರೆ. ಇದರ ನಡುವೆ ರಾಘವೇಂದ್ರ ರಾಜ್‌ಕುಮಾರ್ ಅವರ ಹಿರಿಯ ಮಗ ವಿನಯ್ ರಾಜ್‌ಕುಮಾರ್ ಮದುವೆಯಾಗಿದ್ದಾರಾ? ಎನ್ನುವ ಅನುಮಾಗಳು ಎದ್ದಿವೆ. ಅದಕ್ಕೆ ಕಾರಣ ನಟಿಯೊಬ್ಬರು ಹಂಚಿಕೊಂಡ ಫೋಟೋಸ್. ವಿನಯ್ ರಾಜ್‌ಕುಮಾರ್ ಇತ್ತೀಚಿಗೆ ಸಿನಿಮಾ ಮಂದಿಯಿಂದ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾದ ಒಂದು ಸರಳ ಪ್ರೇಮಕಥೆ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಕಂಟೆಂಟ್ ಬಹಳ ಜನರಿಗೆ ಇಷ್ಟವಾಗಿತ್ತು. ನಟರಾಗಿ ವಿನಯ್ ರಾಜ್‌ಕುಮಾರ್ ಅವರನ್ನು ಉತ್ತಮವಾಗಿ ತೋರಿಸಿದ ರೀತಿಗೆ ನಿರ್ದೇಶಕ ಸುನಿ ಕೂಡ ಮೆಚ್ಚುಗೆಗೆ ಪಡೆದಿದ್ದರು.
ಇತ್ತೀಚೆಗೆ ಈ ಸಿನಿಮಾದಲ್ಲಿ ನಡಿಸಿದ್ದ ನಟಿ ಸ್ವಾತಿಷ್ಟಾ ಕೃಷ್ಣನ್ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಒಂದು ಸರಳ ಪ್ರೇಮಕಥೆ ಸಿನಿಮಾದಲ್ಲಿ ವಿನಯ್ ರಾಜ್‌ಕುಮಾರ್ ಹಾಗೂ ಸ್ವಾತಿಷ್ಟಾ ಅವರ ಮದುವೆಯ ಸಂಭ್ರಮದ ಫೋಟೋಗಳು ಅದಾಗಿದ್ದವು. ಫ್ರಮ್ ದ ಆರ್ಚೀವ್ಸ್ ಎಂದು ಅವರು ಬರೆದುಕೊಂಡು ಈ ಫೋಟೋಗಳನ್ನು ಹಂಚಿಕೊಂಡಿದ್ದರು. ಇದರ ಬೆನ್ನಲ್ಲಿಯೇ ಸಾಕಷ್ಟು ಅಭಿಮಾನಿಗಳು ಇವರಿಗೆ ಮದುವೆ ಆಗಿದೆ ಎನ್ನುವಂತೆ ಮದುವೆಯ ಶುಭಾಷಯ ಕೋರಿದ್ದರು.
ಕೆಲ ಕನ್ನಡದ ಅಭಿಮಾನಿಗಳು, 'ನಿಮ್ಮ ಜೋಡಿ ಚೆನ್ನಾಗಿದೆ. ಇಬ್ಬರೂ ಮದುವೆಯಾಗಿ..' ಎಂದು ಬರೆದುಕೊಂಡಿದ್ದಾರೆ. ತುಂಬಾ ಕ್ಯೂಟ್ ಆಗಿದೆ ಜೋಡಿ. ದೊಡ್ಮನೆಗೆ ತಕ್ಕ ಸೊಸೆ ನೀವು ಒಳ್ಳೆಯದಾಗಲಿ ಎಂದು ಇನ್ನೊಬ್ಬರು ಬರೆದಿದ್ದಾರ. ಇನ್ನೂ ಕೆಲವರು ಇದು ಒಂದು ಸರಳ ಕಥೆ ಸಿನಿಮಾದ ಸೀನ್ ಎಂದೂ ನೆನಪಿಸಿದ್ದಾರೆ. ಮೇಡಮ್ ಏನ್ ಇದು ನಿಜವಾಗ್ಲೂ ನೀವು ಮದುವೆಯಾದ್ರಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
ಮೂಲತಃ ತಮಿಳು ಚಿತ್ರನಟಿಯಾಗಿರುವ ಸ್ವಾತಿಷ್ಟಾ ಕೃಷ್ಣನ್ ಅವರ ಈ ಫೋಟೋಗೆ ತಮಿಳು ಅಭಿಮಾನಿಗಳು ಹ್ಯಾಪಿ ಮ್ಯಾರೀಡ್ ಲೈಫ್ ಎಂದೇ ಬರೆದಿದ್ದಾರೆ. ಕೆಲವರು ನೀವು ಮದುವೆಯಾಗಿದ್ದು ನೋಡಿ ಬೇಸರವಾಗಿದೆ ಎಂದೂ ಕಾಮೆಂಟ್ ಮಾಡಿದ್ದಾರೆ.
ಕನ್ನಡಕ್ಕೆ ಬಂದ ಕನ್ನಡತಿ; ಚೆನ್ನೈನಲ್ಲಿದ್ದರೂ ಮನೆಯಲ್ಲಿ ಕನ್ನಡನೇ ಮಾತಾಡೋದು ಎಂದ ನಟಿ ಸ್ವಾತಿಷ್ಟಾ ಕೃಷ್ಣನ್
ರಾಘವೇಂದ್ರ ಎಚ್ ಎಸ್ ಎನ್ನುವವರು ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ. ತಮಿಳು ಸಿನಿಮಾದ ಅಭಿಮಾನಿಗಳು ಹಾಗೂ ಸ್ವಾತಿಷ್ಟಾ ಕೃಷ್ಣನ್ ಅಭಿಮಾನಿಗಳಿಗೆ ಸ್ಪಷ್ಟನೆ ಇಲ್ಲಿದೆ. ಇದು ಕನ್ನಡ ಸಿನಿಮಾ ಒಂದು ಸರಳ ಪ್ರೇಮ ಕಥೆಯ ಸ್ಟಿಲ್‌ಗಳು. ಇನ್ನು ಈ ಸಿನಿಮಾದ ಹೀರೋ ಆರ್ಡಿನರಿ ವ್ಯಕ್ತಿಯಲ್ಲ. ದಿಗ್ಗಜ ನಟ ಡಾ.ರಾಜ್‌ಕುಮಾರ್ ಅವರ ಮೊಮ್ಮಗ ವಿನಯ್ ರಾಜ್‌ಕುಮಾರ್. ಬ್ರ್ಯಾಂಡ್ ಇಮೇಜ್‌ಗೆ ಎಂದೂ ಒಗ್ಗಿಕೊಳ್ಳದ ನಟ ತನ್ನ ಸಿನಿಮಾಗಳಲ್ಲಿ ಉತ್ತಮ ಸ್ಕ್ರಿಪ್ಟ್‌ಗಳನ್ನು ಮಾತ್ರವೇ ಆಯ್ಕೆ ಮಾಡಿಕೊಳ್ತಾರೆ ಎಂದು ಬರೆದಿದ್ದಾರೆ.
ತಂದೆ ಹುಷಾರು ತಪ್ಪಿದಾಗ ಜವಾಬ್ದಾರಿ ಬಂತು, ಮನೆಗೆ ಹಣ ಎಲ್ಲಿಂದ ಬರುತ್ತೆ ಗೊತ್ತಾಗಿತ್ತು: ಯುವ ರಾಜ್‌ಕುಮಾರ್
ಇನ್ನು ಮದುವೆಯ ಶುಭಾಶಯಗಳು ಬರುತ್ತಿದ್ದ ಬೆನ್ನಲ್ಲಿಯೇ ನಟಿ ಸ್ವಾತಿಷ್ಟಾ ಕೃಷ್ಣನ್ ಕೂಡ ಸ್ಪಷ್ಟನೆ ನೀಡಿದ್ದಾರೆ. 'ಅಯ್ಯೋ.. ನಾನು ನನ್ನ ಪೋಸ್ಟ್‌ನಲ್ಲಿಯೇ ಬಹಳ ಕ್ಲಿಯರ್ ಆಗಿ ಬರೆದಿದ್ದೇನೆ. ಇದು ಬಿಹೈಂಡ್ ದ ಸೀನ್ಸಸ್ ಅಂತಾ.. ಪ್ಲೀಸ್' ಎಂದು ಕಾಮೆಂಟ್ ಮಾಡಿದ್ದಾರೆ.