
ಡ್ರೋನ್ ಪ್ರತಾಪ್ ಸದ್ಯ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಷೋನ ಖುಷಿಯಲ್ಲಿದ್ದಾರೆ. ಕೆಲ ಎಪಿಸೋಡ್ಗಳ ಹಿಂದೆ ಡ್ರೋನ್ ಪ್ರತಾಪ್ ಇದೇ ರಿಯಾಲಿಟಿ ಷೋನ ವೇದಿಕೆಯ ಮೇಲೆ ಮತ್ತೋರ್ವ ಸ್ಪರ್ಧಿ ಗಗನಾ ಅವರಿಗೆ ತಾಳಿ ಕಟ್ಟಿದ್ದರು. ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ನಟಿ ರಚಿತಾ ರಾಮ್ ಅವರ ಸಮ್ಮುಖದಲ್ಲಿ ತಾಳಿ ಕಟ್ಟಲಾಗಿತ್ತು. ಮದುಮಗನ ಗೆಟಪ್‌ನಲ್ಲೇ ಬಂದು ಮದುವೆ ಮಾಡಿಕೊಂಡಿದ್ದರು. ಅಷ್ಟಕ್ಕೂ ಇದು ರವಿಚಂದ್ರನ್ ಅವರ ರಾಮಾಚಾರಿ ಸಿನಿಮಾದ ಮದುವೆ ಸೀನ್ ರಿಕ್ರೇಟ್ ಮಾಡಲಾಗಿತ್ತು. ಡ್ರೋನ್ ಪ್ರತಾಪ್ ಅವರ ರವಿಚಂದ್ರನ್ ಗೆಟಪ್‌ನಲ್ಲಿ ಮದುಮಗ ಆಗಿದ್ರೆ, ಮಾಲಾಶ್ರೀ ಗೆಟಪ್‌ನಲ್ಲಿ ಗಗನಾ ವಧುವಿನಂತೆ ಬಂದಿದ್ದರು. ಸಿನಿಮಾದಲ್ಲಿ ಥೇಟ್ ರವಿಚಂದ್ರನ್ ಅವರು ಪೆದ್ದನಂತೆ ಬಂದು ಮಾಲಾಶ್ರೀ ಕೊರಳಿಗೆ ತಾಳಿ ಕಟ್ಟಿದಂತೆಯೇ, ಪ್ರತಾಪ್ ಕೂಡ ಗಗನಾ ಕೊರಳಿಗೆ ತಾಳಿ ಕಟ್ಟಿ ಭೇಷ್ ಭೇಷ್ ಎನ್ನಿಸಿಕೊಂಡಿದ್ದರು.
ಅಷ್ಟಕ್ಕೂ ಡ್ರೋನ್ ಪ್ರತಾಪ್ನ ಪ್ರತಾಪ ಎಲ್ಲರಿಗೂ ತಿಳಿದದ್ದೇ. ಎರಡು ವರ್ಷಗಳ ಹಿಂದೆ ಡ್ರೋನ್ ಪ್ರತಾಪ್ ಸಕತ್ ಹವಾ ಸೃಷ್ಟಿ ಮಾಡಿದ್ದ ಯುವಕ. ಇದ್ದರೆ ಇಂಥ ಮಗ ಇರಬೇಕು, ನೀನೂ ಒಬ್ಬ ಇದ್ಯಾ... ದಂಡ-ಪಿಂಡ ಎಂದೆಲ್ಲಾ ಅದೆಷ್ಟೋ ಅಪ್ಪ-ಅಮ್ಮಂದಿರು ಡ್ರೋನ್ ಪ್ರತಾಪ್ನ ಭಾಷಣ ಕೇಳಿ ಮಕ್ಕಳಿಗೆ ಬೈದದ್ದೇ ಬೈದದ್ದು, ಪ್ರತಾಪ್ನ ಪ್ರತಾಪವನ್ನು ಹಾಡಿ ಹೊಗಳಿದ್ದೇ ಹೊಗಳಿದ್ದು. ವಿಶ್ವವಿದ್ಯಾಲಯಗಳಲ್ಲಿ, ಘಟಾನುಘಟಿಗಳ ಎದುರಿನಲ್ಲಿ, ಸೆಲೆಬ್ರಿಟಿಗಳ ಜೊತೆಯಲ್ಲಿ, ರಾಜಕಾರಣಿಗಳು, ಸಿನಿಮಾ ನಟರು... ಹೀಗೆ ಎಲ್ಲರ ಎದುರೂ ಭಾಷಣ ಮಾಡುತ್ತಾ, ತಾನು ಪಟ್ಟಿರುವ ಕಷ್ಟಗಳನ್ನೆಲ್ಲಾ ಕಣ್ಣಿಗೆ ಕಟ್ಟುವಂತೆ ಹೇಳುತ್ತಲೇ ಎಲ್ಲರ ಪ್ರೀತಿ, ವಿಶ್ವಾಸ ಗಳಿಸಿ ಭಲೆ ಭಲೆ ಎನ್ನಿಸಿಕೊಂಡವರು ಡ್ರೋನ್ ಪ್ರತಾಪ್. ಆದರೆ, ಅದೊಂದು ದಿನ ಪ್ರತಾಪ್ಗೆ ಗ್ರಹಗತಿಗಳೇ ಬದಲಾಗೋಯ್ತು. ಡ್ರೋನ್ ಮಾಡುವುದಾಗಿ ಹೇಳಿ ನಂಬಿಸಿದ್ದರಿಂದ ಹಿಡಿದು, ತಮ್ಮ ನೋವಿನ ಜೀವನದ ಬಗ್ಗೆ ಎಲ್ಲರ ಕಣ್ಣು ತೇವ ಮಾಡುವಂತೆ ಆಡಿದ ಮಾತುಗಳು ಎಲ್ಲವೂ ಹಸಿಹಸಿ ಸುಳ್ಳು ಎಂದು ಸುದ್ದಿಯಾಯಿತು. ಅಲ್ಲಿಂದ ಡ್ರೋನ್ ಪ್ರತಾಪ್ ವಿರುದ್ಧ ಗಂಭೀರ ಆರೋಪಗಳೇ ಹರಿದು ಬಂದವು. ಎಷ್ಟೋ ಮಂದಿ ಸುಳ್ಳು ಹೇಳಿ ತಮ್ಮಿಂದ ಹಣ ವಸೂಲಿ ಮಾಡಿದ್ದಾನೆ ಎನ್ನುವ ಆರೋಪಗಳೆಲ್ಲವೂ ಮಾಡಲು ಶುರು ಮಾಡಿದರು. ಕೊನೆಗೆ ದೂರು ದಾಖಲಾಗಿ, ಜೈಲು ಶಿಕ್ಷೆಯೂ ಆಯಿತು. ಕೊನೆಗೂ ಸ್ವತಂತ್ರವಾಗಿ ಡ್ರೋನ್ ಮಾತ್ರ ಮಾಡಿ ತೋರಿಸಲೇ ಇಲ್ಲ. ಆದರೂ ಹೆಸರು ಮಾತ್ರ ಡ್ರೋನ್ ಪ್ರತಾಪ್ ಎಂದೇ ಶಾಶ್ವತವಾಗಿ ಬಿಟ್ಟಿತು!
ಬೀದಿಗೆ ಬಂದ ಡ್ರೋನ್ ಪ್ರತಾಪ್- ಎಲ್ಲವೂ ತಾಳಿ ಕಟ್ಟಿರೋ ಗಗನಾಗೋಸ್ಕರ! ಫ್ಯಾನ್ಸ್ ಶಾಕ್- ಅಷ್ಟಕ್ಕೂ ಆಗಿದ್ದೇನು?
ಇದೇ ಕಾರಣಕ್ಕೆ ಸಹಜವಾಗಿ ಬಿಗ್ಬಾಸ್ ಮನೆಯಲ್ಲಿ ಎಂಟ್ರಿ ಸಿಕ್ಕಿತು. ಅಲ್ಲಿಂದ ಬಂದ ಮೇಲೆ ದೊಡ್ಡ ಸೆಲೆಬ್ರಿಟಿಯೇ ಆಗಿದ್ದಾರೆ ಪ್ರತಾಪ್. ಇದೀಗ ಭರ್ಜರಿ ಬ್ಯಾಚುಲರ್ಸ್ ಷೋನಲ್ಲಿ, ಗಗನ್, ಡ್ರೋನ್ಗೆ ಇಂಪ್ರೆಸ್ ಮಾಡಲು ರೋಬೋ ಥರ ಬಂದಿದ್ದಾರೆ. ಪ್ರತಾಪ್ ಅವರನ್ನು ಇಂಪ್ರೆಸ್ ಮಾಡಲು ಫಿಸಿಕ್ಸ್, ಕೆಮೆಸ್ಟ್ರಿನೇ ಬೇಕು ಎಂದು ಹೀಗೆ ಬಂದೆ, ಇಂಪ್ರೆಸ್ ಆದ್ರಾ ಕೇಳಿದ್ದಾರೆ. ಅದಕ್ಕೆ ಪ್ರತಾಪ್ ತುಂಬಾ ಇಂಪ್ರೆಸ್ ಆದೆ. ಮುಂದೆ ಗಗನಾ ಥರ ರೋಬೋ ಮಾಡಲು ಪ್ರಯತ್ನ ಮಾಡ್ತೇನೆ ಎಂದಾಗ ಎಲ್ಲರೂ ಜೋರಾಗಿ ನಕ್ಕಿದ್ದಾರೆ.
ಬಳಿಕ ವಿಶ್ವದ ಖ್ಯಾತನಾಮ ಸೈಂಟಿಸ್ಟ್ಗಳ ಫೋಟೋಗಳನ್ನು ಡಿಸ್ಪ್ಲೇ ಮಾಡಲಾಗಿದ್ದು, ಅದರಲ್ಲಿ ಡ್ರೋನ್ ಪ್ರತಾಪ್ ಫೋಟೋ ಫಿಕ್ಸ್ ಮಾಡಲಾಗಿದೆ. ಇವರು ಖ್ಯಾತ ವಿಜ್ಞಾನಿ ಎಂದು ತಮಾಷೆ ಮಾಡಲಾಗಿದೆ. ಡ್ರೋನ್ ಹೇಳಿರುವ ಹಸಿಹಸಿ ಸುಳ್ಳುಗಳಿಂದಲೇ ಈ ವೇದಿಕೆ ಮೇಲೆ ಅವರಿಗೆ ಟ್ರೋಲ್ ಮಾಡ್ತಿರೋದು ಗೊತ್ತಾಗತ್ತೆ. ಇದನ್ನು ನೋಡಿದಾಗ ಪ್ರತಾಪ್ಗೂ ಅರಿವಾಗಿದ್ದು, ಮುಖ ಸಪ್ಪೆ ಆಗುವುದನ್ನು ನೋಡಬಹುದು. ಆದರೂ ಯಾವುದನ್ನೂ ತೋರಿಸಗೊಡದೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಲ್ಲರನ್ನೂ ರಂಜಿಸುತ್ತಿದ್ದಾರೆ.
ವೇದಿಕೆ ಮೇಲೆಯೇ ತಾಳಿ ಕಟ್ಟಿದ ಬಳಿಕ ರಚಿತಾ ರಾಮ್ ಕೆನ್ನೆ ಸವರಿದ ಡ್ರೋನ್ ಪ್ರತಾಪ್! ಕಣ್ಕಣ್ ಬಿಟ್ಟ ಫ್ಯಾನ್ಸ್..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.