'ಭಯಾನಕ ಗಾಯಕ' ಗಾನ ಗಂಧರ್ವ ರಾಜ್‌ಕುಮಾರ್‌ ದನಿ ವ್ಯಂಗ್ಯವಾಡಿದ ಸಿಂಗರ್‌ಗೆ ಚಳಿ ಬಿಡಿಸಿದ ಕನ್ನಡಿಗರು!

Published : Feb 27, 2025, 06:17 PM ISTUpdated : Feb 28, 2025, 12:30 PM IST
'ಭಯಾನಕ ಗಾಯಕ' ಗಾನ ಗಂಧರ್ವ ರಾಜ್‌ಕುಮಾರ್‌ ದನಿ ವ್ಯಂಗ್ಯವಾಡಿದ ಸಿಂಗರ್‌ಗೆ ಚಳಿ ಬಿಡಿಸಿದ ಕನ್ನಡಿಗರು!

ಸಾರಾಂಶ

ಯುವ ಗಾಯಕನೊಬ್ಬ ಡಾ.ರಾಜ್‌ಕುಮಾರ್ ಅವರ ಗಾಯನದ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಇದರಿಂದ ಕುಪಿತಗೊಂಡ ಅಭಿಮಾನಿಗಳು ಆತನಿಗೆ ತಕ್ಕ ತಿರುಗೇಟು ನೀಡಿದ್ದಾರೆ.

ರಾಜ್‌ಕುಮಾರ್‌ ಅನ್ನೋ ಹೆಸರು ಕನ್ನಡಿಗರು ಎಂದೂ ಮರೆಯದ ಸಂಪತ್ತು. ಕನ್ನಡಿಗರ ಕಣ್ಮಣಿಯಾಗಿ ವರನಟನಾಗಿ, ಗಾನಗಂಧರ್ವನಾಗಿ ಕನ್ನಡದ ಕಲಾಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟುಕೊಂಡವರು. ರಾಜಕೀಯಕ್ಕೆ ಇಳಿದರೆ ಸಲೀಸಾಗಿ ಮುಖ್ಯಮಂತ್ರಿಯಾಗುವಷ್ಟು ಅಭಿಮಾನಿ ಬಳಗ ಹೊಂದಿದ್ದ ಡಾ.ರಾಜ್‌ಕುಮಾರ್‌, ಕನ್ನಡಿಗರ ಪಾಲಿಗೆ ಕೊನೆಯವರೆಗೂ ವರನಟನಾಗಿಯೇ ಉಳಿದುಕೊಂಡಿದ್ದರು. ಅದ್ಭುತ ನಟನಾಗಿದ್ದರೂ, ಸಂಗೀತದಲ್ಲಿ ಅಷ್ಟೇ ಪಾಂಡಿತ್ಯ ಹೊಂದಿದ್ದ ಡಾ.ರಾಜ್‌ಕುಮಾರ್‌, 'ನಾದಮಯ..' ಗೀತೆಗೆ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದರು. ಇದರ ನಡುವೆ ಸೋಶಿಯಲ್‌ ಮೀಡಿಯಾದಲ್ಲಿ ಡಾ.ರಾಜ್‌ಕುಮಾರ್‌ ಅವರೊಬ್ಬ ಭಯಾನಕ ಗಾಯಕ ಎಂದು ಯುವ ಸಿಂಗರ್‌ವೊಬ್ಬ ಮಾಡಿರುವ ಪೋಸ್ಟ್‌ ಕೋಲಾಹಲಕ್ಕೆ ಕಾರಣವಾಗಿದೆ.

ಫೆ.25 ರಂದು ಸೋಶಿಯಲ್‌ಮಿಡಿಯಾದಲ್ಲಿ ಸಂಜಯ್‌ ನಾಗ್‌ ಎನ್ನುವ ಯುವ ಗಾಯಕ 'ಡಾ. ರಾಜ್‌ಕುಮಾರ್‌ ಅವರು ಬಹುಶಃ ಅತ್ಯುತ್ತಮ ನಟನಾಗಿರಬಹುದು. ಆದರೆ, ಭಯಾನಕ ಗಾಯಕ' ಎಂದು ಟ್ವೀಟ್‌ ಮಾಡಿದ್ದ. ಸೋಶಿಯಲ್‌ ಮೀಡಿಯಾದಲ್ಲಿ ಕ್ವಿಕ್‌ ಆಗಿ ಜನಪ್ರಿಯರಾಗಲು ಸಾಮಾನ್ಯವಾಗಿ ವಿವಾದಿತ ವಿಷಯಗಳನ್ನು ಟ್ವೀಟ್‌ ಮಾಡಿ ಟ್ರ್ಯಾಕ್ಷನ್‌ ಪಡೆದುಕೊಂಡು ವೈರಲ್‌ ಆಗೋದು ಇತ್ತೀಚಿನ ದಿನಗಳ ಸಾಮಾನ್ಯವಾಗಿದೆ. ಆದರೆ, ಸಂಜಯ್‌ ನಾಗ್‌ ವಿಚಾರದಲ್ಲಿ ಹಾಗಾಗಲಿಲ್ಲ. ರಾಜ್‌ಕುಮಾರ್‌ ಗಾಯನದ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್‌ ಮಾಡಿದ ಬೆನ್ನಲ್ಲಿಯೇ ಎಷ್ಟು ಮಟ್ಟದ ಆಕ್ರೋಶ ವ್ಯಕ್ತವಾಗಿತ್ತೆಂದರೆ ಅವರ ಟೈಮ್‌ಲೈನ್‌ನಲ್ಲಿ ಸಾಲು ಸಾಲು ರಾಜ್‌ಕುಮಾರ್‌ ಹಾಡುಗಳ ಸುರಿಮಳೆಯಾಗಿತ್ತು. ಇದರಿಂದ ಬೆಚ್ಚಿಬಿದ್ದ ಯುವಕ ತನ್ನ ಅಕೌಂಟ್‌ಅನ್ನೇ ಡಿಲೀಟ್‌ ಮಾಡಿದ್ದಾನೆ. ಆದರೆ, ಆತ ಡಿಲೀಟ್‌ ಮಾಡುವ ವೇಳೆಗಾಗಲೇ ರಾಜ್‌ಕುಮಾರ್‌ ಅವರ ಎಷ್ಟು ಶ್ರೇಷ್ಠ ಗಾಯಕ ಅನ್ನೋದರ ಬಗ್ಗೆ ವಿಡಿಯೋ ಸಾಕ್ಷಿ ಸಮೇತ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.

'Let's fill the timeline with #DrRajkumar songs. ಅಣ್ಣಾವ್ರು ಹಾಡೋದು ಕೇಳೋದು ಒಂದು ಭಾಗ್ಯ. ಅವರ ಧ್ವನಿ ನಾ ಕರ್ಕಶ ಅನ್ನೋ ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ' ಎಂದು ಯೂಸರ್‌ ಒಬ್ಬರು ಬರೆದಿದ್ದು, 'ಆ ಕೆಂಪು ತಾವರೆ ಆ ನೀರಿಗಾದರೆ..' ಅನ್ನೋ ರಾಜ್‌ಕುಮಾರ್‌ ಹಾಡನ್ನು ಹಂಚಿಕೊಂಡಿದ್ದಾರೆ.'ಹಾಡಿಗಾಗಿ ನ್ಯಾಷನಲ್ ಅವಾರ್ಡ ಪಡೆದುಕೊಂಡಿರೋ Dr. ರಾಜ್ ಅವರ ಬಗ್ಗೆ ಮಾತಾಡೋಕೆ ಯೋಗ್ಯತೆ ಇರಬೇಕು.ಅವರ ಗಾಯನ ಕರ್ಕಶ ಅಂದವನು ಬೇರೆ ರಾಜ್ಯದ ನಾಯಿ ಇರಬೇಕು' ಎಂದು ಮತ್ತೊಬ್ಬರು ಬರೆದಿದ್ದಾರೆ.

'ಅಣ್ಣಾವ್ರು ಹಾಡೋದು ಕೇಳೋದು ಒಂದು ಭಾಗ್ಯ. ಅವರ ಧ್ವನಿ ನಾ ಕರ್ಕಶ ಅನ್ನೋ ಸೆಡೆ ಗಳಿಗೆ ಹೇಳೋದು ಒಂದೇ ಈ ಹಾಡನ್ನ ನೀವುಗಳು ಹಾಡೋದು ಏನು ಬೇಡ ಅದು ಕನಸ್ಸಲ್ಲು ಆಗಲ್ಲ.ಸ್ಪಷ್ಟವಾಗಿ ಓದಿ ತೋರಿಸಿ ಸಾಕು ಆಮೇಲೆ ಅವರ ಧ್ವನಿ ಬಗ್ಗೆ ಮಾತಾಡುವಿರಂತೆ' ಎಂದು ಕವಿರತ್ನ ಕಾಳಿದಾಸ ಸಿನಿಮಾದಲ್ಲಿ ರಾಜ್‌ಕುಮಾರ್‌ ಹಾಡಿದ ಹಾಡನ್ನು ಹಂಚಿಕೊಂಡಿದ್ದಾರೆ.

ಕಾರು ಕೇಳಿದ ಶಿವಣ್ಣಗೆ ಹೀಗೆ ಹೇಳಿದ್ದ ಅಪ್ಪು.. ಈಗ ಬೇಕಾ ಇವೆಲ್ಲಾ ಅಂದ್ರೂ ಯಾರೋ ಬಿಡ್ತಿಲ್ಲ..!

'ಕೆಲವು ಕಾಗೆಗಳು ಕೋಗಿಲೆಯನ್ನು ನೋಡಿ ಬರೀ ಉರ್ಕೋಬೇಕೋ ಅಷ್ಟೇ. ಈ ಸಾಂಗ್ ಒಳಗಡೆ ಅವರು ಮಾಡಿರೋ ವಾಯ್ಸ್ ಮೋಡ್ಯುಲಶನ್ ನಿಮ್ಮ ಫೇವರೆಟ್ Actor ಕೈಯಲ್ಲಿ  ಮಾಡಿಸ್ರಿ  ನೋಡೋಣ' ಎಂದು ಬರೆದು ಹಾಲುಜೇನು ಸಿನಿಮಾದಲ್ಲಿ ರಾಜ್‌ಕುಮಾರ್‌ ಹಾಡಿದ ಹಾಡನ್ನು ಹಂಚಿಕೊಂಡಿದ್ದಾರೆ. 'ಹೆ ದಿನಕರ ಶುಭಕರ ಹಾಡನ್ನು ದ್ವೇಷ ಮಾಡೋ ಕರ್ಕಶ ಜೀವಿಗಳು ಇದ್ದಾರೆ ಎಂದು ಇವತ್ತೇ ಗೊತ್ತಾಗಿದ್ದು' ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಅಮಿತಾಭ್ ಬೇಡಿಕೊಂಡ್ರೂ ಡಾ ರಾಜ್‌ ನಟಿಸಲಿಲ್ಲ; ಆದ್ರೂ 'ಕೂಲಿ' ಚಿತ್ರದಲ್ಲಿ ಅಣ್ಣಾವ್ರು ಇದ್ದಾರೆ..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!