'ಪ್ರೇಮದ ಊರಲಿ' ನಂಟು.. ಲಲಿತಾ ಬೆಂಗಳೂರಿಗೆ, ಜೈ ಎಲ್ಲಿರೋದು? ಬದಲಾಗುತ್ತಾ ಬದುಕು, ಶುರು ಯಾವತ್ತು?

Published : Nov 24, 2026, 07:34 PM IST
Star Suvarna Jai Lalitha Serrial

ಸಾರಾಂಶ

ಕಿರುತೆರೆ ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೆ ಭಾವನಾತ್ಮಕ ಕಥೆಯನ್ನೂ ನೀಡುತ್ತಿರುವ ಸ್ಟಾರ್ ಸುವರ್ಣ ವಾಹಿನಿಯ 'ಜೈ ಲಲಿತಾ' ಧಾರಾವಾಹಿ ಇದೀಗ ಹೊಸ ತಿರುವಿನೊಂದಿಗೆ ವೀಕ್ಷಕರ ಮುಂದೆ ಬರಲು ಸಜ್ಜಾಗಿದೆ. ಕಳೆದ ಒಂದು ವರ್ಷದಿಂದ ಹಳ್ಳಿಯ ಪರಿಸರದಲ್ಲಿ ಸಾಗುತ್ತಿದ್ದ ಜೈ ಮತ್ತು ಲಲಿತಾ ಬದುಕು ಈಗ ಬದಲಾಗಲಿದೆ!

'ಜೈ ಲಲಿತಾ' ಧಾರಾವಾಹಿಯಲ್ಲಿ ಹೊಸ ಅಧ್ಯಾಯ ಶುರು; ಹಳ್ಳಿಯಿಂದ ಬೆಂಗಳೂರಿಗೆ ಬಂದ್ರಾ ಲಲಿತಾ!? ಜೈ ಎಲ್ಲಿ..?

ಕಿರುತೆರೆ ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೆ ಭಾವನಾತ್ಮಕ ಕಥೆಯನ್ನೂ ನೀಡುತ್ತಿರುವ ಸ್ಟಾರ್ ಸುವರ್ಣ ವಾಹಿನಿಯ 'ಜೈ ಲಲಿತಾ' ಧಾರಾವಾಹಿ (Jai Lalitha) ಇದೀಗ ಹೊಸ ತಿರುವಿನೊಂದಿಗೆ ವೀಕ್ಷಕರ ಮುಂದೆ ಬರಲು ಸಜ್ಜಾಗಿದೆ. ಕಳೆದ ಒಂದು ವರ್ಷದಿಂದ ಹಳ್ಳಿಯ ಪರಿಸರದಲ್ಲಿ ಸಾಗುತ್ತಿದ್ದ ಜೈ ಮತ್ತು ಲಲಿತಾ ಅವರ ಬದುಕು ಈಗ ನಗರಕ್ಕೆ ಶಿಫ್ಟ್ ಆಗಿದೆ. ಹೌದು, ಧಾರಾವಾಹಿಯ ಪ್ರಮುಖ ಪಾತ್ರಗಳು ಹಳ್ಳಿಗೆ ವಿದಾಯ ಹೇಳಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಕಾಲಿಟ್ಟಿವೆ. ಈ ಬದಲಾವಣೆಯನ್ನು ಧಾರಾವಾಹಿ ತಂಡ ಹೊಸ ಅಧ್ಯಾಯ ಅಥವಾ ಸೀಸನ್-2 ಎಂದು ಪರಿಚಯಿಸಿದೆ.

365 ಸಂಚಿಕೆಗಳ ಹಳ್ಳಿ ಕಥೆಗೆ ಭಾವನಾತ್ಮಕ ವಿದಾಯ

'ಜೈ ಲಲಿತಾ' ಧಾರಾವಾಹಿಯ ಮೊದಲ 365 ಸಂಚಿಕೆಗಳು ಹಳ್ಳಿಯ ಸುತ್ತಮುತ್ತಲೇ ಸಾಗಿದ್ದವು. ಅಲ್ಲಿನ ಜನಜೀವನ, ಸಂಬಂಧಗಳು, ಪ್ರೀತಿ, ನೋವು ಮತ್ತು ಸವಾಲುಗಳ ಮೂಲಕ ಜೈ ಹಾಗೂ ಲಲಿತಾ ಅವರ ಕಥೆ ಪ್ರೇಕ್ಷಕರ ಮನಗೆದ್ದಿತ್ತು. ಇದೀಗ 366ನೇ ಸಂಚಿಕೆಯಿಂದ ಕಥೆಯ ದಿಕ್ಕೇ ಬದಲಾಗಿದ್ದು, ಬೆಂಗಳೂರಿನ ಹಿನ್ನೆಲೆಯಲ್ಲಿ ಹೊಸ ಘಟನೆಗಳು ತೆರೆದುಕೊಳ್ಳಲಿವೆ.

ಬಿಗ್‌ ಬಾಸ್‌ ಜೋಡಿ ಶಿಶರ್-ಐಶ್ವರ್ಯಾ ಮದುವೆ ಡೇಟ್ ಫಿಕ್ಸ್.. ಎಲ್ಲಿ ಹೇಗೆ ನಡೆಯಲಿದೆ ಗೊತ್ತಾ ವೆಡ್ಡಿಂಗ್?

ಹೊಸ ಅಧ್ಯಾಯ ಆರಂಭವಾಗುವ ಮುನ್ನವೇ ಹಳೆಯ ಕಥೆಗೆ ಭಾವನಾತ್ಮಕ ಅಂತ್ಯ ನೀಡಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಜೈ ಮತ್ತು ಲಲಿತಾ ಅವರ ಜೀವನದಲ್ಲಿ ಏನೆಲ್ಲ ಬದಲಾವಣೆಗಳಾಗಲಿವೆ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ. ಹಳ್ಳಿಯ ಸರಳ ಬದುಕಿಗೆ ಒಗ್ಗಿಕೊಂಡಿರುವ ಈ ಜೋಡಿ ಬೆಂಗಳೂರಿನ ವೇಗದ ಜೀವನಶೈಲಿ, ಹೊಸ ಜನರು ಮತ್ತು ವಿಭಿನ್ನ ಸವಾಲುಗಳನ್ನು ಹೇಗೆ ಎದುರಿಸಲಿದೆ ಎಂಬುದೇ ಈಗಿನ ಪ್ರಮುಖ ಪ್ರಶ್ನೆ.

ನವೆಂಬರ್ 30ರಿಂದ ಹೊಸ ಕಥೆಯ ಪ್ರಸಾರ

ಜೈ ಮತ್ತು ಲಲಿತಾ ಅವರ ಹೊಸ ಪಯಣ ನವೆಂಬರ್ 30ರಿಂದ ಆರಂಭವಾಗಲಿದೆ. ಸೋಮವಾರದಿಂದ ಬೆಂಗಳೂರಿನ ಹಿನ್ನೆಲೆಯಲ್ಲಿನ ಕಥೆ ಪ್ರಸಾರವಾಗಲಿದ್ದು, ಸೀಸನ್-2 ಕೂಡ ಹಿಂದಿನ ಸಮಯದಲ್ಲಿಯೇ ಅಂದರೆ ಪ್ರತಿದಿನ ರಾತ್ರಿ 9.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ವೀಕ್ಷಕರಿಗೆ ಲಭ್ಯವಾಗಲಿದೆ. ಜಿಯೋ ಹಾಟ್‌ಸ್ಟಾರ್‌ನಲ್ಲಿಯೂ ಧಾರಾವಾಹಿಯನ್ನು ವೀಕ್ಷಿಸಬಹುದು.

ಜನಪ್ರಿಯ ಕಲಾವಿದರ ಅಭಿನಯ

ಈ ಧಾರಾವಾಹಿಯಲ್ಲಿ ಜೈ ಪಾತ್ರಕ್ಕೆ ಶಿವಾಂಕ್ ಹಾಗೂ ಲಲಿತಾ ಪಾತ್ರಕ್ಕೆ ಮನಸ್ವಿ ಜೀವ ತುಂಬುತ್ತಿದ್ದಾರೆ. ಇವರ ಜೊತೆಗೆ ಅಮೃತಾ ಉಪ್ಪಾರ್, ಮಾಲತಿ ಸರದೇಶಪಾಂಡೆ, ಅಂಬರೀಶ್ ಸಾರಂಗಿ, 'ಮಂಗಳೂರು ಮೀನನಾಥ' ಖ್ಯಾತಿಯ ರಾಘವೇಂದ್ರ ರೈ, ರಜನಿ ಮತ್ತು ಶಿವಮೊಗ್ಗ ಹರೀಶ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಧಾರಾವಾಹಿಗೆ ಹರೀಶ್ ಪುಟ್ಟಣ್ಣ ನಿರ್ದೇಶನ ಮಾಡುತ್ತಿದ್ದು, ಶ್ರೀನಿಧಿ ಡಿ.ಎಸ್. ಅವರು ಕಥೆ ಮತ್ತು ಚಿತ್ರಕಥೆಯ ಜವಾಬ್ದಾರಿ ಹೊತ್ತಿದ್ದಾರೆ. 'ಪ್ರೇಮದ ಊರಲಿ' ಖ್ಯಾತಿಯ ಸುನಾದ್ ಗೌತಮ್ ಸಂಗೀತ ಸಂಯೋಜನೆ ಮಾಡಿದ್ದು, ಕಥೆಯ ಭಾವನಾತ್ಮಕ ಕ್ಷಣಗಳಿಗೆ ಅವರ ಸಂಗೀತ ಮತ್ತಷ್ಟು ಮೆರುಗು ನೀಡುತ್ತಿದೆ.

ಸೀಸನ್-2ನಲ್ಲಿ ಏನೆಲ್ಲ ಕಾದಿದೆ?

ಒಂದು ವರ್ಷದ ಯಶಸ್ವಿ ಪಯಣದ ಬಳಿಕ 'ಜೈ ಲಲಿತಾ' ಧಾರಾವಾಹಿ ಹೊಸ ರೂಪ ಪಡೆದುಕೊಂಡಿದೆ. ಹಳ್ಳಿಯ ವಾತಾವರಣದಲ್ಲಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಜೈ ಮತ್ತು ಲಲಿತಾ ಇದೀಗ ಬೆಂಗಳೂರಿನಲ್ಲಿ ಹೊಸ ಬದುಕು ಕಟ್ಟಿಕೊಳ್ಳಬೇಕಿದೆ. ನಗರದಲ್ಲಿ ಎದುರಾಗುವ ಸಮಸ್ಯೆಗಳು, ಸಂಬಂಧಗಳ ಹೊಸ ಆಯಾಮಗಳು ಮತ್ತು ಜೀವನದ ಅನಿರೀಕ್ಷಿತ ತಿರುವುಗಳು ಕಥೆಗೆ ಯಾವ ದಿಕ್ಕು ನೀಡಲಿವೆ ಎಂಬುದನ್ನು ಕಾದು ನೋಡಬೇಕು.

ಸಮಂತಾಗೆ ಬೇಬಿ ಜನಿಸಿದ ಬೆನ್ನಲ್ಲೇ ಸೀತಾಫಲ ಕ್ರೀಮ್ ತಿಂದು 'ಸರ್ವ ಮಂಗಳಾನಿ ಭವಂತು' ಎಂದು ಬರೆದ ಶೀತಲ್

ಹಳೆಯ ಕಥೆಯ ಭಾವನಾತ್ಮಕ ಬಂಧವನ್ನು ಉಳಿಸಿಕೊಂಡೇ ಹೊಸ ಪರಿಸರದಲ್ಲಿ ಮನರಂಜನೆ ನೀಡಲು ಧಾರಾವಾಹಿ ತಂಡ ಸಿದ್ಧವಾಗಿದೆ. ಹೀಗಾಗಿ 'ಜೈ ಲಲಿತಾ' ಸೀಸನ್-2 ಪ್ರೇಕ್ಷಕರಿಗೆ ಮತ್ತೊಂದು ಕುತೂಹಲಕಾರಿ ಕಿರುತೆರೆ ಪಯಣವಾಗುವ ನಿರೀಕ್ಷೆಯಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನು ಶ್ರೀರಾಮಚಂದ್ರ, ನನ್ನ ಹುಡುಗಿ ಹೀಗಿರಬೇಕು: ಕನಸಿನ ಕನ್ಯೆ ಕುರಿತು ಗೌರಿ ಪುತ್ರ ಹೀರೋ ರಿತ್ವಿಕ್‌ ಓಪನ್​ ಟಾಕ್​
ಸರಿಗಮಪ ಕನ್ನಡ ರಿಯಾಲಿಟಿ ಶೋನಲ್ಲಿ ಮಿಂಚಿದ್ದ ಕೀರ್ತನಾ ಚಂದ್ರು ಈಗ ತೆಲುಗು ವೇದಿಕೆಯಲ್ಲಿ ಕಮಾಲ್