ಜಾಲತಾಣದಲ್ಲಿ ಶುರುವಾಗಿದೆ ಸೀರಿಯಲ್​ ಬೈಕಾಟ್​ ಟ್ರೆಂಡ್​ : ಅಷ್ಟಕ್ಕೂ ವೀಕ್ಷಕರು ನೊಂದುಕೊಂಡಿರೋದ್ಯಾಕೆ?

By Suchethana DFirst Published Oct 26, 2024, 5:31 PM IST
Highlights

ಸೀರಿಯಲ್​ಗಳಲ್ಲಿ ತಮಗೆ ಆಗದ ಘಟನೆ ನಡೆಯುತ್ತಿರುವುದಿಂದ ಮನನೊಂದಿರುವ ವೀಕ್ಷಕರು ಧಾರಾವಾಹಿಗಳಿಗೆ ಬೈಕಾಟ್​ ಅಂತಿದ್ದಾರೆ!
 

ಒಂದು ಸೀರಿಯಲ್​ ಅಂದ್ರೆ ಹೀಗೆಯೇ ಇರಬೇಕು, ಎಲ್ಲವೂ ಒಳ್ಳೆಯದಾಗಬೇಕು, ಒಳ್ಳೆಯವರಿಗೆ ಒಳ್ಳೆಯದಾಗಬೇಕು- ಕೆಟ್ಟವರಿಗೆ ಕೆಟ್ಟದ್ದಾಗಬೇಕು. ಅದು ಎಷ್ಟರಮಟ್ಟಿಗೆ ಎಂದ್ರೆ ವರ್ಷಗಟ್ಟಲೆ ಚ್ಯೂಯಿಂಗ್​ ಗಮ್​ನಂತೆ ಸೀರಿಯಲ್​ ಎಳೆದರೂ ಎಲ್ಲಿಯೂ ಒಳ್ಳೆಯವರಿಗೆ ಕೆಟ್ಟದ್ದು ಆಗಬಾರದು. ವಿಲನ್​ಗಳು ವಿನ್ ಆಗಬಾರದು... ಹೀಗೆ ಏನೇನೋ ಕಲ್ಪನೆಯಲ್ಲಿ ಮುಳುಗಿರುತ್ತಾರೆ ಸೀರಿಯಲ್​ ಪ್ರೇಮಿಗಳು. ಅಷ್ಟಕ್ಕೂ  ಇಂದು ಸೀರಿಯಲ್​ಗಳು ಕೇವಲ ಸೀರಿಯಲ್​ಗಳಾಗಿ ಉಳಿದಿಲ್ಲ. ಅದು ಮನೆಮನೆಯ ಕಥೆಗಳಾಗಿವೆ. ಅಲ್ಲಿರುವ ಪಾತ್ರಗಳು ತಾವೇ ಎಂದು ಅಂದುಕೊಳ್ಳುತ್ತಾರೆ ಪ್ರೇಕ್ಷಕರು. ಆದ್ದರಿಂದ ಎಲ್ಲವೂ ತಾವು ಅಂದುಕೊಂಡಂತೆ ಆಗಬೇಕು ಎನ್ನುವುದು ಅವರ ಮನದಾಳದ ಆಸೆ. 

ಇದೇ ಕಾರಣಕ್ಕೆ ಜೀ ಕನ್ನಡದ ಕೆಲವು ಸೀರಿಯಲ್​ಗಳ ವಿರುದ್ಧ ನೆಟ್ಟಿಗರು ತಿರುಗಿ ಬಿದ್ದಿದ್ದಾರೆ. ಇದಕ್ಕೆ ಮೊದಲು ಕಾರಣವಾಗಿದ್ದು, ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ತುಳಸಿ ಗರ್ಭಿಣಿಯಾದುದ್ದಕ್ಕೆ. ಇದಕ್ಕೆ ಇಂದಿಗೂ ಪರ-ವಿರೋಧ ನಿಲುವು ವ್ಯಕ್ತವಾಗುತ್ತಲೇ ಇದೆ. ಕೆಲವರು ಈಗ ಮನಸ್ಥಿತಿ ಬದಲಾಯಿಸಿಕೊಂಡು ತುಳಸಿ ಗರ್ಭಿಣಿಯಾಗಿ ಮಗುವನ್ನು ಹೆತ್ತು ಪೂರ್ಣಿಗೆ ಕೊಡುವುದನ್ನು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ ಮತ್ತೆ ಹಲವರು ಕಥೆ ಬೇರೆ ಮಾಡಬಹುದಿತ್ತು ಎಂದು ಇನ್ಮುಂದೆ ಸೀರಿಯಲ್​ ನೋಡಲ್ಲ ಎಂದು ನೋಡುತ್ತಲೇ ಇದ್ದಾರೆ ಅನ್ನಿ. ಆದರೆ ಇದೀಗ ಇನ್ನೆರಡು ಆಘಾತ ಪ್ರೇಕ್ಷಕರಿಗೆ ಬರಸಿಡಿಲು ಬಡಿಸಿದೆ. ಅದರಲ್ಲಿ ಒಂದು ಸ್ನೇಹಾಳ ಸಾವು. ಪುಟ್ಟಕ್ಕನ ಮಕ್ಕಳು ಸೀರಿಯಲ್ ಶುರುವಾಗಿ ಮೂರು ವರ್ಷವಾಗಿದೆ. ಈ ಮೂರು ವರ್ಷಗಳ ಸುದೀರ್ಘ ಅವಧಿಯಲ್ಲಿ ಈಗ ಸೀರಿಯಲ್​ಗೆ ಪ್ರೇಕ್ಷಕರು ಎಂದೂ ನಿರೀಕ್ಷೆ ಮಾಡದ ಆಘಾತಕಾರಿ ಟ್ವಿಸ್ಟ್​ ಸಿಕ್ಕಿದೆ. ಅದೇನೆಂದರೆ ಸ್ನೇಹಾ ಪಾತ್ರ ಕೊನೆಗೊಂಡಿದೆ. ಈಗಷ್ಟೇ ಜಿಲ್ಲಾಧಿಕಾರಿಯಾಗಿ ತನ್ನ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿರೋ ಸ್ನೇಹಾ, ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಈ ಅನಿರೀಕ್ಷಿತ ತಿರುವು ಸೀರಿಯಲ್​ನಲ್ಲಿ ಯಾಕೆ ತಂದಿದ್ದಾರೆ ಎನ್ನುವ ಬಗ್ಗೆ ಪ್ರೇಕ್ಷಕರಿಗೆ ಚಿಂತೆ ಶುರುವಾಗಿದೆ. ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ ಸೀರಿಯಲ್​ ಬಿಡುವ ಕಾರಣದಿಂದ ಏನೇನೋ ಕಥೆ ತಿರುವು ಪಡೆದುಕೊಂಡಿತಾ ಎಂಬ ಪ್ರಶ್ನೆಯನ್ನೂ ಪ್ರೇಕ್ಷಕರು ಕೇಳುತ್ತಿದ್ದಾರೆ. ಮನೆಗೆ ಬಂದಿರುವ ಸ್ನೇಹಾಳಿಗೆ ಈ ಸ್ನೇಹಾ ಹೃದಯವನ್ನು ನೀಡುತ್ತಾಳೆ ಎನ್ನುವುದು ಎಲ್ಲರಿಗೂ ಅರ್ಥವಾಗಿದೆ. ಆದರೆ ಸೀರಿಯಲ್​ ಉದ್ದೇಶವನ್ನೇ ಬುಡಮೇಲು ಮಾಡಿರುವ ಬಗ್ಗೆ ಸೋಷಿಯಲ್​  ಮೀಡಿಯಾದಲ್ಲಿಯೂ ಭಾರಿ ಟೀಕೆ ವ್ಯಕ್ತವಾಗುತ್ತಿದೆ.

Latest Videos

ಹಳಿಗಳ ಮೇಲೆ ದಿನವೂ ಸಂತೆ- ರೈಲು ಬರ್ತಿದ್ದಂಗೇ ಎಲ್ಲರೂ ಗಾಯಬ್​- ಮತ್ತೆ ವಾಪಸ್​! ಡಾ.ಬ್ರೋ ರೋಚಕ ವಿಡಿಯೋ


ಅದೇ ಇನ್ನೊಂದೆಡೆ, ಸಿಹಿಗೆ ಭಾರಿ ಅಪಘಾತ. ಇದರಲ್ಲಿ ಸಿಹಿಯ ಆತ್ಮ ಬಂದು ಸೀತಮ್ಮ ಬಳಿ  ಮಾತನಾಡಿದಂತೆ ತೋರಿಸಲಾಗಿದೆ. ಪ್ರೊಮೋ ನೋಡಿದವರು ಸಿಹಿ ಪ್ರಾಣ ಕಳೆದುಕೊಳ್ತಾಳಾ ಎನ್ನುವ ಸಂದೇಹ ಕಾಡುತ್ತಿದೆ.  ಆದರೆ ಮತ್ತೆ ಕೆಲವರಿಗೆ ಇಲ್ಲ, ಆಕೆಯ ಪ್ರಾಣ ಉಳಿಯತ್ತೆ. ಆದರೆ ಮೆಮೊರಿ ಲಾಸ್​ ಆಗತ್ತೆ. ಸೀತಮ್ಮಾ ಮತ್ತು ರಾಮ್​ ಬಿಟ್ಟು ಯಾರೂ ಅವಳಿಗೆ ನೆನಪು ಇರಲ್ಲ ಎನ್ನುತ್ತಿದ್ದರೆ, ಮತ್ತೆ ಕೆಲವರು ಅವಳಿಗೆ ಹಿಂದಿನ ಜನ್ಮದ ನೆನಪು ಬರುತ್ತದೆ ಎನ್ನುತ್ತಿದ್ದಾರೆ. ಆದರೆ ಸದ್ಯದ ಸ್ಥಿತಿಯಲ್ಲಿ ಅವರಿಗೆ ಅಪಘಾತ ಮಾಡಿಸಿದ್ದನ್ನು ನೆಟ್ಟಿಗರು ಸಹಿಸಿಕೊಳ್ಳುತ್ತಿಲ್ಲ. ಇದೇ ಕಾರಣಕ್ಕೆ ಈ ಮೂರು ಸೀರಿಯಲ್​ಗಳನ್ನು ಬೈಕಾಟ್​ ಮಾಡುತ್ತೇವೆ ಎನ್ನುತ್ತಿದ್ದಾರೆ. ಅದೇ ಇನ್ನೊಂದೆಡೆ ಕಲರ್ಸ್​ ಕನ್ನಡದಲ್ಲಿನ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ನಾಯಕಿಗೆ ತನ್ನ ಗಂಡನ ಬಗ್ಗೆ ಇನ್ನೂ ಗೊತ್ತಾಗದ ರೀತಿ ಸೀರಿಯಲ್​ ಎಳೆಯುತ್ತಿರುವ ಬಗ್ಗೆಯೂ ವೀಕ್ಷಕರು ಕಿಡಿ ಕಾರುತ್ತಿದ್ದಾರೆ. 

 


ಆದರೆ, ಇದು ಕೆಲವು ನಿಮಿಷಗಳ ಕೋಪ ಎನ್ನುವುದು ನಿರ್ದೇಶಕರಿಗೂ ಗೊತ್ತು, ಹೀಗೆ ಬೈಕಾಟ್​ ಅನ್ನೋರಿಗೂ ಗೊತ್ತು. ಮುಂದೇನಾಗಬಹುದು ಎಂಬ ಕುತೂಹಲ ಸೀರಿಯಲ್ ಪ್ರೇಮಿಗಳಲ್ಲಿ ಇದ್ದೇ ಇರುತ್ತದೆ. ಹಿಂದೆ ಜೊತೆ ಜೊತೆಯಲಿ ಸೀರಿಯಲ್​ನಲ್ಲಿ ನಾಯಕನ ಪಾತ್ರ ಬದಲು ಮಾಡಿದಾಗಲೂ ಹೀಗೆಯೇ ಹೇಳಿದ್ದರು, ಕೊನೆಗೆ ಶ್ರೀರಸ್ತು ಶುಭಮಸ್ತುವಿನ ಶಾರ್ವರಿ ಪಾತ್ರ ಬದಲಾದಾಗಲೂ ಸೀರಿಯಲ್​ ನೋಡಲ್ಲ ಎಂದು ಹಲವರು ಸೋಷಿಯಲ್​  ಮೀಡಿಯಾದಲ್ಲಿ ಹಾಕಿಕೊಂಡಿದ್ದರು. ಎಷ್ಟೆಂದರೂ ಸೀರಿಯಲ್​ ಹುಚ್ಚು ಒಮ್ಮೆ ಹಿಡಿದರೆ ಅದು ಹೋಗಲ್ಲ ಎನ್ನುವುದು ಓಪನ್​ ಗುಟ್ಟು ಅಲ್ಲವೆ? ಅಡುಗೆ ಮಾಡುವುದನ್ನೂ ಮರೆತು, ಮನೆಯ ಕೆಲಸವನ್ನೂ ಮರೆತು ಹೆಣ್ಣುಮಕ್ಕಳು ಟಿವಿಯ ಒಳಗೇ ಹೋಗುತ್ತಾರೆ ಎಂದು ಅದೆಷ್ಟು ಮಂದಿ ಮನೆಯಲ್ಲಿ ಹೇಳುವುದಿಲ್ಲ ಹೇಳಿ?  

ಧಾರವಾಡದ ಯುವತಿ ದೇಹ ಹೊಕ್ಕ ಎಂಟು ಆತ್ಮ: ಕೂದಲು ಒರೆಸುವಾಗ ನಡೆದ ಭಯಾನಕ ಘಟನೆ ವಿವರಿಸಿದ ಘೋಸ್ಟ್​ ಹಂಟರ್​

click me!