ಯಾರವನು? ಚಾಲಾಕಿ ಹನುಮಂತ ಗುಣಗಾನ ಮಾಡ್ತಿರೋ ಆ ಸೊಕ್ಕಿನ ಶ್ರೀಮಂತ!

By Shriram BhatFirst Published Oct 26, 2024, 6:52 PM IST
Highlights

ಮುಗ್ದನಾ.. ಕಳ್ಳನಾ..? ಹನುಮಂತನ ಮೇಲೆ ಅನುಮಾನ..! ದೊಡ್ಮನೆಯಲ್ಲಿ ಸ್ಮಾರ್ಟ್​ಗೇಮ್ ಆಡ್ತಿದ್ದಾನಾ ಹನುಮಂತ..? ಯೆಸ್ ಬಿಗ್ ಬಾಸ್ ಮನೆ ಎಲ್ಲರ ಮುಖವಾಡ ಕಳಚುತ್ತೆ ಅನ್ನೋ ಮಾತು ನಿಜವಾಗಿದೆ.. 

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ವೈಯ್ಡ್ ಕಾರ್ಡ್ ಎಂಟ್ರಿ ಮೂಲಕ ದೊಡ್ಮನೆ ಪ್ರವೇಶ ಪಡೆದಿರುವ ಸರೆಗಮಪ ಖ್ಯಾತಿಯ ಸಿಂಗರ್ ಹನುಮಂತ, ಇದೀಗ ಮನೆಯ ಕ್ಯಾಪ್ಟನ್ ಆಗಿರೋದು ಗೊತ್ತೇ ಇದೆ. ಮೊದಮೊದಲು ಪೆದ್ದನಂತೆ, ಮುಗ್ಧನಂತೆ ಕಾಣಸುತ್ತಿದ್ದ ಹನುಮಂತ, ಇದೀಗ ಮುಗ್ಧನೂ ಅಲ್ಲ, ಪೆದ್ದನೂ ಅಲ್ಲ, ಭಲೇ ಚಾಲಾಕಿ ಅನಿಸಿಕೊಂಡಿದ್ದಾನೆ. ಕ್ಯಾಪ್ಟನ್‌ ಆಗಿರುವ ಹನುಮಂತ ಎಲ್ಲರನ್ನೂ ಅವರಿಗೆ ಅರಿವೇ ಆಗದಂತೆ ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾನೆ. 

ಇದೀಗ, ಹನುಮಂತ ಮನೆಮಂದಿಯೆಲ್ಲರೂ ಕುಳಿತಿರುವಾಗ ತಾನೊಬ್ಬನೇ ನಿಂತು ಹಾಡಿರುವ ಹಾಡೊಂದು ಸಖತ್ ವೈರಲ್ ಆಗುತ್ತಿದೆ. 'ಸೊಕ್ಕಿನ ಶ್ರೀಮಂತ..' ಎಂದು ಶುರುವಾಗುವ ಆ ಹಾಡನ್ನು ಅಲ್ಲಿರುವ ಸ್ಪರ್ಧಿ 'ತ್ರಿವಿಕ್ರಮ'ನ ಮುಖ ನೋಡುತ್ತ, ಅವನನ್ನೇ ಕೈ ಸನ್ನೆ ಮೂಲಕ ತೋರಿಸುತ್ತ ಹಾಡಿದ್ದಾನೆ ಹನುಮಂತ. ಆದರೆ, ತನ್ನನ್ನು ಬೆಟ್ಟು ಮಾಡಿ ತೋರಿಸುತ್ತ ಹಾಡುತ್ತಿದ್ದರೂ, ತ್ರಿವಿಕ್ರಮ ಹನುಮಂತನ ಹಾಡನ್ನು ಎಂಜಾಯ್ ಮಾಡುತ್ತಿದ್ದಾನೆ. ಉಳಿದವರೂ ಕೂಡ ಆ ಹಾಡಿಗೆ ತಲೆದೂಗುತ್ತಿದ್ದಾರೆ. 

Latest Videos

ಕೂಗಿದ್ರೂ ಪಕ್ಕದಲ್ಲಿ ಹೆಂಡತಿಯೂ ಇಲ್ಲ, ಸ್ನೇಹಿತೆಯೂ ಇಲ್ಲ: ಭಾರೀ ಬೆನ್ನು ನೋವು, ಅಯ್ಯೋ ದರ್ಶನ್!

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರೋ ಹನುಮಂತನ ಬಗ್ಗೆ ಮೊದಲು ಎಲ್ಲರೂ ಅನುಕಂಪ ವ್ಯಕ್ತಪಡಿಸ್ತಾ ಇದ್ರು. ದೊಡ್ಮನೆ ಗಲಾಟೆ ನಡುವೆ ಈ ಮುಗ್ದ ಹೇಗಿರ್ತಾನೆ ಅಂತ ಎಲ್ಲರೂ ಕಾಳಜಿ ವ್ಯಕ್ತಪಡಿಸಿದ್ರು. ಆದ್ರೆ ಈಗ ಹನುಮಂತನ ಬಗ್ಗೆ ಎಲ್ಲರೂ ಅನುಮಾನ ವ್ಯಕ್ತಪಡಿಸ್ತಾ ಇದ್ದಾರೆ. ಇವನು ನಿಜಕ್ಕೂ ಮುಗ್ದನಾ..? ಇಲ್ಲಾ ಚಾಲಾಕಿನಾ..? ಅಂತ ಡೌಟ್ ಪಡ್ತಾ ಇದ್ದಾರೆ. 

ಮುಗ್ದನಾ.. ಕಳ್ಳನಾ..? ಹನುಮಂತನ ಮೇಲೆ ಅನುಮಾನ..! ದೊಡ್ಮನೆಯಲ್ಲಿ ಸ್ಮಾರ್ಟ್​ಗೇಮ್ ಆಡ್ತಿದ್ದಾನಾ ಹನುಮಂತ..?
ಯೆಸ್ ಬಿಗ್ ಬಾಸ್ ಮನೆ ಎಲ್ಲರ ಮುಖವಾಡ ಕಳಚುತ್ತೆ ಅನ್ನೋ ಮಾತು ನಿಜವಾಗಿದೆ.. ಇಷ್ಟು ದಿನ ಹನುಮಂತನನ್ನ ಮುಗ್ದ ಮಾನವ ಅಂತ ಕರೀತಿದ್ದವರೆಲ್ಲಾ, ಈಗ ಆತನನ್ನ ಫೇಕ್ ವ್ಯಕ್ತಿ ಅಂತ ಟೀಕೆ ಮಾಡ್ತಾ ಇದ್ದಾರೆ. ಇವನು ಮಗ್ದ ಅಲ್ಲ ದೊಡ್ಡ ಕಳ್ಳ ಅಂತ ಟ್ರೋಲ್ ಮಾಡ್ತಾ ಇದ್ದಾರೆ.

ಈ ವಾರ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಹನುಮಂತ ಎಂಟ್ರಿ ಕೊಟ್ಟಾಗ , ಅಯ್ಯೋ ಪಾಪ ಅಂತಿದ್ದವರೆಲ್ಲಾ ಈಗ ಭಲೇ ಹನುಮ ಅಂತಿದ್ದಾರೆ. ಹನುಮಂತ ಮುಗ್ದನಂತೆ ಕಾಣ್ತಾನೆ ಆದ್ರೆ ನಿಜಕ್ಕೂ ಇವನು ಮುಗ್ದನಲ್ಲ ಅಂತಿದ್ದಾರೆ.

ಬೆಂಕಿ-ಬಿರುಗಾಳಿಯಲ್ಲಿ ಕೆಲಸ ಮಾಡಿದ್ದೀನಾ; ಅವರೆಲ್ಲರ ಮುಂದೆ ನಾನೇನು ಮಹಾ?

ಬಿಗ್ ಬಾಸ್​​ ಮನೆಗೆ ಬಂದಿದ್ದ ಹನುಮಂತ ತನಗೆ ವೆಸ್ಟರ್ನ್ ಟಾಯ್ಲೆಟ್ ಗೊತ್ತಿಲ್ಲ. ಇದನ್ನ ಹೇಗೆ ಬಳದೋದು ಅಂತ ಮುಗ್ದ ಪ್ರಶ್ನೆ ಕೇಳಿದ್ದ. ಅರೇ ಈತ ಬೆಂಗಳೂರಿಗೆ ಬಂದು 6-7 ವರ್ಷಗಳಾಯ್ತು.. ದೊಡ್ಡ ದೊಡ್ಡ ಶೋಗಳಲ್ಲಿ ಭಾಗಿದ್ದಾನೆ. ಅನೇಕ ದೊಡ್ಡ ನಗರಗಳಿಗೆ ಸಂಗೀತ ಕಾರ್ಯಕ್ರಮಕ್ಕೆ ಹೋಗಿದ್ದಾನೆ. ಅಲ್ಲೆಲ್ಲೂ ಇವನು ಕಮೋಡ್​​ನ ನೋಡೇ ಇಲ್ವಾ ಅಂತ ಜನ ಕನ್ಪ್ಯೂಸ್ ಆಗಿದ್ದಾರೆ.

ನಾಮಿನೇಟ್ ಮಾಡಲು ಕರೆದರೇ, ಈತ ತನ್ನನ್ನ ತಾನೇ ನಾಮಿನೇಟ್ ಮಾಡಿಕೊಳ್ತಾನೇ. ಅಗತ್ಯಕ್ಕಿಂತ ತುಸು ಹೆಚ್ಚೇ ನಾಟಕೀಯವಾಗಿ ಆಡುವ ಈತ, ನಾಟಕ ಮಾಡ್ತಾ ಇದ್ದಾನೆ ಅನ್ನೋದು ವೀಕ್ಷಕರಿಗೆ ಹುಟ್ಟಿರೋ ಅನುಮಾನ..!

 

 

click me!