ಪತಿಯ ಮೇಲಿನ ಪ್ರೀತಿ ಹೇಳಿಕೊಳ್ಳಲು ನಾಯಕಿಯರಿಗೆ ಮದ್ಯ ಕುಡಿಸಿದ ಬಳಿಕ ಈಗ ಬಹುತೇಕ ಸೀರಿಯಲ್ಗಳಲ್ಲಿ ಮುತ್ತಿನ ಅಮಲು ಏರುತ್ತಿದೆ. ಏನಿದು ವಿಷ್ಯ?
ಅಮೃತಧಾರೆಯ ಭೂಮಿಕಾ, ಲಕ್ಷ್ಮೀ ಬಾರಮ್ಮಾ ಸೀರಿಯಲ್ ಲಕ್ಷ್ಮಿ... ಹೀಗೆ ಗಂಡನ ಮೇಲೆ ತಾವೆಷ್ಟು ಪ್ರೀತಿ ಮಾಡುತ್ತೇವೆ ಎಂದು ತೋರಿಸಲು ಎಲ್ಲರಿಗೂ ಕೂಲ್ಡ್ರಿಂಕ್ಸ್ನಲ್ಲಿ ಮದ್ಯ ಸೇವಿಸಿ ಕೊಟ್ಟಾಗಿತ್ತು. ಕೊನೆಗೂ ಪ್ರೀತಿಯನ್ನು ಮತ್ತಿನ ನಶೆಯಲ್ಲಿಯೇ ಹೇಳುವಲ್ಲಿ ಈ ಹೀರೋಯಿನ್ಗಳು ಯಶಸ್ವಿಯಾದರು ಅನ್ನಿ. ನಾಯಕರಿಗೂ ತಮ್ಮ ಪತ್ನಿಯರು ಮದ್ಯದ ನಶೆಯಲ್ಲಿ ವಿಷಯ ತಿಳಿಸಿದಾಗಲೇ ತಮ್ಮನ್ನು ಎಷ್ಟುಪ್ರೀತಿ ಮಾಡುವುದು ಎಂದು ತಿಳಿದದ್ದು. ಆದರೆ ಹೀಗೆ ಪ್ರೀತಿಯ ವಿಷಯ ಬಾಯಿಬಿಡಲು ಹೆಣ್ಣುಮಕ್ಕಳಿಗೆ ಮದ್ಯ ಕುಡಿಸುವುದು ಅನಿವಾರ್ಯನಾ ಎಂಬ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಈಗ ಮತ್ತು ಬರಿಸಿ ಆದ ಮೇಲೆ ಬಹುತೇಕ ಸೀರಿಯಲ್ಗಳಲ್ಲಿ ಮುತ್ತಿನ ಅಮಲು ಶುರುವಾಗಿದೆ!
ಹೌದು. ಮದುವೆಯಾದರೂ ಪತಿ-ಪತ್ನಿಯ ಸಂಬಂಧದಲ್ಲಿ ಇರದೇ ಇರುವ ಸೀರಿಯಲ್ಗಳು ಅದೆಷ್ಟೋ ಬಂದು ಹೋಗಿವೆ. ಈಗ ಚಾಲ್ತಿಯಲ್ಲಿ ಇರುವ ಸೀರಿಯಲ್ಗಳಲ್ಲಿ ಅಮೃತಧಾರೆ ಮತ್ತು ಸತ್ಯ ಕೂಡ ಇದೇ ಸಾಲಿಗೆ ಸೇರುತ್ತವೆ. ಮಧ್ಯ ವಯಸ್ಕರಾದರೂ ಮದುವೆಯಾಗದೇ ಇದ್ದ ಹಲವರು ತೊಳಲಾಟದಲ್ಲಿ ಇರುವ ಸಮಯದಲ್ಲಿ ಅಂಥವರಿಗೆ ತುಂಬಾ ಇಷ್ಟವಾದ ಧಾರಾವಾಹಿಗಳಲ್ಲಿ ಒಂದು ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಅಮೃತಧಾರೆ ಧಾರಾವಾಹಿ. ವಯಸ್ಸಾದರೂ ಮದುವೆಯಾಗದೇ ಉಳಿದ ಮಧ್ಯಮ ಕುಟುಂಬದ ಹೆಣ್ಣುಮಗಳೊಬ್ಬಳು ಒತ್ತಾಯಪೂರ್ವಕವಾಗಿ ವಯಸ್ಸಾಗಿರುವ ಕೋಟ್ಯಧಿಪತಿ ಬಿಜಿನೆಸ್ಮೆನ್ ಜೊತೆ ಮದುವೆಯಾಗಿ ಇಬ್ಬರೂ ಸಂಸಾರದಲ್ಲಿ ಹೊಂದಿಕೊಳ್ಳಲು ಪರದಾಡುತ್ತಿರುವ ಕಥಾಹಂದರವನ್ನು ಹೊಂದಿರುವ ಈ ಧಾರಾವಾಹಿ ಸ್ವಲ್ಪ ವಿಭಿನ್ನ ಎನಿಸಿರುವುದು ಇದ್ದರೂ ಇದುವರೆಗೆ ಈ ಜೋಡಿ ದಂಪತಿಯಂತೆ ಬಾಳುತ್ತಿಲ್ಲ. ಅದೇ ಇನ್ನೊಂದೆಡೆ ಸತ್ಯ ಸೀರಿಯಲ್ ಕೂಡ. ಮನಸ್ಸಿಲ್ಲದೇ ಮದುವೆಯಾದ ಸತ್ಯ ಮತ್ತು ಕಾರ್ತಿಕ್ ಈಗ ಮಾನಸಿಕವಾಗಿ ಒಂದಾದರೂ ದೈಹಿಕವಾಗಿ ಒಂದಾಗಲಿಲ್ಲ.
ಪತ್ನಿ ಎಷ್ಟು ಪ್ರೀತಿ ಮಾಡ್ತಾಳಂತ ಗಂಡನಿಗೆ ತಿಳಿಯಲು ಅವಳಿಗೆ ಮದ್ಯ ಕುಡಿಸೋದು ಅನಿವಾರ್ಯನಾ?
ಅದೇ ಇನ್ನೊಂದೆಡೆ ಸೀತಾ-ರಾಮ ಸೀರಿಯಲ್. ಇದು ಸ್ವಲ್ಪ ಭಿನ್ನ ಕಥೆಯನ್ನು ಹೊಂದಿದೆ. ಇದರಲ್ಲಿ ಸೀತೆ ಮತ್ತು ರಾಮ್ಗೆ ಈಗಷ್ಟೇ ಲವ್ ಶುರುವಾಗಿದೆ. ಇಬ್ಬರೂ ಪ್ರೀತಿಯ ಗುಂಗಿನಲ್ಲಿ ಇದ್ದಾರೆ. ಆದ್ದರಿಂದ ಮುತ್ತಿನ ಅಮಲು ಏರುವುದು ಸಹಜವಾಗಿದೆ. ಒಂದು ಮಗುವಿನ ಅಮ್ಮನಾಗಿರುವ ಸೀತಾಳ ಬಾಳಲ್ಲಿ ಬಹಳ ಕಷ್ಟಪಟ್ಟು ರಾಮ್ ಎಂಟ್ರಿಯಾಗಿದೆ. ಆದರೆ ಮುಂದೇನು ಎನ್ನುವ ಕುತೂಹಲವಿದೆ. ಆದರೂ ಕಿಸ್ ವಿಷಯಕ್ಕೆ ಬರುವುದಾದರೆ ಅಮೃತಧಾರೆ ಮತ್ತು ಸತ್ಯ ಸೀರಿಯಲ್ನಂತೆ ಸೀತಾ-ರಾಮದಲ್ಲಿಯೂ ಈ ದೃಶ್ಯ ಈಗ ಕಾಣಿಸಿಕೊಂಡಿದೆ. ಒಟ್ಟಿನಲ್ಲಿ ಒಂದೇ ವಾರದಲ್ಲೇ ಮೂರೂ ಸೀರಿಯಲ್ಗಳಲ್ಲಿ ಮುತ್ತು ಕೊಡುವ ದೃಶ್ಯಗಳು ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತಿದೆ.
ಅಮೃತಧಾರೆಯ ವಿಷಯಕ್ಕೆ ಬರುವುದಾದರೆ, ಪ್ರೀತಿ-ಗೀತಿ ಅನ್ನೋದೇ ಗೊತ್ತಿಲ್ಲದ ಗೌತಮ್ಗೆ ಈಗ ಪತ್ನಿ ಭೂಮಿ ಮೇಲೆ ಲವ್ ಶುರುವಾಗಿದೆ. ಅತ್ತ ಭೂಮಿಕಾ ಅಂತೂ ತನ್ನ ಪ್ರೀತಿಯನ್ನು ಪತಿಗೆ ಹೇಗೆ ತಿಳಿಸಬೇಕು ಎನ್ನುವುದನ್ನು ತಿಳಿಯದೇ ಕಸಿವಿಸಿಯಲ್ಲಿಯೇ ಇದ್ದಾಳೆ. ಅವಳು ಪ್ರೀತಿಯನ್ನು ತಿಳಿಸಲು ಎಷ್ಟೇ ಪ್ರಯತ್ನ ಮಾಡಿದರೂ ಅದು ಪೆದ್ದು ಗೌತಮ್ಗೆ ಗೊತ್ತೇ ಆಗುತ್ತಿಲ್ಲ. ಸ್ನೇಹಿತ ಆನಂದ್, ಗೌತಮ್ಗೆ ಚಾಲೆಂಜ್ ಕೊಟ್ಟಿದ್ದ. ಪತ್ನಿಗೆ ಕಿಸ್ ಮಾಡ್ಲೇಬೇಕು ಎನ್ನುವ ಚಾಲೆಂಜ್ ಇದಾಗಿತ್ತು. ಇಲ್ಲದಿದ್ದರೆ ಪಾರ್ಟಿಯಲ್ಲಿ ಕುಡಿದ ವಿಷಯವನ್ನು ಅಜ್ಜಿಗೆ ತಿಳಿಸುವುದಾಗಿ ಹೇಳಿದ್ದ. ಗೌತಮ್ಗೆ ಬೇರೆ ದಾರಿಯೇ ಇರಲಿಲ್ಲ. ಪತ್ನಿಗೆ ಕಿಸ್ ಕೊಡಲೇಬೇಕು ಎಂದು ಹೋಗಿದ್ದ. ಅಷ್ಟರಲ್ಲಿಯೇ ಭೂಮಿಕಾ ಸಮೀಪ ಹಲ್ಲಿ ಬಂದು ಇನ್ನೇನು ಇಬ್ಬರೂ ಒಂದಾಗುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಈಗ ಅಚಾನಕ್ ಆಗಿ ಪತಿ-ಪತ್ನಿ ಮುತ್ತುಕೊಡುವ ಸ್ಥಿತಿ ಬಂದಿದೆ. ಅದೇ ರೀತಿ ಸೀತಾ-ರಾಮ ಸೀರಿಯಲ್ನಲ್ಲಿಯೂ ಕೈಯಿಂದ ನನಗೆ ಬಣ್ಣ ಹಚ್ಚಬೇಡ ಎಂದು ಸೀತಾ ಹೇಳಿದ್ದರಿಂದ ರಾಮ್ ತನ್ನ ಕೆನ್ನೆಗೆ ಬಣ್ಣ ಸವರಿಕೊಂಡು ಸೀತಾಳ ಕೆನ್ನೆಗೆ ಬಣ್ಣ ಹಚ್ಚಿ ಪ್ರೀತಿಯ ಧಾರೆ ಹರಿಸಿದ್ದಾನೆ. ಅದೇ ರೀತಿ ಸತ್ಯ ಸೀರಿಯಲ್ನಲ್ಲಿಯೂ ಇನ್ಸ್ಪೆಕ್ಟರ್ ಆಗಿರೋ ಸತ್ಯ ಮತ್ತು ಪತಿ ಕಾರ್ತಿಕ್ ಈಗ ತಾನೇ ಹೊಸ ಜೋಡಿಯ ಮೇಲೆ ಮುತ್ತಿನ ಅಮಲಿನಲ್ಲಿ ತೇಲಿದ್ದಾರೆ. ಒಟ್ಟಿನಲ್ಲಿ ಪೈಪೋಟಿಗೆ ಬಿದ್ದವರಂತೆ ಮುತ್ತಿನ ಅಮಲು ಎಲ್ಲಾ ಸೀರಿಯಲ್ಗಳಲ್ಲಿಯೂ ಕಾಣಿಸುತ್ತಿದೆ.
ಕೈಯಿಂದ ಬಣ್ಣ ಹಚ್ಚದಂತೆ ಸೀತಾ ಆಣೆ ಮಾಡಿದ್ರೆ ರಾಮ್ ಸುಮ್ಮನಿರ್ತಾನಾ? ಕೆನ್ನೆಗೆ ಕೆನ್ನೆ ಸೋಕಿದಾಗ...