ಸೀತಾರಾಮರ ಮದ್ವೆ ಮೊದಲು ಮುಗಿಯತ್ತೋ, ಅಂಬಾನಿ ಜೋಡಿಯದ್ದೊ? ಹೀಗೊಂದು ಚಾಲೆಂಜ್​!

By Suchethana D  |  First Published Jul 4, 2024, 4:20 PM IST

ಸೀತಾರಾಮರ ಮದ್ವೆ ಒಂದೆಡೆಯಾದರೆ ಅನಂತ್- ರಾಧಿಕಾ ಮದುವೆ ಇನ್ನೊಂದೆಡೆ. ಇಬ್ಬರಲ್ಲಿ ಯಾರ ಮದ್ವೆ ಬೇಗ ಮುಗಿಯುತ್ತೋ ಎಂದು ಸವಾಲು-ಜವಾಬು ಶುರುವಾಗಿದೆ!
 


 ಇಂದು ಸೀರಿಯಲ್​ಗಳು ಎಂದರೆ ಅವು ಕೇವಲ ಸೀರಿಯಲ್​ಗಳಾಗಿರಲ್ಲ. ಬದಲಿಗೆ ಅದು ನಿಜ ಜೀವನದ ಕಥೆಯಂತೆ ಇಂದು ಮನೆಮನಗಳನ್ನು ತುಂಬಿಕೊಂಡಿವೆ. ಅದರಲ್ಲಿರುವ ಪಾತ್ರಧಾರಿಗಳೆಲ್ಲರೂ ತಮ್ಮ ಮನೆಯದ್ದೋ ಇಲ್ಲವೇ ನೆರೆಮನೆಯ ಸದಸ್ಯರಂತೆ ಕಾಣುವ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ ಸೀರಿಯಲ್​ಗಳು ಕೂಡ ವೀಕ್ಷಕರನ್ನು ಸೆರೆ ಹಿಡಿಯಲು ದೊಡ್ಡ ತಂತ್ರವನ್ನೇ ರೂಪಿಸುತ್ತಾರೆ. ಹಾಗೆಯೇ ಸೀತಾ ಮತ್ತು ರಾಮ್​ ಮದುವೆ ಸಂಭ್ರಮ ಜೋರಾಗಿ ನಡೆದಿದೆ.  ಸೀರಿಯಲ್​ಗಳ ಮದುವೆ ಎಂದರೆ ಅದು ಒಂದೆರಡು ದಿನಗಳ ಮದ್ವೆಯಲ್ಲ. ಇದೀಗ ನಿಜ ಜೀವನದಲ್ಲಿಯೂ ಸೆಲೆಬ್ರಿಟಿ ಮದ್ವೆಗಳು ತಿಂಗಳುಗಳ ಕಾಲ ನಡೆಯುವುದು ಇದೆ. ಇನ್ನು ಧಾರಾವಾಹಿಗಳು ಎಂದ ಮೇಲೆ ಕೇಳಬೇಕೆ. ಒಂದು ಮದುವೆಯ ಸೀನ್​ ವರ್ಷಗಟ್ಟಲೆ ಹೋದರೂ ಅಚ್ಚರಿಯಿಲ್ಲ.  

ಇತ್ತ ಸೀತಾರಾಮ ಮದ್ವೆ ಸಂಭ್ರಮ ನಡೆಯುತ್ತಿರುವ ನಡುವೆಯೇ, ಅತ್ತ ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಮದ್ವೆ ಭರಾಟೆ ಜೋರಾಗಿದೆ. ಎರಡೂ ಮದುವೆಗಳು ಭರ್ಜರಿಯಾಗಿಯೇ ನಡೆಯುತ್ತಿವೆ. ಒಂದೇ ವ್ಯತ್ಯಾಸ ಎಂದರೆ ಒಂದು ರೀಲ್​ ಮದ್ವೆ, ಇನ್ನೊಂದು ರಿಯಲ್​ ಮದ್ವೆ. ಆದರೆ ಸೀತಾರಾಮ ರೀಲ್​ ಮದ್ವೆಗೂ ಭರ್ಜರಿ ಸೆಟ್​ ಹಾಕಲಾಗಿದ್ದು, ಭರ್ಜರಿ ಖರ್ಚನ್ನೂ ಮಾಡಲಾಗಿದೆ. ಈ ಎರಡೂ ಮದುವೆಗಳಲ್ಲಿ ಮದುವೆ ಶಾಸ್ತ್ರದಿಂದ ಹಿಡಿದು ಮದುವೆ ಅಂತಿಮವಾಗಿ ಮುಗಿಯುವವರೆಗೆ ಹಲವಾರು ಸಂಪ್ರದಾಯಗಳನ್ನು ತೋರಿಸಲಾಗುತ್ತಿದೆ. ಇದೇ ಕಾರಣಕ್ಕೆ ತಮಾಷೆಯ ಬೆಟ್ಟಿಂಗ್​ ಒಂದು ಸೋಷಿಯಲ್​ ಮೀಡಿಯಾದಲ್ಲಿ ಶುರುವಾಗಿದ್ದು, ರೀಲ್​ ಅಥವಾ ರಿಯಲ್​ ಯಾರ ಮದುವೆ ಮೊದಲು ಮುಗಿಯುತ್ತದೆ ಎಂದು ಪ್ರಶ್ನೆ ಮಾಡಲಾಗಿದೆ.

Tap to resize

Latest Videos

ನಿಮ್​ ಮಗಳಿಗೂ ಸಿಹಿ ಅಂತಾನೇ ಹೆಸರಿಡ್ತೀರಾ? ಇವಳನ್ನೇ ದತ್ತು ತಗೋತೀರಾ? ನಟಿ ವೈಷ್ಣವಿಗೆ ಥಹರೇವಾರಿ ಪ್ರಶ್ನೆ

ಕೆಲವರು ಹೇಳುವುದು ಕಷ್ಟ ಎಂದರೆ, ಇನ್ನು ಕೆಲವರು ರಿಯಲ್​ ಮದ್ವೆ ಮುಗಿದರೂ ರೀಲ್​ ಮದ್ವೆ ಮುಗಿಯುವ ಹಾಗೆ ಕಾಣಿಸ್ತಿಲ್ಲ ಎಂದರೆ ಸಹಸ್ರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿರುವ ಅಂಬಾನಿ ಮದ್ವೆಗಿಂತ ಮೊದ್ಲೇ ಸೀತಾರಾಮರ ಮದ್ವೆ ಮುಗಿಯಬಹುದು ಎನ್ನುತ್ತಿದ್ದಾರೆ. ಏನಾದರೂ ಮಾಡಿ, ಆಷಾಢ ಬರ್ತಿದೆ. ಮದ್ವೆ ಬೇಗ ಮುಗಿಸಿ ಎನ್ನುತ್ತಿದ್ದಾರೆ ಸೀರಿಯಲ್​ ಪ್ರೇಮಿಗಳು. ಇದೀಗ ಮದುವೆಯ ಅಂಗವಾಗಿ ಹಾಸ್ಯಭರಿತ ಕಾರ್ಯಕ್ರಮ ಶುರುವಾಗಿದೆ. ಒಬ್ಬರನ್ನೊಬ್ಬರು ಕಾಲೆಳೆದುಕೊಳ್ಳುತ್ತಿದ್ದಾರೆ. ಒಬ್ಬರ ಆ್ಯಕ್ಟಿಂಗ್​ ಒಬ್ಬರು ಮಾಡುತ್ತಿದ್ದಾರೆ. ತಾತಾ ಕೂಡ ಭರ್ಜರಿಯಾಗಿ ಇದರಲ್ಲಿ ಶಾಮೀಲಾಗಿದ್ದು, ಸೀತಾರಾಮದಲ್ಲಿ ಮದುವೆಯ ಕಳೆಗಟ್ಟಿದೆ.

ಇವರ ಮದುವೆ ಬೇಗ ಒಳ್ಳೆಯ ರೀತಿಯಲ್ಲಿ ಮುಗಿಯಲಿ ಎನ್ನುವುದು ಅಭಿಮಾನಿಗಳ ಹಾರೈಕೆ. ಇದಾಗಲೇ ರುದ್ರಪ್ರತಾಪನನ್ನು   ಮಟ್ಟ ಹಾಕಲಾಗಿದೆ. ಭಾರ್ಗವಿಯ ಕುತಂತ್ರ ಬಯಲಾಗುವ ಭಯದಲ್ಲಿ ಇರುವ ಕಾರಣ ಸದ್ಯ ಅವಳೂ ಬಾಲ ಮುದುಡಿಕೊಂಡು ಇರುತ್ತಾಳೆ ಎನ್ನುವುದು ಸತ್ಯವಾದರೂ ಸಿಹಿ, ಸೀತಾಳ ಹಿನ್ನೆಲೆ ಮದುವೆಗೆ ವಿಘ್ನ ತರುತ್ತದೆ ಎನ್ನುವುದು ಹಲವರ ಅಭಿಪ್ರಾಯವಾದರೆ, ಮದುವೆ ನಡೆಯುತ್ತದೆ, ಆದರೆ ಇದೇ ಹಿನ್ನೆಲೆಯಿಂದಾಗಿಯೇ ಅವರಿಬ್ಬರ ಮದುವೆ ಲೈಫ್​ ಹಾಳಾಗುತ್ತದೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ಸೀರಿಯಲ್​  ಕುತೂಹಲದಿಂದ ಕೂಡಿದೆ ಎನ್ನುವುದು ಸೀರಿಯಲ್​ ಪ್ರೇಮಿಗಳ ಅಭಿಮತ. 

ಸೀತಾ-ರಾಮರ ಮದ್ವೆಗೆ ಅಬ್ಬಾ ಹೇಗೆಲ್ಲಾ ಭರ್ಜರಿ ರೆಡಿ ಮಾಡಲಾಗಿದೆ ನೋಡಿ: ಶೂಟಿಂಗ್ ಸೆಟ್​ ವಿಡಿಯೋ ವೈರಲ್​

click me!