ಸೀತಾರಾಮದ ಸಿಹಿ ಪುಟ್ಟಿಗೆ ಸಿಕ್ಕಾಪಟ್ಟೆ ಫ್ಯಾನ್ ಫಾಲೊವಿಂಗ್! ನಾಯಕಿಯನ್ನೇ ಮೀರಿಸ್ತಾಳೆ!

Published : Aug 17, 2023, 11:30 AM IST
ಸೀತಾರಾಮದ ಸಿಹಿ ಪುಟ್ಟಿಗೆ ಸಿಕ್ಕಾಪಟ್ಟೆ ಫ್ಯಾನ್ ಫಾಲೊವಿಂಗ್! ನಾಯಕಿಯನ್ನೇ ಮೀರಿಸ್ತಾಳೆ!

ಸಾರಾಂಶ

ಸೀತಾರಾಮ ಸೀರಿಯಲ್‌ನ ಸಿಹಿ ಪುಟ್ಟಿ ಹೆಸರಿನಷ್ಟೇ ಸ್ಬೀಟು ಪಾಪು. ತೊದಲು ಮಾತಿಂದಲೇ ಎಲ್ಲರನ್ನು ಮೋಡಿ ಮಾಡುವ ಈ ಪುಟಾಣಿ ಪೋರಿಗೆ ಅದೆಷ್ಟು ಫ್ಯಾನ್ ಫಾಲೊವಿಂಗ್ ಅಂತೀರಿ..  

'ಸಿಹಿ ಕಂದಾ, ನೀನು ನಗು ನಗ್ತಾ ಇರು', 'ಸಿಹಿ ನಿನ್ನ ಅರಮನೆ ಜೋಪಾನವಾಗಿರುತ್ತೆ ಭಯ ಬೇಡ ಕಂದ', 'ಸಿಹಿ ಆಕ್ಟಿಂಗ್ ಆಸಮ್', 'ಸಿಹಿ ನಿನ್ನ ಮಾತೇ ಅದ್ಭುತ ಕಣಮ್ಮಾ..'

ಯಾವುದೇ ಸೀರಿಯಲ್ ಇರಲಿ, ಚಾನೆಲ್ ಪೇಜ್‌ನಲ್ಲಿ ಪ್ರೋಮೊ ಹಾಕಿದ್ರೆ ಹೀರೋ ಹೀರೋಯಿನ್‌ ಬಗ್ಗೆ ಕಮೆಂಟ್ ಬರುತ್ತೆ. ಆದರೆ 'ಸೀತಾರಾಮ' ಸೀರಿಯಲ್‌ನ ಕಮೆಂಟ್ ಸೆಕ್ಷನ್ ಕಂಪ್ಲೀಟ್ ಸಿಹಿಮಯ. ಮುದ್ದು ಮಗು ಸಿಹಿಯ ಸಿಹಿಯಾದ ಮಾತಿಗೆ ಎಲ್ಲರೂ ಹೃದಯವನ್ನೇ ಕೊಡ್ತಾರೆ. ರೀತು ಸಿಂಗ್ ಅನ್ನೋ ನೇಪಾಳದ ಪುಟಾಣಿ 'ಸೀತಾರಾಮ' ಸೀರಿಯಲ್‌ನ ಸಿಹಿ. ಇನ್ನೂ ನಾಲ್ಕು ವರ್ಷ ಪ್ರಾಯದ ಈ ಮಗು ತನ್ನ ತೊದಲು ಮಾತಿನಿಂದಲೇ ಪಟ ಪಟ ಅಂತ ಸೀರಿಯಲ್ ಡೈಲಾಗ್ ಹೊಡೀತಾಳೆ. ನೋಡೋಕೆ ಮುದ್ದು, ಮಾತು ಸಿಹಿ. ಮನಸ್ಸು ಮಲ್ಲಿಗೆ. ಈ ಎಲ್ಲ ಕಾರಣಕ್ಕೆ ಈ ಪಾತ್ರ ವೀಕ್ಷಕರಿಗೆ ಕನೆಕ್ಟ್ ಆಗ್ತಾ ಇದೆ. 

ಹಾಗೆ ನೋಡಿದರೆ ಜೀ ಕನ್ನಡದಲ್ಲಿ 'ಸೀತಾ ರಾಮ' ಧಾರಾವಾಹಿ ಇತ್ತೀಚೆಗಷ್ಟೇ ಪ್ರಸಾರ ಆಗ್ತಾ ಇದೆ. ಆದರೆ, ಶುರುವಾದ ಕಡಿಮೆ ಸಮಯದಲ್ಲಿಯೇ ಎಲ್ಲರ ಮನಸ್ಸು ಗೆದ್ದಿದೆ. ಅದಕ್ಕೆ ಮುಖ್ಯವಾದ ಕಾರಣ ಅಂದ್ರೆ ಅದು ಪುಟಾಣಿ ಸಿಹಿ. ಹೆಸರಿಗೆ ತಕ್ಕ ಹಾಗೇ ಸ್ವೀಟ್ ಆಗಿ, ಮುದ್ದಾಗಿ ಮಾತಾಡ್ತಾಳೆ. ಜನ ಎಷ್ಟೇ ಬೇಸರ ಇದ್ರು ಸಿಹಿಯ ಮಾತುಗಳನ್ನು ಕೇಳಿದ್ರೆ ಸಾಕು ಆ ಬೇಸರ ಓಡಿ ಹೋಗುತ್ತೆ ಅನ್ನುವಷ್ಟರ ಮಟ್ಟಿಗೆ ಈ ಪಾತ್ರಕ್ಕೆ ಎಡಿಕ್ಟ್ ಆಗಿದ್ದಾರೆ. ಹೀರೋ ಹೀರೋಯಿನ್‌ ಪಾತ್ರದ ಜನಪ್ರಿಯತೆಯನ್ನೂ ಮೀರಿ ಈ ಪಾತ್ರ, ಆ ಪಾತ್ರದ ಮೂಲಕ ರೀತೂ ಸಿಂಗ್ ಎಂಬ ಮುದ್ದು ಮಗು ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಪಕ್ಕಾ ನ್ಯಾಚುರಲ್ ಎಂಬಂತೆ ನಟನೆ ಮಾಡ್ತಾಳೆ. ವಯಸ್ಸು ಚಿಕ್ಕದು. ಆದರೂ ನವರಸಗಳನ್ನು ಅರೆದು ಕುಡಿದವಳಂತೆ ತನ್ನ ನಟನೆಯಿಂದಾನೇ ಎಲ್ಲರೂ ಸೆಳೆಯುತ್ತಾಳೆ ಸಿಹಿ ಅಲಿಯಾಸ್ ರಿತು. ಆದರೆ, ಕೋಪ ಬಂದ್ರೆ ಸ್ವೀಟ್ ಅಲ್ಲ ಖಾರ ಖಾರ ಅಂತ ಬಾಯಿ ಬಡ್ಕೊಳೋ ಥರ ಬಡೀತಾಳೆ. 

ಸಿಹಿ ಅಮ್ಮ ಸೀತಾಳದ್ದು ಮಧ್ಯಮ ವರ್ಗದ ಬದುಕು. ತಾನೂ ದುಡಿದು, ಜೀವನ ಕಟ್ಟಿಕೊಳ್ಳುವುದರ ಜೊತೆಗೆ ಮಗುವಿನ ಶಿಕ್ಷಣವನ್ನು ನೋಡಿಕೊಳ್ಳಬೇಕು. ಇರೋದಕ್ಕೆ ಅಂತ ಒಂದು ಪುಟ್ಟ ಸ್ವಂತವಾದ ಮನೆ ಇದೆ. ಅದು ವಠಾರದಲ್ಲಿ. ಮಿಡಲ್ ಕ್ಲಾಸ್ ಜೀವನ ಅಂದ್ರೆ ಎಲ್ಲರಿಗೂ ಗೊತ್ತಿರೋದೇ ಅಲ್ವಾ? ಸಾಲ ಇಲ್ಲದೆ ಜೀವನ ಸಾಗಿಸೋದು ಸುಲಭದ ಮಾತಲ್ಲ. ಇಎಂಐ ಕಟ್ಟೋಣಾ ಅಂತ ಸೀತಾ ಕೂಡ ಮನೆ‌ ಮೇಲೆ ಲೋನ್ ತೆಗೆದಿದ್ದಳು. ಆದರೆ ಈಗ ಲೋ‌ನ್ ಕಟ್ಟುವುದಕ್ಕೆ ಆಗದೆ ಮನೆ ಕಳೆದುಕೊಳ್ಳುವ ಸ್ಥಿತಿ ತಲುಪಿದ್ದಾಳೆ.

ಅಯ್ಯೋ ಭಾಗ್ಯ ಸ್ಕೂಲಿಗೆ ಹೋಗ್ತಿದ್ದಾಳೆ ಅನ್ನೋವಾಗ್ಲೋ ಕನ್ನಿಕಾ ಕಾಟ ಶುರುವಾಯ್ತು!

ಸಿಹಿ ಎಲ್ಲದ್ದಕ್ಕೂ ಅಡ್ಜೆಸ್ಟ್ ಆಗುವ ಗುಣದವಳು. ಚಿಕ್ಕ ವಯಸ್ಸಿನಲ್ಲಿಯೆ ಶುಗರ್ ಇದ್ರು ಅಮ್ಮನಿಗೆ ಹೆಚ್ಚು ಧೈರ್ಯ ತುಂಬುವುದು ಇದೇ ಮಗು. ವಯಸ್ಸು ಚಿಕ್ಕದಾದರೂ ಕನಸು ಮಾತ್ರ ಬಹಳ ದೊಡ್ಡದು. ಅದಕ್ಕೆ ಯಾವಾಗಲೂ ಪ್ಯಾಲೇಸ್ ಕನಸನ್ನೇ ಕಾಣುತ್ತಾ ಇರುತ್ತಾಳೆ. ಪ್ಯಾಲೇಸ್‌ಗಾಗಿ ಪತ್ರವನ್ನು ಬರೆದಿದ್ದಾಳೆ. ಆ‌ ಪ್ಯಾಲೇಸ್ ಸಿಹಿಯ ಲೆಟರ್ ಓದಿ ಬರುವುದಕ್ಕೆ ಬಹಳ ಸಮಯವೇನು ಬೇಕಾಗಿಲ್ಲ. ಅದಕ್ಕೆಂದೆ ಅವಳ ಬೆಸ್ಟ್ ಫ್ರೆಂಡ್ ರಾಮ ಇದ್ದಾನೆ. 

ಸಿಹಿ ನೋಡಿದಾಗೆಲ್ಲಾ ಮನೆಯಲ್ಲಿ ಇಂಥ ಒಬ್ಬ ಮಗಳು ಇರಬೇಕಿತ್ತು ಅಂತ ಬಹಳಷ್ಟು ಜನ ಬಯಸುತ್ತಿದ್ದಾರೆ. ಅದು ಈ ಪಾತ್ರದ ಮೂಲಕ ರೀತು ಮಾಡಿರೋ ಮೋಡಿ. ಇಡೀ ಸೀರಿಯಲ್‌ ಅನ್ನು ಆವರಿಸಿರೋ ಈ ಪುಟ್ಟ ಮಗುವಿಗೆ ಎಲ್ಲ ಹಾರೈಕೆ ಇದೆ. 

ಮೌನ ಮಾಡರ್ನ್ ಲುಕ್, ರಾಮಚಾರಿಯ ಚಾರುಗೆ ಸೀರೆ ಸೂಪರ್ ಅಂತಿದ್ದಾರೆ ನೆಟ್ಟಿಗರು!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!