ಡಬ್ಬದಲ್ಲಿ ಆ್ಯಪಲ್ ಹಣ್ಣು ಇಟ್ಟು ಪತಿಗೆ ಐಫೋನ್‌ 13 ಪ್ರೋ ಗಿಫ್ಟ್‌ ಕೊಟ್ಟ ಇಶಿತಾ ವರ್ಷ!

By Suvarna News  |  First Published Apr 17, 2022, 3:21 PM IST

ಪತಿಗೆ ಮೊದಲ ದುಬಾರಿ ಗಿಫ್ಟ್‌ ಕೊಟ್ಟ ಕಿರುತೆರೆ ನಟಿ ಇಶಿತಾ ವರ್ಷ. ಆ್ಯಪಲ್ ಹಣ್ಣು ಹಿಂದಿರುವ ಆ್ಯಪಲ್ ಫೋನ್‌ನ ಕಥೆ ಇದು.... 


ಕನ್ನಡ ಕಿರುತೆರೆ ಸೆಲೆಬ್ರಿಟಿಗಳಾದ ಇಶಿತಾ ವರ್ಷ ಮತ್ತು ಡ್ಯಾನ್ಸರ್ ಮುರುಗಾನಂದ ಯೂಟ್ಯೂಬ್ ಲೋಕದಲ್ಲಿ ಸಖತ್ ಹೆಸರು ಮಾಡುತ್ತಿದ್ದಾರೆ. ಡ್ಯಾನ್ಸ್ ಸ್ಟುಡಿಯೋ, ಮೇಕಪ್ ರೂಮ್, ಸೋಲೋ ಟ್ರಿಪ್, ಕಪಲ್ ಚಾಲೆಂಜ್‌ ವಿಡಿಯೋ ಅಪ್ಲೋಡ್ ಮಾಡುವ ಇಶಿತಾ ಮೊದಲ ಬಾರಿ ಪತಿಗೆ ದುಬಾರಿ ಗಿಫ್ಟ್ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಮುರುಗಾ ಬಳಸುತ್ತಿರುವ ಫೋನ್‌ ಸ್ಕ್ರೀನ್ ಹಾಳಾಗಿದೆ ಹೊಸ ಮೊಬೈಲ್ ತೆಗೆದುಕೊಳ್ಳಬೇಕು ಎಂದು ಪದೇ ಪದೇ ಹೇಳುತ್ತಿದ್ದರಂತೆ. ಹೀಗಾಗಿ ನಾನು ಗಿಫ್ಟ್‌ ಕೊಡಬೇಕು ಎಂದು ಇಶಿತಾ ಪ್ಲ್ಯಾನ್ ಮಾಡಿದ್ದಾರೆ. ಐ ಪ್ಲ್ಯಾನೆಂಟ್‌ ಅಂಗಡಿಗೆ ಭೇಟಿ ನೀಡಿ ಪತಿಗೆ ಇಷ್ಟ ಆಗುವ ಕಪ್ಪು ಬಣ್ಣದ ಐಫೋನ್‌ 13 ಪ್ರೋ ಫೋನ್ ಆಯ್ಕೆ ಮಾಡಿಕೊಂಡಿದ್ದಾರೆ. ಮನೆಗೆ ಗಿಫ್ಟ್‌ ತೆಗೆದುಕೊಂಡು ಬಂದು ಇಶಿತಾ ಮೊಬೈಲ್‌ನ ಡಿಫರೆಂಟ್ ಅಗಿ ಪ್ಯಾಕ್ ಮಾಡಿ ಸರ್ಪ್ರೈಸ್ ಕೊಟ್ಟಿದ್ದಾರೆ.

Tap to resize

Latest Videos

ಕಾಲಿ ಡಬ್ಬಕ್ಕೆ ಪೇಪರ್‌ ತುಂಬಿ ಅದರಲ್ಲಿ ಮೊಬೈಲ್ ಇಟ್ಟು ಅದರ ಮೇಲೆ ಎರಡು ಸೇಬು ಸಣ್ಣ ಇಟ್ಟು ಪ್ಯಾಕ್ ಮಾಡಿದ್ದಾರೆ. ಮುರುಗಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಕಾರಣ ಮನೆಗೆ ತಡವಾಗಿ ಬಂದಿದ್ದಾ, ಹೀಗಾಗಿ ಎರಡು ದಿನಗಳ ನಂತರ ಶೂಟಿಂಗ್‌ ಸ್ಥಳಕ್ಕೆ ಭೇಟಿ ನೀಡಿ ಸರ್ಪ್ರೈಸ್ ಕೊಟ್ಟಿದ್ದಾರೆ.  ಇದು ಪಕ್ಕಾ ಜೋಕ್‌ ಎಂದುಕೊಂಡ ಮುರುಗಾ ಆರಂಭದಲ್ಲಿ ಸೇಬು ಹಣ್ಣು ನೋಡಿ ನಗುತ್ತಿದ್ದರು ಆನಂತರ ಮೊಬೈಲ್ ನೋಡಿ ಖುಷಿ ಪಟ್ಟಿದ್ದಾರೆ. 

ಹತ್ತು ವರ್ಷಗಳಿಂದ ಪ್ಲ್ಯಾನ್ ಮಾಡುತ್ತಿದ್ದ ಗೋವಾ ಟ್ರಿಪ್‌ಗೆ ಹೋದಾ ಕಿರುತೆರೆ ನಟಿಯರು!

ಮೊಬೈಲ್ ಖರೀದಿ ಮಾಡುವಾಗ ಇಶಿತಾ ಮೊಬೈಲ್ ರೇಟ್‌ಗೆ ನನ್ನ ಒಂದು ಕಿಡ್ನಿ ಅಲ್ಲ ಎರಡೂ ಕಿಡ್ನಿ ಮಾರಬೇಕು ಎಂದು ಹಾಸ್ಯ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಇಶಿತಾ ವರ್ಷ, ನಿರೂಪಕಿ ಅನುಪಮಾ ಗೌಡ ಮತ್ತು ನಟಿ ನೇಹಾ ಗೌಡ ಗೋವಾ ಟ್ರಿಪ್ ಹೋಗಿದ್ದಾರೆ. ಹೆಣ್ಣು ಮಕ್ಕಳ ಟ್ರಿಪ್ ಹೇಗಿದೆ ಎಂದು ಅನುಪಮಾ ಗೌಡ ಯೂಟ್ಯೂಬ್ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

RajaRani Jodi: ನಟಿ ಇಶಿತಾ ಬ್ಯಾಗಲ್ಲೇನಿದೆ ಎಂದು ರಿವೀಲ್ ಮಾಡಿದ ಪತಿ!

ಕೆಲವು ದಿನಗಳ ಹಿಂದೆ ಇಶಿತಾ ಇದ್ದಕ್ಕಿದ್ದಂತೆ ಪತಿ ಡ್ಯಾನ್ಸ್‌ ಸ್ಟುಡಿಯೋಗೆ (Dance Studio) ಭೇಟಿ ಕೊಟ್ಟು, ಅವರ ಮೊಬೈಲ್‌ ತೆಗೆದುಕೊಂಡು ಅದರಲ್ಲಿ ಏನೆಲ್ಲಾ ಇದೆ ಎಂದು ವಿಡಿಯೋ ಮೂಲಕ ರಿವೀಲ್ ಮಾಡಿಬಿಟ್ಟರು. ಯಾರೆಲ್ಲಾ ಮೆಸೇಜ್ ಮಾಡುತ್ತಾರೆ, ಎಷ್ಟು ಫಾಲೋವರ್ಸ್ ಇದ್ದಾರೆ, ಯಾರಿಗೂ ಹೇಳದೇ ಇರುವ ಹುಡುಗರ ಗುಂಪಲ್ಲಿ ಏನೆಲ್ಲಾ ಶೇರ್ ಮಾಡಿಕೊಳ್ಳುತ್ತಾರೆಂದು ನೋಡಿಬಿಟ್ಟಿದ್ದಾರೆ. ಹೀಗಾಗಿ ಈಗ ಮುರಗಾ ಅವರು ಮಡದಿಯ ಫೋನ್‌ ಚೆಕ್ ಮಾಡಿರುವುದು ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ.

ಮೊಬೈಲ್‌ನಲ್ಲಿ ಒಟ್ಟು 5 ಸಾವಿರ ಫೋಟೋ ಇಟ್ಟುಕೊಂಡಿರುವ ಇಶಿತಾ ಒಂದು ಸೀಕ್ರೆಟ್‌ ಗ್ಯಾಲರಿ (Secret Gallery) ಮಾಡಿಕೊಂಡಿದ್ದಾರೆ. ಯಾರೂ ಆ ಫೋಟೋಗಳನ್ನು ನೋಡಬಾರದು ಎಂದು ಇಶಿತಾ ಲಾಕ್ ಮಾಡಿದ್ದಾರೆ. ಮುರುಗಾ ನೋಡಲು ಎಷ್ಟೇ ಪ್ರಯತ್ನಿಸಿದರೂ ಇಶಿತಾ ಬಿಟ್ಟು ಕೊಡುತ್ತಿರಲಿಲ್ಲ. ಹುಡುಗರು ಎಷ್ಟು ಓಪನ್ ಆಗಿದ್ದೀವಿ. ಹುಡುಗಿಯರು ನೋಡಿ ಏನೋ ಸೀಕ್ರೆಟ್ ಇಟ್ಕೊಂಡಿದ್ದಾರೆ, ರಿವೀಲ್ ಮಾಡುತ್ತಿಲ್ಲ ಎಂದು ಮುರುಗಾ ಹೇಳಿ ಮಾತು ಮುಗಿಸಿದ್ದಾರೆ.

click me!