ನಂಬಿ ಪ್ಲೀಸ್ ! ಮತ್ತೆ ಬಂದ್ರು ಡಾಕ್ಟರ್ ವಿಠಲ್ ರಾವ್ ಜೊತೆ ಸಿಲ್ಲಿ ಲಲ್ಲಿ

Suvarna News   | Asianet News
Published : Apr 15, 2020, 01:02 PM IST
ನಂಬಿ ಪ್ಲೀಸ್ ! ಮತ್ತೆ ಬಂದ್ರು  ಡಾಕ್ಟರ್ ವಿಠಲ್ ರಾವ್ ಜೊತೆ ಸಿಲ್ಲಿ ಲಲ್ಲಿ

ಸಾರಾಂಶ

ಡಾ.ವಿಠಲ್ ರಾವ್, ಫೇಮಸ್ ಇನ್ ಸರ್ಜರಿ ಆ್ಯಂಡ್ ಭರ್ಜರಿ ಎನ್ನುತ್ತಾ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ ಸಿಲ್ಲಿ ಲಲ್ಲಿ ಧಾರಾವಾಹಿ ಮತ್ತೆ ಪ್ರಸಾರವಾಗಲಿದೆ. ಆ ಮೂಲಕ ಏನೋ ಆತಂಕದಲ್ಲಿರುವ ಜನರಿಗೆ ತುಸು ನಗೆ ಔಷಧ ಸಿಗುವಂತಾಗುವುದಂತೂ ಗ್ಯಾರಂಟಿ.

2000 ಇಸವಿಯಿಂದ ಸುಮಾರು ವರ್ಷಗಳ ಕಾಲ ಕನ್ನಡ ಕಿರುತೆರೆಯನ್ನು ಆಳಿದ, ವೀಕ್ಷಕರನ್ನು ನಕ್ಕುನಗಿಸಿದ ಧಾರಾವಾಹಿ ಸಿಲ್ಲಿಲಲ್ಲಿ .  ಬಹುದಿನಗಳ ಅಭಿಮಾನಿಗಳ ಅಭಿಮಾನದ ಬೇಡಿಕೆಗೆ ಸ್ಪಂದಿಸಿರುವ ಕಲರ್ಸ್ ಕನ್ನಡ ವಾಹಿನಿ ಹಳೆಯ ಧಾರಾವಾಹಿಯನ್ನು ನಿನ್ನೆಯಿಂದ ( 14 - 04  -  2020 ) ರಿಂದ ಬೆಳಿಗ್ಗೆ 10 ಗಂಟೆಗೆ ಮರುಪ್ರಸಾರ ಮಾಡುತ್ತಿದ್ದಾರೆ .

ಈಗಾಗಲೇ ದೂರದರ್ಶನದಲ್ಲಿ ರಾಮಾಯಣ ಮತ್ತು ಮಹಾಭಾರತ ಮರುಪ್ರಸಾರವಾಗುತ್ತಿದ್ದು ನೋಡುಗರಿಂದ  ಭರ್ಜರಿ ರೆಸ್ಪಾನ್ಸ್ ದೊರಕಿದೆ . ಇದೀಗ ಇತರೆ ಚಾನೆಲ್ ಗಳೂ ಕೂಡ ಇದನ್ನೇ ಅನುಸರಿಸುತ್ತಿವೆ . ಅದರ ಮೊದಲ ಹೆಜ್ಜೆಯಾಗಿ  ಸಿಲ್ಲಿಲಲ್ಲಿಯು   ಮರುಪ್ರಸಾರವಾಗುತ್ತಿರುವುದು ಜನರಿಗೆ ಹೆಚ್ಚು ಸಂತಸವನ್ನುಂಟುಮಾಡಿದೆ . 

ಶಾರುಖ್ ಮಕ್ಕಳಿಗೆ ಟೀಚರ್ ಅಂತೆ ಸಿಲ್ಲಿ ಲಲ್ಲಿ ಈ ನಟಿ

ಸಿಲ್ಲಿಲಲ್ಲಿಯ ಮರುಪ್ರಸಾರದ ವಿಷ್ಯವನ್ನು ಡಾಕ್ಟರ್ ವಿಠಲ್ ರಾವ್ ಖ್ಯಾತಿಯ ರವಿಶಂಕರ್ ಗೌಡ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಖುಷಿಯಿಂದ ಶೇರ್ ಮಾಡಿಕೊಂಡಿದ್ದಾರೆ .  ರವಿಶಂಕರ್ ಗೌಡ ಅವ್ರಿಗೆ ಈ ಧಾರಾವಾಹಿ ಮತ್ತು ಆ ಪಾತ್ರ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದೆ ಎನ್ನುವುದು ಮತ್ತೊಂದು ವಿಶೇಷ .

ಕಲರ್ಸ್ ಕನ್ನಡದಲ್ಲಿ ಸೂಪರ್ ಹಿಟ್ ಧಾರಾವಾಹಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
ಅಲ್ಲಿ ಸಾಯಿಸೋಕೇ ರೆಡಿಯಾಗಿದ್ರೆ ಇಲ್ಲಿ ಕುಣೀತಿದ್ದಾಳಲ್ಲಪ್ಪಾ Na Ninna Bidalaare ದುರ್ಗಾ?