
‘ಸೂತ್ರಧಾರಿ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಭಾಗಿಯಾದ ಗಾಯಕ ಚಂದನ್ ಶೆಟ್ಟಿ ಅವರು ಪುನಃ ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ. ನಟಿ ಸಂಜನಾ ಆನಂದ್ ಜೊತೆಗೆ ಮದುವೆಯಾಗುತ್ತಿರುವ ವಿಷಯ ಶುದ್ಧ ಸುಳ್ಳು ಎಂದು ಒತ್ತಿ ಒತ್ತಿ ಹೇಳಿರುವ ಇವರು, ಡಿವೋರ್ಸ್‌ಗೆ ಕಾರಣ ಬೇರೆ ಇದೆ ಎಂದಿದ್ದಾರೆ. ಆರಂಭದಲ್ಲಿ ಸುದ್ದಿಗೋಷ್ಠಿ ಕರೆದು, “ನನ್ನ ಹಾಗೂ ನಿವೇದಿತಾ ಗೌಡ ಮಧ್ಯೆ ಹೊಂದಾಣಿಕೆ ಸಮಸ್ಯೆ ಇದೆ, ನಮ್ಮ ನಡುವೆ ಸಾಕಷ್ಟು ಭಿನ್ನಾಭಿಪ್ರಾಯ ಇದೆ. ಹತ್ತಿರ ಇದ್ದೂ ಖುಷಿಯಾಗಿಲ್ಲ ಅಂದ್ಮೇಲೆ ದೂರ ಇದ್ದು ಖುಷಿಯಾಗಿರೋದು ಒಳ್ಳೆಯದು” ಎಂದು ಈ ಜೋಡಿ ಹೇಳಿಕೆ ನೀಡಿತ್ತು.
ಚಂದನ್ ಶೆಟ್ಟಿ ಏನು ಹೇಳಿದ್ದಾರೆ?
ಈಗ ಚಂದನ್ ಶೆಟ್ಟಿ ಮಾತನಾಡಿ, “ನಾನು, ನಿವೇದಿತಾ ಗೌಡ ಅವರು ಡಿವೋರ್ಸ್ ತಗೊಳ್ಳುವಾಗ ಸಾಕಷ್ಟು ಬಾರಿ ಯೋಚನೆ ಮಾಡಿದ್ದೇವೆ. ವೈಯಕ್ತಿಕ ವಿಷಯಗಳನ್ನು ಎಲ್ಲರ ಮುಂದೆ ಹೇಳೋಕೆ ಆಗೋದಿಲ್ಲ. ಏನೂ ಗೊತ್ತಿಲ್ಲದೆ ಕೆಲವರು ಆ ಕಾರಣ, ಈ ಕಾರಣ ಅಂತ ಹೇಳಬಹುದು. ಆದರೆ ನಮ್ಮ ವಿಷಯಗಳನ್ನು ನಾನಾಗಲೀ, ನಿವೇದಿತಾ ಆಗಲೀ ಹೇಳಿಕೊಳ್ಳೋದಿಲ್ಲ. ನಮ್ಮ ಡಿವೋರ್ಸ್‌ಗೆ ನಿಜವಾದ ಕಾರಣ ಏನು ಎನ್ನೋದು ನಮ್ಮ ಮಧ್ಯೆಯೇ ಉಳಿದಿರುತ್ತದೆ. ನನಗೆ ನನ್ನ ಖುಷಿ ಮುಖ್ಯ ಆಗಿತ್ತು, ಡಿವೋರ್ಸ್ ತಗೊಂಡೆವು, ಈಗ ಇಬ್ಬರೂ ಖುಷಿಯಾಗಿದ್ದೇವೆ” ಎಂದು ಅವರು ಹೇಳಿದ್ದಾರೆ.
'ಚಂದನ್ ಶೆಟ್ಟಿ ನನ್ನ ಬ್ರದರ್ ಇದ್ದಂತೆ..' ಮದುವೆ ಗಾಸಿಪ್‌ಗೆ ಕ್ಲಾರಿಟಿ ಕೊಟ್ಟ ಸಂಜನಾ!
ಮದುವೆ, ಡಿವೋರ್ಸ್!
ಚಂದನ್ ಶೆಟ್ಟಿ, ನಿವೇದಿತಾ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 5’ ಶೋನಲ್ಲಿ ಭಾಗಿಯಾಗಿದ್ದರು. ಅಲ್ಲಿ ಇವರಿಬ್ಬರ ಮಧ್ಯೆ ಸ್ನೇಹ ಬೆಳೆದಿತ್ತು. ಆ ನಂತರದಲ್ಲಿ ಹೊರಗಡೆ ಬಂದ ಬಳಿಕ ಈ ಜೋಡಿ ಇನ್ನಷ್ಟು ಹತ್ತಿರ ಆಗಿತ್ತು. ಆಮೇಲೆ ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿರುವ ವಿಷಯವನ್ನು ಅರಿತುಕೊಂಡು, ಕುಟುಂಬದವರನ್ನು ಒಪ್ಪಿಸಿ ಮದುವೆಯಾದರು. ಮೈಸೂರು ದಸರಾದಲ್ಲಿ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡಗೆ ಉಂಗುರ ಹಾಕಿ ಪ್ರೇಮ ನಿವೇದನೆ ಮಾಡಿದರು. ಇದಂತೂ ದೊಡ್ಡ ವಿವಾದ ಸೃಷ್ಟಿಮಾಡಿತ್ತು. ಅದಾದ ನಂತರದಲ್ಲಿ ಮೈಸೂರಿನಲ್ಲಿ ಈ ಜೋಡಿ ಮದುವೆಯಾಯ್ತು. ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಪರಸ್ಪರ ಒಪ್ಪಿ ಡಿವೋರ್ಸ್ ಪಡೆದಿದೆ.
ಚಂದನ್ ಶೆಟ್ಟಿಯನ್ನು ಮದ್ವೆಯಾದ ಕಾರಣ ಕೊನೆಗೂ ಬಾಯ್ಬಿಟ್ಟ ನಿವೇದಿತಾ ಗೌಡ: ಅಲೆಲೆ ಹೆಣ್ಣೇ ಎಂದ ನೆಟ್ಟಿಗರು!
ಒಟ್ಟಿಗೆ ಸಿನಿಮಾ ಮಾಡಿದ್ರು!
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಒಟ್ಟಿಗೆ ‘ಮುದ್ದು ರಾಕ್ಷಸಿ’ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ಇದಾದ ಬಳಿಕ ಈ ಜೋಡಿ ‘ರಾಜಾ ರಾಣಿ’ ರಿಯಾಲಿಟಿ ಶೋನಲ್ಲಿ ಭಾಗಿಯಾಗಿತ್ತು. ವೃತ್ತಿ ವಿಚಾರದಲ್ಲಿ ಇಬ್ಬರು ವೃತ್ತಿಪರತೆ ಕಾಯ್ದುಕೊಳ್ಳೋದಾಗಿ ಹೇಳಿಕೊಂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.