ಅಮೃತಧಾರೆ ಸೀರಿಯಲ್ನಲ್ಲಿ ಮಲ್ಲಿ ಪಾತ್ರಧಾರಿಯಾಗಿರುವ ರಾಧಾ ಭಗವತಿ ಕುರಿತು ಒಂದಿಷ್ಟು ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ...
ಮಲ್ಲಿ ಎಂದರೆ ಸಾಕು, ಸದ್ಯ ಸೀರಿಯಲ್ ಪ್ರಿಯರು ಕಣ್ಣೆದುರಿಗೆ ಬರುವುದು ಅಮೃತಧಾರೆಯ ಕೆಲಸದಾಕೆ ಪೆದ್ದಿ ಮಲ್ಲಿ. ಮಾಲೀಕ ಜೈದೇವನಿಂದಲೇ ಗರ್ಭಿಣಿಯಾಗಿರುವ ಕೆಲಸದಾಕೆ ಈಕೆ. ಭೂಮಿಕಾಳ ಕೃಪೆಯಿಂದ ಜೈದೇವನ ಜೊತೆಯಲ್ಲಿಯೇ ಮದುವೆಯಾದರೂ ಯಾವ ಕ್ಷಣದಲ್ಲಾದರೂ ಏನಾದರೂ ಆಗಬಹುದು ಎನ್ನುವ ಆತಂಕದ ಜೀವನ ನಡೆಸುತ್ತಿದ್ದಾಳೆ ಮಲ್ಲಿ. ಜೈದೇವ ಸದ್ಯ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ನಾಟಕ ಮಾಡುತ್ತಿದ್ದಾನೆ. ಇದಾಗಲೇ ಸಾಯಿಸಲು ಹೊರಟಿದ್ದ ಪತಿ, ಈಗ ಏಕಾಏಕಿ ಬದಲಾಗಿದ್ದು ಏಕೆ ಎನ್ನುವುದನ್ನೂ ಅರಿಯದ ಮುಗ್ಧೆ ಈಕೆ. ಇದೀಗ ಅತ್ತೆ ಶಕುಂತಲಾ ಮತ್ತು ಪತಿ ಜೈದೇವ್ ಸೇರಿ ಮೊದಲು ಭೂಮಿಕಾಳನ್ನು ಮನೆಯಿಂದ ಹೊರಕ್ಕೆ ಹಾಕಿ, ನಂತರ ಮಲ್ಲಿಯನ್ನು ಜೈದೇವನ ಜೀವನದಿಂದ ದೂರ ಮಾಡುವ ಪ್ಲ್ಯಾನ್ ಮಾಡುತ್ತಿದ್ದಾರೆ. ಅದೇನಾಗುತ್ತೋ ಸೀರಿಯಲ್ ನೋಡಿ ತಿಳಿಯಬೇಕು.
ಈ ರೀತಿ ಪೆದ್ದು ಪೆದ್ದು ಪಾತ್ರದಲ್ಲಿ ಸೈ ಎನಿಸಿಕೊಂಡಿರುವ ಮಲ್ಲಿಯ ನಿಜವಾದ ಹೆಸರು ರಾಧಾ ಭಗವತಿ. ರಾಮ್ಜಿ ನಿರ್ದೇಶನದ ‘ರಾಮಾಚಾರಿ’ ಧಾರಾವಾಹಿಯಲ್ಲಿ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಾಧಾ ಅವರು ಇದೀಗ ಮಲ್ಲಿಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಕಿರುತೆರೆಯಿಂದ ಕಳೆದ ವರ್ಷ ರಿಲೀಸ್ ಆದ ವಸಂತಕಾಲದ ಹೂವುಗಳು ಚಿತ್ರದಲ್ಲಿ ಇವರು ಅಭಿನಯಿಸುವ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟರು. ವಿಜಯಪುರದ ರಾಧಾ ಅವರು, ಈ ಚಿತ್ರದಲ್ಲಿ ಸುಮಾ ಹೆಸರಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಾದ ಬಳಿಕ ಈಗ ಮತ್ತೆ ಕಿರುತೆರೆಗೆ ಪ್ರವೇಶ ಪಡೆದು ಅಮೃತಧಾರೆಯಲ್ಲಿ ನಟಿಸುತ್ತಿದ್ದಾರೆ. ಮಾಡೆಲ್ ಕೂಡ ಆಗಿರುವ ಇವರಿಗೆ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುವ ಆಸೆ ಎಂದಿದ್ದಾರೆ. ಎಂಥ ಪಾತ್ರ ಕೊಟ್ಟರೂ ಸಲೀಸಾಗಿ ಮಾಡುವ ಇವರಿಗೆ ಉಜ್ವಲ ಭವಿಷ್ಯವಿದೆ ಎನ್ನುವುದು ಸಿನಿ ಪ್ರಿಯರ ಅಭಿಮತ.
undefined
ಅಂದು ಸೌಂದರ್ಯ, ಇಂದು ದ್ವಾರಕೀಶ್: ಸಾವಿನಲ್ಲಿ ಸಾಮ್ಯತೆ- ಮತ್ತೆ ಸದ್ದು ಮಾಡ್ತಿದೆ ಆಪ್ತಮಿತ್ರ!
ಅಂದಹಾಗೆ, ರಾಧಾ ಅವರು ನಟಿ ರಾಧಾ ಭಗವತಿ ಅವರು ‘ಆ 90 ದಿನಗಳು’, ‘ವಸಂತ ಕಾಲದ ಹೂಗಳು’, ‘ಅಪಾಯವಿದೆ ಎಚ್ಚರಿಕೆ’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಇನ್ನು ‘ಬಾನಿಗೊಂದು ತಾರೆ’ ಮ್ಯೂಸಿಕ್ ವಿಡಿಯೋದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಎಸ್. ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಸಿನಿಮಾದಲ್ಲಿ ನಾಯಕನ ತಂಗಿಯಾಗಿ ನಟಿಸುತ್ತಿದ್ದಾರೆ. ಸದ್ಯ ಒಂದಾದ ಮೇಲೆ ಒಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ.
ಅಂದಹಾಗೆ ರಾಧಾ ಅವರ ಕುಟುಂಬದವೇ ಕಲಾವಿದರ ಕುಟುಂಬ. ಇವರ ಅಜ್ಜ ರಂಗಭೂಮಿ ಕಲಾವಿದರು. ಇದರ ಜೊತೆಗೆ ಸವರು ಹರಿಕಥೆ ದಾಸರೂ ಕೂಡಾ ಆಗಿದ್ದರು. ರಾಧಾ ಅವರ ತಾಯಿಯೂ ಜನಪದ ಗೀತೆಗಳಿಗೆ ದನಿಯಾದವರು. ಮನೆಯಲ್ಲಿ ಕಲೆಯ ವಾತಾವರಣವಿದ್ದ ಕಾರಣದಿಂದಲೋ ಏನೋ ರಾಧಾ ಭಗವತಿ ಅವರಿಗೆ ನಟನೆಯತ್ತ ಎಳೆ ವಯಸ್ಸಿನಲ್ಲಿಯೇ ಆಸಕ್ತಿ ಮೂಡಿದೆ. ಕಿರುತೆರೆ, ಹಿರಿತೆರೆ, ಮ್ಯೂಸಿಕ್ ಆಲ್ಬಂ ಮಾತ್ರವಲ್ಲದೇ ರಾಧಾ ಅವರು, ಹಿನ್ನೆಲೆ ಗಾಯಕಿಯೂ ಹೌದು. ಈಗಾಗಲೇ ಎರಡು ಸಿನಿಮಾಗಳಲ್ಲಿ ಹಾಡಿರುವ ಈಕೆ ಕಂಠದಾನಕ್ಕೂ ಸೈ. 'ಮದುಮಗಳು' ಧಾರಾವಾಹಿಯಲ್ಲಿನ ನಾಯಕಿಯ ಪಾತ್ರಕ್ಕೆ ಕಂಠದಾನ ಮಾಡುತ್ತಿರುವ ರಾಧಾ ಅವರಿಗೆ ಕಲೆ ಎಂಬುದು ರಕ್ತಗತವಾಗಿಯೇ ಒಲಿದು ಬಂದಿದೆ.
ಎಲ್ಲಾ ಆ್ಯಂಕರ್ಗಳನ್ನು ರಿಜೆಕ್ಟ್ ಮಾಡಿ ಶಾಕ್ ಕೊಟ್ಟ ನಟ ಜಗ್ಗೇಶ್: ಕಾಮಿಡಿ ಕಿಲಾಡಿಯಲ್ಲಿ ಏನಿದು ಹೊಸ ವಿಷ್ಯ?