
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಕಾಮಿಡಿ ರಿಯಾಲಿಟಿ ಶೋ ಸೀಸನ್ 3ರ ರನ್ನರ್ ಹಾಸನದ ಸಂತೋಷ್ ಏಪ್ರಿಲ್ 10ರಂದು ತಮ್ಮ ಹುಟ್ಟೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸಂತೋಷ್ ಅವರ ಮದುವೆ ಲಾಕ್‌ಡೌನ್ ಮುನ್ನವೇ ನಿಶ್ಚಯವಾಗಿದ್ದು ಪೊಲೀಸರ ಅನುಮತಿ ಪಡೆದುಕೊಂಡು ಮದುವೆಯಾಗಿದ್ದಾರೆ. ಈಗಾಗಲೇ 10 ಚಿತ್ರಗಳಲ್ಲಿ ಅಭಿನಯಿಸಿ ಅನೇಕ ಬಾರಿ ಕಿರುತೆಯಲ್ಲಿ ಕಾಣಿಸಿಕೊಂಡಿರುವ ಸಂತೋಷ್ ಕುಟುಂಬಸ್ಥರು, ಸ್ನೇಹಿತರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಮದುವೆಯಾಗುವ ತೀರ್ಮಾನ ಮಾಡಿದ್ದರು ಆದರೆ ಕೊರೋನಾ ವೈರಸ್ ಲಾಕ್‌ಡೌನ್‌ನಿಂದಾಗಿ ಸರಳವಾಗಿ ಮದುವೆಯಾಗಿದ್ದಾರೆ.
'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಯನಾ ರಿಯಲ್ ಲೈಫ್ ಲವ್ ಸ್ಟೋರಿ ಇದು!
ನರಸೀಪುರ ತಾಲ್ಲೂಕಿನ ಉದ್ದೂರು ಹೊಸಹಳ್ಳಿಯ ಸಂತೋಷ್ ಮದುವೆಯಲ್ಲಿ ಬಹಳ ಕಡಿಮೆ ಜನರು ಪಾಲ್ಗೊಂಡಿದ್ದರು ಅವರಲ್ಲಿ ಕಾಮಿಡಿ ಕಿಲಾಡಿಗಳು ಸೀಸನ್-2ರ ಮಡೇನೂರು ಮನು ಕೂಡ ಮದುವೆಯಲ್ಲಿ ಭಾಗಿಯಾಗಿದ್ದರು.
ಕೆಲ ದಿನಗಳ ಹಿಂದೆ ಹೊಂಬಣ್ಣ ಚಿತ್ರದ ನಟ ಧನುಗೌಡ ಹಾಗೂ ನೆನಪುಗಳು ಚಿತ್ರದ ನಟಿ ರಾಣಿ ಏಪ್ರಿಲ್ 10ರಂದು ಶಿವಮೊಗ್ಗದಲ್ಲಿ ಆತ್ಮೀಯರೊಂದಿಗೆ ಸಿಂಪಲ್ ಆಗಿ ಮದುವೆಯಾಗಿದ್ದಾರೆ.
ಹಳ್ಳಿಯಲ್ಲಿ ದೇಸೀ ಶೈಲೀಲಿ ರಾಗಿ ಮುದ್ದೆ ಕೇಕ್ ಕತ್ತರಿಸಿದ ಶಿವರಾಜ್ ಕೆ.ಆರ್ ಪೇಟೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.