
ತಂದೆ ತಾಯಿ ಇಲ್ಲದ ಮುಗ್ಧ ಹುಡುಗಿ ರಾಜಿಯನ್ನು ಭಾಸ್ಕರ್ ಮತ್ತು ಸರಸ್ವತಿ ಶಾನುಭೋಗ ದಂಪತಿ ತಮ್ಮ ಮನೆಯಲ್ಲೇ ಬೆಳಸಿರುತ್ತಾರೆ. ಭಾಸ್ಕರ್ ಶಾನುಭೋಗ ರಾಜಿಯನ್ನು ತಮ್ಮ ಮನೆ ಮಗಳಂತೆ ಕಂಡರೂ, ಸರಸ್ವತಿ ಮತ್ತು ಶಾನುಭೋಗರ ಕಿರಿ ಮಗ ಕರ್ಣನನ್ನು ಹೊರತುಪಡಿಸಿ ಅವರ ಕುಟುಂಬದವರಿಗೆ ರಾಜಿ ಮನೆಕೆಲಸದಾಕೆ ಮಾತ್ರ. ಭಾಸ್ಕರ್ ಶಾನುಭೋಗರ ಮೂವರು ಗಂಡು ಮಕ್ಕಳು ಮತ್ತು ಒಬ್ಬ ಮಗಳ ಪೈಕಿ, ಮೊದಲನೆಯವನು ರವೀಶ್, ಮೃದು ಸ್ವಭಾವದ ಇವನಿಗೆ ತನ್ನ ಹೆಂಡತಿ ಶಾಂಭವಿ ಹೇಳಿದ್ದೆ ವೇದವಾಕ್ಯ. ಇನ್ನು ಎರಡನೇ ಮಗ ಉದಯ… ಶಾಂಭವಿ ಅತ್ತಿಗೆ ತರಾನೇ ಸದಾ ತಂದೆಯ ಆಸ್ತಿ ಕಬಳಿಸುವ ಹೊಂಚು ಹಾಕುತ್ತಿರುತ್ತಾನೆ. ಉದಯ್ ಪತ್ನಿ ದೇವಕಿ ಶಾಂಭವಿ ಕೇಡಿತನದಲ್ಲಿ ಭಾಗಿಯಾಗಿದ್ದರೂ ತನ್ನ ಮಂದ ಬುದ್ಧಿಯಿಂದಾಗಿ ಒಂದಿಲ್ಲೊಂದು ಎಡವಟ್ಟು ಮಾಡಿಕೊಳ್ಳುತ್ತಿರುತ್ತಾಳೆ. ಹೀಗಾಗಿ ದೇವಕಿ ಇದ್ದ ಕಡೆ ಕಾಮಿಡಿ ಇರುತ್ತೆ.
ಭಾಸ್ಕರ್ ಶಾನುಭೋಗರ ಮಗಳು ರೇಣು ಆಗಾಗ ತಂದೆಯ ಆಸ್ತಿಯಲ್ಲಿ ತನ್ನ ಪಾಲಿನ ಬಗ್ಗೆ ತಕರಾರು ಮಾಡುತ್ತಿರುತ್ತಾಳೆ. ರೇಣು ಪತಿ ಮನೋಜ್ ಆರ್ಥಿಕವಾಗಿ ಶ್ರೀೕಮಂತನಲ್ಲದಿದ್ದರೂ, ಒಳ್ಳೆಯ ಮನಸಿನವನಾಗಿರುತ್ತಾನೆ. ಸಾನ್ವಿ, ವಿರಾಟ್ ಮತ್ತು ಲಚ್ಚಜ್ಜಿಯ ಪಾತ್ರಗಳು, ‘ರಾಜಿ’ ಧಾರಾವಾಹಿಯ ಕತೆಯ ತಿರುವಿಗೆ ಕಾರಣವಾಗುತ್ತವೆ. ಭಾಸ್ಕರ್ ಶಾನುಭೋಗರ ಕಿರಿಯ ಮಗ ಕರ್ಣ ಲಂಡನ್ನಿಗೆ ತನ್ನ ವಿದ್ಯಾಭ್ಯಾಸಕ್ಕಾಗಿ ಹೋಗಿರುತ್ತಾನೆ. ಕರ್ಣ ಮತ್ತು ರಾಜಿ ಬಾಲ್ಯದ ಗೆಳೆಯರು. ಕರ್ಣನಿಗೆ ಇದು ಸ್ನೇಹವಾಗಿದ್ದರೂ ರಾಜಿಗೆ ಕರ್ಣನ ಬಗ್ಗೆ ಸ್ನೇಹಕ್ಕೂ ಮಿಗಿಲಾದ ಭಾವವಿರುತ್ತದೆ. ಇವರಿಬ್ಬರ ಸ್ನೇಹ, ಪ್ರೀತಿಯಾಗಿ ಬದಲಾಗುತ್ತಾ ಅನ್ನೋದೆ ‘ರಾಜಿ’ ಧಾರಾವಾಹಿಯ ಕಥಾಹಂದರ.
ರಾಜಿಯ ಪಾತ್ರದಲ್ಲಿ ಸೌಂದರ್ಯ, ಕಾರ್ತಿಕ್ ಕರ್ಣನ ಪಾತ್ರದಲ್ಲಿದ್ದಾರೆ. ಹಿರಿಯ ನಟರಾದ ಮುಖ್ಯಮಂತ್ರಿ ಚಂದ್ರು ಮತ್ತು ವೈಜಯಂತಿ ಕಾಶಿ, ಭಾಸ್ಕರ್ ಮತ್ತು ಸರಸ್ವತಿ ಶಾನುಭೋಗರ ಪಾತ್ರವಹಿಸಿದ್ದಾರೆ. ನಿನಾಸಂ ಅಶ್ವಥ್ ರಾಜಿಯ ತಂದೆ ವೀರೇಶ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಧಾಫ್, ರಜನಿ, ಛಾಯಾ, ದಿನೇಶ್, ಸುಧಾ ಹೆಗ್ಡೆ, ಶಿಲ್ಪಾ, ಅಮೃತಾ ನಾಯ್‌್ಕ, ವಿನಾಯಕ ಮತ್ತು ಸಂದೀಪ್ ಪ್ರಮುಖ ಪಾತ್ರಧಾರಿಗಳು. ‘ರಾಜಿ’ಯ ಶೀರ್ಷಿಕೆ ಗೀತೆ ಸುಮಧುರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟುಸದ್ದು ಮಾಡಿದೆ. ಶಾನುಭೋಗ ಮನೆತನದ ಪ್ರೀತಿಯ ಆಸ್ತಿ ‘ರಾಜಿ’, ಏಪ್ರಿಲ… 18ರಿಂದ ಸಂಜೆ 7.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.