ಎಲ್ಲರ ಹಾಗೆ ನಾನೂ ಹೆಂಡ್ತಿಗೆ ಭಯ ಪಡ್ತೇನೆ ಎಂದ ಅಮಿತಾಭ್, ಮಿಡ್​ನೈಟ್​ ಗುಟ್ಟು ಹೇಳಿಯೇ ಬಿಟ್ರು!

Published : Feb 27, 2025, 05:50 PM ISTUpdated : Feb 28, 2025, 10:00 AM IST
ಎಲ್ಲರ ಹಾಗೆ ನಾನೂ ಹೆಂಡ್ತಿಗೆ ಭಯ ಪಡ್ತೇನೆ ಎಂದ ಅಮಿತಾಭ್,  ಮಿಡ್​ನೈಟ್​ ಗುಟ್ಟು ಹೇಳಿಯೇ ಬಿಟ್ರು!

ಸಾರಾಂಶ

ಬಾಲಿವುಡ್ ನಟ ಅಮಿತಾಭ್ ಬಚ್ಚನ್ 82ರ ಹರೆಯದಲ್ಲೂ ಉತ್ಸಾಹದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಿರಿತೆರೆ, ಕಿರುತೆರೆ ಎರಡರಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಇತ್ತೀಚೆಗೆ 'ಕೌನ್ ಬನೇಗಾ ಕರೋಡ್‌ಪತಿ' ಕಾರ್ಯಕ್ರಮದಲ್ಲಿ ಪತ್ನಿ ಜಯಾ ಬಚ್ಚನ್ ಹಾಗೂ ಮಗ ಅಭಿಷೇಕ್ ಅವರಿಂದ ಬೈಸಿಕೊಳ್ಳುವ ಬಗ್ಗೆ ತಮಾಷೆಯಾಗಿ ಹೇಳಿದ್ದಾರೆ. ಅಲ್ಲದೆ, ಬಂಗಾಳಿ ಮಹಿಳೆಯರ ಜೊತೆ ವಾದಿಸುವುದು ಕಷ್ಟವೆಂದು ಅನುಭವ ಹಂಚಿಕೊಂಡಿದ್ದಾರೆ. ಅವರ ಎನರ್ಜಿ ಮತ್ತು ಹಾಸ್ಯ ಪ್ರಜ್ಞೆ ಎಲ್ಲರಿಗೂ ಸ್ಫೂರ್ತಿ.

ಬಾಲಿವುಡ್​​ ನಟ ಅಮಿತಾಭ್​ ಬಚ್ಚನ್​   ಬಾಲಿವುಡ್​ ಕಂಡ ಅಪರೂಪದ ನಟ. ಬ್ಲ್ಯಾಕ್​ ಆ್ಯಂಡ್​ ವೈಟ್​ ಚಿತ್ರದಿಂದ ಹಿಡಿದು ಈ 82ರ ಹರೆಯದಲ್ಲಿಯೂ ಅಷ್ಟೇ ಉತ್ಸಾಹದ ಚಿಲುಮೆಯಾಗಿ, ನಗೆಯ ಬುಗ್ಗೆಯಾಗಿ ಚಿಮ್ಮುತ್ತಿದ್ದಾರೆ. ಹಿರಿತೆರೆ, ಕಿರುತೆರೆ, ನಿರ್ದೇಶನ, ನಿರ್ಮಾಣ ಎಲ್ಲದರಲ್ಲಿಯೂ ಇವರದ್ದು ಎತ್ತಿದ ಕೈ. 1970ರ ದಶಕದಲ್ಲಿ ಜಂಜೀರ್, ದೀವಾರ್, ಆನಂದ್, ರೋಟಿ ಕಪಾಡಾ ಮತ್ತು ಮಕಾನ್ ಚಿತ್ರಗಳ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅಮಿತಾಭ್​ ಬಚ್ಚನ್​ ಅವರಿಗೆ ಈ ವಯಸ್ಸಿನಲ್ಲಿಯೂ ಉತ್ಸಾಹ ಬತ್ತಿಲ್ಲ. ಅವರ ಎನರ್ಜಿ ಇನ್ನೂ ಹಾಗೆಯೇ ಇದೆ. ವಯಸ್ಸೆನ್ನುವುದು ಮನಸ್ಸಿಗಲ್ಲ ಎನ್ನುವ ಮಾತು ಅಕ್ಷರಶಃ ಇವರಿಗೆ ಅನ್ವಯ ಆಗುತ್ತದೆ.  80ರ ಹರೆಯದಲ್ಲಿ ಬಿಗ್ ಬಿ ಫುಲ್ ಎನರ್ಜಿಯಿಂದ ಕಾಣಿಸಿಕೊಳ್ಳುತ್ತಿದ್ದಾರೆ. 

ಕೂಲಿ ಚಿತ್ರದಲ್ಲಿ ಮಾರಣಾಂತಿಕ ಗಾಯಗಳಿಂದ ಬದುಕಿ ಬಂದಿದ್ದ ಅಮಿತಾಭ್​ ಅವರು ಇತ್ತೀಚೆಗೆ ಪ್ರಾಜೆಕ್ಟ್ ಕೆ ಚಿತ್ರದ ಚಿತ್ರೀಕರಣದ ವೇಳೆಯಲ್ಲಿಯೂ ಗಂಭೀರ ಗಾಯಗಳಾಗಿದ್ದವು. ಇವೆಲ್ಲವುಗಳ ಹೊರತಾಗಿಯೂ ಅಮಿತಾಭ್​ ಬಚ್ಚನ್​ ಇಂದಿಗೂ ಅದೇ ಎನರ್ಜಿಯನ್ನು ಉಳಿಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಕೌನ್​ ಬನೇಗಾ ಕರೋರ್​ಪತಿ. ಈ ಕಾರ್ಯಕ್ರಮದಲ್ಲಿ ಅವರು ಸಾಕಷ್ಟು ತಮಾಷೆ ಮಾಡುತ್ತಲೇ ಇರುತ್ತಾರೆ. ಇದೀಗ ಅವರು ತಮ್ಮ ಪತ್ನಿ ಜಯಾ ಬಚ್ಚನ್​ ಬಗ್ಗೆ ಹೇಳಿದ್ದಾರೆ. ಪತ್ನಿ ಜಯಾ ಬಚ್ಚನ್, ಮಗ ಅಭಿಷೇಕ್ ಬಚ್ಚನ್ ಅವರಿಂದ ಎಂದಾದರೂ ಬೈಸಿಕೊಳ್ಳುತ್ತೀರಾ ಎನ್ನುವ ಪ್ರಶ್ನೆಗೆ ಅವರು ತಮಾಷೆಯಾಗಿ ನೀಡಿರುವ ಉತ್ತರ ಇದೀಗ ವೈರಲ್​ ಆಗುತ್ತಿದೆ.  

ಕೆಬಿಸಿ ಷೋನಲ್ಲಿ ಅಮಿತಾಭ್​ ಟೇಕ್ವಾಂಡೋ ಕಿಕ್! 82ರ ನಟನ ಎನರ್ಜಿಗೆ ಪ್ರೇಕ್ಷಕರು ಬೆರಗು- ವಿಡಿಯೋ ವೈರಲ್

 ಅಮಿತಾಭ್ ರಂತಹ ಅಮಿತಾಭ್ ಕೂಡ ಮನೆಯಲ್ಲಿ ಬೈಸಿಕೊಳ್ಳುತ್ತಾರಂತೆ. ಪತ್ನಿ ಜಯಾ ಬಚ್ಚನ್ ಹಾಗೂ ಮಗ ಅಭಿಷೇಕ್ ಬಚ್ಚನ್ ಅವರಿಂದ ಬೈಸಿಕೊಳ್ಳುವ ಸಮಯ ಎದುರಾಗುತ್ತದೆಯಂತೆ.  ಎದುರಿಗಿದ್ದ ಸ್ಪರ್ಧಿಯೊಬ್ಬರು “ನೀವು ತಡ ರಾತ್ರಿಯ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್  ಮಾಡುತ್ತೀರಿ. ಜಯಾ ಮೇಡಂ ಮತ್ತು ಅಭಿಷೇಕ್ ಭೈಯ್ಯಾ ಬೈಯುವುದಿಲ್ಲವೇ?’  ಎಂದು ಪ್ರಶ್ನಿಸಿದ್ದರು. ಆಗ ಅಮಿತಾಭ್​ ಬಹುತೇಕ ಎಲ್ಲ ಗಂಡಂದಿರ ಹಾಗೆ ನನಗೂ ಹೆಂಡ್ತಿ ಅಂದ್ರೆ ಭಯನೇ. ಆದ್ರೆ ವಿಷಯ ಬೇರೆ ಬೇರೆ ಇರುತ್ತೆ ಅಷ್ಟೇ. ನನ್ನ ವಿಷಯದಲ್ಲಿ ಹೇಳುವುದಾದರೆ, ನನ್ನ ಹೆಂಡತಿ ಭಯದಿಂದಲದೇ ಆಕೆ ಮಲಗಿದ ಮೇಲೆ ಸೋಷಿಯಲ್​ ಮೀಡಿಯಾದಲ್ಲಿ ತಡರಾತ್ರಿಯ ಸಮಯದಲ್ಲಿ ಪೋಸ್ಟ್ ಮಾಡುತ್ತೇನೆ’ ಎಂದು ಹೇಳಿ ನಕ್ಕು ಎಲ್ಲರನ್ನೂ ನಗಿಸಿದರು!

ಇದೇ ಕರೋಡ್ ಪತಿ-15ರ ಸೀಸನ್ನಿನಲ್ಲಿ ಕೆಲ ದಿನಗಳ ಹಿಂದೆಯೂ ಅಮಿತಾಭ್ ಇಂಥದ್ದೇ ಆಸಕ್ತಿಕರ ವಿಚಾರವನ್ನು ಹಂಚಿಕೊಂಡಿದ್ದರು. ಬಂಗಾಳಿ ಮಹಿಳೆಯೊಬ್ಬರು ಸ್ಪರ್ಧಿಯಾಗಿದ್ದ ಆ ಎಪಿಸೋಡ್ ನಲ್ಲಿ ಅಮಿತಾಭ್, ‘ಜೀವನದಲ್ಲಿ ಅನುಭವವಾಗುತ್ತ ಆಗುತ್ತ ಒಂದು ವಿಚಾರವನ್ನು ಅರಿತಿದ್ದೇನೆ, ಅದೆಂದರೆ, ಬಂಗಾಳಿ ಮಹಿಳೆಯೊಂದಿಗೂ ಎಂದಿಗೂ ವಾದಕ್ಕೆ ಬೀಳಬಾರದು. ಪತ್ನಿ ಜಯಾ ಬಚ್ಚನ್ ಕೂಡ ಬಂಗಾಳಿಯಾಗಿದ್ದು, ಅವರೊಂದಿಗೆ ವಾದಕ್ಕೆ ನಿಂತರೆ ತಾವು ಎಂದಿಗೂ ಗೆದ್ದದ್ದಿಲ್ಲ. ಪ್ರತಿಯೊಂದು ಸಮಯದಲ್ಲೂ ಜಯಾ ವಿಶೇಷ ರೀತಿಯಲ್ಲಿ ವಾದ ಮಂಡಿಸುತ್ತಾರೆ’ ಎಂದು ಹೇಳಿ ವೀಕ್ಷಕರನ್ನು ನಗೆಗಡಲಿಗೆ ದೂಡಿದ್ದರು. 

ಅಮಿತಾಭ್‌ ಸೊಂಪಾದ ಕೂದಲ ರಹಸ್ಯ ಇದಾ? ಸತ್ಯ ರಿವೀಲ್‌ ಮಾಡೇ ಬಿಟ್ಟರು ವೈದ್ಯರು!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!