ಸ್ವಾತಂತ್ರ್ಯ ದಿನಕ್ಕೆ ನಿವೇದಿತಾ ಗೌಡ ಸ್ಪೆಷಲ್​: ವಂದೇ ಮಾತರಂನಲ್ಲಿ ಮಿಂಚಿದ ನಟಿ

By Suvarna News  |  First Published Aug 15, 2023, 2:53 PM IST

ಸ್ವಾತಂತ್ರ್ಯ ದಿನಕ್ಕೆ ವಂದೇ ಮಾತರಂ ಹಾಡಿನ ಹಿನ್ನೆಲೆಯಲ್ಲಿ ಕಂಗೊಳಿಸುವ ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡಿದ್ದಾರೆ ನಟಿ ನಿವೇದಿತಾ ಗೌಡ.  
 


ಇಂದು ಎಲ್ಲೆಲ್ಲೂ ಸ್ವಾತಂತ್ರ್ಯ ದಿನದ ಸಂಭ್ರಮ. ಭಾರತೀಯರೆಲ್ಲರೂ ಈ ದಿನವನ್ನು ಅತ್ಯಂತ ಹೆಮ್ಮೆಯಿಂದ ಆಚರಿಸುತ್ತಿದ್ದಾರೆ. ಇದೇ ವೇಳೆ ಸೆಲೆಬ್ರಿಟಿಗಳು ಕೂಡ ತಮ್ಮದೇ ಆದ ಶೈಲಿನಲ್ಲಿ ಈ ದಿನವನ್ನು ಆಚರಿಸುತ್ತಿದ್ದು, ಅದರ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಇದಾಗಲೇ ಹಲವು ಚಿತ್ರ ನಟ-ನಟಿಯರು ಸೇರಿದಂತೆ ವಿಭಿನ್ನ ಕ್ಷೇತ್ರಗಳ ಗಣ್ಯರು ಈ ದಿನವನ್ನು ತಾವು ಹೇಗೆ ಆಚರಿಸುತ್ತಿದ್ದೇವೆ ಎಂಬ ಬಗ್ಗೆ ಜಾಲತಾಣಗಳ ಮೂಲಕ ಮಾಹಿತಿ ನೀಡುತ್ತಿದ್ದಾರೆ. ಅದೇ ರೀತಿ ಬಿಗ್​ಬಾಸ್ ಸುಂದರಿ, ಗೊಂಬೆ ಎಂದೇ ಖ್ಯಾತಿ ಪಡೆದಿರುವ ನಿವೇದಿತಾ ಗೌಡ (Niveditha Gowda) ಅವರು ತಮ್ಮ ಸ್ವಾತಂತ್ರ್ಯ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಿಕೊಂಡು ಅದರ ವಿಡಿಯೋವನ್ನು ಯೂಟ್ಯೂಬ್​ ಚಾನೆಲ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ  ಸಕತ್​ ಆ್ಯಕ್ಟಿವ್ ಆಗಿರುವ ನಿವೇದಿತಾ ಗೌಡ, ಕನ್ನಡ ಕಿರುತೆರೆ ಮನೋರಂಜನಾ ಲೋಕದಲ್ಲಿ ಮಿಂಚುತ್ತಾ ಪ್ರೇಕ್ಷಕರಿಗೆ ಭರ್ಜರಿ ಎಂಟರ್​ಟೈನ್​ಮೆಂಟ್ ಕೊಡುತ್ತಿರುತ್ತಾರೆ.  ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ (Chandan Shetty) ಅವರನ್ನು ಮದುವೆಯಾದ ಮೇಲೆ ಇನ್ನಷ್ಟು ಹಾಟ್​ ಆಗಿದ್ದಾರೆ.  ಬಾರ್ಬಿ ಡಾಲ್ ಎಂದೂ ಅಭಿಮಾನಿಗಳಿಂದ ಕರೆಸಿಕೊಳ್ತಿರೋ ಈಕೆ ಹಾಕುವ ವಿಡಿಯೋ (Video), ಫೋಟೋಗಳಿಗಾಗಿಯೇ ಫ್ಯಾನ್ಸ್ ಕಾತರದಿಂದ ಕಾಯ್ತಾ ಇರ್ತಾರೆ.   ಆಗಸ್ಟ್​ 15ರ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಹೊಸ ಕಾನ್​ಸೆಪ್ಟ್​ನಲ್ಲಿ ವಿಡಿಯೋ ಮಾಡೋಣ ಅಂದುಕೊಂಡಿದ್ದೇನೆ ಎಂದು ಎರಡು ದಿನಗಳ ಹಿಂದೆ ವಿಡಿಯೋ ಮೂಲಕ ತಿಳಿಸಿದ್ದ  ನಿವೇದಿತಾ ಗೌಡ, ಅದಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ (Instagram) ಶೇರ್​  ಮಾಡಿಕೊಂಡಿದ್ದರು. ಹಲವಾರು ರೀತಿಯ ಔಟ್​ಫಿಟ್​ನಲ್ಲಿ ಕಾಣಿಸಿಕೊಂಡಿದ್ದರು. ವಿವಿಧ ರಾಜ್ಯಗಳ ಸಾಂಪ್ರದಾಯಿಕ ಡ್ರೆಸ್​ನೊಂದಿಗೆ ಕಂಗೊಳಿಸಿದ್ದ ನಟಿ ನನಗೆ ಈಗ  ಯಾವ ರೀತಿ ಫೀಲ್​ ಆಗ್ತಿದೆ ಎಂದರೆ 200 ಔಟ್​ಫಿಟ್​ ಹಾಕಿದ ಹಾಗೆ ಫೀಲ್​ ಆಗ್ತಿದೆ ಎಂದಿದ್ದರು. ಆಗಸ್ಟ್​ 15ಕ್ಕೆ ಯೂಟ್ಯೂಬ್​ನಲ್ಲಿ ಹೊಸ ವಿಡಿಯೋ ರಿಲೀಸ್ ಮಾಡುವುದಾಗಿ ಹೇಳಿದ್ದರು.

Tap to resize

Latest Videos

ಗೋವಾದಲ್ಲಿ ನಿವೇದಿತಾ ಗೌಡ ಪೋಸ್​, ಬಾಲಿವುಡ್ ರೇಂಜಿಗೆ ಕಾಣಿಸ್ತೀರಿ ಎಂದ ನೆಟ್ಟಿಗರು!

ಅದರಂತೆ ಇಂದು ಯೂಟ್ಯೂಬ್​ನಲ್ಲಿ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ವಂದೇ ಮಾತರಂ (Vande Mataram) ಹಾಡಿನ ಹಿನ್ನೆಲೆಯಲ್ಲಿ ನಟಿ ಕಂಗೊಳಿಸುತ್ತಿದ್ದಾರೆ. ಹಲವಾರು ರಾಜ್ಯಗಳ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಭಾರತದ ಸಂಪ್ರದಾಯವನ್ನು ಸಾರುವ ವಿಡಿಯೋ ಮಾಡಿದ್ದಾರೆ. ಇದಕ್ಕೆ ಫ್ಯಾನ್ಸ್​ ಫಿದಾ ಆಗಿದ್ದು, ಥಹರೇವಾಗಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ಕಿರುತೆರೆ ಸೆಲೆಬ್ರಿಟಿಗಳ ಮಧ್ಯೆ ಗುರುತಿಸಿಕೊಳ್ತಿರೋ ಬಾರ್ಬಿ ಡಾಲ್ ಖ್ಯಾತಿಯ ನಿವೇದಿತಾರನ್ನು ಹಲವರು ಬಾರ್ಬಿ ಡಾಲ್​ ಎಂದೇ ಕರೆಯುತ್ತಿದ್ದಾರೆ. ಇತ್ತೀಚೆಗೆ ಇವರು ಮ್ಯೂಸಿಕ್ ಆಲ್ಬಂ ಕೂಡ ಮಾಡಿ ಸುದ್ದಿಯಾಗಿದ್ದಾರೆ. ಇದು  ರಿಲೀಸ್​ಗೆ ರೆಡಿಯಾಗಿದೆ. ಇದರಲ್ಲಿ ನಟಿ ಶಮಂತ್ ಅಥವಾ ಬ್ರೋ (Bro Gowda) ಗೌಡ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಇವುಗಳ ನಡುವೆಯೇ ಇನ್ಸ್​ಸ್ಟಾಗ್ರಾಮ್​ನಲ್ಲಿ ಸಕತ್​ ಆ್ಯಕ್ಟೀವ್​ ಇದ್ದು, ಆಗ್ಗಾಗ್ಗೆ ಫೋಟೋ, ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಆಗಾಗ ಸೋಲೋ ಟ್ರಾವೆಲ್ ಮಾಡುತ್ತಾ, ಇನ್ನು ಕೆಲವೊಮ್ಮೆ ಪತಿಯ ಜೊತೆ ಸುತ್ತಾಟದಲ್ಲಿ ತೊಡಗಿ ಅದರ ವಿಡಿಯೋ ಶೇರ್​ ಮಾಡುತ್ತಿರುತ್ತಾರೆ. 
 
ಇದೀಗ ಸ್ವಾತಂತ್ರ್ಯ ದಿನದ ಹೊಸದೊಂದು ಕಾನ್​ಸೆಪ್ಟ್​ನಲ್ಲಿ ನಿವೇದಿತಾ ಕಂಗೊಳಿಸುತ್ತಿದ್ದಾರೆ. ಈ ವಿಡಿಯೋಗೆ ಸಹಸ್ರಾರು ಮಂದಿ ಹಾರ್ಟ್​ ಇಮೋಜಿ ಹಾಕಿದ್ದಾರೆ. ಕ್ಯೂಟ್​ ಎಂದು ಇನ್ನು ಹಲವರು ಕಮೆಂಟ್​ ಮಾಡುತ್ತಿದ್ದಾರೆ. ಡೀಸೆಂಟ್​ ಲುಕ್​ನಲ್ಲಿದ್ದರೂ ಹಾಟ್​ ಆಗಿ ಕಾಣಿಸ್ತೀರಾ ಎಂದಿದ್ದಾರೆ.

ಚಂದನ್​-ನಿವೇದಿತಾ ರೊಮ್ಯಾನ್ಸ್​ ವಿಡಿಯೋ: ಬೆಸ್ಟ್​ ಕಪಲ್ ಎನ್ನುತ್ತಲೇ ಉದ್ದ ಕೂದ್ಲು ಮಿಸ್ ಮಾಡ್ಕೊಂಡ ಫ್ಯಾನ್ಸ್!
 

click me!