ಹಳ್ಳಿ ಹೈದಾ ರಾಜೇಶ್ ಸಾವು; ಆತ್ಮಹತ್ಯೆ ಅಸಲಿ ಕಥೆ ಬಿಚ್ಚಿಟ್ಟ ಐಶ್ವರ್ಯ!

Published : Sep 05, 2023, 10:08 AM ISTUpdated : Sep 05, 2023, 10:53 AM IST
 ಹಳ್ಳಿ ಹೈದಾ ರಾಜೇಶ್ ಸಾವು; ಆತ್ಮಹತ್ಯೆ ಅಸಲಿ ಕಥೆ ಬಿಚ್ಚಿಟ್ಟ ಐಶ್ವರ್ಯ!

ಸಾರಾಂಶ

ಹಳ್ಳಿ ಹೈದಾ ರಾಜೇಶ್ ಸಾವಿಗೆ ಐಶ್ವರ್ಯ ಕಾರಣ ಎಂದು ಆರೋಪ ಮಾಡುವ ಜನರಿಗೆ ಸ್ಪಷ್ಟನೆ ಕೊಟ್ಟ ಐಶು...... 

ಕನ್ನಡ ಕಿರುತೆರೆ ಜನಪ್ರಿಯ ರಿಯಾಲಿಟಿ ಶೋ ಹಳ್ಳಿ ಹೈದಾ ಪ್ಯಾಟೆಗೆ ಬಂದ ರಿಯಾಲಿಟಿ ಶೋ ಸೀಸನ್ 1ರ ವಿನ್ನರ್ ರಾಜೇಶ್ ಮತ್ತು ಐಶ್ವರ್ಯ ಅಪಾರ ಸಂಖ್ಯೆಯಲ್ಲಿ ಕನ್ನಡಿಗರ ಪ್ರೀತಿ ಗಳಿಸಿದ್ದರು. ಇಬ್ಬರು ಒಟ್ಟಿಗೆ ಸಿನಿಮಾ ಕೂಡ ಮಾಡಿದ್ದರು..ಆದರೆ ಇದ್ದಕ್ಕಿದ್ದಂತೆ ಒಂದು ದಿನ ರಾಜೇಶ್ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಐಶ್ವರ್ಯ ಕಾರಣ ಎಂದು ಸಾಕಷ್ಟು ಆರೋಪ ಮಾಡಲಾಗಿತ್ತು. ಹಲವು ವರ್ಷಗಳ ನಂತರ ಸ್ಪಷ್ಟನೆ ಕೊಟ್ಟಿದ್ದಾರೆ ಐಶು... 

'ರಾಜೇಶ್ ತೀರಿಕೊಂಡ ಸಂದರ್ಭದಲ್ಲಿ ಮಾಧ್ಯಮದಿಂದ ನನಗೆ ಕರೆ ಬರುತ್ತೆ ರಾಜೇಶಾ ಬಿದ್ದು ಹೋಗಿದ್ದಾನೆ ಎಂದು. ನೋಡೋಕೆ ಸಣ್ಣ ಇದ್ರೂ ತುಂಬಾ ಗಟ್ಟಿಯಿದ್ದ. ಸಾಕಷ್ಟು ಜನ ಕರೆ ಮಾಡಿ ತೀರಿಕೊಂಡಿದ್ದಾನೆ ಎಂದು ಹೇಳುತ್ತಾರೆ ನಿಜ ಅಥವಾ ಸುಳ್ಳು ಎಂದು ಅರ್ಥ ಮಾಡಿಕೊಳ್ಳುವುದಕ್ಕೆ ಸಮಯ ತೆಗೆದುಕೊಂಡೆ. ಎಲ್ಲಾ ಮಾಧ್ಯಮದವರು ನನಗೆ ಕರೆ ಮಾಡುತ್ತಿದ್ದಾರೆ ಆಗ ಟಿವಿ ನೋಡುತ್ತೀನಿ ರಾಜೇಶ್ ಇನ್ನಿಲ್ಲ ಎಂದು ತೋರಿಸುತ್ತಿದ್ದಾರೆ.ಹಾಸ್ಟಿಟಲ್ ರಾಜೇಶ್‌ ವಿಡಿಯೋ ನೋಡಿ ಶಾಕ್ ಆಯ್ತು, ನಮ್ಮ ಸಿನಿಮಾ ನಿರ್ದೇಶಕರ ರಾಜೇಶ್ ಊರಿಗೆ ಹೋಗಿದ್ದೆ. ಟ್ರೋಫಿ ಗೆದ್ದ ಕ್ಷಣ ಬಂದಿದ್ದ ಜನಕ್ಕಿಂತ ಡಬಲ್ ಜನ ಬಂದಿದ್ದರು' ಎಂದು ಕನ್ನಡ ಯುಟ್ಯೂಬ್ ಚಾನೆಲ್‌ವೊಂದರಲ್ಲಿ ಮಾತನಾಡಿದ್ದಾರೆ. 

ಪುತ್ರಿ ಜೊತೆ ತಿರುಪತಿ ತಿಮ್ಮಪ್ಪನ ಗುಡಿಗೆ ಕಾಲಿಟ್ಟ ಶಾರುಖ್ ಖಾನ್; ನಯನತಾರಾ ನೋಡಿ ನೆಟ್ಟಿಗರು ಶಾಕ್

'ಸಾಕಷ್ಟು ಜನರು ನನಗೆ ಕೇಳುತ್ತಾರೆ ರಾಜೇಶ್ ಸೂಸೈಡ್ ಮಾಡಿಕೊಂಡಿದ್ದಕ್ಕೆ ನಾನು ಕಾರಣ ಅಲ್ಲ. ಬಳ್ಳೆಹಾಡಿ ಕಾಡಿನಿಂದ ಮೈಸೂರಿನಲ್ಲಿರುವ ಮನೆಗೆ ಶಿಫ್ಟ್‌ ಆಗಿದ್ದರು ಆಗಾಗ ನಾನು ಸಾಯುವೆ ಎಂದು ಪೋಷಕರಿಗೆ ಹೆದರಿಸುತ್ತಿದ್ದನಂತೆ. ಅವತ್ತು ಕೂಡ ಹೆದರಿಸಲು ಹೋಗಿದ್ದಾನೆ ಅಲ್ಲಿಂದ ಬಿದ್ದಿದ್ದರೂ ಕೈ ಕಾಲು ಮುರಿಯುತ್ತಿರಲಿಲ್ಲ ಆದರೆ ಹಿಂದಿನ ದಿನ ಮನೆ ಮಾಲೀಕರು ಕಾಂಪೌಂಡ್‌ಗೆ ಶಾರ್ಪಾಗಿರುವ ಗ್ರಿಲ್ ಹಾಕಿಸಿದ್ದಾರೆ ಅದರ ಮೇಲೆ ಬಿದ್ದ ತಕ್ಷಣ ಆ ಕಂಬಿ ಅವನ ಹೊಟ್ಟೆಗೆ ಚುಚ್ಚಿ ಅಗಲಿರುವುದು. ರಾಜೇಶ್ ಸಾವಿಗೆ ಯಾರೂ ಕಾರಣವಲ್ಲ. ನನಗೆ ತುಂಬಾ ಜನ ಪ್ರೀತಿ ಕೊಡುತ್ತಾರೆ ಅದಕ್ಕೆ ಚಿರಋಣಿಯಾಗಿರುತ್ತೀನಿ ಆದರೆ ಅನೇಕರು ರಾಜೇಶ್ ಸಾವಿಗೆ ನನ್ನ ಹೆಸರು ಎಳೆಯುತ್ತಾರೆ' ಎಂದು ಐಶ್ವರ್ಯ ಹೇಳಿದ್ದಾರೆ. 

ಇಬ್ಬರೇ ಕಾರು ಓಡಿಸಿಕೊಂಡು ಕಟೀಲು ದುರ್ಗಾ ಪರಮೇಶ್ವರಿ ದರ್ಶನ ಪಡೆದ 'ಗಟ್ಟಿಮೇಳ' ನಿಶಾ, ಅನ್ವಿತಾ!

'90ರಿಂದ 100 ದಿನಗಳ ಕಾಲ ಹಳ್ಳಿ ಹೈದಾ ಪ್ಯಾಟೆಗೆ ಬಂದ ರಿಯಾಲಿಟಿ ಶೋ ನಡೆಯಿತ್ತು. ಫಿನಾಲೆ ದಿನ ನಮಗೆ ತಿಳಿಯಿತ್ತು ಜನರಿಗೆ ನಮ್ಮ ಮೇಲೆ ಎಷ್ಟು ಪ್ರೀತಿ ಹುಟ್ಟಿದೆ ಎಂದು. ಐಸು ರಾಜೇಶಾ ಅಂದ್ರೆ ಎಲ್ಲರಿಗೂ ತುಂಬಾನೇ ಇಷ್ಟ ಆಯ್ತು.   ಏನ್ ರೀ ರಾಜೇಶ್‌ನ ಕರ್ಕೊಂಡು ಬಂದು ಸಾಯಿಸಿ ಬಿಟ್ರಿ ಎಂದು ಸುಲಭವಾಗಿ ಹೇಳುತ್ತಾರೆ. ಹೆದರಿಸಲು ರಾಜೇಶ್ ಹೋಗಿ ಸತ್ತಿರುವುದು ಅದಕ್ಕೆ ನಾನು ಕಾರಣ ಅಲ್ಲ. ಸಿಟಿಗೆ ರಾಜೇಶ್‌ನ ಕರೆದುಕೊಂಡು ಬಂದು ಸಾಯಿಸುವ ಉದ್ದೇಶ ಯಾರಿಗೂ ಇರಲಿಲ್ಲ. ಮಣ್ಣಿನ ಮನೆಯಲ್ಲಿರುವ ಹುಡುಗ ಸಿಟಿಗೆ ಬಂದು ಮನೆ ಖರೀದಿಸಿ ಹೊಸ ಗಾಡಿ ಖರೀಸಿದಿ ಜೀವನ ಚೆನ್ನಾಗಿ ನಡೆಸುತ್ತಿದ್ದ. ಲಕ್ಷ ಲಕ್ಷ ಹಣ ಸಂಪಾದನೆ ಮಾಡುವಷ್ಟರ ಮಟ್ಟಕ್ಕೆ ಹೆಸರು ಮಾಡಿದ...ಸುಮಾರು ಮೂರ್ನಾಲ್ಕು ಸಿನಿಮಾಗಳಿಗೆ ಸಹಿ ಮಾಡಿ ಸಂಪಾದನೆ ಮಾಡಿದೆ. ಸೆಟ್‌ನಲ್ಲಿ ನೀರು ಬರುತ್ತಿರಲಿಲ್ಲ ಅಂದ್ರೆ ನೀರಿನ ಕೇಸ್‌ ತೆಗೆದುಕೊಂಡು ಬಂದು ಸ್ನಾನ ಮಾಡುತ್ತಿದ್ದ ಅಷ್ಟು ರಾಜನ ರೀತಿ ಜೀವನ ಮಾಡಿದ್ದಾನೆ' ಎಂದಿದ್ದಾರೆ ಐಶ್ವರ್ಯ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?