Latest Videos

ನನ್ನಮ್ಮ ಲೂಸ್‌ ಅಲ್ಲ ಫುಲ್ ಟೈಟು; ನಿಧಿ ಕಂದಮ್ಮ ಮಾತು ಕೇಳಿ ಬಿದ್ದುಬಿದ್ದು ನಕ್ಕ ನೆಟ್ಟಿಗರು!

By Vaishnavi ChandrashekarFirst Published Jun 24, 2024, 12:16 PM IST
Highlights

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ನಿಧಿಮಾ ವಿಡಿಯೋ. ತೊದಲು ಮಾತುಗಳನ್ನು ಕೇಳಿ ಬಿದ್ದುಬಿದ್ದು ನಕ್ಕ ಜನರು...

ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಸಾಕಷ್ಟು ಮಂದಿ ಸೋಷಿಯಲ್ ಮೀಡಿಯಾ ಪ್ರಪಂಚಕ್ಕೆ ಕಾಲಿಟ್ಟರು. ಅಡುಗೆ ರೆಸಿಪಿಗಳು, ಮೇಕಪ್, ಮನೆ ಕ್ಲೀನ್, ಬ್ಯೂಟಿ, ಫ್ಯಾಷನ್, ಯೋಗ ಹಾಗೂ ಮೆಂಟಲ್‌ ಹೆಲ್ತ್‌...ಪ್ರತಿಯೊಂದನ್ನು ಅಪ್ಲೋಡ್ ಮಾಡಿದರು. ಕಾಮಿಡಿ ವಿಡಿಯೋ ಕ್ರಿಯೇಟ್‌ ಮಾಡಿದವರು ಸಾಕಷ್ಟು ಜನಪ್ರಿಯತೆ ಪಡೆದರು. ಈ ಸಮಯದಲ್ಲಿ ಪುಟ್ಟ ಮಕ್ಕಳ ಅಕೌಂಟ್‌ ಕೂಡ ಓಪನ್ ಮಾಡಲಾಗಿತ್ತು. ಅಲ್ಲಿಂದ ಹಿಟ್‌ ಆಗಿದ್ದು ನಿಧಿ ಎಂ ಕಿರಣ್. 

ನಿಧಿ ಎಂ ಕಿರಣ್‌ ಕಂದಮ್ಮಳಿಗೆ ಈಗ ಮೂರು ವರ್ಷ, ಆಕೆಯ ಖಾತೆಯನ್ನು ಪೋಷಕರು ಮ್ಯಾನೇಜ್ ಮಾಡುತ್ತಿದ್ದಾರೆ. ತೊದಲು ಮಾತುಗಳನ್ನು ಸಾಕಷ್ಟು ಜನರನ್ನು ನಗಿಸುವ ಈ ಕಂದಮ್ಮ ಕೆಲವು ದಿನಗಳ ಹಿಂದೆ ನನ್ನಮ್ಮ ಫುಲ್ ಟೈಟ್‌ ಎಂದಿರುವ ವಿಡಿಯೋ ವೈರಲ್ ಆಗುತ್ತಿದೆ. ಹೌದು! ಹಾಗೆ ಮನೆಯಲ್ಲಿ ಕುಳಿತುಕೊಂಡು ಜಾಲಿ ಮಾಡುತ್ತಿರುವಾಗ ನಿಧಿ ತಂದೆ ಕಿರಣ್ ಅವರು ' ನಿಧಿ ನಿಮ್ಮ ಅಮ್ಮ ಲೂಸು' ಎನ್ನುತ್ತಾರೆ. ಆಗ ಸಿಟ್ಟು ಮಾಡಿಕೊಂಡ ನಿಧಿ 'ಹೇ ಅಪ್ಪ...ನನ್ನ ಅಮ್ಮ ಲೂಸ್‌ ಅಲ್ಲ ನನ್ನ ಅಮ್ಮ ಟೈಟು' ಎನ್ನುತ್ತಾಳೆ. ಇದನ್ನು ಕೇಳಿಸಿಕೊಂಡ ಪೋಷಕರು ಬಿದ್ದು ಬಿದ್ದು ನಗುತ್ತಾರೆ. ಆ ನಂತರ ಮತ್ತೆ ಬಂದು 'ನೀನು ಟೈಟು ತುಂಬಾ ಟೈಟು' ಎಂದು ನಿಧಿ ಕ್ಯಾಮೆರಾ ಮುಂದೆ ಹೇಳುತ್ತಾರೆ.

ಬೆತ್ತಲೆ ಮತ್ತು ಹಸ್ತಮೈಥುನ ವಿಡಿಯೋ ನೋಡಿ ಶಾಕ್; ರೇಣುಕಾಸ್ವಾಮಿ ಅಕೌಂಟ್ ಬ್ಲಾಕ್ ಮಾಡಿದ್ದ ನಟಿ ಚಿತ್ರಾಲ್

ನಿಧಿ ರಾಕ್ ಅಮ್ಮ ಶಾಕ್, ನಿಧಿಗೆ ವಿರುದ್ಧ ಪದಗಳು ಚೆನ್ನಾಗಿ ಗೊತ್ತಿದೆ,ಫುಲ್ ಟೈಟು ನಿಧಿಮಾ, ನಿಧಿ ಮಾತುಗಳನ್ನು ನಿರೀಕ್ಷೆ ಮಾಡೋಕೆ ಆಗಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಸುಮಾರು ಲಕ್ಷ 39 ಸಾವಿರ ಫಾಲೋವರ್ಸ್‌ ಹೊಂದಿರುವ ನಿಧಿ  ಈಗಾಗಲೆ ಸಾಕಷ್ಟು ಖಾಸಗಿ ಬ್ರಾಂಡ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುತ್ತಾರೆ. ಸ್ಟಾರ್ ಸುವರ್ಣ ವಾಹಿನಿಯ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಸಿನಿಮಾ ಪ್ರಚಾರ ಮಾಡಲು ವಂಶಿಕಾ ಜೊತೆ ಕಾಣಿಸಿಕೊಂಡಿದ್ದಳು. 

 

click me!