ಅನುಪಮಾ ಗೌಡ ಈಗ ಓಪನ್ ವಾಟರ್ ಡೈವರ್! ಸಾಹಸಕ್ಕೆ ಸಿಗ್ತು ಸರ್ಟಿಫಿಕೇಟ್‌

By Suvarna News  |  First Published May 28, 2022, 12:01 PM IST

Anupama Gowda: ಕಿರುತೆರೆ ನಟಿ, ನಿರೂಪಕಿ ಅನುಪಮಾ ಗೌಡ ಈಗ ಥೈಲ್ಯಾಂಡ್‌ಗೆ ಹೋಗಿ ಅಲ್ಲಿನ ದ್ವೀಪವೊಂದರಲ್ಲಿ ಓಪನ್ ವಾಟರ್ ಡೈವರ್ ಸರ್ಟಿಫಿಕೇಟ್ ಪಡ್ಕೊಂಡಿದ್ದಾರೆ. ಈ ಸರ್ಟಿಫಿಕೇಟ್ ಸಿಕ್ರೆ ನೀರೊಳಗೆ ಏನೇನೆಲ್ಲ ಸಾಹಸ ಮಾಡಬಹುದು ಗೊತ್ತಾ..


ಅನುಪಮಾ ಗೌಡ(Anupama Gowda)  ಈಗ ಓಪನ್ ವಾಟರ್ ಡೈವರ್(Open Water Diver). ಥೈಲ್ಯಾಂಡ್‌(Thailand)ನಲ್ಲಿದ್ದು ಈ ಹೊಸ ಕೋರ್ಸ್ ಮುಗಿಸಿರುವ ಅವರು ಮೊದಲಿಂದಲೇ ಗಟ್ಟಿಗಿತ್ತಿ ಅಂತ ಕರೆಸಿಕೊಂಡವರು. ಅವರಿಗೆ ಇತ್ತೀಚೆಗೆ ಹೆಸರು ತಂದುಕೊಟ್ಟ ರಿಯಾಲಿಟಿ ಶೋ 'ನಮ್ಮಮ್ಮ ಸೂಪರ್ ಸ್ಟಾರ್' (Nammamma Superstar). ಅದಕ್ಕೂ ಮೊದಲು ಇನ್ನೊಂದು ಕಿರುತೆರೆಯ ಶೋ ನಿರೂಪಕಿಯಾಗೂ ಅನುಪಮಾ ಹೆಸರು ಮಾಡಿದ್ದರು. ಅವರಿಗೆ ಬಹಳ ಹೆಸರು ತಂದುಕೊಟ್ಟ ಸೀರಿಯಲ್ 'ಅಕ್ಕ'. ಸಿನಿಮಾಗಳಲ್ಲಿ ಡಬಲ್ ರೋಲ್ ಮಾಡೋದು ನೋಡಿದ್ದೀವಿ. ಅನುಪಮಾ 'ಅಕ್ಕ' ಸೀರಿಯಲ್‌ನಲ್ಲೇ ಡಬಲ್ ರೋಲ್ ಮಾಡಿದ ಗಟ್ಟಿಗಿತ್ತಿ. ಉಳಿದ ನಟಿಯರ ಹಾಗೆ ಡೈರೆಕ್ಟರ್ ಸೀನ್ ಪೇಪರ್ ಕೊಟ್ಟಾಗ ಅದರಲ್ಲಿರೋದನ್ನೇ ಬಾಯಿ ಪಾಠ ಮಾಡಿ ಗಿಣಿಯ ಹಾಗೆ ಕ್ಯಾಮರಾದೆದುರು ಡೈಲಾಗ್ ಉದುರಿಸಿದವರಲ್ಲ ಈ ನಟಿ. ಬದಲಿಗೆ ತಾನೆಂಥಾ ಟ್ಯಾಲೆಂಟೆಡ್ ಅನ್ನೋದನ್ನು ಈ ಪಾತ್ರದ ಮೂಲಕ ನಿರೂಪಿಸಿದವರು.

ಅಮುಲ್‌ ಬೇಬಿ- ರೌಡಿ ಬೇಬಿ ರಿಯಲ್‌ ಲೈಫ್‌ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಇಂಟ್ರೆಸ್ಟಿಂಗ್‌ ವಿಚಾರಗಳು

Tap to resize

Latest Videos

ಟ್ರಾವೆಲ್ ಮಾಡೋದು ಅನುಪಮಾ ಗೌಡ ಅವರ ಪ್ರೀತಿಯ ಹವ್ಯಾಸ. ಕಳೆದ ಸಲ ಅವರು ಕಿರುತೆರೆಯ ಫ್ರೆಂಡ್ಸ್ ಜೊತೆಗೆ ಗೋವಾ(Goa)ಗೆ ಹೋಗಿ ಅಲ್ಲಿ ಮಸ್ತ್ ಮಜಾ ಮಾಡಿ ಬಂದಿದ್ದರು. ಈಗ ಥೈಲ್ಯಾಂಡ್‌ಗೆ ಹೋಗಿದ್ದಾರೆ. ಅಲ್ಲಿ ಸುಮ್ಮನೆ ಸುತ್ತಾಡಿ, ಬೀಚ್‌ನಲ್ಲಿ ಬಿಕಿನಿ ಹಾಕ್ಕೊಂಡು ಫೋಸ್ ಕೊಟ್ಟು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಮೈಲೇಜ್ ತಗೊಂಡಿಲ್ಲ. ಬದಲಾಗಿ ಈ ಪ್ರವಾಸವನ್ನು ಅರ್ಥಪೂರ್ಣವಾಗಿ ಕಳೆದಿದ್ದಾರೆ. ಅವರು ಸಮುದ್ರದ ಆಳದಲ್ಲಿ ಸಂಚರಿಸೋ ಬಗ್ಗೆ ಇರುವ ಮೂರು ದಿನಗಳ ಕೋರ್ಸ್ ಮಾಡಿ ಅದಕ್ಕೆ ಪ್ರಾಕ್ಟಿಕಲ್ ಕ್ಲಾಸ್ ಪಡೆದು ಆಮೇಲೆ ಎಕ್ಸಾಂ ಬರೆದು ಇದೀಗ 'ಓಪನ್ ವಾಟರ್ ಡೈವರ್' ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ.

 

ಥೈಲ್ಯಾಂಡ್‌ನ ಕೋ ಸುಮೈ(Ko Samui)  ಐಲ್ಯಾಂಡ್ ಥೈಲ್ಯಾಂಡ್‌ನ ಎರಡನೇ ಅತೀ ದೊಡ್ಡ ದ್ವೀಪ. ಈ ದ್ವೀಪ ಮಳೆ ಸುರಿಸೋ ಕಾಡಿಗೆ, ವಿಶಾಲ ಮರಳದಂಡೆಗೆ, ಚಂದದ ಬೀಚ್‌ಗಳಿಗೆ ಫೇಮಸ್. ಇಲ್ಲಿ ಅದ್ಭುತವಾದ ಮ್ಯೂಸಿಕ್ ಬ್ಯಾಂಡ್‌ಗಳೂ(Music band) ಇವೆ. ನೀವು ಚಿತ್ರಗಳಲ್ಲೆಲ್ಲ ನೋಡಿರುವ ಥೈಲ್ಯಾಂಡ್‌ನ ಎತ್ತರ ಬುದ್ಧನ ಮೂರ್ತಿ ಇರೋದು ಈ ಜಾಗದಲ್ಲೇ.

Doresani serial : ಪುರುಷೋತ್ತಮ್ ಅವರೇ ಅದೆಷ್ಟು ಬಾರಿ ಎದೆ ಹಿಡ್ಕೊಂಡು ಕೂರ್ತೀರಾ?

ಈ ದ್ವೀಪ ಸ್ಕ್ಯೂಬಾ ಡೈವಿಂಗ್‌ಗೆ, ಸ್ಕ್ಯೂಬಾ ಡೈವಿಂಗ್‌ ಟ್ರೈನಿಂಗ್ ಗಳಿಗೆ, ಹೊಸ ಬಗೆಯ ಕೋರ್ಸ್ ಗಳಿಗೆ ಸಖತ್ ಫೇಮಸ್. ವಿಶ್ವದ ವಿವಿಧ ಭಾಗದ ಜನ ಇಲ್ಲಿಗೆ ಬಂದು ಈ ಸ್ಕ್ಯೂಬಾ ಡೈವಿಂಗ್(Scuba Diving) ಕಲಿತು ಸರ್ಟಿಫಿಕೇಟ್ ಪಡೆದು ಹೋಗ್ತಾರೆ. ಕಿರುತೆರೆ ನಟಿ ಅನುಪಮಾ ಗೌಡ ಇಲ್ಲಿಗೆ ಬಂದಿರೋದೂ ಅದೇ ಉದ್ದೇಶಕ್ಕೆ. ಅವರು ನಮ್ಮಮ್ಮ ಸೂಪರ್ ಸ್ಟಾರ್ ಶೂ ಮುಗಿದ ಕೂಡಲೇ ಉದ್ದದ ಕೂದಲನ್ನು ಕಟ್ ಮಾಡಿ ಕ್ಯಾನ್ಸರ್(Cancer) ರೋಗಿಗಳಿಗೆ ನೀಡುವ ಮೂಲಕ ಸುದ್ದಿಯಲ್ಲಿದ್ರು. ಆಮೇಲೆ ಅಲ್ಲಿಂದ ಸದ್ದಿಲ್ಲದೇ ಥೈಲ್ಯಾಂಡ್‌ಗೆ ಹಾರಿದ್ದಾರೆ. ಇಲ್ಲಿ ಸ್ಕ್ಯೂಬಾ ಟ್ರೈನಿಂಗ್ ಪಡೆದು ಮೊದಲ ಹಂತದ ಎಕ್ಸಾಂ ಪಾಸು ಮಾಡಿ ಸರ್ಟಿಫಿಕೇಟ್ ಪಡೆದು ಖುಷಿಯ ನಗೆ ಬೀರುತ್ತಿದ್ದಾರೆ.

ಅವರೀಗ ಪಡೆದಿರೋದು ಓಪನ್ ವಾಟರ್ ಡೈವರ್ ಅನ್ನೋ ಸ್ಕ್ಯೂಬಾದ ಮೊದಲ ಹಂತದ ಸರ್ಟಿಫಿಕೇಟ್. ಒಂದಿಷ್ಟು ಡಾಲರ್‌ಗಳನ್ನು ಪಾವತಿಸಿ ನಾಲ್ಕರಿಂದ ಏಳು ದಿನ ಅಂದರೆ ಟ್ರೈನಿಂಗ್ ಪಡೆದು ಎಕ್ಸಾಂ ಬರೆದು ಈ ಸರ್ಟಿಫಿಕೇಟ್ ಪಡೆಯಬಹುದು. ಈ ಕೋರ್ಸ್ ನ ಕೊನೆಯಲ್ಲಿ ನಿಮಗೆ ಸಮುದ್ರದಾಳದಲ್ಲಿ ಸಂಚರಿಸೋ ಬಗ್ಗೆ ಜ್ಞಾನ ಸಿಗುತ್ತೆ. ಒಂದಿಷ್ಟು ಹೊಸ ಬಗೆಯ ಟೆಕ್ನಿಕಲ್ ಅಂಶಗಳನ್ನು ಕಲಿಯಬಹುದು. ಈ ಸರ್ಟಿಫಿಕೇಟ್ ಪಡೆದರೆ ವಿಶ್ವದ ಎಲ್ಲಿ ಬೇಕಿದ್ದರೂ ಹೋಗಿ ಅಂಡರ್‌ವಾಟರ್ ನಲ್ಲಿ ಸ್ಕ್ಯೂಬಾ ಡೈವಿಂಗ್ ಮಾಡಬಹುದು. ಸುಮಾರು ೬೦ ಫೀಟ್‌ಗಳವರೆಗೆ ಸಮುದ್ರದ ಆಳದಲ್ಲಿ ಸ್ಕ್ಯೂಬಾ ಡೈವಿಂಗ್ ಮಾಡಬಹುದು. 10 ವರ್ಷ ಮೇಲ್ಪಟ್ಟವರು, ದೈಹಿಕ ಸಮಸ್ಯೆ ಇಲ್ಲದ ಆರೋಗ್ಯವಂತರು ಈ ಟ್ರೈನಿಂಗ್ ಪಡೆಯಬಹುದು.

Sathya Serial: ಅಮೂಲ್ ಬೇಬಿ ನಡುದಾರೀಲಿ ಬಿಟ್ರೆ, ಮದ್ವೆ ಸೀರೆಯಲ್ಲೇ ಬೈಕ್ ಏರಿ ಬಂದ್ಲು ಸತ್ಯ!

ಈ ಹೊಸ ಅನುಭವದ ಬಗ್ಗೆ ಅನುಪಮಾಗೆ ಬಹಳ ಖುಷಿ ಕೊಟ್ಟಿದೆಯಂತೆ. ಅದ್ಭುತ ಹವಾಮಾನ ಇರುವ ಆಗಾಗ ಮಳೆಯಾಗುವ ಕೊಸುಮೈ ಅನ್ನೋ ದ್ವೀಪದಲ್ಲಿ ಅವರೀಗ ಇದ್ದಾರೆ. ಅಲ್ಲಿನ ವೆದರ್ ಎನ್‌ಜಾಯ್ ಮಾಡುವ ಜೊತೆಗೆ ಈ ಹೊಸ ಅನುಭವ ಅವರಿಗೆ ಥ್ರಿಲ್ಲಿಂಗ್ ಅನಿಸಿದೆ.

click me!