
ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ 'ಭಾಗ್ಯಲಕ್ಷ್ಮೀ' ಸೀರಿಯಲ್ ಹೊಸ ಹೊಸ ತಿರುವುಗಳ ಮೂಲಕ ಕಿರುತೆರೆ ವೀಕ್ಷಕರನ್ನು ಸೆಳೆಯುತ್ತಿದೆ. ತಾಂಡವ್ ಪರಿಸ್ಥಿತಿ ಈಗ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ. ಅತ್ತ ಮನೆಗೆ ಬಂದು ಸೇರಿಕೊಂಡಿದ್ದ ಶ್ರೇಷ್ಠಾಳನ್ನು ತಾಂಡವ್ ಮನೆಯವರು ಕಷ್ಟಪಟ್ಟು ಹೊರಹಾಕಿದ್ದರೆ ಇತ್ತ ಶ್ರೇಷ್ಠಾ ಆಫೀಸಿಗೆ ಬಂದು ತಾಂಡವ್ ಪ್ರಾಜೆಕ್ಟ್ ಹೆಡ್ ಆಗಿ ಹೊಸದಾಗಿ ನೇಮಕವಾಗಿದ್ದಾರೆ.
ತಾಂಡವ್ ಬಾಸ್ ಶ್ರೇಷ್ಠಾಳನ್ನು ಪ್ರಾಜೆಕ್ಟ್ ಕೋ ಹೆಡ್ ಆಗಿ ಅಪಾಯಿಂಟ್‌ಮೆಂಟ್ ಮಾಡಿದ್ದಾರೆ. ಅದನ್ನು ಆಫೀಸ್ ಸ್ಟಾಪ್ ಎದುರು ಹೇಳಲು ಎಲ್ಲರನ್ನೂ ಒಟ್ಟಿಗೇ ಸೇರಿಸಿದ್ದಾರೆ. ಅಲ್ಲಿ ತಾಂಡವ್ ಎದುರು ಶ್ರೇಷ್ಠಾಳನ್ನು ಕರೆಸಿ ಅವಳಿಗೆ ಆ ಜವಾಬ್ದಾರಿಯನ್ನು ವಹಿಸಿ, ತಾಂಡವ್ ಕೈಯಿಂದಲೇ ಆಕೆಗೆ ಹೂಗುಚ್ಛ ಕೊಡಿಸುತ್ತಾರೆ. ತಾಂಡವ್ ಎಲ್ಲರೆದುರು ಏನೂ ಹೇಳುವಂತಿಲ್ಲ, ಅನುಭವಿಸದೇ ಇರಲು ಸಾಧ್ಯವೂ ಇಲ್ಲ ಎಂಬಂತಾಗಿದೆ ಆತನ ಸ್ಥಿತಿ. ಆದರೆ, ಬಾಯಿ ಮುಚ್ಚಿಕೊಂಡು ತಾಂಡವ್ ಎಲ್ಲವನ್ನೂ ಸಹಿಸಿಕೊಳ್ಳುತ್ತಾನೆ.
ಬಾಸ್ ಹೊಸ ವರಸೆ ನೋಡಿ ತಾಂಡವ್ ಪರಿಸ್ಥಿತಿ ಇಕ್ಕಟ್ಟಿಗೆ ಸಿಕ್ಕಂತಾಗಿದೆ. ಮನೆಯಲ್ಲಿ ಸಹಜವಾಗಿಯೇ ಸುಖ ಸಂಸಾರ ಆತನಿಗೆ ಅಸಾಧ್ಯವಾಗಿದೆ. ಮುಗ್ಧ ಹೆಂಡತಿಯನ್ನು ಯಾಮಾರಿಸಿ ಶ್ರೇಷ್ಠಾಳ ಜತೆ ಅನೈತಿಕ ಸಂಬಂಧ ಹೊಂದಿರುವ ತಾಂಡವ್ ಮೇಲೆ ಮನೆಯಲ್ಲಿ ಎಲ್ಲರ ಕಣ್ಣು ಬಿದ್ದಿದೆ. ಭಾಗ್ಯಾ ತಂಗಿ ತಾಂಡವ್ ವೀಕ್‌ನೆಸ್ ಉಪಯೋಗಿಸಿಕೊಂಡು ಹಣ ದೋಚುತ್ತಿದ್ದಾಳೆ. ಇತ್ತ ಭಾಗ್ಯಾಗೆ ತನಗಿಂತಲೂ ತನ್ನ ತಂಗಿಯ ಮಾತನ್ನು ಯಾಕೆ ತಾಂಡವ್ ಹೆಚ್ಚು ನೆರವೇರಿಸುತ್ತಾನೆ ಎಂಬ ಸಂಶಯ ಕಾಡುತ್ತಿದ್ದು, ಆಕೆ ಗೊಂದಲಗೊಂಡಿದ್ದಾಳೆ.
ದೀಪಾವಳಿ ವಿಷ್ ಅಂದ್ರೆ ಹೀಗಿರ್ಬೇಕು: ಕಲರ್ಸ್ ಕನ್ನಡ ಕಲಾವಿದರ ನೋಡಿ WOW ಅಂದ ಫ್ಯಾನ್ಸ್
ತಾಂಡವ್ ಈಗ ಎದುರಿಸುತ್ತಿರುವ ಪರಿಸ್ಥಿತಿ ಯಾರಿಗೂ ಬೇಡ ಎಂಬಂತಾಗಿದೆ. ಕಾರಣ, ಮನೆಯಲ್ಲಿ ಹೆಂಡತಿ ಭಾಗ್ಯಾ ತಂಗಿಗೆ ಆತನ ಎಲ್ಲ ಸಂಗತಿ ಗೊತ್ತಿದೆ. ಪೂಜಾ ಅವನನ್ನು ಬ್ಲಾಕ್‌ಮೇಲ್ ಮಾಡತೊಡಗಿದ್ದಾಳೆ. ಭಾಗ್ಯಾಗೂ ಆತನ ಮೇಲೆ ಸ್ವಲ್ಪ ಸಂಶಯ ಯಾವತ್ತೂ ಇದೆ. ಕುಸುಮಾಗೆ ತನ್ನ ಮಗನ ಅನೈತಿಕ ಸಂಬಂಧದ ಬಗ್ಗೆ ಗೊತ್ತಿಲ್ಲ. ಆದರೆ, ಮಗ ಮನೆಗೆ, ಮನೆಯವರಿಗೆ ದ್ರೋಹ ಮಾಡುತ್ತಿದ್ದಾನೆ ಎಂಬ ಕೋಪ-ತಾಪ ಇದ್ದೇ ಇದೆ.
ರಾಮಾಚಾರಿ ಬೆನ್ನಿಗಿರುವಾಗ ಚಾರುಗೆ ಯಾವುದೂ ಕಷ್ಟವಲ್ಲ; ಎಂಥ ಹರಕೆ ಹೊತ್ತಿದ್ದಾಳೆ ನೋಡಿ ಚಾರು!
ಈ ಕಾರಣಕ್ಕೆ ತಾಂಡವ್‌ಗೆ ಮನೆಯಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಇಷ್ಟು ಸಾಲದು ಎಂಬಂತೆ ಇದೀಗ ಶ್ರೇಷ್ಠಾ ಆತನ ಪ್ರಾಜೆಕ್ಟ್ ಕೋ-ಹೆಡ್ ಆಗಿದ್ದಾಳೆ. ಮುಂದೇನು ಎಂಬ ಕುತೂಹಲ ಟಿವಿ ವೀಕ್ಷಕರಲ್ಲಿ ಮನೆಮಾಡಿದೆ. ಎಲ್ಲವನ್ನೂ ತಿಳಿಯಲು ಇಂದಿನ ಸಂಚಿಕೆ ಉತ್ತರ ನೀಡಲಿದೆ. ಅಂದಹಾಗೆ, ಕಲರ್ಸ್ ಕನ್ನಡದಲ್ಲಿ ಈ ಭಾಗ್ಯಲಕ್ಷ್ಮೀ ಸೀರಿಯಲ್ ಸಂಜೆ 7.00 ಗಂಟೆಗೆ ಪ್ರಸಾರ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.