ಬಿಗ್ ಬಾಸ್ ಮನೆಯಲ್ಲಿ ಗಾಯಕ ಹನುಮಂತನ ಕುತಂತ್ರ ಬುದ್ಧಿ ಬಿಚ್ಚಿಟ್ಟ ಯೋಗರಾಜ್ ಭಟ್!

By Sathish Kumar KH  |  First Published Oct 26, 2024, 5:18 PM IST

ಬಿಗ್ ಬಾಸ್ ಕನ್ನಡ 11ರಲ್ಲಿ ಕಿಚ್ಚ ಸುದೀಪ್ ಅನುಪಸ್ಥಿತಿಯಲ್ಲಿ ಯೋಗರಾಜ್ ಭಟ್ ಪಂಚಾಯಿತಿ ನಡೆಸಿಕೊಟ್ಟಿದ್ದಾರೆ. ಗಾಯಕ ಹನುಮಂತನ ಅಮಾಯಕತೆಯ ನಾಟಕವನ್ನು ಬಯಲು ಮಾಡಿದ ಭಟ್, ರಿಯಾಲಿಟಿ ಶೋ ಗೆಲ್ಲುವುದೇ ಹನುಮಂತನ ಕುತಂತ್ರ ಎಂಬರ್ಥದಲ್ಲಿ ಮಾತನಾಡಿದ್ದಾರೆ.


ಬೆಂಗಳೂರು (ಅ.26): ಬಿಗ್ ಬಾಸ್ ಕನ್ನಡ ಸೀಸನ್ 11ರ ನಾಲ್ಕನೇ ವಾರದ ಪಂಚಾಯಿತಿಗೆ ಕಿಚ್ಚ ಸುದೀಪ್ ಹಾಜರಾಗದ ಹಿನ್ನೆಲೆಯಲ್ಲಿ ಸರಳ ಪಂಚಾಯಿತಿ ನಡೆಸಿಕೊಡಲು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ನಿರ್ದೇಶಕ ಯೋಗರಾಜ್ ಭಟ್ ಅವರು ಇದೀಗ ಗಾಯಕ ಹನುಮಂತನ ಅಮಾಯಕ ನಾಟಕವನ್ನು ಬಿಚ್ಚಿಟ್ಟಿದ್ದಾರೆ. ಎಲ್ಲರ ಮುಂದೆ ಗಾಯಕ ಹನುಮಂತ ಅಮಾಯಕನಂತೆ ನಟನೆ ಮಾಡಿ, ರಿಯಾಲಿಟಿ ಶೋನಲ್ಲಿ ಗೆಲ್ಲಿವುದೇ ಕುತಂತ್ರ ಬುದ್ಧಿ ಎಂಬುದಾಗಿ ಹೇಳಿದ್ದಾರೆ.

ಹೌದು, ಬಿಗ್ ಬಾಸ್ ಸೀಸನ್ 11ರ ನಾಲ್ಕನೇ ವಾರದ ಪಂಚಾಯಿತಿ ನಡೆಸಿಕೊಡಲು ನಿರೂಪಕ ಕಿಚ್ಚ ಸುದೀಪ ಗೈರು ಹಾಜರಾಗಲಿದ್ದಾರೆ. ಕಿಚ್ಚ ಸುದೀಪ್ ಅವರ ತಾಯಿ ಕಳೆದ ವಾರ ನಿಧರಾಗಿದ್ದು, ಉತ್ತರ ಕ್ರಿಯೆಗಳನ್ನು ನಡೆಸುವ ಕಾರ್ಯದಲ್ಲಿ ಬ್ಯೂಸಿ ಆಗಿದ್ದಾರೆ. ಜೊತೆಗೆ, ಇನ್ನೂ ಅವರು ತಾಯಿಯ ಅಗಲಿಕೆ ನೋವಿನಿಂದ ಹೊರಬಂದಿಲ್ಲ ಎಂದು ಹೇಳಲಾಗುತ್ತಿದೆ. ಪ್ರತಿನಿತ್ಯ ಯಾವುದೇ ಶೂಟಿಂಗ್‌ಗೆ ತೆರಳಿದರೂ ಅಮ್ಮನ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದ ಕಿಚ್ಚ ಸುದೀಪ್ ಇದೀಗ ಅಮ್ಮನಿಲ್ಲದೇ ಎಲ್ಲಿಗೂ ಶೂಟಿಂಗ್‌ಗೆ ಹೋಗುತ್ತಿಲ್ಲ. ಅಮ್ಮನ ಅಗಲಿಕೆ ನೋವು ಮರೆಯಲು ಕೆಲವು ದಿನಗಳು ಬೇಕಾಗಬಹುದು ಎಂದು ಅವರ ಆಪ್ತರು ತಿಳಿಸಿದ್ದಾರೆ.

Tap to resize

Latest Videos

undefined

ಇದನ್ನೂ ಓದಿ: ಬಿಗ್​ಬಾಸ್​​ಗೆ ಪುನಃ ಹೋಗ್ತಾರಾ ಜಗದೀಶ್? ನೇರ ಪ್ರಸಾರದಲ್ಲಿ ದೊಡ್ಮನೆಯ ಗುಟ್ಟು ಬಿಚ್ಚಿಟ್ಟ ಲಾಯರ್​ ಹೇಳಿದ್ದೇನು?

ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮನೆಯ ನಾಲ್ಕನೇ ವಾರದ ಪಂಚಾಯಿತಿ ನಡೆಸಿಕೊಡಲು ಹಾಗೂ ಟಾಸ್ಕ್‌ಗಳ ಬಗ್ಗೆ ತೀರ್ಪು ನೀಡಲು ಹಲವು ಅತಿಥಿಗಳನ್ನು ಬಿಗ್ ಬಾಸ್ ಮನೆಯೊಳಗೆ ಕಳಿಸಲಾಗುತ್ತಿದೆ. ಈಗಾಗಲೇ ಬಿಗ್ ಬಾಸ್ ಮನೆಯೊಳಗೆ ಹೋಗಿ ಬಂದ ಸುದ್ದಿ ನಿರೂಪಕಿ ರಾಧಾ ಹಿರೇಗೌಡ ಅವರು ಒಂದು ಟಾಸ್ಕ್‌ ನಡೆಸಿ ಒಂದು ರಾಜಕೀಯ ಪಕ್ಷಕ್ಕೆ ಗೆಲುವು ಘೋಷಣೆ ಮಾಡಿ ಬಂದಿದ್ದಾರೆ. ಇದೀಗ ಶನಿವಾರದ ಪಂಚಾಯಿತಿ ನಡೆಸಿಕೊಡಲು ಅತಿಥಿಯಾಗಿ ನಟ, ನಿರ್ದೇಶಕ ಯೋಗರಾಜ್ ಭಟ್ ಎಂಟ್ರಿ ಕೊಟ್ಟಿದ್ದಾರೆ. ಆದರೆ, ಇಲ್ಲಿ ಹಾವೇರಿ ಹೈದ ಹಳ್ಳಿಯ ಹುಡುಗ ಗಾಯಕ ಹನುಮಂತನ ಅಮಾಯಕತನ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಬಿಗ್ ಬಾಸ್ ಮನೆಯ ಎಲ್ಲ ಸ್ಪರ್ಧಿಗಳು ಹನುಮಂತ ಅಮಾಯಕ ಅಲ್ಲ, ಕುತಂತ್ರಿ ಎಂದು ಹೇಳುತ್ತಿದ್ದಾರೆ.

ನಿರ್ದೇಶಕ ಯೋಗರಾಜ್ ಭಟ್ ಅವರು ಪಂಚಾಯಿತಿ ಕಟ್ಟೆಯಲ್ಲಿ ಕುಳಿತು ಸ್ಪರ್ಧಿ ಹನುಮಂತನನ್ನು ಒಂದು ಕಡೆ ನಿಲ್ಲಿಸಿ, ಉಳಿದ ಎಲ್ಲ ಸ್ಪರ್ಧಿಗಳನ್ನು ಕೂರಿಸಿ ಪ್ರಶ್ನೆ ಮಾಡಿದ್ದಾರೆ. ಹನುಮಂತ ನಿಜವಾಗಿಯೂ ಅಮಾಯಕನೇ ಅಥವಾ ಬುದ್ಧಿವಂತನಾ? ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಶಿಶಿರ್, ಹನುಮಂತ ನಿಜವಾಗಿಯೂ ಬುದ್ಧಿವಂತ, ದಡ್ಡ ಅಂತೂ ಅಲ್ಲ ಸರ್ ಎನ್ನುತ್ತಾರೆ. ಮುಂದುವರೆದು ಮಾತನಾಡಿದ ತ್ರಿವಿಕ್ರಮ್ ಮಾತನಾಡಿ, ಹನುಮಂತ ಬುದ್ಧಿವಂತನಲ್ಲದೇ ಅಷ್ಟು ರಿಯಾಲಿಟಿ ಶೋಗಳಲ್ಲಿ ಆಟವಾಡಿ ಗೆದ್ದು ಬರಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಿಂಗರ್ ಹನುಮಂತ ಬುದ್ದಿವಂತನಾ, ಮುಗ್ದತೆ ಮುಖವಾಡ ಹೊತ್ತ ಚಾಲಾಕಿನಾ?

ಇದೀಗ ಬಿಗ್ ಬಾಸ್ ಮನೆಯಿಂದ ನೀಡಲಾಗಿರುವ ಅವಕಾಶವನ್ನು ಹನುಮಂತ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನಾ ಎಂದು ನಿಮಗೆ ಎನಿಸುತ್ತಿದೆಯಾ? ಎಂದು ಯೋಗರಾಜ್ ಭಟ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ತ್ರಿವಿಕ್ರಮ್, ಹನುಮಂತು ತಲೆ ಇದ್ದೇ ಇಲ್ಲಿಗೆ ಬಂದಿದ್ದಾನೆ, ತಲೆ ಇದ್ದೇ ಆಟವಾಡ್ತಿದ್ದಾನೆ, ತಲೆ ಇದ್ದುಕೊಂಡೇ ಇಲ್ಲಿದ್ದಾನೆ ಎಂದಿ ಹೇಳಿದ್ದಾರೆ. ಮುಂದುವರೆದು ಯೋಗರಾಜ್ ಭಟ್ ಅವರು, ಹನುಮಂತ ಒಬ್ಬ ಕುತಂತ್ರಿ, ಖತರ್ನಾಕ್ ಇದ್ದಾನೆ ಎಂಬುದಾದರೆ ಅದನ್ನು ನೇರವಾಗಿ ಹೇಳಬಹುದು ಎಂದು ಹೇಳಿದ್ದಾರೆ.

ಮನೆಯವರ ಅಭಿಪ್ರಾಯ ಕೇಳಿ ತಬ್ಬಿಬ್ಬಾದನಾ ಹನುಮಂತು?

ಬಿಗ್ ಬಾಸ್ ಕನ್ನಡ ಸೀಸನ್ 11 | ಇಂದು ರಾತ್ರಿ 9 pic.twitter.com/V8N7SeuwMe

— Colors Kannada (@ColorsKannada)
click me!