ವಿನಯ್ ಸಂಗೀತಾ ಜೊತೆಗೆ ಮಾತನಾಡದೆ ಕಾರ್ತಿಕ್ ಬಳಿಯೇ ತಿರುಗಿ, "ನನ್ನ ವೈಸ್ ಕೇಳಿದ್ರೆ ಕಿವಿ ಮುಚ್ಕೊಳೋಕೆ ಹೇಳು. ಇಲ್ಲಾ ದೂರ ಇರೋದಕ್ಕೆ ಹೇಳು' ಎಂದು ಹೇಳಿ ಸಂಗೀತಾ ಕಡೆಗೆ ತಿರುಗಿ, 'ಪ್ಲೀಸ್ ಡಿಲೀಟ್ ಮೀ ಇನ್ ಯುವರ್ ಹೆಡ್' ಎಂದಿದ್ದಾರೆ. ಅದಕ್ಕೆ ಸಂಗೀತಾ, 'ಸ್ಟೋರ್ ಆಗಿದ್ರೆ ತಾನೇ ಡಿಲೀಟ್ ಮಾಡ್ಬಹುದು' ಎಂದು ಮತ್ತೆ ಕೆಣಕಿದ್ದಾರೆ
ಬಿಗ್ ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋ ನಡೆಯುತ್ತಿರುವುದು ಗೊತ್ತೇ ಇದೆ. ಬಿಗ್ ಬಾಸ್ ಮನೆ ಇಬ್ಭಾಗವಾಗಿದೆ. ವಿನಯ್ -ತನಿಷಾ ಜಗಳ ಮುಗಿದು ಈಗ ವಿನಯ್ ಮತ್ತು ಸಂಗೀತಾ ಜಗಳ ಹೊತ್ತಿಕೊಂಡು ಉರಿಯುತ್ತಿದೆ. ನಿನ್ನೆ ಸಂಗೀತಾಗೆ ಎಲ್ರೂ ನನ್ನ ಟಾರ್ಗೆಟ್ ಮಾಡ್ತಿದಾರೆ ಅನಿಸ್ತಿದ್ರೆ, ಈವತ್ತು ವಿನಯ್ ಪಾಳಿ. ಇದುವರೆಗೂ ಸ್ಟ್ರಾಂಗ್ ಆಗಿಯೇ ಇದ್ದ ವಿನಯ್ ಕಣ್ಣುಗಳಲ್ಲಿ ಇಂದು ನೀರು ಉಕ್ಕಿದೆ. ಹಾಗೆಯೇ ಅವರ ಧ್ವನಿಯೂ ಜೋರಾಗಿದೆ.
"ಅವ್ಳು ನನ್ನಿಂದ ಡಿಪ್ರೆಶನ್‌ಗೆ ಹೋಗ್ತಿದಾಳೆ ಅಂತಾರೆ. ಅವ್ಳು ನೋಡಿದ್ರೆ ನನ್ನಿಂದ ಥ್ರೆಟ್ ಇದೆ ಅಂತಿದಾಳೆ. ಯಾರಿಗ್ ಏನ್ ಮಾಡಿದೀನಿ ಗುರು ನಾನು?" ಎಂದು ವಿನಯ್, ಕಾರ್ತಿಕ್ ಬಳಿ ಕೂಗಾಡಿದ್ದಾರೆ. ಅವರ ಮಾತುಗಳನ್ನು ಕೇಳಿದ ಸಂಗೀತಾ ಶೃಂಗೇರಿ ನೇರವಾಗಿ ವಿನಯ್ ಎದುರಿಗೇ ಬಂದು ಕೂತು, "ನಿಮ್ಮಿಂದ ನನಗೆ ಡೇಂಜರ್ ಅಂತ ನಂಗೆ ಅನಿಸುತ್ತದೆ" ಎಂದು ತಣ್ಣಗೇ ಹೇಳಿದ್ದಾರೆ.
ವಿನಯ್ ಸಂಗೀತಾ ಜೊತೆಗೆ ಮಾತನಾಡದೆ ಕಾರ್ತಿಕ್ ಬಳಿಯೇ ತಿರುಗಿ, "ನನ್ನ ವೈಸ್ ಕೇಳಿದ್ರೆ ಕಿವಿ ಮುಚ್ಕೊಳೋಕೆ ಹೇಳು. ಇಲ್ಲಾ ದೂರ ಇರೋದಕ್ಕೆ ಹೇಳು' ಎಂದು ಹೇಳಿ ಸಂಗೀತಾ ಕಡೆಗೆ ತಿರುಗಿ, 'ಪ್ಲೀಸ್ ಡಿಲೀಟ್ ಮೀ ಇನ್ ಯುವರ್ ಹೆಡ್' ಎಂದಿದ್ದಾರೆ. ಅದಕ್ಕೆ ಸಂಗೀತಾ, 'ಸ್ಟೋರ್ ಆಗಿದ್ರೆ ತಾನೇ ಡಿಲೀಟ್ ಮಾಡ್ಬಹುದು' ಎಂದು ಮತ್ತೆ ಕೆಣಕಿದ್ದಾರೆ…ಒಟ್ಟಿನಲ್ಲಿ , ತನಿಷಾ ಬಳಿಕ ಈಗ ವಿನಯ್ ಜತೆ ನಟಿ ಸಂಗೀತಾಗೆ ಮನಸ್ತಾಪ ತಲೆದೋರಿದೆ. ಇನ್ನು ಮುಂದೆ ಇದು ಎಲ್ಲಿಗೆ ತಲುಪಲಿದೆ ಎಂಬುದನ್ನು ಕಾಲವೇ ನಿರ್ಧರಿಸಬೇಕೋನೋ!
ಟಗರು ಪಲ್ಯ ಟ್ರೈಲರ್ ಲಾಂಚ್: ಅಯ್ಯಯ್ಯೋ ನಮ್ ಹೆಂಗಸರನ್ನೇ ಮರೆತೆ.., ಎಂದಿದ್ಯಾಕೆ ರಂಗಾಯಣ್ ರಘು ..!?
ವಿನಯ್ ಸಹನೆಯ ಕಟ್ಟೆಯೊಡೆದು, 'ಯಾರ್ ಹೆಂಗಾದ್ರೂ ಸತ್ರೆ, ವೈ ಶುಡ್ ಐ ಕೇರ್' ಎಂದು ಕಿರುಚಿದ್ದಾರೆ. ಹಾಗಾದ್ರೆ ಮನೆಯೊಳಗೆ ಏನು ನಡೀತಿದೆ? ಸಂಗೀತಾ ಮತ್ತು ವಿನಯ್ ನಡುವೆ ಹೊತ್ತಿಕೊಂಡಿರುವ ಬೆಂಕಿಕಿಡಿಯನ್ನು ಆರಿಸ್ತಾರಾ ಕಾರ್ತಿಕ್? ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಕ್ಕಾಗಿ 'JioCinema'ದಲ್ಲಿ ಬಿಗ್‌ಬಾಸ್ ಕನ್ನಡ 24ಗಂಟೆ ಉಚಿತ ಪ್ರಸಾರವನ್ನು ನೋಡುತ್ತಿರಿ.
ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು 'JioCinema'ದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಮತ್ತು ಶನಿವಾರ ಮತ್ತು ಭಾನುವಾರ ರಾತ್ರಿ 9.00 ಗಂಟೆಗೆ ವೀಕ್ಷಿಸಿ..