
ಸ್ಟಾರ್ ಸುವರ್ಣ ವಾಹಿನಿಯು ಬೆಳಕಿನ ಹಬ್ಬದ ಪ್ರಯುಕ್ತ ತನ್ನ ವೀಕ್ಷಕರಿಗೆ ನಗುವಿನ ರಸದೌತಣ ನೀಡಲು ಸಜ್ಜಾಗಿದೆ. 'ದೀಪಾವಳಿ ನಗೆ ಉತ್ಸವ' ಎಂಬ ವಿನೂತನ ಕಾರ್ಯಕ್ರಮವು ಸೋಮವಾರ, ಅಂದರೆ 13 ನವೆಂಬರ್ 2023 ಮಧ್ಯಾನ್ಹ 1.00 ಗಂಟೆಗೆ ಪ್ರಸಾರವಾಗಲಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿರುವ ರಿಯಾಲಿಟಿ ಶೋ, ಧಾರಾವಾಹಿಗಳ ಕಲಾವಿದರು ಸೇರಿದಂತೆ ಹಲವರು ಈ ಸಂಚಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಮನೆಮಂದಿಯೆಲ್ಲಾ ಒಟ್ಟಾಗಿ ಆಚರಿಸುವ ದೀಪಾವಳಿಯ ಸುಸಂದರ್ಭದಲ್ಲಿ ಇನ್ನಷ್ಟು ಮನರಂಜನೆ ನೀಡುವ ಸಲುವಾಗಿ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತಿದೆ. ಹಬ್ಬದ ಸಂಭ್ರಮವಿರುವ ಈ ವೇದಿಕೆಯಲ್ಲಿ ಹಾಸ್ಯಕಲಾವಿದರಾದ ಮಿತ್ರ ಹಾಗು ತಬಲಾ ನಾಣಿ ನಗೆ ಚಟಾಕಿಯ ಕಾಮಿಡಿ ಪಟಾಕಿಯನ್ನು ಸಿಡಿಸಿದ್ದಾರೆ. ಜೊತೆಗೆ ಕಾಮಿಡಿ ಗ್ಯಾಂಗ್ಸ್ ಖ್ಯಾತಿಯ ಸ್ಪರ್ಧಿಗಳು ಒಂದಷ್ಟು ಹಾಸ್ಯ ಸ್ಕಿಟ್ ಪ್ರದರ್ಶಿಸಿದ್ದು ವೀಕ್ಷಕರು ನಕ್ಕು ಸುಸ್ತಾಗೋದಂತು ಖಚಿತ.
ರಾಷ್ಟ್ರವಾದಿ, ದೂರದೃಷ್ಟಿಯುಳ್ಳ ಶಂಕರ್‌ನಾಗ್ ಹುಟ್ಟುಹಬ್ಬ: ಆಟೋರಾಜನ ಸ್ಮರಿಸಿದ ಫ್ಯಾನ್ಸ್!
ತರ್ಲೆ ತುಂಟಾಟದ ಜೊತೆ ಮಸ್ತ್ ಹೆಜ್ಜೆ ಹಾಕಿದ್ದಾರೆ ವೀಕ್ಷಕರ ಅಚ್ಚುಮೆಚ್ಚಿನ ನಟಿ ಶುಭ ಪೂಂಜಾ. ಇನ್ನು ಸ್ಟಾರ್ ಸುವರ್ಣದ ಮೋಸ್ಟ್ ಪಾಪ್ಯುಲರ್ ಜೋಡಿ ವಿಕ್ರಮ್ ಮತ್ತು ವೇದಾಳ ಡಾನ್ಸ್ ಪಡ್ಡೆ ಹುಡುಗರ ನಿದ್ದೆ ಕದಿಯೋದಂತೂ ಖಂಡಿತ. ಕನ್ನಡ ಕಿರುತೆರೆಯಲ್ಲಿ ಇದೇ ಮೊಟ್ಟಮೊದಲ ಬಾರಿಗೆ ನಟಿ ಚೈತ್ರ ಜೆ ಆಚಾರ್ 'ದೀಪಾವಳಿ ನಗೆ ಉತ್ಸವ' ವೇದಿಕೆಯಲ್ಲಿ ಅದ್ಬುತ ಡಾನ್ಸ್ ಪರ್ಫಾರ್ಮೆನ್ಸ್ ನೀಡಿದ್ದಾರೆ. ಸ್ಯಾಂಡಲ್‌ವುಡ್ ನಟ ಸತೀಶ್ ನೀನಾಸಂ, ಅದಿತಿ ಪ್ರಭುದೇವ್, ದಿವ್ಯ ಉರುಡುಗ, ಅರವಿಂದ್ ಕೆ ಪಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ವೀಕ್ಷಕರಿಗೆ ಇನ್ನಷ್ಟು ಮನರಂಜನೆಯ ರಸದೌತಣ ನೀಡಿದ್ದಾರೆ.
ಶ್ರೇಷ್ಠಾ ಕೆಳಗೆ ಕೆಲಸ ಮಾಡಬೇಕಾಗಿದೆ ತಾಂಡವ್, ಮುಗೀತು ಅವನ ಕಥೆ ಎಂದ ನೆಟ್ಟಿಗರು!
ಈ ಸಂಚಿಕೆ ಹಲವು ಹಾಸ್ಯ ಕಲಾವಿದರು ಹಾಗೂ ಸಿನಿಮಾತಾರೆಯರ ಸಂಗಮವಾಗಿದ್ದು, ವಿಭಿನ್ನ ಸಂಚಿಕೆ ಎನಿಸಿಕೊಳ್ಳಲಿರುವುದು ಪಕ್ಕಾ ಎನ್ನಲಾಗಿದೆ. ಪ್ರಸ್ತುತ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಕಾರ್ಯಕ್ರಮಗಳು, ಧಾರಾವಾಹಿಗಳು ವೀಕ್ಷಕರ ಮನರಂಜಿಸುತ್ತಿದ್ದು, ಈ ದೀಪಾವಳಿ ವಿಶೇಷ ಸಂಚಿಕೆ ತೀವ್ರ ಕುತೂಹಲ ಕೆರಳಿಸುತ್ತಿದೆ. ಅಂದಹಾಗೆ, ಈ ದೀಪಾವಳಿ ಹಬ್ಬಕ್ಕೆ ಮಸ್ತ್ ಮಜಾದ ರಸದೂಟವನ್ನು ಉಣಬಡಿಸಲು ಬರುತ್ತಿರುವ 'ದೀಪಾವಳಿ ನಗೆ ಉತ್ಸವ' ಇದೇ ಸೋಮವಾರ ಮಧ್ಯಾಹ್ನ 1 ಗಂಟೆಗೆ ಸ್ಟಾರ್ ಸುವರ್ಣ ಪ್ರಸಾರವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.