
ಕಾಫಿನಾಡು ಚಂದು....ಸಧ್ಯ ಸಾಮಾಜಿಕ ಜಾಲತಾಣಗಲ್ಲಿ ಫುಲ್ ಟ್ರೆಂಡ್ ಆಗ್ತಿದ್ದಾರೆ. ಯಾರದಾದ್ರೂ ಬರ್ತ್ ಡೇ ಇದ್ರೆ ಸಾಕು ಎಲ್ಲರ ಬಾಯಲ್ಲಿ ಕಾಫಿನಾಡು ಚಂದುದೇ ಹಾಡುಗಳು. ಅಷ್ಟರ ಮಟ್ಟಿಗೆ ಸೋಷಿಯಲ್ ಮೀಡಿಯಾ ಸೆನ್ಸೇಷನಲ್ ಸ್ಟಾರ್ ಆಗ್ಬಿಟ್ಟಿದ್ದಾರೆ. ಕಾಫಿ ನಾಡು ಚಂದು ಇದೀಗ ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಯೇ ಆಗಿಬಿಟ್ಟಿದ್ದಾರೆ. ಮಿಂಚಿನ ವೇಗದಲ್ಲಿ ಫೇಮಸ್ ಆಗಿದ್ದು, ಅವರ ಹಾಡು, ಕಾಮಿಡಿಗೆ ಜನ ಬಿದ್ದು-ಬಿದ್ದು ನಗುತ್ತಾರೆ.
ತಮ್ಮ ವಿಭಿನ್ನ ಶೈಲಿಯ ಹಾಡುಗಾರಿಕೆ ಎಲ್ಲೆಡೆ ಫೇಮಸ್ ಆಗಿರುವ ಕಾಫಿನಾಡು ಚಂದು, ಇದೀಗ ನಿರೂಪಕಿ ಅನುಶ್ರೀ ಮುಂದೆ ಮಹತ್ವದ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ನಾನು ಪುನೀತಣ್ಣ, ಶಿವಣ್ಣನ ಅಭಿಮಾನಿ ಎಂದು ಹಾಡು ಹಾಡುತ್ತಲೇ ಶಿವರಾಜ್ ಕುಮಾರ್ ಅವರನ್ನ ಭೇಟಿ ಮಾಡಿಸುವಂತೆ ಅನುಶ್ರೀಗೆ ಮನವಿ ಮಾಡಿದ್ದಾರೆ. ವಿಶೇಷ ಹಾಡಿನ ಮೂಲಕ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿಸುವಂತೆ ಕೇಳಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿದ ಕಾಫಿನಾಡು ಚಂದು ಯಾರು?, ಇವರ ಆಸೆ ಏನು?
ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಶಿವಣ್ಣ ಹಾಗೂ ಪುನೀತಣ್ಣ ಅವರ ಅಭಿಮಾನಿ ಎನ್ನತಲ್ಲೆ ಸೂಪರ್ ಸ್ಟಾರ್ ಆಗಿರುವ ಕಾಫಿ ನಾಡು ಚಂದು ಲಕ್ಷಗಟ್ಟಲೇ ಪಾಲೋವರ್ಸ್ ಹೊಂದಿದ್ದಾರೆ. ಅಲ್ಲದೇ ಕನ್ನಡದ ಹಲವು ಸೆಲೆಬ್ರಿಟಿಗಳನ್ನ ಹಿಂದಿಕ್ಕಿದ್ದಾರೆ.
ಕಳೆದ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ‘ನಾನು ಪುನೀತಣ್ಣ ಹಾಗೂ ಶಿವಣ್ಣನವರ ಅಭಿಮಾನಿ’ ಎನ್ನುವ ಚಂದು ಹಾಡುಗಳು ಸಖತ್ ಫೇಮಸ್ ಆಗುತ್ತಿದೆ. ಕೆಲ ವಿಡಿಯೋದಲ್ಲಿ ಅಣ್ಣ ನಿಮ್ಮನ್ನ ನೋಡ್ಬೇಕು ಅಣ್ಣ ಅಂತೆಲ್ಲಾ ಎಮೋಷನಲ್ ಆಗಿ ಹಾಡು ಹಾಡಿದ್ದಾರೆ ಚಂದು.
ಬೇರೆಯವರ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳ ಹಾಡು ಹಾಡುತ್ತ, ಕಾಮಿಡಿ, ಡೈಲಾಗ್, ಹಾಡು, ಸಮಾಜಮುಖಿ ಕೆಲಸ ಮಾಡುವ ಮೂಲಕ ಇವರು ಜನರಿಗೆ ಚಿರಪರಿಚಯಿತರಾಗಿದ್ದಾರೆ.
ಚಂದು, ಮೂಲತಃ ಚಿಕ್ಕಮಗಳೂರಿನ ಮೂಡಗೆರೆಯ, ಮಲ್ಲಂದೂರಿನ ಭಾಗಮನೆ ಆಸುಪಾಸಿನವರು. ಸಾಮಾಜಿಕ ಜಾಲತಾಣಗಳಲ್ಲಿ ಕಾಫಿ ನಾಡು ಚಂದು ಎಂದು ಈಗ ಸಖತ್ ಫೇಮಸ್ ಆಗಿದ್ದಾರೆ. ಕಾಫಿ ನಾಡು ಚಂದು ವೃತ್ತಿಯಲ್ಲಿ ಚಿಕ್ಕ ಆಟೋ ಡ್ರೈವರ್ ಆಗಿ ಕೆಲಸ ಮಾಡಿ, ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.