
ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮ ಇಂದಿನಿಂದ ಆರಂಭವಾಗಿದ್ದು, ನಾಳೆಯವರಿಗೂ ಇರಲಿದೆ. ಇದರಲ್ಲಿ ಜೀ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಧಾರಾವಾಹಿಗಳ ನಟ-ನಟಿಯರಿಗೆ ಭರಪೂರ ಅವಾರ್ಡ್ಗಳನ್ನು ಕೊಡಲಾಗುತ್ತಿದೆ. ಇದಕ್ಕಾಗಿ ನಾಮಿನೇಷನ್ ಆದವರೆಲ್ಲಾ ಕಾರ್ಯಕ್ರಮಕ್ಕೆ ಆಗಮಿಸಿದ್ದು, ವೀಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಬರುತ್ತಿದೆ. ಶ್ರೀಮಸ್ತು ಶುಭರಸ್ತು ಧಾರಾವಾಹಿ ಕುರಿತು ಹೇಳುವುದಾದರೆ, ಇದು ವಿಭಿನ್ನ ಕಥೆಯನ್ನು ಹೊಂದಿದ್ದು ವೀಕ್ಷಕರಿಗೆ ಇಷ್ಟವಾಗುತ್ತಿದೆ. ಬಹುತೇಕ ಸೀರಿಯಲ್ಗಳಲ್ಲಿ ಅತ್ತೆ-ಸೊಸೆಯನ್ನು ಹಾವು-ಮುಂಗುಸಿಯಂತೆ ತೋರುತ್ತಿದ್ದರೆ, ಈ ಧಾರಾವಾಹಿಯಲ್ಲಿ ಸೊಸೆಯೇ ಖುದ್ದಾಗಿ ವಿಧವೆ ಅತ್ತೆಗೆ ಮತ್ತೊಂದು ಮದುವೆ ಮಾಡಿ ಮಗಳಾಗಿರುವ ವಿಭಿನ್ನ ಸ್ಟೋರಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದೆ. ಈ ಧಾರಾವಾಹಿಯಲ್ಲಿನ ಎಲ್ಲಾ ಪಾತ್ರಧಾರಿಗಳೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಧ್ಯ ವಯಸ್ಕರ ನಡುವಿನ ಪ್ರೀತಿ, ಮದುವೆ ಹಾಗೂ ಕುಟುಂಬಸ್ಥರು ಮತ್ತು ಸಮಾಜ ಅವರನ್ನು ಹೇಗೆ ಸ್ವೀಕರಿಸುತ್ತೆ ಎನ್ನುವ ಈ ಧಾರಾವಾಹಿಯ ವಿಷಯ ಹಲವರಿಗೆ ಆಪ್ತವಾಗಿದೆ.
ಇದರಲ್ಲಿ ತುಂಬಾ ಗಮನ ಸೆಳೆದಿರುವ ಪಾತ್ರಗಳು ಹಾಗೂ ಈ ಸೀರಿಯಲ್ನ ನಾಯಕ-ನಾಯಕಿ ಎಂದೇ ಹೇಳಬಹುದಾದ ಮಾಧವ ಮತ್ತು ತುಳಸಿ. ತುಳಸಿಯ ಅತ್ತೆಯಾಗಿರುವ ಸಿರಿ ತನ್ನ ಅತ್ತೆಗೆ (ಸುಧಾರಾಣಿ) ಮತ್ತೊಂದು ಮದುವೆ ಮಾಡಿಸಿದ್ದಾಳೆ. ಸ್ನೇಹಿತರಂತೆ ಇದ್ದ ತುಳಸಿ ಮತ್ತು ಮಾಧವ (ಅಜಿತ್ ಹಂದೆ) ಈಗ ಪತಿ-ಪತ್ನಿಯಾಗಿದ್ದಾರೆ. ಆದರೆ ಗಂಡನ ಮನೆಯಲ್ಲಿ ತುಳಸಿಯ ಕಂಡರೆ ಮಾಧವನ ಮಕ್ಕಳಿಗೆ ಆಗಿ ಬರುವುದಿಲ್ಲ. ಅಲ್ಲಿ ಮಾಧವ ಅವರ ಅಣ್ಣನ ಪತ್ನಿ ತುಳಸಿಗೆ ತೊಂದರೆ ಕೊಡುತ್ತಿರುತ್ತಾರೆ. ಅಷ್ಟೇ ಅಲ್ಲದೇ ಮಾಧವನ ಮಕ್ಕಳಿಗೆ ಖುದ್ದು ತಂದೆಯನ್ನೂ ಕಂಡರೆ ಮೊದಲಿನಿಂದಲೂ ಅಷ್ಟಕ್ಕಷ್ಟೇ. ಅದರಲ್ಲಿಯೂ ಈಗ ಅವರು ಈ ವಯಸ್ಸಿನಲ್ಲಿ ಮರು ಮದುವೆಯಾಗಿರುವುದಕ್ಕೆ ತುಳಸಿ ಜೊತೆ ಅಪ್ಪನನ್ನೇ ದ್ವೇಷಿಸುತ್ತಾರೆ.
ದುಡ್ಡಿನ ಆಟದಲ್ಲಿ ಶ್ರೀಮಸ್ತು ಶುಭಮಸ್ತು ಸೀರಿಯಲ್ನಲ್ಲಿ ಗೆದ್ದೋರು ಯಾರು?
ಈ ಸ್ಟೋರಿಯಲ್ಲಿ ಅಪ್ಪನ ಪಾತ್ರಧಾರಿಯಾಗಿರುವ ಅಜಿತ್ ಹಂದೆ ಅವರಿಗೆ ಜೀ ಕುಟುಂಬ ಅವಾರ್ಡ್ಸ್ನಲ್ಲಿ ಬೆಸ್ಟ್ ಅಪ್ಪ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅವರಿಗೆ ಪ್ರಶಸ್ತಿ ಕೊಡುವ ಸಂದರ್ಭದಲ್ಲಿ ಕೆಲವೊಂದು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ತಮ್ಮ ನಿಜವಾದ ಜೀವನದಲ್ಲಿ ಐದು ವರ್ಷದ ಮಗ ಇದ್ದಾನೆ. ಆದರೆ ಸೀರಿಯಲ್ನಲ್ಲಿ ಇಬ್ಬರುದೊಡ್ಡ ದೊಡ್ಡ ಮಕ್ಕಳ ತಂದೆಯಾಗಿ ನಟಿಸಿದ್ದೇನೆ. ಎಲ್ಲರೂ ತಮಗೆ ತುಂಬಾ ಸಹಕಾರ ಕೊಡುತ್ತಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ತಮ್ಮ ಅಪ್ಪ-ಅಮ್ಮನನ್ನು ನೆನಪಿಸಿಕೊಂಡಿದರು.
ಕೊನೆಯಲ್ಲಿ ಅಪ್ಪ-ಮಕ್ಕಳನ್ನು ಕಂಡರೆ ಸೀರಿಯಲ್ನಲ್ಲಿ ಆಗುವುದಿಲ್ಲ. ಆದ್ದರಿಂದ ಜೀ ಕುಟುಂಬದ ವೇದಿಕೆಯಲ್ಲಿ ಅವರನ್ನು ಒಂದು ಮಾಡಿದರೆ ಹೇಗೆ ಎಂದು ನಿರೂಪಕಿಯಾದ ಅನುಶ್ರೀ ಕೇಳಿ, ವೇದಿಕೆಯಲ್ಲಿಯೇ ಅಪ್ಪ ಮತ್ತು ಮಕ್ಕಳನ್ನು ಒಂದು ಮಾಡಿದರು. ಇಬ್ಬರೂ ಸೀರಿಯಲ್ ಅಪ್ಪನ ಕೆನ್ನೆಗೆ ಮುತ್ತು ಕೊಟ್ಟಾಗ ವೇದಿಕೆಯ ಮೇಲೆ ಹರ್ಷೋದ್ಗಾರವಾಯಿತು. ನಂತರ ಅಭಿಗೆ ಪ್ರೀತಿಯಿಂದ ಅಪ್ಪ ಎಂದು ಹೇಳಿ ಎಂದಾಗ, ಅಭಿ ಪಾತ್ರಧಾರಿ ಒಂದು ಕಂಡೀಷನ್ ಎನ್ನುತ್ತಾರೆ. ಅದೇನೆಂದರೆ ಅಪ್ಪ ಸ್ಕೂಟರ್ ಚೇಂಜ್ ಮಾಡಿದ್ರೆ ಮಾತ್ರ ಎಂದಾಗ ಎಲ್ಲರೂ ಜೋರಾಗಿ ನಗುತ್ತಾರೆ. ನಂತರ ಅವಿಗೆ ಅಪ್ಪ ಎಂದು ಹೇಳಲು ಹೇಳಿದಾಗ ನನಗೆ ನನ್ನ ಗರ್ಲ್ಫ್ರೆಂಡ್ ಜೊತೆ ಮದ್ವೆ ಮಾಡಿಸಿದ್ರೆ ಮಾತ್ರ ಅಪ್ಪ ಹೇಳುವೆ ಎಂದಾಗ ಮತ್ತಷ್ಟು ನಗು. ಇದಕ್ಕೆ ಕಾರಣವೂ ಇದೆ. ಮಾಧವ ಈ ವಯಸ್ಸಿನಲ್ಲಿ ಮದುವೆಯಾದ ಕಾರಣಕ್ಕೆ ಅವಿಯ ಗರ್ಲ್ಫ್ರೆಂಡ್ ಪಾಲಕರು ಮದುವೆಯನ್ನು ಕ್ಯಾನ್ಸಲ್ ಮಾಡಿರುತ್ತಾರೆ. ಕೊನೆಗೂ ಇಬ್ಬರೂ ಮಾಧವ ಅವರನ್ನು ಅಪ್ಪಿಕೊಂಡಿದ್ದು, ವೇದಿಕೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಯಿತು.
ಕಿಡ್ನಾಪ್ ಆಗಿರೋ 'ಸೀತಾ-ರಾಮ' ಪುಟಾಣಿ ಸಿಹಿ ಬಣ್ಣಬಣ್ಣದ ಹೆಲಿಕಾಪ್ಟರ್‌ನಲ್ಲಿ ಪ್ರತ್ಯಕ್ಷ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.