
ಬೆಂಗಳೂರು (ಮಾ.19): ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಧಾರಾವಾಹಿಯಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿರುವ ಇಬ್ಬರು ನಟಿಯರಿಗೆ ಅವರು ವಿಲನ್ ರೋಲ್ ಮಾಡಿದ್ದಾರೆ. ಜೊತೆಗೆ, ನಟಿಯರ ನಗುವನ್ನು ನೋಡಿದ ಸೃಜನ್ ಲೋಕೇಶ್ ಇಬ್ಬರು ಸುಂದರ ನಟಿಯರನ್ನು ರಾಕ್ಷಸಿ ಶೂರ್ಪನಖಿಯರಿಗೆ ಹೋಲಿಕೆ ಮಾಡಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತಿರುವ ಮಜಾ ಟಾಕೀಸ್ ಹಾಗೂ ಬಾಯ್ಸ್ ವರ್ಸಸ್ ಗರ್ಲ್ಸ್ ಮಹಾಸಂಚಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸೃಜನ್ ಲೋಕೇಶ್ ಅವರು ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ವಿಲನ್ ಪಾತ್ರಗಳನ್ನು ಮಾಡುತ್ತಾ ಕನ್ನಡಿಗರ ಮನ ಗೆದ್ದಿರುವ ನಟಿಯರಿಗೆ ಶೂರ್ಪನಖಿ ಎಂದು ಕರೆದಿದ್ದಾರೆ. ಜೀಕಾಲಿ ಧಾರಾವಾಹಿ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ವಿಲನ್ ಆಗಿ ಬೇರೂರಿದ ಪ್ರಿಯಾಂಕಾ ಶಿವಣ್ಣ ಹಾಗೂ ಇದೀಗ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯ ವಿಲನ್ ವೈಶಾಖ (ಐಶ್ವರ್ಯಾ) ಇಬ್ಬರಿಗೂ ಹೀಗೆ ಶೂರ್ಪನಖಿ ಎಂದು ಕರೆಯಲಾಗಿದೆ.
ಕಿರುತೆರೆ ನಟಿಯರಾದ ಪ್ರಿಯಾಂಕಾ ಶಿವಣ್ಣ ಹಾಗೂ ನಟಿ ಐಶ್ವರ್ಯಾ ಇಬ್ಬರೂ ಸುಂದರ ನಟಿಯರು. ಇಬ್ಬರೂ ತಮಗೆ ಕೊಟ್ಟ ಪಾತ್ರಕ್ಕೆ ಜೀವ ತುಂಬುತ್ತಾ ನಟಿಸುತ್ತಿದ್ದಾರೆ. ಸತ್ಯ ಧಾರಾವಾಹಿ ಮುಗಿದ ನಂತರ ಪ್ರಿಯಾಂಕಾ ಶಿವಣ್ಣ ಮಜಾ ಟಾಕೀಸ್‌ನ ಭಾಗವಾಗಿದ್ದಾರೆ. ಅವರು ಈ ಹಿಂದೆ ಶ್ವೇತಾ ಚೆಂಗಪ್ಪ ಸ್ಥಾನವನ್ನು ತುಂಬುತ್ತಿದ್ದಾರೆ. ಇನ್ನು ಐಶ್ವರ್ಯಾ ಅವರು ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖ ಆಗಿ ರಾಮಾಚಾರಿ ಅತ್ತಿಗೆಯಾಗಿದ್ದಾರೆ. ಆದರೆ, ಇವರ ನಗುವನ್ನು ನೋಡಿದ ಸೃಜನ್ ಲೋಕೇಶ್ ಅವರು ಶೂರ್ಪನಖಿಗೆ ಹೋಲಿಕೆ ಮಾಡಿದ್ದಾರೆ.
ಇದನ್ನೂ ಓದಿ: ಸತ್ಯ ಸೀರಿಯಲ್ ದಿವ್ಯಾಗೆ ಹುಟ್ಟುಹಬ್ಬವಿಂದು: ಕಮೆಂಟ್ಸ್ ನೋಡಿ ಅಳ್ತಿದ್ದ ನಟಿಯ ಇಂಟರೆಸ್ಟಿಂಗ್ ವಿಷ್ಯ ಇಲ್ಲಿದೆ...
ಬಾಯ್ಸ್ ವರ್ಸಸ್ ಗರ್ಲ್ಸ್ ಮತ್ತು ಮಜಾ ಟಾಕೀಸ್ ಸಮ್ಮಿಲನ ಕಾರ್ಯಕ್ರಮದಲ್ಲಿ ಸೃಜಲ್ ಲೋಕೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಕುಳಿತುಕೊಂಡು, ಆಂಕರ್ ಅನುಪಮಾ ಗೌಡ ಜೊತೆಗೆ ವೇದಿಕೆ ಮೇಲೆ ನಿಂತುಕೊಂಡಿದ್ದ ಪ್ರಿಯಾಂಕಾ ಅವರ ನಗುವನ್ನು ನೋಡಿದ್ದ ಸೃಜನ್ ಲೋಕೇಶ್ ಶೂರ್ಪನಖಿ ಎಂದು ಕರದಿದ್ದಾರೆ. ಇದರ ಬೆನ್ನಲ್ಲಿಯೇ ಐಶ್ವರ್ಯಾಳನ್ನು ತೋರಿಸಿ ಇವಳೂ ಹಾಗೆಯೇ ನಗುತ್ತಾಳೆ ಎಂದು ತೋರಿಸಿದ್ದಾರೆ. ಇದಾದ ನಂತರ ಪ್ರಿಯಾಂಕಾ ಮತ್ತು ಐಶ್ವರ್ಯಾ ಒಬ್ಬರೂ ನಗಲು ಆರಂಭಿಸಿದ್ದಾರೆ. ನೀವು ಅವರ ನಗುವನ್ನು ನೋಡಿದರೆ ನೀವೂ ಕೂಡ ಶೂರ್ಪನಖಿ ಎಂದು ಕರೆದಿದ್ದರಲ್ಲಿ ಎಷ್ಟು ಸೂಕ್ತವಾಗಿದೆ ಎನ್ನುತ್ತೀರಿ. ಸುಮಾರು ಹೊತ್ತು ಇಬ್ಬರೂ ಕನ್ನಡ ಸಿನಿಮಾಗಳಲ್ಲಿ ರಾಕ್ಷಿಯರು ನಗುತ್ತಿದ್ದ ಶೈಲಿಯಲ್ಲಿಯೇ ನಗಾಡಿದ್ದಾರೆ.
ಇನ್ನು ಇವರಿಬ್ಬರ ನಗುವನ್ನು ನೋಡಿ ಮತ್ತೆ ಸೃಜನ್ ಲೋಕೇಶ್ ಅವರು ನಾವು ಕಣ್ಣು ಮುಚ್ಚಿ ಕುಳಿತುಕೊಂಡರೆ ಮಧ್ಯರಾತ್ರಿಯಲ್ಲಿ ಸ್ಮಶಾನದಲ್ಲಿ ಇದ್ದ ಅನುಭವ ಆಗುತ್ತದೆ ಎಂದು ಹೇಳಿದ್ದಾರೆ. ಜೊತೆಗೆ, ಐಶ್ವರ್ಯಾ ಅವರ ಕಡೆಗೆ ತೋರಿಸಿ ನಿನ್ನ ಗಂಡ ಹೇಗೆ ತಡೆದುಕೊಳ್ಳುತ್ತಾನೆ ಎಂದು ಕೇಳಿದ್ದಾರೆ. ಇದಾದ ನಂತರ ನಿರೂಪಕಿ ಅನುಪಮಾ ಗೌಡ, ಈವರೆಗೆ ನಾನು ನಗುವುದೇ ತುಂಬಾ ಕೆಟ್ಟದಾಗಿದೆ ಎಂದುಕೊಂಡಿದ್ದೆ. ಆದರೆ, ಇವತ್ತು ಗೊತ್ತಾಯ್ತು ನನಗೆ, ನನಗಿಂತಲೂ ಕೆಟ್ಟದಾಗಿ ನಗುವವರು ಇದ್ದಾರೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಇದೊಂದು ಹಾಸ್ಯ ಕಾರ್ಯಕ್ರಮವಾಗಿದ್ದರಿಂದ ನಟಿರು ಕೂಡ ಇದನ್ನು ಒಂದು ಹಾಸ್ಯವಾಗಿಯೇ ಪರಿಗಣಿಸಿದ್ದರಿಂದ, ಯಾವುದೇ ವಿವಾದವೂ ಉಂಟಾಗುವುದಿಲ್ಲ.
ಇದನ್ನೂ ಓದಿ: 'ಸೀತಾರಾಮ' ನಟಿ ವೈಷ್ಣವಿ ಗೌಡ Without Makeup ಲುಕ್ ಇದು; ಕೊರಿಯನ್ ಚರ್ಮದಂತೆ ಹೊಳೆಯಲು ಏನ್ ಮಾಡ್ತಾರೆ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.