ಮಕ್ಕಳು‌ ಅಮ್ಮನ‌‌ ಮುಂದೆ ‌‌ಬೇರೆಯವರನ್ನು‌ ಹೊಗಳಿದ್ರೆ‌ ಸಹಿಸೋದು ಕಷ್ಟ..ಸೀತಾ‌ ನೋವು‌ ಸಿಹಿಗೆ ಗೊತ್ತಾಗ್ತಿಲ್ಲ

By Roopa Hegde  |  First Published Sep 20, 2024, 2:18 PM IST

ಸೀತಾರಾಮ ಧಾರಾವಾಹಿಯಲ್ಲಿ ಅಮ್ಮನ ಹಿಂದೆ ತಿರುಗ್ತಿದ್ದ ಸಿಹಿ ಈಗ ಬದಲಾಗಿದ್ದಾಳೆ. ಆಕೆ ಮಾತಿನ ಮಧ್ಯೆ ನೂರು ಬಾರಿ ಶ್ಯಾಮ್ – ಶಾಲಿನಿ ಬರ್ತಿದ್ದು, ಇದು ಸೀತಾ ನೋವಿಗೆ ಕಾರಣವಾಗಿದೆ. ಮಗಳನ್ನು ಕಳೆದುಕೊಳ್ಳುವ ಭಯ ಕಾಡ್ತಿದೆ.


ಝೀ ಕನ್ನಡದ ಸೀತಾರಾಮ ಸೀರಿಯಲ್ (Zee Kannada Sitarama serial) ನಲ್ಲಿ ತಾಯಿ – ಮಗುವಿನ ಕಥೆಯನ್ನು ಸುಂದರವಾಗಿ ಹೆಣೆಯಲಾಗ್ತಿದೆ. ಅಮ್ಮಂದಿರಿಗೆ ಮಾತ್ರ ಈಗ ಸೀತಾ ಸ್ಥಿತಿ, ನೋವು ಅರ್ಥವಾಗಲು ಸಾಧ್ಯ. ಸಿಹಿ, ಸೀತಾ (Sita)ಳ ಮುದ್ದಿನ ಮಗಳು. ಕಾಂಟ್ರೆಕ್ಟ್ ಮೇಲೆ ಮಗುವನ್ನು ಹೆತ್ತರೂ ಅದನ್ನು ಹೊರುವ ಜವಾಬ್ದಾರಿ ಕೂಡ ಸೀತಾ ಮೈಮೇಲೆ ಬಂದಿತ್ತು. ಸಿಹಿಯ ಗುಟ್ಟು ಮನೆಯವರಿಗೆ ಗೊತ್ತಿಲ್ಲವಾದ್ರೂ ವೀಕ್ಷಕರಿಗೆ ತಿಳಿದಿದೆ. ಹಾಗಾಗಿ ಸೀತಾಳಿಂದ ಸಿಹಿ ದೂರವಾಗೋದನ್ನು ಅವರಿಂದಲೂ ಸಹಿಸಲು ಸಾಧ್ಯವಾಗ್ತಿಲ್ಲ.

ಸೀತಾರಾಮದಲ್ಲಿ ಶ್ಯಾಮ್ (Shyam) ಮತ್ತು ಶಾಲಿನಿ (Shalini) ಎಂಟ್ರಿ ಇಡೀ ಸೀರಿಯಲ್ ಚಿತ್ರಣ ಬದಲಿಸಿದೆ. ಸೀತಾ ಹಾಗೂ ರಾಮನ ರೋಮ್ಯಾನ್ಸ್ ಜೊತೆ ಇನ್ನೊಂದು ಮಗುವಿಗೆ ಪಟ್ಟು ಹಿಡಿದಿದ್ದ ಸಿಹಿ ಈಗ ಶ್ಯಾಮನಿಗೆ ಹತ್ತಿರವಾಗ್ತಿದ್ದಾಳೆ. ಕಣ್ಮುಂದೆಯೇ ಮಕ್ಕಳು ಇನ್ನೊಬ್ಬರ ಪಾಲಾಗೋದನ್ನು ನೋಡಲು ತಾಯಿಗೆ ಸಾಧ್ಯವಿಲ್ಲ. ಅದ್ರಲ್ಲೂ ಸೀತಾ, ಸಿಹಿ ಬೆಳೆಸಲು ಸಾಕಷ್ಟು ಕಷ್ಟಪಟ್ಟಿದ್ದು, ಸೀತಾ ಮುಂದೆಯೇ ಸಿಹಿ ಬೇರೆಯವರನ್ನು ಹೊಗಳಿದ್ರೆ ಹೊಟ್ಟೆಗೆ ಬೆಂಕಿ ಬಿದ್ದಂಗೆ ಆಗೋದು ಸಹಜ. ಮುಂದೊಂದು ದಿನ ಸಿಹಿಯನ್ನು ನಾನು ಕಳೆದುಕೊಳ್ಳುವ ಸ್ಥಿತಿ ಬಂದ್ರೆ ಎಂಬ ಭಯದಲ್ಲಿ ಸೀತಾ, ನಿದ್ರೆ ಬಿಟ್ಟಿದ್ದಾಳೆ.  

Tap to resize

Latest Videos

undefined

ಲೈವ್ ಇರಲ್ಲ, ಎಕ್ಸಟ್ರಾ ವಿಡಿಯೋ ಕೊಡಲ್ಲ; ಬಿಗ್ ಬಾಸ್‌ ಸೀಸನ್‌ 11ರ ಬಗ್ಗೆ ಮುಚ್ಚಿಟ್ಟಿದ್ದ ಬೇಸರದ ಸತ್ಯ ಇಲ್ಲಿದೆ!

ಸದಾ ಶ್ಯಾಮ್ ಮತ್ತು ಶಾಲಿನಿ ಜೊತೆ ಸಮಯ ಕಳೆಯುವ ಸಿಹಿ, ಸೀತಾಳಿಗೆ ಹೆಚ್ಚು ಮಹತ್ವ ನೀಡ್ತಿಲ್ಲ. ಶ್ಯಾಮ್ ನಿಂದ ಇಂಜೆಕ್ಷನ್ ತೆಗೆದುಕೊಂಡು, ಇದ್ದವರಿಗೆಲ್ಲ ಮುತ್ತುಕೊಟ್ಟು, ಅಮ್ಮ ಸೀತಾಳನ್ನು ಮರೆತುಹೋದಾಗ ಸೀತಾ ಕಣ್ಣೀರಿಟ್ಟಿದ್ದಳು. ರಾಮನ ಮುಂದೆ ಬಂದು ತನ್ನ ನೋವನ್ನು ತೋಡಿಕೊಂಡಿದ್ದಳು. ಸಿಹಿ, ಶ್ಯಾಮ್ ಜೊತೆ ಇದ್ದಾಗೆಲ್ಲ ಸೀತಾ ನೋವು ತಿನ್ನುತ್ತಿದ್ದಾಳೆ. ಈಗ ಸಿಹಿ, ಸೀತಾ ಮುಂದೆ ಶ್ಯಾಮ್ ಹಾಗೂ ಶಾಲಿಯನ್ನು ಹೊಗಳುತ್ತಿದ್ದಾಳೆ.

ಶ್ಯಾಮ್ ಹಾಗೂ ಶಾಲಿನಿ ಮಗು ಯಾವುದು ಎನ್ನುತ್ತಲೇ ಮಾತು ಶುರು ಮಾಡುವ ಸಿಹಿ, ಶ್ಯಾಮ್ ಹಾಗೂ ಶಾಲಿನಿ ಜೊತೆ ಇದ್ರೆ ಸಮಯ ಕಳೆಯೋದು ನನಗೆ ತಿಳಿಯೋದಿಲ್ಲ. ಅವರಿಬ್ಬರು ಹೊಸ ಕಥೆಗಳನ್ನು ಹೇಳ್ತಾರೆ. ಹೊಸ ಹೊಸ ಜೋಕ್ ಹೇಳ್ತಾರೆ. ನೀನು ಬರೀ ಓದು, ಬರಿ ಎನ್ನುತ್ತೀಯಾ ಎಂದು ಅಮ್ಮನಿಗೆ ಸಿಹಿ ಹೇಳ್ತಿದ್ದರೆ, ಸೀತಾ ನೋವಿನಲ್ಲಿ ಬೆಂದು ಹೋಗ್ತಾಳೆ. ರಾಮ್ ಜೊತೆ ಮಾತನಾಡುವಾಗ್ಲೂ ಸೀತಾಳಿಗೆ ಸಿಹಿಯನ್ನು ಕಳೆದುಕೊಳ್ಳುವ ಭಯ ಕಾಣ್ತಿದೆ. ಡಾಕ್ಟರ್ ಹೇಳಿದ ಮಾತುಗಳು, ಶ್ಯಾಮ್ ಹಾಗೂ ಶಾಲಿಯನ್ನು ನನ್ನ ಅಪ್ಪ – ಅಮ್ಮ ಎಂದ ಸಿಹಿ ಮಾತುಗಳು ಸೀತಾಳನ್ನು ಪದೇ ಪದೇ ಕಾಡ್ತಿದೆ. 

ಮಗುವನ್ನು ಹೆತ್ತು ಬೆಳೆಸುವ ವೇಳೆ ಯಾರೂ ನನ್ನ ಜೊತೆಗಿರಲಿಲ್ಲ. ಅವಳಿಗೆ ಎಲ್ಲವನ್ನೂ ಕಲಿಸಿದ ತಾಯಿ ನಾನು. ಈಗ ಆಕೆ ನನ್ನ ಮುಂದೆ ಬೇರೆಯವರಿಗೆ ಹತ್ತಿರವಾದ್ರೆ ನನಗೆಷ್ಟು ನೋವಾಗೋದಿಲ್ಲ ರಾಮ್ ಎನ್ನುವ ಸೀತಾ ಮಾತುಗಳು ವೀಕ್ಷಕರ ಕಣ್ಣು ತುಂಬಿಸೋದು ನಿಜ. 

ಅನುಬಂಧ ವೇದಿಕೆ ಮೇಲೆ ಹತ್ತಾರು ಭಾಗ್ಯಲಕ್ಷ್ಮಿಯರು- 25 ವರ್ಷಗಳ ಜರ್ನಿ ನೆನೆದು ನಟಿ ಸುಷ್ಮಾ ಕಣ್ಣೀರು

ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿರುವ ಸೀತಾರಾಮ ಧಾರಾವಾಹಿಯ ಈ ವಿಡಿಯೋಕ್ಕೆ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಒಬ್ಬ ಅಮ್ಮನಿಗೆ ಮಾತ್ರ ಇನ್ನೊಬ್ಬ ಅಮ್ಮನ ನೋವು ಅರ್ಥವಾಗಲು ಸಾಧ್ಯ ಎಂಬುದನ್ನು ಒಪ್ಪಿಕೊಂಡಿರುವ ವೀಕ್ಷಕರು, ನೋವಿನ ಈ ದೃಶ್ಯಗಳನ್ನು ವೀಕ್ಷಿಸೋದು ಕಷ್ಟ ಎಂದಿದ್ದಾರೆ. ಸಿಹಿ, ಸೀತಾ ಜೊತೆಯಾಗಿಯೇ ಇರಬೇಕು ಎಂಬುದು ಅನೇಕ ವೀಕ್ಷಕರ ಅಭಿಪ್ರಾಯವಾಗಿದೆ.

ಇತ್ತ ಶ್ಯಾಮ್ ಹಾಗೂ ಶಾಲಿನಿ ವಿಷ್ಯ ಎಷ್ಟೇ ಗುಟ್ಟಾಗಿದ್ರೂ, ಭಾರ್ಗವಿ ಬಾಯಿ ಬಿಡಿಸುವ ಪ್ರಯತ್ನ ನಡೆಸುತ್ತಿದ್ದಾಳೆ. ಶಾಲಿನಿ, ಡಾ. ಅನಂತಲಕ್ಷ್ಮಿ ಹೆಸರನ್ನು ಭಾರ್ಗವಿ ಮುಂದೆ ಹೇಳಿದ್ದಾಳೆ. ಭಾರ್ಗವಿ ಸತ್ಯ ತಿಳಿದು, ಆಟ ಶುರುಮಾಡೋ ದಿನ ದೂರವಿಲ್ಲ. ವಿಷ್ಯವನ್ನು ತುಂಬಾ ಎಳೆಯಬೇಡಿ, ಬೇಗ ಮುಗಿಸಿ ಅನ್ನೋದು ವೀಕ್ಷಕರ ಮಾತು. 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!