ಸೀತಾಳನ್ನು ಮದುವೆಯಾಗುವ ವಿಷಯ ಹೇಳುತ್ತಿದ್ದಂತೆಯೇ ರಾಮ್ನನ್ನು ಅಪ್ಪ ಎಂದು ಒಪ್ಪಿಕೊಳ್ಳಲು ಸಿಹಿ ನಿರಾಕರಿಸಿದ್ದಾಳೆ. ಹಾಗಿದ್ದರೆ ಮುಂದೇನು?
ಸೀತಾರಾಮರ ಕಲ್ಯಾಣ ಇನ್ನೇನು ಹತ್ತಿರವಾಗುತ್ತಿದೆ. ರಾಮ್ ಅಂತೂ ಸೀತಾಳನ್ನು ಎಂದೋ ಒಪ್ಪಿಕೊಂಡು ಆಗಿಬಿಟ್ಟಿದೆ. ಸೀತಾಳೂ ಪ್ರೀತಿಗೆ ಮುದ್ರೆ ಒತ್ತಿದ್ದಾಳೆ. ರಾಮ್ ಮತ್ತು ಸೀತಾ ಇನ್ನೇನು ದಂಪತಿಯಂತೆ ಕಾಣುವ ಸಮಯ ಬಂದಿದೆ. ಆದರೆ ಮದುವೆಯ ಬಗ್ಗೆ ಸಿಹಿಗೆ ಹೇಗೆ ವಿಷ್ಯ ತಿಳಿಸಬೇಕು ಎಂದು ಒದ್ದಾಡುತ್ತಿದ್ದಾಳೆ ಸೀತಾ. ಅತ್ತ ಏನೋ ಒಂದು ವಿಷ್ಯ ಹೇಳಬೇಕು ಎಂದು ರಾಮ್ ಸಿಹಿಯನ್ನು ಕರೆದಿದ್ದಾನೆ. ಸೀತಾ ಹಾಗೂ ಹೀಗೂ ಹೇಗೋ ಮಾಡಿ ಸಿಹಿಗೆ ಮದುವೆಯ ವಿಷ್ಯವನ್ನು ಹೇಳೋಣ ಎಂದುಕೊಂಡು ಸರ್ಕಸ್ ಮಾಡಿದ್ದಾಳೆ. ಆದರೆ ಅವಳಿಗೆ ಹೇಗೆ ಹೇಳಬೇಕೋ ತಿಳಿಯದೇ ಒದ್ದಾಡುತ್ತಿದ್ದಾಳೆ. ಕೊನೆಗೆ ರಾಮ್ನೇ ಹೇಳುತ್ತಾರೆ. ನನ್ನಂದ ಸಾಧ್ಯವಿಲ್ಲ ಎಂದು ಹೇಳಿಕೊಂಡು ಸುಮ್ಮನಾಗಿದ್ದಾಳೆ.
ಅತ್ತ ರಾಮ್ ತನ್ನದೇ ರೀತಿಯಲ್ಲಿ ಸಿಹಿಗೆ ವಿಷಯ ತಿಳಿಸುತ್ತಿದ್ದಾನೆ. ನಾವು ಮೂವರೂ ಒಂದೇ ಮನೆಯಲ್ಲಿ ಇರೋಣ ಎಂದಾಗ ಸಿಹಿಗೆ ತುಂಬಾ ಖುಷಿಯಾಗಿದೆ. ನಂತರ ನಾನು ಸೀತಾರನ್ನು ಮದ್ವೆಯಾಗುತ್ತೇನೆ ಎಂದಾಗ, ಸಿಹಿ ಹಾಗಿದ್ದರೆ ನೀನು ನನ್ನ ಅಪ್ಪ ಆಗುತ್ತಿಯಾ ಎಂದು ಕೇಳಿದ್ದಾಳೆ. ಹೌದು. ನಾನು ನಿನ್ನನ್ನು ಮಗಳು ಎಂದು ಎಂದೋ ಅಂದುಕೊಂಡು ಆಗಿದೆ ಎನ್ನುತ್ತಿದ್ದಂತೆಯೇ ಜೋರಾಗಿ ಅತ್ತಿರೋ ಸಿಹಿ ನನಗೆ ಅಪ್ಪ ಬೇಡ ಎಂದುಬಿಟ್ಟಿದ್ದಾಳೆ. ಇದನ್ನು ಕೇಳಿ ರಾಮ್ ಮತ್ತು ಸೀತಾಗೆ ಶಾಕ್ ಆಗಿದೆ. ಹಾಗಿದ್ದರೆ ಸೀತಾ ಮತ್ತು ರಾಮ್ ಮದ್ವೆ ಆಗಲ್ವಾ ಎಂದು ಫ್ಯಾನ್ಸ್ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕೈಗೆ ಬಂದ ತುತ್ತು ದೀಪಿಕಾ ಬಾಯಿಗೆ ಬರಲೇ ಇಲ್ಲ... ಎಸ್ಟೇಟೂ ತಪ್ಪೋಯ್ತು! ಮಗುವಿಗಾಗಿ ಶುರುವಾಗುತ್ತಾ ಜಟಾಪಟಿ?
ಮುಂದೇನಾಗುತ್ತೋ ಎಂದು ಕಾದು ನೋಡಬೇಕಿದೆ. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಶೇರ್ ಮಾಡಿದೆ. ಹಲವರು ನನಗೆ ಅಪ್ಪ ಬೇಡ, ಫ್ರೆಂಡ್ ಬೇಕು ಎನ್ನುತ್ತಾಳೆ ಸಿಹಿ. ಸೀತಾಳನ್ನು ಮದ್ವೆಯಾದರೂ ಫ್ರೆಂಡ್ ಆಗಿಯೇ ಇರುವುದಾಗಿ ರಾಮ್ ಹೇಳಿದಾಗ ಸಿಹಿ ಒಪ್ಪುತ್ತಾಳೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಅಪ್ಪನ ಪ್ರೀತಿ ಗೊತ್ತಿಲ್ಲದ ಹಾಗೂ ಅಪ್ಪನ ಬಗ್ಗೆ ಅಸಹ್ಯ ಭಾವನೆ ಹುಟ್ಟಿರೋ ಸಿಹಿಗೆ ರಾಮ್ ತನ್ನ ಅಮ್ಮನನ್ನು ಮದ್ವೆಯಾಗುವುದು ಇಷ್ಟವಿಲ್ಲ. ಆತ ಏನಿದ್ದರೂ ಫ್ರೆಂಡ್ ಅಷ್ಟೆ. ಅದಕ್ಕೇ ಸೀತಾ ಮತ್ತು ರಾಮರ ಮದ್ವೆ ನಡೆಯುವುದಿಲ್ಲ ಎನ್ನುತ್ತಿದ್ದಾರೆ. ಇನ್ನು ಕೆಲವರು ಎಲ್ಲರೂ ಒಪ್ಪಿದರೂ ಚಾಂದನಿ ಮತ್ತು ರಾಮ್ ಚಿಕ್ಕಮ್ಮ ಇದಕ್ಕೆ ಬಿಡುವುದಿಲ್ಲ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸೀತಾ ಮತ್ತು ರಾಮ್ ಮುಂದಿನ ನಡೆ ಏನು ಎಂಬ ಕುತೂಹಲ ಪ್ರೇಕ್ಷಕರದ್ದು. ಏಕೆಂದರೆ, ಈ ಪ್ರೀತಿಯ ನಡುವೆಯೇ ಸೀತಾಗೆ ಹಿಂದಿನ ಕಥೆಯ ಬಗ್ಗೆ ಟೆನ್ಷನ್ ಶುರುವಾಗಿದೆ. ನಾನು ಇದನ್ನು ಮುಚ್ಚಿಡಬಾರದು ಎಂದುಕೊಂಡಿದ್ದಾಳೆ. ಸಂಪೂರ್ಣ ಕಥೆ ಕೇಳಿದ ಮೇಲೆ ರಾಮ್ ನನ್ನನ್ನು ಒಪ್ಪಿಕೊಳ್ತಾನಾ ಎನ್ನುವುದೂ ಆಕೆಗೆ ಸಂದೇಹ ಶುರುವಾಗಿದೆ. ಅಷ್ಟಕ್ಕೂ ಸೀತಾಳ ಹಿಂದಿನ ಕಥೆಯೇನು? ಅವಳದ್ದು ನಿಜವಾಗಿಯೂ ಮದ್ವೆಯಾಗಿದ್ಯಾ? ಗಂಡ ಬಿಟ್ಟಿದ್ದಾಳಾ ಅಥ್ವಾ ಗಂಡನೇ ಇಲ್ವಾ? ಸಿಹಿ ಸೀತಾಳ ಸ್ವಂತ ಮಗಳು ಹೌದಾ? ಎಷ್ಟೊಂದು ಪ್ರಶ್ನೆಗಳು ವೀಕ್ಷರನ್ನು ಕಾಡುತ್ತಿವೆ. ಇದರ ಮಧ್ಯೆಯೇ, ಕೆಲ ಎಪಿಸೋಡ್ ಹಿಂದೆ ಬೈಕ್ನಲ್ಲಿ ಬಂದಾತನೊಬ್ಬ ಸಿಹಿಯನ್ನು ಕಿಡ್ನಾಪ್ ಮಾಡಿದ್ದ. ಸೀತಾಳ ಮೇಲೆ ದಾಳಿ ಮಾಡಲು ನೋಡಿದ್ದ. ರಾಮ್ನನ್ನು ಇರಿದಿದ್ದ. ಹಾಗಿದ್ದರೆ ಅವನಿಗೂ ಸೀತಾಗೂ ಸಂಬಂಧ ಇದೆಯಾ ಎಂಬ ಪ್ರಶ್ನೆ ಸೀತಾರಾಮ ಸೀರಿಯಲ್ ಫ್ಯಾನ್ಗಳನ್ನು ಕಾಡುತ್ತಿದೆ.
ಅದೇ ಇನ್ನೊಂದೆಡೆ, ಸೀತಾಳಿಗೆ ತನ್ನ ಹಿಂದಿನ ಕಥೆಯ ಚಿಂತೆಯೂ ಶುರುವಾಗಿದೆ. ತನ್ನ ಹಿಂದಿನ ಕಥೆ ನಿಮಗೆ ಗೊತ್ತಿಲ್ಲ ಎಂದು ಅದನ್ನು ಹೇಳಲು ಹೋದಾಗ ರಾಮ್ ತಡೆದಿದ್ದಾನೆ. ನನ್ನ ಹಿಂದಿನ ಕಥೆಯೂ ಚೆನ್ನಾಗಿಲ್ಲ, ಅದೆಲ್ಲಾ ನನಗೆ ಬೇಡ... ನೀವು ಬೇಕು, ನಿಮ್ಮ ಪ್ರೀತಿ ಬೇಕು ಎಂದು ಹೇಳುವ ಮೂಲಕ ಸೀತಾಳಿಗೆ ತನ್ನ ಹಿಂದಿನ ಕಥೆಯನ್ನು ಹೇಳಲು ರಾಮ್ ಕೊಟ್ಟಿಲ್ಲ. ಆಗ ಸೀತಾ ಸುಮ್ಮನಾಗಿದ್ದಳು. ರಾಮ್ನನ್ನು ಪ್ರೀತಿ ಮಾಡುವುದಾಗಿ ಒಪ್ಪಿಕೊಂಡಿದ್ದಳು. ಇದೀಗ ಇಬ್ಬರೂ ಲವ್ನಲ್ಲಿ ಬಿದ್ದಿದ್ದಾರೆ. ಒಂದು ವೇಳೆ ಮದುವೆಯಾದ ಮೇಲೆ ಸೀತಾಳ ಹಿಂದಿನ ಸ್ಟೋರಿ ಗೊತ್ತಾಗಿ ಇಬ್ಬರ ನಡುವೆ ಒಡಕು ಬಂದರೆ ಎನ್ನುವ ಆತಂಕದಲ್ಲಿಯೂ ಅಭಿಮಾನಿಗಳಿದ್ದಾರೆ.
ಮದ್ಯ ಕುಡಿಸಿಯಾಯ್ತು... ಈಗ ಎಲ್ಲಾ ಸೀರಿಯಲ್ಗಳಲ್ಲೂ ಮುತ್ತಿನ ಅಮಲು! ರೋಮಾಂಚನಗೊಂಡ ವೀಕ್ಷಕರು