ಮತ್ತೆ ಒಂದಾದ ಶ್ರೀನಾಥ್-ಪದ್ಮಾ ವಾಸಂತಿ ಜೋಡಿ; 'ಗೌರಿ ಶಂಕರ'ಕ್ಕೆ ಮ್ಯಾಚ್ ಆಗಿದ್ದು ಹೇಗೆ?

Published : Apr 20, 2025, 03:35 PM ISTUpdated : Apr 20, 2025, 04:26 PM IST
ಮತ್ತೆ ಒಂದಾದ ಶ್ರೀನಾಥ್-ಪದ್ಮಾ ವಾಸಂತಿ ಜೋಡಿ; 'ಗೌರಿ ಶಂಕರ'ಕ್ಕೆ ಮ್ಯಾಚ್ ಆಗಿದ್ದು ಹೇಗೆ?

ಸಾರಾಂಶ

1982 ರಲ್ಲಿ ಬಿಡುಗಡೆ ಕಂಡು ಅಭೂತಪೂರ್ವ ಯಶಸ್ಸು ಕಂಡಿತ್ತು 'ಮಾನಸ ಸರೋವರ' ಸಿನಿಮಾ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಚಿತ್ರದಲ್ಲಿ ನಟ ಶ್ರೀನಾಥ್ ಹಾಗೂ ಪದ್ಮಾ ವಾಸಂತಿ ನಟಿಸಿದ್ದರು. ಆ ಚಿತ್ರದಲ್ಲಿ ಎಲ್ಲಾ..

ಕನ್ನಡ ಚಿತ್ರರಂಗದ ಸುವರ್ಣಯುಗ ಎಂದೇ ಕರೆಸಿಕೊಳ್ಳುತ್ತಿದ್ದ 80-90ರ ದಶಕದ ಮೆಲುಕನ್ನು ಹಾಕುತ್ತಲೇ ಇರುತ್ತಾರೆ ಹಲವರು. ಇದೀಗ ಮತ್ತೆ ಅಂತಹುದೇ ಸಮಯ ಬಂದಿದೆ. 1982 ರಲ್ಲಿ ಬಿಡುಗಡೆ ಕಂಡು ಅಭೂತಪೂರ್ವ ಯಶಸ್ಸು ಕಂಡಿತ್ತು 'ಮಾನಸ ಸರೋವರ' ಎಂಬ ಸಿನಿಮಾ. ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಮಾನಸ ಸರೋವರ' ಚಿತ್ರದಲ್ಲಿ ನಟ ಶ್ರೀನಾಥ್ ಹಾಗೂ ಪದ್ಮಾ ವಾಸಂತಿ ನಟಿಸಿದ್ದರು. ಆ ಚಿತ್ರದಲ್ಲಿ ಎಲ್ಲಾ ಹಾಡುಗಳೂ ಸೂಪರ್ ಹಿಟ್ ಆಗಿದ್ದವು. ಅದರಲ್ಲೊಂದು ಹಾಡು, 'ಮಾನಸ ಸರೋವರ..' ಅಂದು ಎಲ್ಲರ ಮನಸ್ಸುನ್ನು ಕದ್ದಿತ್ತು, ಹೃದಯವನ್ನು ಕಲಕಿ ಆವರಿಸಿಕೊಂಡಿತ್ತು. ಅದು ಟೈಟಲ್ ಸಾಂಗ್ ಕೂಡ. ಇಂದು ಮತ್ತೆ ಆ ಹಾಡು ವೈರಲ್ ಆಗ್ತಿದೆ. 

ಅದಕ್ಕೆ ಕಾರಣ 'ಸ್ಟಾರ್ ಸುವರ್ಣ ಚಾನೆಲ್. ಹೌದು, ಮಾನಸ ಸರೋವರ ಚಿತ್ರದ ಈ ಟೈಟಲ್ ಸಾಂಗ್ ಮತ್ತೆ ಈಗ ಸೋಷಿಯಲ್ ಮೀಡಿಯಾ ಮೂಲಕ ವೈರಲ್ ಆಗ್ತಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಗೌರಿ ಶಂಕರ' ಧಾರಾವಾಹಿಯಲ್ಲಿ ಮತ್ತೆ 'ಮಾಸನ ಸರೋವರ' ಚಿತ್ರದ ಅದೇ ಜೋಡಿ ಕಾಣಿಸಿಕೊಂಡಿದೆ. ಚಾನೆಲ್ ತನ್ನ ಪ್ರಚಾರದಲ್ಲಿ ಅದನ್ನು ಚೆನ್ನಾಗಿ, ಅಂದರೆ ಸೂಕ್ತ ಸಮಯಪ್ರಜ್ಞೆಯಿಂದ ಬಳಸಿಕೊಂಡಿದೆ. 

ಯುದ್ಧಕಾಂಡ ಗೆಲ್ಲುತ್ತಾ? ಅಜಯ್ ರಾವ್ ಸಾಲ ತೀರಿ ಲಾಭ ಬರುತ್ತಾ?!

ಮಾನಸ ಸರೋವರದ ಟೈಟಲ್ ಸಾಂಗ್ ಜೊತೆ ಗೌರಿ ಶಂಕರ ಧಾರಾವಾಹಿಯ ದೃಶ್ಯವನ್ನೂ ಮರ್ಜ್‌ ಮಾಡಲಾಗಿದೆ. 'ಅಂದು (1982).. ಇಂದು (1925).. ಅದೇ ಭಾವ ಅದೇ ನೋಟ😍' ಎಂದು ಬರೆದು ಸಿನಿಮಾ ಹಾಗೂ ಸೀರಿಯಲ್‌ ಎರಡೂ ದೃಶ್ಯಗಳನ್ನು ಮೇಲೆ-ಕೆಳಗೆ ಇಟ್ಟು, ಪ್ರೋಮೋ ಮಾಡಿ ಚಾನೆಲ್‌ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನು ನೋಡಿದವರು ತುಂಬಾ ಇಷ್ಟಪಟ್ಟು ಕಾಮೆಂಟ್ ಸೆಕ್ಷನ್ ತುಂಬಿಸುತ್ತಿದ್ದಾರೆ. 80ರ ದಶಕದ ನೆನಪನ್ನು ಮಾಡಿಕೊಂಡು ಹಲವರು ಮೆಚ್ಚಿ ಮನಸಾರೆ ಪ್ರತಿಕ್ರಿಯೆ ನೀಡತೊಡಗಿದ್ದಾರೆ. 

ಹೌದು, ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ 'ಗೌರಿ ಶಂಕರ' ಧಾರಾವಾಹಿ ಕಥೆಯಲ್ಲಿ ಈಗ ಬಹಳಷ್ಟು ಬದಲಾವಣೆ ಆಗುತ್ತಿದೆ. ಅಂದರೆ, ಕಥೆ 6 ವರ್ಷಗಳ ಗ್ಯಾಪ್ ತೆಗೆದುಕೊಳ್ಳುತ್ತಿದೆ. ಚಿತ್ರಕಥೆಯಲ್ಲಿ '6 ವರ್ಷಗಳ ನಂತರ..' ಎಂಬ ಘೋಷಣೆಯೊಂದಿಗೆ ಧಾರಾವಾಹಿ ಚಿತ್ರಕಥೆ ಮತ್ತೊಂದು ಹಂತಕ್ಕೆ ಕಾಲಿಡಲಿದೆ. ಅದೇ ಕಥೆ, ಅದೇ ಪಾತ್ರಧಾರಿಗಳು ಆಗಿದ್ದರೂ ಇದ್ದಕ್ಕಿದ್ದಂತೆ ಸ್ಟೋರಿ ಲೈನ್ ಆರು ವರ್ಷಗಳ ಅಂತರ ತೆಗೆದುಕೊಂಡು ಮುನ್ನಡೆಯಲಿದೆ. ಈ ಮೂಲಕ ಸ್ಟಾರ್ ಸುವರ್ಣ ವೀಕ್ಷಕರು 'ಗೌರಿ ಶಂಕರ' ಧಾರಾವಾಹಿಯಲ್ಲಿ ಹೊಸತನ ನೋಡಲಿದ್ದಾರೆ. 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?