ಈಗ ಮನೆಮಂದಿಯೆಲ್ಲ ಸೇರಿ ಸ್ನೇಹಿತ್ ಕ್ಯಾಪ್ಟನ್ಸಿಗೆ ಅಂಕಗಳನ್ನು ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಸಕಾರಣ ನೀಡಿ ಅವರನ್ನು ಬಿಗ್‌ಬಾಸ್ ಮನೆಯ ಈಜುಕೊಳದಲ್ಲಿ ನೂಕಿದ್ದಾರೆ ಕೂಡ. ಪ್ರತಿಯೊಬ್ಬರು ನೂಕಿದಾಗಲೂ ನೀರೊಳಗೆ ಬಿದ್ದ ಸ್ನೇಹಿತ್, ಮತ್ತೆ ಎದ್ದುಬಂದು ನಡುಗುತ್ತ ನಿಂತಿದ್ದಾರೆ. ಅವರ ಮೈಯಲ್ಲಿ ನಡುಕವಿದ್ದರೆ ಕಣ್ಣೊಳಗೆ ಅಗ್ರೆಸಿವ್‌ನೆಸ್ ಕಾಣಿಸುತ್ತಿದೆ.
ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋ ನಡೆಯುತ್ತಿರುವುದು ಗೊತ್ತೇ ಇದೆ. ಬಿಗ್ ಬಾಸ್ ಮನೆ ಎರಡು ಭಾಗವಾಗಿದೆ. ಅಂದರೆ, ಮನೆಯ ಸದಸ್ಯರು ಎರಡು ಬಣಗಳಾಗಿ ಬದಲಾಗಿದ್ದಾರೆ. ಒಂದು ಕಾರ್ತಿಕ್ ಮಹೇಶ್ ಬಣ ಹಾಗು ಮತ್ತೊಂದು ವಿನಯ್ ಗೌಡ ಬಣ. ವಿನಯ್ -ತನಿಷಾ ಜಗಳ ಮುಗಿದು ಈಗ ವಿನಯ್ ಮತ್ತು ಸಂಗೀತಾ ಜಗಳ ಹೊತ್ತಿಕೊಂಡು ಉರಿಯುತ್ತಿದೆ.
ಬಿಗ್‌ಬಾಸ್ ಕನ್ನಡದ ಹತ್ತನೇ ಸೀಸನ್‌ನ ಮೊದಲನೇ ನಾಯಕನಾಗಿ ಸ್ನೇಹಿತ್ ಆಯ್ಕೆಯಾಗಿದ್ದರು. ನಾಯಕನಾದ ಮೇಲೆ ಅವರ ವರ್ತನೆಯೇ ಬದಲಾಗಿದೆ ಎಂದು ಆರಂಭದಲ್ಲಿ ಉಳಿದ ಸ್ಪರ್ಧಿಗಳು ಮಾತಾಡಿಕೊಂಡಿದ್ದರು. ನಂತರ ಅವರು ತಮ್ಮ ವರ್ತನೆಯನ್ನು ತಿದ್ದಿಕೊಂಡಿದ್ದಾರೆ ಎಂಬ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಆದರೆ ವಾರವಿಡೀ ಹಲವು ಸಂದರ್ಭಗಳಲ್ಲಿ ಅವರು ಕ್ಯಾಪ್ಟನ್ ಪಾತ್ರವನ್ನು ನಿರ್ವಹಿಸಿದ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ಟಗರು ಪಲ್ಯ ಟ್ರೈಲರ್ ಲಾಂಚ್: ಅಯ್ಯಯ್ಯೋ ನಮ್ ಹೆಂಗಸರನ್ನೇ ಮರೆತೆ.., ಎಂದಿದ್ಯಾಕೆ ರಂಗಾಯಣ್ ರಘು ..!?
ಈಗ ಮನೆಮಂದಿಯೆಲ್ಲ ಸೇರಿ ಸ್ನೇಹಿತ್ ಕ್ಯಾಪ್ಟನ್ಸಿಗೆ ಅಂಕಗಳನ್ನು ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಸಕಾರಣ ನೀಡಿ ಅವರನ್ನು ಬಿಗ್‌ಬಾಸ್ ಮನೆಯ ಈಜುಕೊಳದಲ್ಲಿ ನೂಕಿದ್ದಾರೆ ಕೂಡ. ಪ್ರತಿಯೊಬ್ಬರು ನೂಕಿದಾಗಲೂ ನೀರೊಳಗೆ ಬಿದ್ದ ಸ್ನೇಹಿತ್, ಮತ್ತೆ ಎದ್ದುಬಂದು ನಡುಗುತ್ತ ನಿಂತಿದ್ದಾರೆ. ಅವರ ಮೈಯಲ್ಲಿ ನಡುಕವಿದ್ದರೆ ಕಣ್ಣೊಳಗೆ ಅಗ್ರೆಸಿವ್‌ನೆಸ್ ಕಾಣಿಸುತ್ತಿದೆ. ಇನ್ಮುಂದೆ ಸ್ನೇಹಿತ್ ಮೊದಲಿನ ಮುಗ್ಧ ಹಾಗೂ ಒಳ್ಳೆಯ ಡಿಪ್ಲೊಮ್ಯಾಟಿಕ್ ಸ್ನೇಹಿತ್ ಆಗಿರಲು ಅಸಾಧ್ಯ ಎನಿಸುತ್ತಿದೆ.
ಸ್ನೇಹಿತ್ ಕ್ಯಾಪ್ಟನ್ಸಿ ಬಗ್ಗೆ ಯಾವ್ಯಾವ ಸ್ಪರ್ಧಿಗಳು ಎಷ್ಟೆಷ್ಟು ಮಾರ್ಕ್ಸ್ ಕೊಟ್ಟಿದ್ದಾರಾ? ಓವರಾಲ್ ಆಗಿ ಕ್ಯಾಪ್ಟನ್ ಆಗಿ ಸ್ನೆಹಿತ್ ಗೆದ್ದಿದ್ದಾರಾ? ಸೋತಿದ್ದಾರಾ? ತಿಳಿಯಬೇಕಾದರೆ 'JioCinema'ದಲ್ಲಿ ಬಿಗ್‌ಬಾಸ್ ಕನ್ನಡ ನೇರಪ್ರಸಾರ ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು 'JioCinema'ದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು 'Colors Kannada'ದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು.