
ಮನೆಯಲ್ಲಿ ಹೆಂಡ್ತಿ ಇದ್ರೂ, ಬೇರೆ ಕಡೆ ಒಂದು ಸೆಟ್ಟಿಂಗ್ ಮಾಡಿಕೊಂಡಿರುವವರು ಹಲವರು ಇದ್ದಾರೆ. ಅದರಲ್ಲಿಯೂ ಆಗರ್ಭ ಶ್ರೀಮಂತರು, ರಾಜಕಾರಣಿಗಳು ಇದರಲ್ಲಿ ಒಂದು ಹೆಜ್ಜೆ ಮುಂದೆ ಎನ್ನಬಹುದು. ಅವರದ್ದೆಲ್ಲಾ ಗುಟ್ಟಾಗಿ ನಡೆದ್ರೆ, ಸಾಮಾನ್ಯ ವರ್ಗದವರು, ಬಡವರ ಇಂಥ ಬಂಡವಾಳಗಳು ಬಹುಬೇಗ ಬಯಲಾಗಿ ಹೋಗ್ತವೆ. ಇಂಥ ಸಂಬಂಧ ಇರುವ ಕಾರಣಕ್ಕಾಗಿಯೇ ಕಟ್ಟುಕೊಂಡವಳಿಗೆ ಒಂದು ಹೆಸ್ರು, ಇಟ್ಟುಕೊಂಡವಳಿಗೆ ಮತ್ತೊಂದು ಅಡ್ಡ ಹೆಸರು ಇಡುವಂಥ ಮೀಮ್ಸ್ಗಳು, ಜೋಕ್ಸ್ಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಿಗುತ್ತವೆ. ಇದೀಗ ಅಮೃತಧಾರೆಯ ಆಗರ್ಭ ಶ್ರೀಮಂತ ಜೈದೇವನ ಡೈಲಾಗ್ ಒಂದು, ಜೈದೇವನ ಅಭಿಮಾನಿಗಳಿಗೆ ಸಕತ್ ಖುಷಿ ಕೊಟ್ಟಿದೆ!
ಮಲ್ಲಿಯಂತ ಹೆಂಡ್ತಿ ಇದ್ದರೂ ಜೈದೇವ್ ದಿಯಾಳ ಬೆನ್ನಹಿಂದೆ ಬಿದ್ದಿದ್ದಾರೆ. ಶ್ರೀಮಂತ ಕುಳಗಳನ್ನು ಬುಟ್ಟಿಗೆ ಹಾಕಿಕೊಳ್ಳುವಲ್ಲಿ ದಿಯಾಳಂತ ಕೆಲವು ಹೆಣ್ಣುಮಕ್ಕಳೂ ಕಮ್ಮಿ ಇಲ್ಲ ಎನ್ನಿ. ಇದು ಸೀರಿಯಲ್ ಕಥೆಯಾದ್ರೆ, ನಿಜ ಜೀವನದಲ್ಲಿಯೂ ಈಕೆಯಂಥವರು ಕಾಣಸಿಗುತ್ತಾರೆ. ಮದುವೆಯಾದವರೇ ಇಂಥ ಹೆಣ್ಣುಮಕ್ಕಳ ಟಾರ್ಗೆಟ್. ಯಾಕೆಂದರೆ ಅವರ ಬಂಡವಾಳ ಇವರಿಗೆ ಗೊತ್ತಿರುವ ಕಾರಣ, ಅವರನ್ನು ಸುಲಭದಲ್ಲಿ ಆಡಿಸಬಹುದು, ಗಂಡಸರು ಕೂಡ ಕದ್ದುಮುಚ್ಚಿ ಇಂಥ ವ್ಯವಹಾರ ನಡೆಸುವ ಕಾರಣ, ಅವರು ತಮ್ಮ ತಾಳಕ್ಕೆ ಕುಣಿಯುತ್ತಾರೆ ಎನ್ನುವುದು ಇಂಥ ಹೆಣ್ಣುಮಕ್ಕಳಿಗೆ ಚೆನ್ನಾಗಿ ಗೊತ್ತಿದೆ. ಇದೇ ಕಾರಣಕ್ಕೆ ಮದುವೆಯಾದವರನ್ನೇ ಹೊಂಚು ಹಾಕುವ ಕೆಲವು ಯುವತಿಯರು, ಐಷಾರಾಮಿ ಜೀವನವನ್ನು ಮಾಡುತ್ತಾ ಮತ್ತೊಬ್ಬರ ಮನೆಯನ್ನು ಹಾಳು ಮಾಡುತ್ತಾ ಎಂಜಾಯ್ ಮಾಡುತ್ತಿರುತ್ತಾರೆ.
ಸೀತಾರಾಮ ಸೀರಿಯಲ್ಗೆ ಇದೇನಿದು ಟ್ವಿಸ್ಟ್? ನಟಿಯ ಎಂಗೇಜ್ಮೆಂಟ್ ಎಫೆಕ್ಟಾ?
ಅದನ್ನೇ ಈಗ ಅಮೃತಧಾರೆಯಲ್ಲಿಯೂ ತೋರಿಸಲಾಗಿದೆ. ಈ ಅಕ್ರಮ ಸಂಬಂಧದ ಬಗ್ಗೆ ಮಲ್ಲಿಗೆ ತಿಳಿದಿದ್ದರೂ ಅದನ್ನು ಆಕೆ ಬಾಯಿ ಬಿಡುತ್ತಿಲ್ಲ.ಪತಿಯನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎನ್ನುವುದನ್ನು ಪೆದ್ದು ಮಲ್ಲಿ ಅರಿತಿದಿದ್ದಾಳೆ. ಆದರೆ ದಿಯಾ ಪದೇ ಪದೇ ಕಾಲ್ ಮಾಡುವ ಕಾರಣ, ಹೆಂಡತಿಯ ಮುಂದೆ ಜೈದೇವ್ಗೆ ಏನು ಮಾತನಾಡಬೇಕು ಎಂದು ತಿಳಿಯದೇ ಪೇಚಿಗೆ ಸಿಲುಕುವ ಸ್ಥಿತಿ. ಆದರೆ ತನ್ನ ಪತ್ನಿಗೆ ತನ್ನ ಬಂಡವಾಳ ಗೊತ್ತಿಲ್ಲ ಎಂದೇ ಅಂದುಕೊಂಡಿರೋ ಆತ, ಪತ್ನಿ ಮಲ್ಲಿಯ ಎದುರು ಆಫೀಸ್ನಿಂದ ಯಾವುದೋ ಕಾಲ್ ಬಂದವರಂತೆ ಮಾತನಾಡುತ್ತಾ ಬ್ಯಾಲೆನ್ಸ್ ಮಾಡದೇ ವಿಧಿಯಿಲ್ಲ. ಇವೆಲ್ಲಾ ಮಲ್ಲಿಗೆ ತಿಳಿದಿದ್ದರೂ ಅದನ್ನು ಸೂಕ್ಷ್ಮವಾಗಿ ಹ್ಯಾಂಡಲ್ ಮಾಡುತ್ತಿದ್ದಾಳೆ.
ಅಮೃತಧಾರೆಯ ಪ್ರೊಮೋ ಒಂದು ಇದೀಗ ಬಿಡುಗಡೆಯಾಗಿದೆ. ಇದರಲ್ಲಿ ದಿಯಾಳ ಕಾಲ್ ಬಂದಾಗ, ಜೈದೇವ್ ಮಲ್ಲಿಯ ಎದುರು ಆಫೀಸ್ನವರ ಕಾಲ್. ಮೀಟಿಂಗ್ಗೆ ಕರೆಯುತ್ತಿದ್ದಾರೆ ಎಂದಿದ್ದಾನೆ. ಇದರ ಬಗ್ಗೆ ತಿಳಿದಿದ್ದರೂ ಮಲ್ಲಿ ಏನೂ ಗೊತ್ತಿಲ್ಲದವರ ರೀತಿ ನಾಟಕವಾಡುತ್ತಿದ್ದಾಳೆ. ಅತ್ತ ದಿಯಾ ನನ್ನನ್ನು ಸಿಗಲು ನೀವು ಬರಲೇ ಇಲ್ಲ ಎಂದಾಗ, ಜೈದೇವ್ ಹೇಳಿದ ಡೈಲಾಗ್ ಈಗ ಸಕತ್ ಸೌಂಡ್ ಮಾಡುತ್ತಿದೆ. ಅದರಲ್ಲಿ ಅವನು ಮೇನ್ ಆಫೀಸ್ ಆದ್ರೇನು, ಬ್ರ್ಯಾಂಚ್ ಆಫೀಸ್ ಆದ್ರೇನು ಎಲ್ಲಾ ಕಡೆ ಮಾಡುವ ಕೆಲಸ ಒಂದೇ ಅಲ್ವಾ ಎಂದಿದ್ದಾನೆ. ಇದ್ಯಾಕೋ ಪಡ್ಡೆ ಹೈಕಳಿಗೆ ಸಕತ್ ಇಷ್ಟವಾಗಿದ್ದು, ಕಮೆಂಟ್ಸ್ನಲ್ಲಿ ವ್ಹಾರೆವ್ಹಾ ಈ ಡೈಲಾಗ್ ಎನ್ನುತ್ತಿದ್ದಾರೆ.
ಆದರೆ, ಮಲ್ಲಿಗೂ ಇದೆಲ್ಲಾ ಅರ್ಥವಾಗಿದೆ. ಅದಕ್ಕೇ ಆಕೆ, ಈಗಿನ ಹೆಂಡತಿಯರೇ ಸರಿಯಿಲ್ಲ ಎಂದಿದ್ದಾಳೆ. ಜೈದೇವ್ ಯಾಕೆ ಎಂದು ಕೇಳಿದಾಗ, ಅದ್ಯಾರೋ ಹೆಂಡತಿ ಮೋಸ ಮಾಡಿದ ತನ್ನ ಗಂಡ ಮಲಗಿದ್ದಾಗ ತಲೆಯ ಮೇಲೆ ಕಲ್ಲು ಹಾಕಿ ಸಾಯಿಸೇಬಿಟ್ಟಳಂತೆ ಎಂದಾಗ ಜೈದೇವ್ ಕಂಗಾಲಾಗಿ ಹೋಗಿದ್ದಾನೆ. ಕುಂಬಳಕಾಯಿ ಕಳ್ಳ ಎನ್ನುವ ಸ್ಥಿತಿ ಅವನ್ನಾಗಿದೆ. ನಿನಗೆ ಹೇಗೆ ಗೊತ್ತಾಯ್ತು ಎಂದು ಕೇಳಿದಾಗ, ಮೊಬೈಲ್ನಲ್ಲಿ ನೋಡಿದೆ ಎಂದು ಟಾಂಟ್ ಕೊಟ್ಟಿದ್ದಾಳೆ ಮಲ್ಲಿ. ಆದರೆ ನೀವು ಬಿಡಿ ತುಂಬಾ ಒಳ್ಳೆಯವರು ಎಂದು ಪತಿಗೆ ಹೇಳಿದಾಗ, ಆತ ಕೂಡ ಸದ್ಯ ತಾನು ಬಚಾವಾಗಿದ್ದೇನೆ ಎಂದುಕೊಂಡಿದ್ದಾನೆ. ಅದೇ ಇನ್ನೊಂದೆಡೆ, ಸರದಲ್ಲಿ ಮೈಕ್ ಇಟ್ಟಿರುವುದು ಶಕುಂತಲಾ ಎನ್ನುವುದು ಭೂಮಿಕಾಗೆ ಗೊತ್ತಾಗುವ ಕಾಲ ಹತ್ತಿರ ಬಂದಿದ್ದು, ಇದನ್ನು ಅರಿತಿರುವ ಶಕುಂತಲಾ ಏನು ಮಾಡ್ತಾಳೆ ನೋಡಬೇಕಿದೆ.
ವೈಷ್ಣವಿ ಗುಟ್ಟಾದ ನಿಶ್ಚಿತಾರ್ಥದ ಹಿಂದಿದ್ಯಾ ಈ ವೈರಲ್ ವಿಡಿಯೋ? ಏನದು ಭವಿಷ್ಯವಾಣಿ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.